ಪ್ಯಾರಾಚ್ಯೂಟ್ ಬಳಸಿ ವಿಮಾನ ಸಮೇತ ಲ್ಯಾಂಡ್ ಆಗಿ ಜೀವ ಉಳಿಸಿಕೊಂಡ ಪೈಲಟ್: ವಿಡಿಯೋ ವೈರಲ್

ಬೆಲ್ಜಿಯನ್‌ನ ಪೈಲಟ್ ಒಬ್ಬರು ಇತ್ತೀಚೆಗೆ ವಿಮಾನ ಅಪಘಾತದಿಂದ ಬದುಕುಳಿದ್ದಾರೆ, ಟೂ ಸೀಟರ್‌ನ ಸಣ್ಣ ವಿಮಾನದಲ್ಲಿ ಹಾರಾಟ ನಡೆಸುವ ವೇಳೆ ಇದ್ದಕ್ಕಿದ್ದಂತೆ ತುರ್ತು ಪರಿಸ್ಥಿತಿ ಎದುರಾಗಿದ್ದು, ಪ್ಯಾರಾಚ್ಯೂಟ್ ಸಹಾಯದಿಂದ ವಿಮಾನ ಸಮೇತ ಇಲ್ಲಿನ ಬ್ರೂಗ್ಸ್‌ನ ಸಿಂಟ್-ಆಂಡ್ರೀಸ್ ಎಂಬ ರಸ್ತೆಯಲ್ಲಿ ಲ್ಯಾಂಡ್ ಆಗಿದ್ದಾರೆ.

ಪ್ಯಾರಾಚ್ಯೂಟ್ ಬಳಸಿ ವಿಮಾನ ಸಮೇತ ಲ್ಯಾಂಡ್ ಆಗಿ ಜೀವ ಉಳಿಸಿಕೊಂಡ ಪೈಲಟ್: ವಿಡಿಯೋ ವೈರಲ್

ಈ ಅಪಘಾತದ ದೃಷ್ಯಗಳನ್ನು ವೈರಲ್ ಹಾಗ್ ಚಿತ್ರೀಕರಿಸಿದೆ. ವಿಡಿಯೋದಲ್ಲಿ ವಿಮಾನದ ಎಂಜಿನ್ ಆಫ್‌ ಆಗಿ ನೇರವಾಗಿ ಭೂಮಿಯ ಕಡೆಗೆ ಬರುವುದನ್ನು ಕಾಣಬಹುದು. ಪ್ಯಾರಾಚ್ಯೂಟ್‌ನ ಅಡಿಯಲ್ಲಿ ಸಣ್ಣ ವಿಮಾನವು ನೇತಾಡುತ್ತಾ ಗಾಳಿಯಲ್ಲಿ ಅಕ್ಕಪಕ್ಕಕ್ಕೆ ತೂಗಾಡುತ್ತಿದೆ.

ಪ್ಯಾರಾಚ್ಯೂಟ್ ಬಳಸಿ ವಿಮಾನ ಸಮೇತ ಲ್ಯಾಂಡ್ ಆಗಿ ಜೀವ ಉಳಿಸಿಕೊಂಡ ಪೈಲಟ್: ವಿಡಿಯೋ ವೈರಲ್

ವಿಮಾನವು ಮೊದಲಿಗೆ ನಿಧಾನವಾಗಿ ಭೂಮಿಯತ್ತ ಬರುತ್ತಿರುವಂತೆ ಕಂಡುಬಂದರೂ, ನಂತರ ಅದು ನೆಲವನ್ನು ಸಮೀಪಿಸುತ್ತಿದ್ದಂತೆ ವೇಗದಿಂದ ಕೆಳಗಿಳಿಯುವುದು ಕಂಡುಬರುತ್ತದೆ. ವೀಡಿಯೊದ ಕೊನೆಯಲ್ಲಿ, ಬ್ರೂಗ್ಸ್‌ನ ಸಿಂಟ್-ಆಂಡ್ರೀಸ್‌ನಲ್ಲಿನ ರಸ್ತೆಯ ಬದಿಯಲ್ಲಿ ವಿಮಾನವು ಮೊದಲು ಪ್ರೊಪೆಲ್ಲರ್ ಅನ್ನು ಇಳಿಸಿದಾಗ ಜೋರಾಗಿ ಕ್ರ್ಯಾಶ್ ಆಗಿರುವ ಶಬ್ದ ಕೇಳುತ್ತದೆ.

ವಿಚಿತ್ರವೇನೆಂದರೆ ಆಕಾಶಕ್ಕೆ ಹಾರುವಾಗ ಮೇಲ್ಮುಕವಾಗಿ ಹೇಗೆ ಹಾರುತ್ತದೆಯೋ ಇಳಿಯುವಾಗ ಕೂಡ ಇಳಿಮುಕವಾಗಿ ಬಂದು ತನ್ನ ಮೂಗನ್ನು ನೆಲಕ್ಕೆ ಡಿಕ್ಕಿ ಹೊಡೆದಿದೆ. ಎರಡು ಆಸನಗಳ ಈ ವಿಮಾನವು ಆ ಪ್ರದೇಶದಲ್ಲಿನ ರಸ್ತೆಗಳನ್ನು ಸೂಚಿಸುವ ಬೋರ್ಡ್ ಮತ್ತು ಬೇಲಿಗೆ ಹಾನಿಯನ್ನುಂಟುಮಾಡಿದೆ.

ಪ್ಯಾರಾಚ್ಯೂಟ್ ಬಳಸಿ ವಿಮಾನ ಸಮೇತ ಲ್ಯಾಂಡ್ ಆಗಿ ಜೀವ ಉಳಿಸಿಕೊಂಡ ಪೈಲಟ್: ವಿಡಿಯೋ ವೈರಲ್

ಪೈಲಟ್‌ ಲ್ಯಾಂಡ್‌ ಆದ ಬಳಿಕ ಸಣ್ಣ ಪುಟ್ಟ ಗಾಯಗಳೊಂದಿಗೆ ಹೊರಬಂದಿದ್ದಾರೆ. ಸದ್ಯ ಪೈಲೆಟ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಂದು ಬ್ರೂಗ್ಸ್ ಪೊಲೀಸರು ತಿಳಿಸಿದ್ದಾರೆ. ಪೈಲಟ್ ಅನುಭವಿ ಫ್ಲೈಯರ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ಯಾರಾಚ್ಯೂಟ್ ಉಡಾವಣೆ ಮಾಡುವ ವಿಮಾನದ ಬ್ಯಾಲಿಸ್ಟಿಕ್ ರಿಕವರಿ ಸಿಸ್ಟಮ್ (ಬಿಆರ್‌ಎಸ್) ನಿಂದ ಪೈಲೆಟ್ ಯಾವುದೇ ಹೆಚ್ಚಿನ ಗಾಯಗಳಾಗದೇ ಜೀವಂತ ಹೊರಬಂದಿದ್ದಾರೆ.

ಪ್ಯಾರಾಚ್ಯೂಟ್ ಬಳಸಿ ವಿಮಾನ ಸಮೇತ ಲ್ಯಾಂಡ್ ಆಗಿ ಜೀವ ಉಳಿಸಿಕೊಂಡ ಪೈಲಟ್: ವಿಡಿಯೋ ವೈರಲ್

ಇಲ್ಲದಿದ್ದರೇ ವಿಮಾನ ಅಪ್ಪಳಿಸುವ ವೇಗಕ್ಕೆ ಸ್ಪೋಟವಾಗುವ ಸಾಧ್ಯತೆಗಳೇ ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ವಿಮಾನಯಾನ ಅಧಿಕಾರಿಗಳು ಪತನದ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಘಟನೆಯಲ್ಲಿನ ವಿಮಾನವು DynAero MCRO1 ಎಂದು ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ.

ಪ್ಯಾರಾಚ್ಯೂಟ್ ಬಳಸಿ ವಿಮಾನ ಸಮೇತ ಲ್ಯಾಂಡ್ ಆಗಿ ಜೀವ ಉಳಿಸಿಕೊಂಡ ಪೈಲಟ್: ವಿಡಿಯೋ ವೈರಲ್

ಇದು ಕಾರ್ಬನ್ ಫೈಬರ್‌ನಿಂದ ನಿರ್ಮಿಸಲಾದ ಎರಡು ಆಸನಗಳ ಹಗುರವಾದ ವಿಮಾನವಾಗಿದೆ. ಇದನ್ನು ಸಣ್ಣ ಪ್ರಯಾಣಗಳಿಗಾಗಿ ಬಳಸಲಾಗುವುದು ಹಾಗೂ ಎರಡೇ ಆಸನಗಳನ್ನು ನೀಡಲಾಗುತ್ತದೆ. ಇವುಗಳನ್ನು ಆಗಿಂದ್ದಾಗೆ ಪ್ರಯಾಣಕ್ಕೂ ಮುಂಚಿತವಾಗಿ ಎಂಜಿನ್ ಹಾಗೂ ಇತರ ಭಾಗಗಳನ್ನು ಪರೀಶೀಲಿಸಬೇಕು ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

ಪ್ಯಾರಾಚ್ಯೂಟ್ ಬಳಸಿ ವಿಮಾನ ಸಮೇತ ಲ್ಯಾಂಡ್ ಆಗಿ ಜೀವ ಉಳಿಸಿಕೊಂಡ ಪೈಲಟ್: ವಿಡಿಯೋ ವೈರಲ್

ತಿಂಗಳ ಆರಂಭದಲ್ಲೂ ಇದೇ ಮಾದರಿಯ ಘಟನೆ

ಈ ತಿಂಗಳ ಆರಂಭದಲ್ಲಿ ಪೈಲಟ್ ಯುಎಸ್‌ನ ಹೆದ್ದಾರಿಯೊಂದರಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ್ದರು. ಜುಲೈ 3 ರಂದು, ಪೈಲಟ್ ವಿಸೆಂಟ್ ಫ್ರೇಸರ್ ಎಂಬಾತ ತನ್ನ ಮಾವನೊಂದಿಗೆ ಸಿಂಗಲ್-ಎಂಜಿನ್ ವಿಮಾನವನ್ನು ಹಾರಿಸುತ್ತಿದ್ದಾಗ ಉತ್ತರ ಕೆರೊಲಿನಾದ ನಾಲ್ಕು-ಲೇನ್ ಹೆದ್ದಾರಿಯಲ್ಲಿ ತನ್ನ ವಿಮಾನದ ಎಂಜಿನ್ ಇದ್ದಕ್ಕಿದ್ದಂತೆ ಆಫ್‌ ಆಗಿದೆ.

ಪ್ಯಾರಾಚ್ಯೂಟ್ ಬಳಸಿ ವಿಮಾನ ಸಮೇತ ಲ್ಯಾಂಡ್ ಆಗಿ ಜೀವ ಉಳಿಸಿಕೊಂಡ ಪೈಲಟ್: ವಿಡಿಯೋ ವೈರಲ್

ಈ ವೇಳೆ ಗಾಬರಿಗೊಂಡ ಪೈಲೆಟ್ ವಿಮಾನವನ್ನು ಮುಂದಕ್ಕೆ ಕೊಂಡೊಯ್ದರೆ ಅಪಘಾತವಾಗುತ್ತದೆ ಎಂಬುದನ್ನು ಅರಿತು, ಬಲವಂತವಾಗಿ ಇಳಿಸಬೇಕಾಯಿತು. ಈ ವೇಳೆ ಹೈವೇನಲ್ಲಿನ ಇತರ ವಾಹನಗಳು ಕೂಡ ಪರಿಸ್ಥಿತಿಯನ್ನು ಅರತು ವಿಮಾನಕ್ಕೆ ದಾರಿ ಮಾಡಿಕೊಟ್ಟಿದ್ದವು. ಸ್ವೈನ್ ಕೌಂಟಿ ಶೆರಿಫ್ ಕಚೇರಿಯು ಈ ದೃಷ್ಯಗಳನ್ನು ಹಂಚಿಕೊಂಡಿದ್ದರು.

ಪ್ಯಾರಾಚ್ಯೂಟ್ ಬಳಸಿ ವಿಮಾನ ಸಮೇತ ಲ್ಯಾಂಡ್ ಆಗಿ ಜೀವ ಉಳಿಸಿಕೊಂಡ ಪೈಲಟ್: ವಿಡಿಯೋ ವೈರಲ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ವಿದೇಶಗಳಲ್ಲಿ ವಿಮಾನ ಅಪಘಾತಗಳು ಸಾಮಾನ್ಯವಾಗಿಬಿಟ್ಟಿವೆ. ಇದಕ್ಕೆ ಕಾರಣ ಪ್ಯಾಸೆಂಜರ್ ವಿಮಾನಗಳಾದರೆ ಎರಡೆರಡು ಎಂಜಿನ್‌ಗಳು ಇರುವುದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಒಂದು ಕೈಕೊಟ್ಟರು ಮತ್ತೊಂದನ್ನು ಬಳಸಿ ಪೈಲೆಟ್‌ಗಳು ಸುರಕ್ಷಿತವಾಗಿ ಲ್ಯಾಂಡ್ ಮಾಡುತ್ತಾರೆ. ಆದರೆ ಸಣ್ಣ ವಿಮಾನಗಳು ಹಾಗಲ್ಲ ಒಂದೇ ಎಂಜಿ ಇರುವುದರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ಹಾಗಾಗಿ ಹಾರಾಟಕ್ಕೂ ಮುನ್ನ ಒಮ್ಮೆ ಸರ್ವಿಸ್ ಮಾಡಿಸಬೇಕು.

Most Read Articles

Kannada
English summary
Engine off during flight pilot who lands with an airplane with the help of a parachute
Story first published: Thursday, July 21, 2022, 16:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X