Delhi: ಚಾರ್ಜ್ ಮಾಡುತ್ತಿರುವಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ.. ಎಚ್ಚರವಿರಲಿ!
ನವದೆಹಲಿ (Delhi) ಸಿಆರ್ ಪಾರ್ಕ್ ಪ್ರದೇಶದ ಅಂಗಡಿಯೊಂದರಲ್ಲಿ ಚಾರ್ಜ್ ಮಾಡುತ್ತಿರುವಾಗಲೇ ಎಲೆಕ್ಟ್ರಿಕ್ ಸ್ಕೂಟರ್ (electric scooter) ಬ್ಯಾಟರಿ (battery) ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಗಾಯಗಳಾಗಲಿ, ಪ್ರಾಣಾಪಾಯವಾಗಿರುವ ಬಗ್ಗೆ ವರದಿಯಾಗಿಲ್ಲ. ಆ ಬಗ್ಗೆ ಇಲ್ಲಿದೆ ವಿವರ.
ಮಂಗಳವಾರ ರಾತ್ರಿ 11.45ರ ಸುಮಾರಿಗೆ ಅಂಗಡಿ ಮಾಲೀಕ, ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬ್ಯಾಟರಿಯನ್ನು ಚಾರ್ಜ್ ಮಾಡಲು ಹಾಕಿದ್ದಾಗ ಅದು ಸ್ಫೋಟಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ. ಅಂಗಡಿಯೊಳಗಿನ ಅಕ್ವೇರಿಯಂ ಬಳಿ ಸ್ಕೂಟರ್‌ನ ಬ್ಯಾಟರಿಯನ್ನು ಚಾರ್ಜ್‌ಗೆ ಇಟ್ಟಿದ್ದಾಗ ಬ್ಲಾಸ್ಟ್ ಆಗಿದ್ದು, ಯಾರಿಗೂ ಅಪಾಯವಾಗಿಲ್ಲ. ಘಟನೆ ಬಗ್ಗೆ ಕರೆ ಬಂದ ಕೊಡಲೇ ಪೋಲೀಸರು ಹಾಗೂ ಅಗ್ನಿಶಾಮಕ ಸ್ಥಳಕ್ಕೆ ತೆರಳಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೆಂಕಿ ಹೊತ್ತಿಕೊಳ್ಳಲು ಕಾರಣವೇನು?: ಎಲೆಕ್ಟ್ರಿಕ್ ವಾಹನ ಬ್ಯಾಟರಿ ಪ್ಯಾಕ್ ಒಳಗಿನ ಭಾಗದಲ್ಲಿ ಅಪಾರ ಪ್ರಮಾಣದ ಶಕ್ತಿ ಸಂಗ್ರಹವಾಗಿರುತ್ತದೆ. ಒಂದೊಮ್ಮೆ ಇದಕ್ಕೆ ಹಾನಿಯಾದರೆ, ಥರ್ಮಲ್ ರನ್‌ಅವೇ (thermal runaway) ಎಂದು ಕರೆಯಲ್ಪಡುವ ಅಪಾಯಕಾರಿ ಪ್ರಕ್ರಿಯೆ ಶುರುವಾಗಿ, ಬ್ಯಾಟರಿಯು ಅತಿಯಾದ ಶಾಖವನ್ನು ಉತ್ಪಾದಿಸುತ್ತದೆ. ಅದು, ಕಡೆಯದಾಗಿ ಅಗ್ನಿ ಅವಘಡಕ್ಕೆ ಕಾರಣವಾಗುತ್ತದೆ.
ಇದರೊಟ್ಟಿಗೆ ನಾನಾ ಕಾರಣಗಳಿಗೆ ಬ್ಯಾಟರಿಗಳಲ್ಲಿ ಅಗ್ನಿ ಅನಾಹುತ ಸಂಭವಿಸಬಹುದು. ಮುಖ್ಯವಾಗಿ, ತಯಾರಿಕೆಯಲ್ಲಿನ ದೋಷಗಳು, ಅಸಮರ್ಪಕ ಕಾರ್ಯನಿರ್ವಹಣೆ. ದುರಸ್ತಿ ಕೆಲಸಗಳು, ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುವ ಕಾರಣಗಳಿಗೆ ಬ್ಯಾಟರಿಗಳು ಸ್ಪೋಟಗೊಳ್ಳಬಹುದು. ಹಾಗಾಗಿ, ಚಾರ್ಜ್ ಮಾಡುವ ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆ ಬಗ್ಗೆ ಇಲ್ಲಿ ವಿವರಿಸಿದ್ದೇವೆ. ಮೊದಲಿಗೆ, ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನೆರಳಿನಲ್ಲಿ ನಿಲ್ಲಿಸಿ, ಚಾರ್ಜ್ ಮಾಡಿರಿ.
ಬ್ಯಾಟರಿಗೆ ಅನುಗುಣವಾಗಿ ಅಧಿಕೃತ ಚಾರ್ಜರ್‌ಗಳನ್ನು ಬಳಸಿರಿ. ಯಾವುದೇ ಕಾರಣಕ್ಕೂ ನಕಲಿ ಚಾರ್ಜರ್ ಉಪಯೋಗಿಸಬೇಡಿ. ಜೊತೆಗೆ, ಮನೆಯಲ್ಲಿ ಚಾರ್ಜ್ ಮಾಡುವಾಗ ಬ್ಯಾಟರಿ ಪ್ಯಾಕ್ ಅನ್ನು ಸುಡುವ ವಸ್ತುಗಳಿಂದ ದೂರವಿಡಿ. ಬ್ಯಾಟರಿ ಚಾರ್ಜ್ ಮಾಡಲು ಪದೇ, ಪದೇ ಬೇರೆ, ಬೇರೆ ಚಾರ್ಜರ್ ಬಳಸದಿರಿ. ಈ ಮೂಲಕ ಅಗ್ನಿ ಅವಘಡವನ್ನು ತಪ್ಪಿಸಬಹುದು.
ಇದರೊಟ್ಟಿಗೆ ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತೆಗೆದುಕೊಂಡು ಹೊರಗಡೆ ಹೋಗಿ, ಒಂದು ಗಂಟೆಯೊಳಗೆ ಬ್ಯಾಟರಿಗಳನ್ನು ಚಾರ್ಜ್ ಮಾಡಬೇಡಿ. ಕೆಲಕಾಲ ಅದು ತಣ್ಣಗಾಗಲು ಬಿಡಿ. ಬ್ಯಾಟರಿ ಹಾನಿಗೊಳಗಾಗಿದ್ದರೆ ಅಥವಾ ಅದರೊಳಗೆ ನೀರು ಸೋರಿಕೆಯಾಗುತ್ತಿರುವುದು ಕಂಡು ಬಂದರೆ, ತಕ್ಷಣ ನಿಮ್ಮ ಇ - ಸ್ಕೂಟರ್ ಗೆ ಸಂಬಂಧಿಸಿದ ಸರ್ವಿಸ್ ಸೆಂಟರ್ ಅನ್ನು ಸಂಪರ್ಕಿರಿ.
ಪ್ರಮುಖವಾಗಿ, ಲಿಥಿಯಂ - ಐಯಾನ್ (lithium - ion) ಬ್ಯಾಟರಿಯು ಹೆಚ್ಚು ಬಿಸಿಯಾಗುವುದನ್ನು ಕಂಡು ಬಂದರೆ, ಅದರ ಸಮೀಪ ಯಾವುದೇ ಸುಡುವ ವಸ್ತುಗಳಿದ್ದರೆ, ಅದನ್ನು ದೂರವಿಡಿ. ಜೊತೆಗೆ ವಿದ್ಯುತ್ ಪೂರೈಕೆಯಾಗದಂತೆ ಸ್ವಿಚ್ ಆಫ್ ಮಾಡಿ. ಆಗಾಗ ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿಗಳನ್ನು ಪರಿಶೀಲನೆ ಮಾಡುತ್ತೀರಿ. ಬ್ಯಾಟರಿಯನ್ನು ಸಂಪೂರ್ಣವಾಗಿ ಖಾಲಿ ಅಥವಾ ಪೂರ್ತಿ ಚಾರ್ಜ್ ಮಾಡಬೇಡಿ. ಅದನ್ನು 20 - 80% ನಡುವೆ ಇರುವಂತೆ ನೋಡಿಕೊಳ್ಳಿ.
ದೂರದ ಪ್ರಯಾಣದ ವೇಳೆಯಲ್ಲಿ ಮಾತ್ರ ಬ್ಯಾಟರಿಯನ್ನು ಫುಲ್ ಚಾರ್ಜ್ ಮಾಡಿರಿ. ಇನ್ನು, ಮಂಗಳವಾರ ದೆಹಲಿಯಲ್ಲಿ ಬ್ಯಾಟರಿ ಸ್ಫೋಟಗೊಂಡಂತೆ ಈ ಹಿಂದೆಯೂ ಹಲವು ಬಾರಿ ವಿವಿಧ ಕಾರಣಗಳಿಗೆ ಇ-ಸ್ಕೂಟರ್ ಬ್ಯಾಟರಿಗಳು ಬ್ಲಾಸ್ಟ್ ಆಗಿವೆ. ಮೇಲೆ ತಿಳಿಸಲಾದ ಕೆಲವೊಂದು ಸುರಕ್ಷತೆಯ ಮಾರ್ಗಗಳನ್ನು ಪಾಲಿಸುವ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬ್ಯಾಟರಿಗಳು ಅಗ್ನಿ ಅವಘಡಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications