ಕಳ್ಳತನವಾದ ವಾಹನ ಪತ್ತೆಗೆ ಬರಲಿದೆ ಹೊಸ ಸಾಫ್ಟ್‌ವೇರ್

ಬೈಕ್, ಸ್ಕೂಟರ್ ಹಾಗೂ ಕಾರುಗಳ ಕಳ್ಳತನವು ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅತ್ಯಾಧುನಿಕ ರೀತಿಯಲ್ಲಿ ಕಳ್ಳತನ ಮಾಡುತ್ತಿರುವುದರಿಂದ ವಾಹನ ಮಾಲೀಕರು ಹೈರಣಾಗಿದ್ದಾರೆ. ಕೆಲವು ವೇಳೆ ವಾಹನ ಮಾಲೀಕರ ನಿರ್ಲಕ್ಷ್ಯವು ಸಹ ವಾಹನಗಳ್ಳರಿಗೆ ವರವಾಗುತ್ತಿದೆ.

ಕಳುವಾದ ವಾಹನ ಪತ್ತೆಗೆ ಬರಲಿದೆ ಹೊಸ ಸಾಫ್ಟ್ ವೇರ್

ಕಳುವಾಗುವ ವಾಹನಗಳನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವೂ ಅಲ್ಲ. ವಾಹನಗಳು ಕಳುವಾದ ಹಲವಾರು ಪ್ರಕರಣಗಳು ಇನ್ನು ಬಾಕಿಯುಳಿದಿವೆ. ಈ ಹಿನ್ನೆಲೆಯಲ್ಲಿ ಎಂಜಿನಿಯರ್‍‍ಗಳ ತಂಡವೊಂದು ಪೊಲೀಸರಿಗೆ ನೆರವಾಗಲು ಕಳುವಾದ ವಾಹನಗಳನ್ನು ಪತ್ತೆ ಹಚ್ಚುವ ಆಧುನಿಕ ಸಾಫ್ಟ್ ವೇರ್ ಒಂದನ್ನು ಅಭಿವೃದ್ಧಿಪಡಿಸುತ್ತಿದೆ.

ಕಳುವಾದ ವಾಹನ ಪತ್ತೆಗೆ ಬರಲಿದೆ ಹೊಸ ಸಾಫ್ಟ್ ವೇರ್

ಈ ಕಾರ್ಯಕ್ಕೆ ಮಹಾರಾಷ್ಟ್ರದ ಪುಣೆಯಲ್ಲಿ ಚಾಲನೆ ನೀಡಲಾಗಿದೆ. ಇದರಿಂದಾಗಿ ಇನ್ನು ಕೆಲವು ದಿನಗಳಲ್ಲಿ ಕಳುವಾಗಿರುವ, ನಕಲಿ ನಂಬರ್ ಪ್ಲೇಟ್‍‍ಗಳನ್ನು ಹೊಂದಿರುವ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

ಕಳುವಾದ ವಾಹನ ಪತ್ತೆಗೆ ಬರಲಿದೆ ಹೊಸ ಸಾಫ್ಟ್ ವೇರ್

ಪುಣೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎಂಜಿನಿಯರ್‍‍ಗಳು ಕಳುವಾದ ವಾಹನಗಳನ್ನು ಪತ್ತೆಹಚ್ಚಲು ಹೊಸ ಸಾಫ್ಟ್ ವೇರ್ ಅನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಹೊಸ ಸಾಫ್ಟ್ ವೇರ್, ಇನ್ನು ಆರು ತಿಂಗಳಲ್ಲಿ ತಯಾರಾಗುವುದಾಗಿ ಅವರು ಹೇಳಿದ್ದಾರೆ.

ಕಳುವಾದ ವಾಹನ ಪತ್ತೆಗೆ ಬರಲಿದೆ ಹೊಸ ಸಾಫ್ಟ್ ವೇರ್

ಇದರಿಂದಾಗಿ ಪೊಲೀಸರು ಕ್ರಿಮಿನಲ್ ಪ್ರಕರಣಗಳನ್ನು ಸುಲಭವಾಗಿ ಬಗೆಹರಿಸಲಿದ್ದಾರೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಕಾಲೇಜಿನ ಪ್ರಿನ್ಸಿಪಾಲ್ ಆದ ವಿಠಲ್ ಬುಂದೇಲ್‍‍ರವರು ಸಾಫ್ಟ್ ವೇರ್ ಅಭಿವೃದ್ಧಿಪಡಿಸುತ್ತಿರುವ ತಂಡದ ನೇತೃತ್ವವನ್ನು ವಹಿಸಿದ್ದಾರೆ.

ಕಳುವಾದ ವಾಹನ ಪತ್ತೆಗೆ ಬರಲಿದೆ ಹೊಸ ಸಾಫ್ಟ್ ವೇರ್

ಈ ಕಾಲೇಜಿನಲ್ಲಿರುವ ಇತರ ಇಂಜಿನಿಯರ್‍‍ಗಳೂ ಸಹ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬುಂದೇಲ್‍‍ರವರು, ಪುಣೆ ಸಂಚಾರಿ ಪೊಲೀಸರು ಈಗ ಹೊಂದಿರುವ ಟ್ರಾಫಿಕ್ ಮ್ಯಾನೇಜ್‍‍ಮೆಂಟ್ ಸಿಸ್ಟಂ ಅನ್ನು ಮತ್ತಷ್ಟು ಬಲಪಡಿಸುವ ಸಾಫ್ಟ್ ವೇರ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ.

ಕಳುವಾದ ವಾಹನ ಪತ್ತೆಗೆ ಬರಲಿದೆ ಹೊಸ ಸಾಫ್ಟ್ ವೇರ್

ಈಗಿರುವ ಸಿಸ್ಟಂನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಾದ ಸಿಗ್ನಲ್ ಜಂಪ್, ಸೀಟ್ ಬೆಲ್ಟ್ ಧರಿಸದೇ ಇರುವುದು, ಹೆಲ್ಮೆಟ್ ಧರಿಸದೇ ದ್ವಿ ಚಕ್ರ ವಾಹನ ಚಾಲನೆಯಂತಹ ಪ್ರಕರಣಗಳಲ್ಲಿ ವಾಹನ ಮಾಲೀಕರ ವಿಳಾಸಕ್ಕೆ ಚಲನ್‍‍ಗಳನ್ನು ಕಳುಹಿಸಲಾಗುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಳುವಾದ ವಾಹನ ಪತ್ತೆಗೆ ಬರಲಿದೆ ಹೊಸ ಸಾಫ್ಟ್ ವೇರ್

ಈಗ ಅಭಿವೃದ್ಧಿಪಡಿಸುತ್ತಿರುವ ಹೊಸ ಟೆಕ್ನಾಲಜಿಯಿಂದಾಗಿ ಬ್ಲಾಕ್ ಲಿಸ್ಟ್ ಮಾಡಲಾದ, ಕಳುವಾದ ಹಾಗೂ ನಕಲಿ ವಾಹನಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು. ಹೊಸ ಸಾಫ್ಟ್ ವೇರ್‍‍ನಿಂದಾಗಿ ವಾಹನಗಳ್ಳರ ಆಟಕ್ಕೆ ತೆರೆ ಬೀಳಲಿದೆ.

ಕಳುವಾದ ವಾಹನ ಪತ್ತೆಗೆ ಬರಲಿದೆ ಹೊಸ ಸಾಫ್ಟ್ ವೇರ್

ಪುಣೆ ಪೊಲೀಸರು ಹೊಸ ಸಾಫ್ಟ್ ವೇರ್ ಅಭಿವೃದ್ಧಿಪಡಿಸುತ್ತಿರುವುದನ್ನು ಸ್ವಾಗತಿಸಿದ್ದಾರೆ. ಹೊಸ ಟೆಕ್ನಾಲಜಿಯು ಉತ್ತಮವಾಗಿದ್ದು, ಕಳುವಾದ ವಾಹನಗಳನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ.

MOST READ: ಮುಖೇಶ್ ಅಂಬಾನಿ ಭದ್ರತೆಗಾಗಿಯೇ ಬಂತು ಮೂರು ಕೋಟಿ ಬೆಲೆಯ ಕಾರು

ಕಳುವಾದ ವಾಹನ ಪತ್ತೆಗೆ ಬರಲಿದೆ ಹೊಸ ಸಾಫ್ಟ್ ವೇರ್

ಸಾಫ್ಟ್ ವೇರ್ ಇಂಜಿನಿಯರ್‍‍ಗಳ ಹಾಗೂ ಪೊಲೀಸರ ಈ ಕಾರ್ಯವನ್ನು ವಾಹನ ಸವಾರರು ಸ್ವಾಗತಿಸಿದ್ದಾರೆ. ಹೊಸ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದ ನಂತರವಾದರೂ ವಾಹನಗಳ್ಳತನ ಪ್ರಕರಣಗಳು ನಿಂತರೆ ಸಾಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸೂಚನೆ: ಇಲ್ಲಿರುವ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Article Published On: Tuesday, March 10, 2020, 10:57 [IST]
English summary
Engineers developing software to help police to track stolen vehicles. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+