Electric Cable Highway: ದೆಹಲಿಯಿಂದ ಈ ನಗರಕ್ಕೆ 2 ಗಂಟೆ ಪ್ರಯಾಣ.. ಕಾಫಿ ಕುಡಿದು ಹತ್ತಿದರೆ, ಅಲ್ಲಿ ತಿಂಡಿ ತಿನ್ನಬಹುದು!

ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ನೂತನ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸುತ್ತಿದೆ. ಇದೀಗ, ರಾಜಸ್ಥಾನದ ಜೈಪುರ (Jaipur) ಹಾಗೂ ರಾಷ್ಟ್ರ ರಾಜಧಾನಿ ದೆಹಲಿ (Delhi) ನಡುವೆ ಹೊಸದಾದ ಎಲೆಕ್ಟ್ರಿಕ್ ಕೇಬಲ್ ಹೈವೇ (Electric Cable Highway) ನಿರ್ಮಾಣ ಮಾಡಲು ಯೋಜಿಸಿದೆ.

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಶೀಘ್ರದಲ್ಲೇ ಎಲೆಕ್ಟ್ರಿಕ್ ಕೇಬಲ್ ಹೈವೇ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ ಎಂದು ವರದಿಯಾಗಿದೆ. ಹೆದ್ದಾರಿಯಲ್ಲಿ ವಾಹನಗಳಿಗೆ ವಿದ್ಯುಚ್ಛಕ್ತಿಯನ್ನು (Electric Energy) ಪೂರೈಸಿ, ಅವು ವೇಗವಾಗಿ ಚಲಿಸುವಂತೆ ಮಾಡಲಾಗುತ್ತಿದೆ. ಇದರಿಂದ ದೆಹಲಿ - ಜೈಪುರ ನಡುವೆ ಪ್ರಯಾಣ ಅವಧಿಯನ್ನು ಕಡಿಮೆಯಾಗಲಿದ್ದು, ಇವೆರೆಡು ನಗರ ನಡುವೆ ಸಂಚರಿಸಲು ಕೇವಲ 2 ಗಂಟೆ ಸಾಕಾಗುತ್ತದೆ ಎಂದು ಹೇಳಲಾಗಿದೆ.

ದೇಶದಲ್ಲಿ ಹೊಸ ಎಲೆಕ್ಟ್ರಿಕ್ ಕೇಬಲ್ ಹೈವೇ: ಈ ನಗರದಿಂದ ಕೇವಲ 2 ಗಂಟೆ ಪ್ರಯಾಣ, ಎಲ್ಲಿ ಗೊತ್ತಾ?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, 'ಈ ಯೋಜನೆಯು ಪ್ರಯಾಣದ ಸಮಯವನ್ನು ಉಳಿಸುವುದಲ್ಲದೆ, ಬಸ್‌ನ ಇಂಧನ ವೆಚ್ಚವನ್ನು (Fuel Cost) ಶೇಕಡ 30% ಉಳಿಸುತ್ತದೆ. ದೆಹಲಿಯಿಂದ ಮೀರತ್‌ಗೆ ಪ್ರಯಾಣ 45 ನಿಮಿಷಗಳಲ್ಲಿ ಪ್ರಯಾಣಿಸಬಹುದು ಎಂದು ಹೇಳಿದ್ದಾಗ ಪತ್ರಕರ್ತರು ನಕ್ಕಿದ್ದರು. ಇಂದು ಮೀರತ್‌ನಿಂದ ದೆಹಲಿಗೆ ಐಸ್‌ಕ್ರೀಂ ತಿನ್ನಲು ಬರುತ್ತೇವೆ ಎಂದು ಜನರು ಹೇಳುತ್ತಾರೆ' ಎಂದಿದ್ದಾರೆ.

'ನಾನು ಜೈಪುರ ಜನರನ್ನು ದೆಹಲಿಯ ಐಸ್‌ಕ್ರೀಂ ಸವಿಯಲು ಮತ್ತು ದೆಹಲಿ ಜನರನ್ನು ಜೈಪುರದ ಕಚೋರಿ ತಿನ್ನಲು ಕರೆತರಲು ಬಯಸುತ್ತೇನೆ. ದೇಶದ ಜನತೆ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಪೂರ್ಣ ಬಹುಮತ ನೀಡಿ, ಗೆಲ್ಲಿಸಿದ್ದರಿಂದ ಇದು ಸಾಧ್ಯವಾಗಿದೆ' ಎಂದು ಕೇಂದ್ರ ಸಚಿವ ತಿನ್ ಗಡ್ಕರಿ ಅವರು ಹೇಳಿದ್ದಾರೆ.

ದೇಶದಲ್ಲಿ ಹೊಸ ಎಲೆಕ್ಟ್ರಿಕ್ ಕೇಬಲ್ ಹೈವೇ: ಈ ನಗರದಿಂದ ಕೇವಲ 2 ಗಂಟೆ ಪ್ರಯಾಣ, ಎಲ್ಲಿ ಗೊತ್ತಾ?

ಎಲೆಕ್ಟ್ರಿಕ್ ಕೇಬಲ್ ಹೈವೇ ಬಗ್ಗೆ ಹೇಳಬೇಕಾದರೆ, ಇದು ಬಹುತೇಕ ರೈಲ್ವೆ ವಿದ್ಯುತ್ ಲೈನ್ ರೀತಿಯಲ್ಲಿರಲಿದೆ. ಓವರ್‌ಹೆಡ್ ಪವರ್ ಲೈನ್‌ಗಳಿಂದ ವಾಹನಗಳು ಚಲಿಸಲು ವಿದ್ಯುಚ್ಛಕ್ತಿಯನ್ನು ಪೂರೈಸಲಾಗುತ್ತದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳಿಗೆ ದೊಡ್ಡಮಟ್ಟದ ಅನುಕೂಲವಾಗಲಿದೆ. ವಾಹನಗಳ ಬ್ಯಾಟರಿಗೆ ನಿರತವಾಗಿ ವಿದ್ಯುಚ್ಛಕ್ತಿ ತಲುಪುವುದರಿಂದ ಹೆಚ್ಚಿನ ದೂರವನ್ನು ಕ್ರಮಿಸಲು ಸಾಧ್ಯವಾಗುತ್ತದೆ.

ವಿಶ್ವದಲ್ಲಿಯೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಕೇಬಲ್ ಹೈವೇಯನ್ನು (Electric Cable Highway) ಜರ್ಮನಿಯಲ್ಲಿ (Germany) 2019 ರಲ್ಲಿ ಲೋಕಾರ್ಪಣೆ ಮಾಡಲಾಯಿತ್ತು. ಇಲ್ಲಿ ಹೈಬ್ರಿಡ್ (hybrid) ಚಾಲಿತ ಟ್ರಕ್‌ಗಳಿಗೆ ವಿದ್ಯುಚ್ಛಕ್ತಿಯನ್ನು ವರ್ಗಾಯಿಸಲಾಗುತ್ತಿದೆ. ಒಂದೊಮ್ಮೆ ಭಾರತದಲ್ಲಿಯೂ ಇದೇ ಮಾದರಿ ಹೆದ್ದಾರಿಗಳು ನಿರ್ಮಾಣಗೊಂಡರೆ, ಪ್ರಯಾಣಿಕರಿಗೆ ದೊಡ್ಡಮಟ್ಟದ ಅನುಕೂಲವಾಗಲಿದೆ.

ಇದಿಷ್ಟೇ ಅಲ್ಲದೆ, ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಬುಲೆಟ್ ರೈಲು ಕಾಮಗಾರಿಯೂ ಪ್ರಗತಿಯಲ್ಲಿದೆ. ಮುಂದಿನ 5 ವರ್ಷದೊಳಗೆ (2027) ಮುಂಬೈ - ಅಹಮದಾಬಾದ್ ನಡುವೆ ಮೊದಲ ಹೈಸ್ವೀಡ್ ರೈಲು ಲೋಕಾರ್ಪಣೆಯಾಗುವ ನೀರಿಕ್ಷೆಯಿದೆ. ಈ ಯೋಜನೆಗೆ 2016ರಲ್ಲಿಯೇ ಕಾರ್ಯಗತಗೊಳಿಸಿ, 2017 ರಲ್ಲಿ ಅಡಿಪಾಯವನ್ನು ಹಾಕಲಾಯಿತು. ಎಲ್ಲವು ಅಂದುಕೊಂಡಂತೆ ನಡೆದಿದ್ದರೆ, ಈ ವರ್ಷವೇ ಬುಲೆಟ್ ರೈಲು ಸಂಚರಿಸಬೇಕಿತ್ತು.

ಆದರೆ, ನಾನಾ ಕಾರಣಗಳಿಗೆ ತಡವಾಗಿದೆ. ಮುಂಬೈ - ಅಹಮದಾಬಾದ್ ನಡುವೆ ಹೈಸ್ವೀಡ್ ರೈಲು ಸಂಚಾರ ಆರಂಭಿಸಿದರೆ, ಇವೆರೆಡು ನಗರಗಳ ನಡುವೆಯಿರುವ 508 ಕಿಮೀ ಅಂತರವನ್ನು 2 ಗಂಟೆ 7 ನಿಮಿಷಗಳಲ್ಲಿ ಕ್ರಮಿಸಲಿದೆ. ಈ ರೈಲು ಗಂಟೆಗೆ 350 ಕಿಮೀ ವೇಗದಲ್ಲಿ ಚಲಿಸಲಿದ್ದು, ಪ್ರಸ್ತುತವಿರುವ ವೇಗದ ರೈಲುಗಳು ಇದೇ ದೂರವನ್ನು 5 ಗಂಟೆಯಲ್ಲಿ ತಲುಪಲಿದ್ದು, ಪ್ರಯಾಣಿಕರಿಗೆ ದೊಡ್ಡಅನುಕೂಲವಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 20, 2023, 16:27 [IST]
English summary
Electric cable highway delhi jaipur just two hours full details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+