ಬರುತ್ತಿದೆ ವಿಮಾನಗಿಂತಲೂ ವೇಗದೂತ ಹೈ ಸ್ಪೀಡ್ ರೈಲು

ತಂತ್ರಜ್ಞಾನ ಅಭಿವೃದ್ಧಿ ಸಾಧಿಸುತ್ತಿರುವಂತೆಯೇ ಸಂಚಾರ ವ್ಯವಸ್ಥೆಯಲ್ಲೂ ನೂತನ ವಿಧಾನಗಳ ಅವಿಷ್ಕಾರವಾಗುತ್ತಿದೆ. ಇದೀಗ ದಕ್ಷಿಣ ಆಫ್ರಿಕಾ-ಅಮೆರಿಕಾದ ಪ್ರಖ್ಯಾತ ಸಂಶೋಧಕ ಹಾಗೂ ಉದ್ಯಮಿ 57ರ ಹರೆಯದ ಇಲೋನ್ ಮಸ್ಕ್ (Elon Musk) ಜಗತ್ತಿನ ಐದನೇ ಮಾದರಿಯ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ.

ಇಲೋನ್ ಅವರ ನೂತನ ಹೈಪರ್‌ಲೂಪ್ ಹೈ ಸ್ಪೀಡ್ ರೈಲು, ವಿಮಾನಕ್ಕಿಂತಲೂ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ. ಸ್ಪೇಸ್ ಎಕ್ಸ್ (SpaceX) ಸ್ಥಾಪಕನಾಗಿರುವ ಇಲೋನ್ ಮಸ್ಕ್, ಪೇಪಾಲ್ (PayPal) ಹಾಗೂ ಅತ್ಯಂತ ಯಶಸ್ವಿ ವಿದ್ಯುತ್ ಚಾಲಿತ ಕಾರು ತಯಾರಕ ಸಂಸ್ಧೆಯಾದ ಟೆಸ್ಲಾ ಮೋಟಾರ್ಸ್ (Tesla Motors) ಸಹ ಸ್ಥಾಪಕ ಕೂಡಾ ಆಗಿದ್ದಾರೆ.

ಹೈಪರ್‌ಲೂಪ್ ಹೈ ಸ್ಪೀಡ್ ರೈಲು, ಹೈಪರ್ ವೇಗದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರಲಿದೆ. ಇದು ವಿಮಾನ, ರೈಲು, ಕಾರು ಹಾಗೂ ಬೋಟ್‌ಗಳ ಬಳಿಕದ ಭವಿಷ್ಯದಲ್ಲಿ ಐದನೇ ಸಾರಿಗೆ ವ್ಯವಸ್ಥೆ ಎನಿಸಿಕೊಳ್ಳಲಿದೆ. ಎರಡು ತಿಂಗಳ ಹಿಂದೆಯಷ್ಟೇ ಹೈಪರ್‌ಲೂಪ್ ಬಗ್ಗೆ ಮಾಹಿತಿ ಕೊಟ್ಟಿದ್ದ ಈ ಅಮೆರಿಕನ್ ಬಿಲಿಯೇನರ್ ಇದೀಗ ವಿನ್ಯಾಸದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಹೈಪರ್‌ಲೂಪ್

ಹೈಪರ್‌ಲೂಪ್

ಸದ್ಯ ಚಾಲ್ತಿಯಲ್ಲಿರುವ ಹೈ ಸ್ಪೀಡ್ ರೈಲುಗಳಿಗೆ ನೂತನ ಹೈಪರ್‌ಲೂಪ್ ಬದಲಿ ವ್ಯವಸ್ಥೆ ಆಗಿರಲಿದೆ. ಪ್ರಸ್ತುತ ಮೊದಲ ಮಾದರಿ ವಿನ್ಯಾಸವನ್ನು ಬಿಡುಗಡೆಗೊಳಿಸಿರುವ ಮಸ್ಕ್, ಇದರ ನಿರ್ಮಾಣಕ್ಕೆ ಅಂದಾಜು 6 ಬಿಲಿಯನ್ ಡಾಲರ್ ವೆಚ್ಚ ತಗುಲಲಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಹೈಪರ್‌ಲೂಪ್

ಹೈಪರ್‌ಲೂಪ್

ಪ್ರಮುಖವಾಗಿಯೂ ಸ್ಯಾನ್‌ ಫ್ರಾನ್ಸಿಸ್ಕೊ ಹಾಗೂ ಲಾಸ್ ಏಜಂಲೀಸ್ ನಡುವೆ ಇದು ಸಂಚರಿಸಲಿದೆ. ಅಂದರೆ ಕೇವಲ 30 ನಿಮಿಷಗಳಲ್ಲಿ ಈ ನಿರ್ಧಾರಿತ ದೂರವನ್ನು ಕ್ರಮಿಕರಿಸಲು ಸಾಧ್ಯವಾಗಲಿದೆ. ಸಾಮಾನ್ಯ ಹೈ ಸ್ಪೀಡ್ ರೈಲು ನಿರ್ಮಾಣಗಿಂತಲೂ 10 ಪಟ್ಟುಗಳಷ್ಟು ವೆಚ್ಚ ಕಡಿಮೆಯಾಗಲಿದೆ ಎಂಬುದು ಹೈಪರ್‌ಲೂಪ್‌ನ ವಿಶೇಷತೆಯಾಗಿದೆ.

ಭವಿಷ್ಯದ ಐದನೇ ಸಾರಿಗೆ ವಿಧಾನ

ಭವಿಷ್ಯದ ಐದನೇ ಸಾರಿಗೆ ವಿಧಾನ

ತಮ್ಮ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಬಹಿರಂಗಪಡಿಸಿರುವ ಇಲೋನ್ ಮಸ್ಕ್, ಬೇರೆ ಯಾರಾದರೂ ಈ 400 ಮೈಲ್ ದೂರದ ಯೋಜನೆ ಕೈಗೆತ್ತಿಕೊಂಡರೆ ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಅಂತಿಮವಾಗಿ ಯಾರು ಕೂಡಾ ಮುಂದಾಗದಿದ್ದಲ್ಲಿ ಸ್ವತ: ತಾವೇ ಚುಕ್ಕಾಣಿ ಹಿಡಿಯುವುದಾಗಿ ಆತ್ಮವಿಶ್ವಾಸ ತೋರಿದ್ದಾರೆ.

ಹೈಪರ್‌ಲೂಪ್

ಹೈಪರ್‌ಲೂಪ್

ಕಡಿಮೆ ಭಾರದ ಸ್ಟೀಲ್ ಟ್ಯೂಬ್‌ನಲ್ಲಿ ಲಗತ್ತಿಸಲಾಗಿರುವ ಪೊಡ್ಸ್ ಎನ್ನುವ ಕ್ಯಾಪ್ಸುಲ್ ಮುಖಾಂತರ ಈ ಹೈ ಸ್ಪೀಡ್ ರೈಲು ಸಂಚರಿಸಲಿದೆ. ಒಂದೇ ಸಮಯಕ್ಕೆ 28 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಈ ಪೊಡ್ಸ್‌ಗಳು ಮ್ಯಾಗ್ನೆಟಿಕ್‌ ಪವರ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವ ಹಾಗೂ ಕ್ಯಾಪ್ಸುಲ್‌ಗಳು ಪರಸ್ಪರ ಸಂಘರ್ಷಣೆಯಾಗದಂತೆ ನೋಡಿಕೊಳ್ಳಲಿದೆ.

ಹೈ ಸ್ಪೀಡ್

ಹೈ ಸ್ಪೀಡ್

ಪ್ರತಿಯೊಂದು ಪೊಡ್ ನಡುವೆ 8 ಕೀ.ಮೀ. ಅಂತರವಿರಲಿದೆ. ಅಂದರೆ ಕೇವಲ 30 ಸೆಕೆಂಡುಗಳಷ್ಟೇ ವ್ಯತ್ಯಾಸವಿರಲಿದೆ. ಸೋಲರ್‌ನಿಂದ ನಿಯಂತ್ರಿಸಲ್ಪಡುವ ಹೈಪರ್‌ಲೂಪ್ ರೈಲು ಗಂಟೆಗೆ 1300 ಕೀ.ಮೀ ವೇಗದಲ್ಲಿ ಚಲಿಸಲಿದೆ. ಹಾಗೆಯೇ ಲಾಸ್ ಏಜಂಲೀಸ್ ಹಾಗೂ ಸ್ಯಾನ್ ಫ್ರಾನ್ಸಿಸ್ಕೊ ನಡುವೆ ಒಟ್ಟು 70 ಪೊಡ್‌ ಲಗತ್ತಿಸುವ ಇರಾದೆಯಿದೆ.

ಇಲೋನ್ ಮಸ್ಕ್

ಇಲೋನ್ ಮಸ್ಕ್

ಈ ಮಹತ್ತರ ಯೋಜನೆ ಯಶಸ್ವಿಯಾಗಲು 7ರಿಂದ 10 ವರ್ಷ ನಿರೀಕ್ಷಿಸಲಾಗಿದ್ದು, ವರ್ಷಂಪ್ರತಿ 7.4 ಮಿಲಿಯನ್ ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ಇಲೋನ್ ಮಸ್ಕ್ ವಿವರಿಸುತ್ತಾರೆ.

ಮಹತ್ತರ ಯೋಜನೆ

ಮಹತ್ತರ ಯೋಜನೆ

ಹಾಗಿದ್ದರೂ ಇಲೋನ್ ಮಸ್ಕ್ ಯೋಜನೆಗೆ ವಿಮರ್ಶಕರಿಂದ ವಿರೋಧಗಳು ವ್ಯಕ್ತವಾಗುತ್ತಿದ್ದು, ಸುರಕ್ಷಾ ಮಾನದಂಡಗಳ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕ್ಯಾಲಿಫೋರ್ನಿಯಾ ಸರಕಾರ ಈ ಮಹತ್ತರ ಯೋಜನೆಗೆ ಅನುಮೋದನೆ ನೀಡುವುದೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

More from DriveSpark

Article Published On: Wednesday, August 14, 2013, 8:04 [IST]
English summary
Hyperloop, a hyperfast public transport system, is his baby. This futuristic public transport system has been envisioned by Elon Musk as an addition to existing forms of transport, namely planes, trains, cars and boats
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+