ವಾಹನ ಚಾಲಕರೇ ಗಮನಿಸಿ: ಖಾಲಿ ರಸ್ತೆಯಲ್ಲಿ ವೇಗವಾಗಿ ಚಲಿಸುವ ಮುನ್ನ ಎಚ್ಚರ
ರಸ್ತೆಯಲ್ಲಿ ಕಡಿಮೆ ವಾಹನಗಳಿದ್ದಾಗ ಅಥವಾ ಯಾವುದೇ ವಾಹನಗಳು ಇಲ್ಲದೇ ಇದ್ದಾಗ ಜಾಗರೂಕತೆಯಿಂದಲೇ ವಾಹನಗಳನ್ನು ಚಾಲನೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅಪಘಾತ ಸಂಭವಿಸುವುದು ಖಚಿತ. ಇತ್ತೀಚಿಗೆ ದುರಂತ ಘಟನೆಯೊಂದು ಸಂಭವಿಸಿದೆ. ಈ ಘಟನೆ ಹೆದ್ದಾರಿಗಳಲ್ಲಿ ವೇಗವಾಗಿ ವಾಹನ ಚಾಲನೆ ಮಾಡುವವರಿಗೆ ಎಚ್ಚರಿಕೆ ಸಂದೇಶವನ್ನು ನೀಡುತ್ತದೆ.

ಲಾಕ್‌ಡೌನ್ ಜಾರಿಯಲ್ಲಿದ್ದಾಗ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿತ್ತು. ಅದರಲ್ಲೂ ಹೆದ್ದಾರಿಗಳಲ್ಲಿ ಯಾವುದೇ ರೀತಿಯ ವಾಹನ ದಟ್ಟಣೆ ಇರಲಿಲ್ಲ. ರಸ್ತೆ ಖಾಲಿಯಿರುವ ಕಾರಣಕ್ಕೆ ಜನರು ವಾಹನಗಳನ್ನು ಹೆಚ್ಚು ವೇಗದಲ್ಲಿ ಚಾಲನೆ ಮಾಡುತ್ತಾರೆ. ಗಮನಿಸಬೇಕಾದ ಸಂಗತಿಯೆಂದರೆ ರಸ್ತೆ ಖಾಲಿಯಿರುವಾಗಲೇ ಹೆಚ್ಚಿನ ಅಪಘಾತಗಳಾಗುತ್ತವೆ.

ಖಾಲಿ ರಸ್ತೆಯಲ್ಲಿ ವೇಗವಾಗಿ ಹೋಗುವಾಗ ಮನುಷ್ಯರು ಮಾತ್ರವಲ್ಲದೇ ದನ, ಕರುಗಳು, ವಾಹನಗಳು ಹಾಗೂ ಸ್ಪೀಡ್ ಬ್ರೇಕರ್‌ಗಳು ಥಟ್ಟನೆ ಎದುರಾಗುತ್ತವೆ. ಇದರಿಂದಾಗಿ ವಾಹನಗಳನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದೇ ಅಪಘಾತಗಳಾಗುತ್ತಿವೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹೆದ್ದಾರಿಗಳ ತಿರುವುಗಳಲ್ಲಿ ಐಷಾರಾಮಿ ಕಾರುಗಳ ದಕ್ಷತೆಯನ್ನು ಪರೀಕ್ಷಿಸಲು ಸಾಧ್ಯವಾದಷ್ಟು ವೇಗವಾಗಿ ಚಲಿಸುವುದು ಸಾಮಾನ್ಯ. ಈ ರೀತಿ ಹೆದ್ದಾರಿಯ ತಿರುವಿನಲ್ಲಿ ವೇಗವಾಗಿ ಕಾರು ಚಾಲನೆ ಮಾಡಿದಾಗ ದುರಂತವೊಂದು ಸಂಭವಿಸಿದೆ. ಈ ಘಟನೆ ಗುಜರಾತ್‌ನಲ್ಲಿ ನಡೆದಿದೆ.

ಅಹಮದಾಬಾದ್-ಗಾಂಧಿನಗರ ಹೆದ್ದಾರಿಯ ಅಂಬಾಪುರದಲ್ಲಿ ವೇಗವಾಗಿ ಚಲಿಸುತ್ತಿದ್ದ ಮರ್ಸಿಡಿಸ್ ಬೆಂಝ್ ಐಷಾರಾಮಿ ಕಾರು, ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯಲ್ಲಿದ್ದ ಕೆರೆಗೆ ಬಿದ್ದಿದೆ. ಕೆರೆಗೆ ಬಿದ್ದಾಗ ಕಾರಿನ ಮುಂಭಾಗ ಸ್ವಲ್ಪ ಸ್ವಲ್ಪ ಮುಳುಗಲಾರಂಭಿಸಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಅರ್ಧ ಮುಳುಗಿದ ನಂತರ ಕಾರಿನಲ್ಲಿದ್ದವರು ಕಾರಿನ ಸನ್‌ರೂಫ್ ಮೂಲಕ ಹೊರಬಂದಿದ್ದಾರೆ. ಹತ್ತಿರದ ಹಳ್ಳಿಯ ಗ್ರಾಮಸ್ಥರು ಅವರನ್ನು ರಕ್ಷಿಸಲು ಮುಂದಾಗುವಷ್ಟರಲ್ಲಿ ಕಾರಿನ ಮೇಲಿದ್ದ ಇಬ್ಬರೂ ಕಾರು ವಾಲಿದ ಕಾರಣಕ್ಕೆ ನೀರಿಗೆ ಬಿದ್ದಿದ್ದಾರೆ.

ಅವರಿಬ್ಬರಿಗೂ ಈಜಲು ಬರುತ್ತಿರಲಿಲ್ಲವೆಂದು ಕಾಣುತ್ತದೆ. ಈ ಕಾರಣಕ್ಕೆ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಧಾವಿಸಿದ್ದರು. ರಕ್ಷಣಾ ಪಡೆಗಳು ನೀರಿನಲ್ಲಿ ಮುಳುಗಿದ್ದ ಪುರುಷನ ಮೃತದೇಹವನ್ನು ಹೊರತೆಗೆದಿದ್ದು, ಮಹಿಳೆಯ ಮೃತದೇಹಕ್ಕಾಗಿ ಶೋಧನೆ ನಡೆಸಲಾಗುತ್ತಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್
ಪೊಲೀಸರ ತನಿಖೆಯಲ್ಲಿ ಮೃತಪಟ್ಟವರನ್ನು ಆನಂದ್ ಮೋದಿ ಹಾಗೂ ಫನಿ ಮೋದಿ ಎಂದು ಗುರುತಿಸಲಾಗಿದೆ. ಅವರಿಬ್ಬರು ಅಹಮದಾಬಾದ್ ನಗರದ ಶಾಹಿಬಾಗ್ ಪ್ರದೇಶದ ಜೀವರಾಜ್‌ನಗರಕ್ಕೆ ಸೇರಿದವರು ಎಂದು ತಿಳಿದುಬಂದಿದೆ.

ಪಾಲನ್‌ಪುರದಿಂದ ಅಹಮದಾಬಾದ್‌ಗೆ ಹಿಂದಿರುಗುವಾಗ ಈ ಅಪಘಾತ ಸಂಭವಿಸಿದೆ. ರಸ್ತೆ ಖಾಲಿಯಿದೆ ಎಂದು ಅತಿ ವೇಗವಾಗಿ ಕಾರು ಚಾಲನೆ ಮಾಡಬಾರದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಜೊತೆಗೆ ಖಾಲಿ ರಸ್ತೆಗಳಲ್ಲಿ ಹೆಚ್ಚು ಎಚ್ಚರಿಕೆಯಿಂದ ಚಾಲನೆ ಮಾಡುವುದು ಅತಿ ಅವಶ್ಯಕ.


Click it and Unblock the Notifications