Just In
Don't Miss!
- Sports
ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್, Live ಸ್ಕೋರ್, ಪ್ಲೇಯಿಂಗ್ XI
- News
ಮಗಳ ಶಿರಚ್ಛೇದ ಮಾಡಿ, ರುಂಡದೊಂದಿಗೆ ಪೊಲೀಸರಿಗೆ ಶರಣಾದ ತಂದೆ
- Finance
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 8.5 ರೂ. ಕಡಿತಗೊಳಿಸಬಹುದು!
- Movies
ಮೊದಲ ವಾರವೇ ಹೊರಹೋಗ್ತಾರಾ ಶುಭಾ ಪೂಂಜಾ: ನಾಮಿನೇಟ್ ಆಗಿದ್ದು ಹೇಗೆ?
- Lifestyle
ದಿನ ಭವಿಷ್ಯ: ಗುರುವಾರದ ರಾಶಿಫಲ ಹೇಗಿದೆ ನೋಡಿ
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತೀಯ ಮೂಲದ ವಿದ್ಯಾರ್ಥಿ ವಿರುದ್ಧದ ಪ್ರಕರಣದಲ್ಲಿ ಹಿನ್ನೆಡೆ ಅನುಭವಿಸಿದ ವಿಶ್ವದ ಶ್ರೀಮಂತ ವ್ಯಕ್ತಿ
ಮಾನಹಾನಿ ಪ್ರಕರಣದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಟೆಸ್ಲಾ ಕಂಪನಿ ಮಾಲೀಕ ಎಲಾನ್ ಮಸ್ಕ್ ಅವರಿಗೆ ಹಿನ್ನಡೆಯುಂಟಾಗಿದೆ. ಎಲಾನ್ ಮಸ್ಕ್ ಸಲ್ಲಿಸಿದ್ದ ಅರ್ಜಿಯನ್ನು ಕ್ಯಾಲಿಫೋರ್ನಿಯಾ ನ್ಯಾಯಾಲಯ ವಜಾಗೊಳಿಸಿದೆ.

ಭಾರತೀಯ ಮೂಲದ ವಿದ್ಯಾರ್ಥಿ ರಂದೀಪ್ ಹೋತಿ ವಿರುದ್ಧ ಎಲಾನ್ ಮಸ್ಕ್ ದಾಖಲಿಸಿದ್ದ ಮಾನಹಾನಿ ಪ್ರಕರಣವನ್ನು ಆಧಾರರಹಿತವೆಂದು ತಿಳಿಸಿ ಕ್ಯಾಲಿಫೋರ್ನಿಯಾ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ. ಎಲಾನ್ ಮಸ್ಕ್ ರಂದೀಪ್ ಅವರಿಗೆ ಬುದ್ದಿ ಕಲಿಸಲು ಹಾಗೂ ಟೆಸ್ಲಾ ಕಂಪನಿಯನ್ನು ದೂಷಿಸಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ರಂದೀಪ್ ಹೋತಿ ಇಂಡೋ-ಅಮೆರಿಕನ್ ಪ್ರಜೆಯಾಗಿದ್ದು, ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಪದವಿಪೂರ್ವ ಅಧ್ಯಯನವನ್ನು ಮಾಡುತ್ತಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ ಎಲಾನ್ ಮಸ್ಕ್ ರಂದೀಪ್ ಹೋತಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಮೊಕದ್ದಮೆಯಲ್ಲಿ ಟೆಸ್ಲಾ ಕಂಪನಿಯ ಕ್ಯಾಲಿಫೋರ್ನಿಯಾ ಮಾರಾಟ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಟೆಸ್ಲಾ ಕಾರು ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪವನ್ನು ಹೊರಿಸಲಾಗಿತ್ತು.

ಟೆಸ್ಲಾ ಕಾರು ಮಾಲೀಕರ ಅನುಮತಿಯಿಲ್ಲದೆ ರಂದೀಪ್ ಕಾರಿನ ಫೋಟೋವನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ. ಇದರ ಜೊತೆಗೆ ಟೆಸ್ಲಾ ಮಾರಾಟ ಕೇಂದ್ರದ ಬಳಿ ಹಾದುಹೋಗುವಾಗ ಟೆಸ್ಲಾ ಕಂಪನಿಯ ಪ್ರಾಣಕ್ಕೆ ಕುತ್ತು ಬರುವ ರೀತಿಯಲ್ಲಿ ಕಾರು ಚಾಲನೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಂಪನಿಯ ಉದ್ಯೋಗಿಗಳು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದರು ಎಂದು ಹೇಳಲಾಗಿತ್ತು. ಎಲಾನ್ ಮಸ್ಕ್ ವೆಬ್‌ಸೈಟ್‌ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ವರದಿಯನ್ನು ಪ್ರಕಟಿಸಿದ್ದರು.

ಇದಾದ ನಂತರ ರಂದೀಪ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ರಂದೀಪ್ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳನ್ನುಹಾಜರುಪಡಿಸಲು ಎಲಾನ್ ಮಸ್ಕ್ ವಿಫಲರಾದ ಕಾರಣ ನ್ಯಾಯಾಲಯವು ರಂದೀಪ್ ವಿರುದ್ಧದ ಮಾನಹಾನಿ ಪ್ರಕರಣವನ್ನು ವಜಾಗೊಳಿಸಿತು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಘಟನೆಯ ಬಗ್ಗೆ ಎಲಾನ್ ಮಸ್ಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟೆಸ್ಲಾ ಕಂಪನಿಯು ಅಧಿಕೃತವಾಗಿ ಭಾರತಕ್ಕೆ ಕಾಲಿಟ್ಟಿದೆ. ಕಂಪನಿಯು ತನ್ನ ಮೊದಲ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆದಿದೆ.

ಟೆಸ್ಲಾ ಕಂಪನಿಯು ಶೀಘ್ರದಲ್ಲೇ ತನ್ನ ಕಾರುಗಳ ಮಾರಾಟವನ್ನು ದೇಶಿಯ ಮಾರುಕಟ್ಟೆಯಲ್ಲಿ ಆರಂಭಿಸಬಹುದು ಎಂದು ಹೇಳಲಾಗಿದೆ. ಟೆಸ್ಲಾ ಕಂಪನಿಯು ಭಾರತದಲ್ಲಿ ತನ್ನ ಕಾರುಗಳನ್ನು ಉತ್ಪಾದಿಸುತ್ತಿಲ್ಲ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬದಲಿಗೆ ಚೀನಾದಲ್ಲಿರುವ ಉತ್ಪಾದನಾ ಘಟಕದಿಂದ ಕಾರುಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಲಾಗುವುದು. ಟೆಸ್ಲಾ ಕಂಪನಿಯು ವಿಶ್ವಾದ್ಯಂತ ಹಲವು ಕಾರುಗಳನ್ನು ಮಾರಾಟ ಮಾಡುತ್ತದೆ. ಆದರೆ ಭಾರತದಲ್ಲಿ ಮೊದಲು ಯಾವ ಮಾದರಿಯ ಕಾರ್ ಅನ್ನು ಬಿಡುಗಡೆಗೊಳಿಸಲಿದೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.

ಟೆಸ್ಲಾ ಮಾಡೆಲ್ 3 ಕಂಪನಿಯ ಅಗ್ಗದ ಕಾರ್ ಆಗಿದ್ದು, ಈ ಕಾರು ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಕಂಪನಿಯ ಹೆಚ್ಚು ಪರ್ಫಾಮೆನ್ಸ್ ನೀಡುವ ಮಾಡೆಲ್ ಎಸ್ ಕಾರಿಗಾಗಿ ಭಾರತೀಯ ಗ್ರಾಹಕರು ಎದುರು ನೋಡುತ್ತಿದ್ದಾರೆ.