ಪ್ರಪಂಚದ ದೊಡ್ಡ ಜೆಟ್ ವಿಮಾನವನ್ನು ಎಳೆದ ಮಿನಿ ಕೂಪರ್..!
ಇಂಗ್ಲೆಂಡ್ ಮೂಲದ ಕಾರು ತಯಾರಕ ಕಂಪನಿ ಕೂಪರ್ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು, ಕೆಲವೇ ದಿನಗಳಲ್ಲಿ ಅನಾವರಣಗೊಳಿಸಲಿದೆ. ಈ ಕಾರಿನ ಉತ್ಪಾದನೆಯನ್ನು ನವೆಂಬರ್‍ನಲ್ಲಿ ಶುರು ಮಾಡಲಾಗುವುದು. ಇದರ ನಡುವೆ ಮಿನಿ ಕೂಪರ್ ಕಾರು ಪ್ರಪಂಚದ ಅತಿ ದೊಡ್ಡ ಏರೋಪ್ಲೇನ್ ಜೆಟ್ ಅನ್ನು ಎಳೆದು ಸುದ್ದಿ ಮಾಡಿದೆ.
ಈ ರೀತಿಯಾಗಿ ಏರೋಪ್ಲೇನ್ ಅನ್ನು ಎಳೆದ ಮೊದಲ ಕಾರು ಮಿನಿ ಕೂಪರ್ ಅಲ್ಲ, ಕೊನೆಯ ಕಾರು ಸಹ ಆಗಿರುವುದಿಲ್ಲ. ಇಲ್ಲಿರುವ ಟೀಸರ್‍ನಲ್ಲಿ ಮರೆ ಮಾಡಲಾಗಿರುವ ಮಿನಿ ಕೂಪರ್ ಎಲೆಕ್ಟ್ರಿಕ್ ಕಾರು, ಪ್ರಪಂಚದ ಅತಿ ದೊಡ್ಡ ಟ್ವಿನ್ ಎಂಜಿನ್ ಕಮರ್ಶಿಯಲ್ ಜೆಟ್ ಲುಫ್ಥಾನ್ಸ ಬೋಯಿಂಗ್777ಎಫ್ ವಿಮಾನವನ್ನು ಎಳೆಯುತ್ತಿರುವುದನ್ನು ಕಾಣಬಹುದು. ಈ ರೀತಿ ಪ್ಲೇನ್ ಎಳೆಯಲು ಎಲೆಕ್ಟ್ರಿಕ್ ಕೂಪರ್ ಹೆಚ್ಚಿನ ಟಾರ್ಕ್ ಅನ್ನು ಉತ್ಪಾದಿಸಿಲ್ಲ. ತನಗೆ ಸಾಮರ್ಥ್ಯವಿರುವ 250 ಎನ್‍ಎಂ ಟಾರ್ಕ್‍ನಲ್ಲಿಯೇ ಎಳೆದಿದೆ.

ಮಾಮೂಲಿಯಾದ ಡೀಸೆಲ್ ಹ್ಯಾಚ್‍ಬ್ಯಾಕ್ ಕಾರುಗಳು ಉತ್ಪಾದನೆ ಮಾಡುವ ಟಾರ್ಕ್ ಹಾಗೂ ಎಲೆಕ್ಟ್ರಿಕ್ ಕಾರುಗಳು ಉತ್ಪಾದಿಸುವ ಟಾರ್ಕ್‍ಗಳು ಬೇರೆ ಬೇರೆಯಾಗಿರುತ್ತವೆ. ಮೋಟಾರ್ ಶಾಫ್ಟ್ ಅನ್ನು ಆರಂಭಿಸಿದ ನಂತರ ಟಾರ್ಕ್‍ನ ಉತ್ಪಾದನೆಯ ಬಗ್ಗೆ ತಿಳಿಯುತ್ತದೆ.

ಈ ಕಾರಣದಿಂದಾಗಿ ಐಸಿ ಎಂಜಿನ್ ಕಾರುಗಳು, ಎಲೆಕ್ಟ್ರಿಕ್ ಕಾರುಗಳನ್ನು ಡ್ರಾಗ್ ರೇಸುಗಳಲ್ಲಿ ಸುಲಭವಾಗಿ ಸೋಲಿಸುತ್ತವೆ. 250 ಎನ್‍ಎಂ ಟಾರ್ಕ್ ಉತ್ಪಾದಿಸುವ ಕೂಪರ್ ಎಸ್‍ಇಯ ಎಲೆಕ್ಟ್ರಿಕ್ ಕಾರು, 136 ಟನ್ ತೂಕದ ಏರೊಪ್ಲೇನ್ ಅನ್ನು ಎಳೆದಿದೆ.

ಈ ವೀಡಿಯೊವನ್ನು ಮಿನಿ ಕಂಪನಿಯು ಯಾವುದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ತನ್ನ ಎಲೆಕ್ಟ್ರಿಕ್ ಕಾರಿನ ಬಿಡುಗಡೆಯ ಹಿನ್ನೆಲೆಯಲ್ಲಿ ಈ ರೀತಿಯ ಅನೇಕ ವೀಡಿಯೊಗಳನ್ನು ಬಿಡುಗಡೆ ಮಾಡಿ, ತನ್ನ ಕಾರಿನ ಸಾಮರ್ಥ್ಯವನ್ನು ಜಗತ್ತಿನ ಮುಂದೆ ತೋರಿಸಬಹುದಾಗಿದೆ. ಈ ಮೊದಲು ಬಿಡುಗಡೆಯಾಗಿದ್ದ ರಹಸ್ಯ ಚಿತ್ರಗಳಲ್ಲಿ ಶೂನ್ಯ ಮಾಲಿನ್ಯ ಹೊಂದಿರುವ ಈ ಕಾರಿನಲ್ಲಿ ಮಿನಿ ಟ್ರೇಡ್ ಮಾರ್ಕ್ ವಿನ್ಯಾಸವನ್ನು ಕಾಣಬಹುದಾಗಿತ್ತು.

ಈ ಕಾರು ಐಸಿ ಎಂಜಿನ್ ಕಾರುಗಳಿಗಿಂತ ಭಿನ್ನವಾಗಿದ್ದು, ಒಆರ್‍ವಿಎಂ ಮೇಲೆ ಹಳದಿ ಬಣ್ಣದ ಆಕ್ಸೆಂಟ್ ಹಾಗೂ ಮರುವಿನ್ಯಾಸಗೊಂಡಿರುವ ಗ್ರಿಲ್, ಹೊಸ ಅಲಾಯ್ ವ್ಹೀಲ್ ಡಿಸೈನ್‍ಗಳನ್ನು ಕಾಣಬಹುದು.
MOST READ: ಲ್ಯಾಂಡ್ ರೋವರ್‍ನಂತೆ ಬದಲಾಯ್ತು ಮಾರುತಿ ಬ್ರಿಝಾ

ಇಂಟಿರಿಯರ್‍ನಲ್ಲೂ ವಿನ್ಯಾಸಗಳನ್ನು ಬದಲಿಸಲಾಗಿದ್ದು, ವಿಭಿನ್ನವಾದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಸುಧಾರಿತ ಇನ್ಫೋಟೇನ್‍ಮೆಂಟ್ ಸಿಸ್ಟಂಗಳಿರಲಿವೆ. ಟೆಕ್ನಿಕಲ್ ಅಂಶಗಳ ಬಗ್ಗೆ ಅಧಿಕೃತವಾಗಿ ಹೇಳದೇ ಇದ್ದರೂ, ಬಿಎಂಡಬ್ಲ್ಯು ಐ3ಎಸ್ ಕಾರಿನಲ್ಲಿರುವಂತಹ ಅಂಶಗಳನ್ನು ಈ ಎಲೆಕ್ಟ್ರಿಕ್ ಕಾರು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.
MOST READ: ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಜರ್ಮನ್ ಮೂಲದ ಬಿಎಂಡಬ್ಲ್ಯು ಕಾರು, 42 ಕೆಡಬ್ಲ್ಯುಹೆಚ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, 181ಬಿಹೆಚ್‍ಪಿ ಹಾಗೂ 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಐ3ಎಸ್ ಕಾರು 0-100 ಕಿ.ಮೀ ವೇಗವನ್ನು 6.8 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 246 ಕಿ.ಮೀವರೆಗೂ ಚಲಿಸಬಹುದು.
MOST READ: ಭಾರತಕ್ಕೆ ಲಗ್ಗೆಯಿಡಲಿದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬೈಕ್

ಮಿನಿ ಕೂಪರ್ ಎಸ್‍ಇ ಕಾರು ತನ್ನ ಮಾರುಕಟ್ಟೆಯನ್ನು ಯೂರೋಪ್ ಹಾಗೂ ಅಮೇರಿಕಾದಲ್ಲಿ ಹೊಂದಿದೆ. ಈ ಕಾರು ಫೋಕ್ಸ್ ವ್ಯಾಗನ್ ಇ-ಗಾಲ್ಫ್ ಹಾಗೂ ಹೊಸದಾಗಿ ಮಾರುಕಟ್ಟೆಗೆ ಬರಲಿರುವ ಇತರ ಎಲೆಕ್ಟ್ರಿಕ್ ಪ್ರಿಮೀಯಂ ಹ್ಯಾಚ್‍ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








