ಕೊನೆಗೂ ಸೂಯೆಜ್ ಕಾಲುವೆಯಿಂದ ಹೊರಬಂದ ಎವರ್ ಗ್ರೀನ್ ಹಡಗು

ಮಾರ್ಚ್ 23ರಂದು ಎವರ್ ಗ್ರೀನ್ ಹಡಗು ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿತ್ತು. ಹಡಗಿನ ಮುಂಭಾಗವು ಮರಳು, ಕೆಸರಿನ ದಡಕ್ಕೆ ಬಡಿದು ನೆಲಕ್ಕೆ ಅಪ್ಪಳಿಸಿತ್ತು. ಇದರಿಂದಾಗಿ ಹಡಗು ಮುಂದೆ ಸಾಗಲು ದೊಡ್ಡ ಸಮಸ್ಯೆ ಎದುರಾಯಿತು.

ಕೊನೆಗೂ ಸೂಯೆಜ್ ಕಾಲುವೆಯಿಂದ ಹೊರಬಂದ ಎವರ್ ಗ್ರೀನ್ ಹಡಗು

ಹಡಗನ್ನು ಮುಂದೆ ಸಾಗುವಂತೆ ಮಾಡಲು ಬೋಕ್ಲೈನ್ ​​ಯಂತ್ರಗಳ ಸಹಾಯದಿಂದ ಹಡಗಿನ ಸುತ್ತ 59 ಅಡಿ ಆಳದಲ್ಲಿದ್ದ ಸುಮಾರು 30,000 ಕ್ಯೂಬಿಕ್ ಮೀಟರ್ ಮರಳನ್ನು ತೆಗೆದು ಹಾಕಲಾಯಿತು. ಟಗ್ ಬೋಟ್‌ಗಳ ನೆರವಿನಿಂದ ಹಡಗನ್ನು ಸ್ವಲ್ಪಮಟ್ಟಿಗೆ ಸರಿಸಿ ಕಾಲುವೆಯ ಮಧ್ಯಕ್ಕೆ ತರಲಾಯಿತು.

ಕೊನೆಗೂ ಸೂಯೆಜ್ ಕಾಲುವೆಯಿಂದ ಹೊರಬಂದ ಎವರ್ ಗ್ರೀನ್ ಹಡಗು

ನಿನ್ನೆ ಮಧ್ಯಾಹ್ನ 3.05ರ ಸುಮಾರಿಗೆ ಹಡಗನ್ನು ಕಾಲುವೆಯ ಮಧ್ಯಕ್ಕೆ ತರಲಾಯಿತು. ನಂತರ ಹಡಗನ್ನು ಸೂಯೆಜ್ ಕಾಲುವೆಯ ಗ್ರೇಟರ್ ಬಿಟರ್ ಲೇಕ್ ಪ್ರದೇಶಕ್ಕೆ ಕರೆದೊಯ್ಯಲಾಯಿತು. ಹಡಗು ನಿಧಾನ ಗತಿಯಲ್ಲಿ ಮುಂದೆ ಸಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕೊನೆಗೂ ಸೂಯೆಜ್ ಕಾಲುವೆಯಿಂದ ಹೊರಬಂದ ಎವರ್ ಗ್ರೀನ್ ಹಡಗು

ಈ ಕಾರ್ಯಾಚರಣೆ ವೇಳೆ ಸೂಯೆಜ್ ಕಾಲುವೆಯಲ್ಲಿ ಸಮುದ್ರ ಮಟ್ಟದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡು ಬಂದಿದೆ. ಇದು ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಸುಲಭವಾಗಿಸಿತು ಎಂದು ಹೇಳಲಾಗಿದೆ.

ಕೊನೆಗೂ ಸೂಯೆಜ್ ಕಾಲುವೆಯಿಂದ ಹೊರಬಂದ ಎವರ್ ಗ್ರೀನ್ ಹಡಗು

ಮರಳನ್ನು ತೆಗೆಯಲು ಬಳಸಲಾದ 11 ಚಿಕ್ಕ ಟಗ್ ಬೋಟ್‌ ಹಾಗೂ 2 ಬಲಶಾಲಿ ಟಗ್‌ಬೋಟ್‌ಗಳ ಕಾರ್ಯಾಚರಣೆಗೆ ಸಮುದ್ರ ಮಟ್ಟ ಹಾಗೂ ನೀರಿನ ಮಟ್ಟ ಏರಿಕೆಯು ಸಹ ನೆರವು ನೀಡಿದವು. ಸಾಮಾನ್ಯವಾಗಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ಸಮಯದಲ್ಲಿ ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕೊನೆಗೂ ಸೂಯೆಜ್ ಕಾಲುವೆಯಿಂದ ಹೊರಬಂದ ಎವರ್ ಗ್ರೀನ್ ಹಡಗು

ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಎವರ್ ಗ್ರೀನ್ ಹಡಗಿನಲ್ಲಿ ಸುಮಾರು 20,000 ಕಂಟೇನರ್'ಗಳಿದ್ದವು. ಇದರಿಂದಾಗಿ ಈ ಹಡಗು 2.24 ಲಕ್ಷ ಟನ್ ತೂಕವನ್ನು ಹೊಂದಿತ್ತು.

ಕೊನೆಗೂ ಸೂಯೆಜ್ ಕಾಲುವೆಯಿಂದ ಹೊರಬಂದ ಎವರ್ ಗ್ರೀನ್ ಹಡಗು

ಈ ಕಾರ್ಯಾಚರಣೆಯಲ್ಲಿ ದೈತ್ಯ ಹಡಗು ಹಾನಿಗೊಳಗಾಗಬಹುದು ಎಂಬ ಅನುಮಾನಗಳಿದ್ದವು. ಕಾರ್ಯಾಚರಣೆಯ ನಂತರ ಹಡಗು ಚಲಿಸಲು ಯೋಗ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಸಂಪೂರ್ಣವಾಗಿ ಪರೀಕ್ಷಿಸಿದ ನಂತರ ಹಡಗು ಪುನಃ ಚಲಿಸಲಿದೆ ಎಂದು ವರದಿಗಳು ತಿಳಿಸಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕೊನೆಗೂ ಸೂಯೆಜ್ ಕಾಲುವೆಯಿಂದ ಹೊರಬಂದ ಎವರ್ ಗ್ರೀನ್ ಹಡಗು

ಹಡಗು ಮರಳ ಬಿರುಗಾಳಿಗೆ ಸಿಲುಕಿಕೊಂಡಿತ್ತೇ ಅಥವಾ ಮಾನವ ದೋಷದಿಂದಾಗಿ ನಿಯಂತ್ರಣ ಕಳೆದುಕೊಂಡಿತ್ತೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ರಕ್ಷಣಾಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಖಾಸಗಿ ಕಂಪನಿ ಹಡಗಿನಲ್ಲಿದ್ದ ಎಲ್ಲಾ 25 ಜನರು ಸಿಬ್ಬಂದಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದೆ.

ಕೊನೆಗೂ ಸೂಯೆಜ್ ಕಾಲುವೆಯಿಂದ ಹೊರಬಂದ ಎವರ್ ಗ್ರೀನ್ ಹಡಗು

ಕ್ಯಾಪ್ಟನ್ ಸೇರಿದಂತೆ ಹಡಗಿನ ಕಾರ್ಯಾಚರಣೆಯ ಉಸ್ತುವಾರಿ ಹೊಂದಿರುವವರನ್ನು ತನಿಖೆ ನಡೆಸಲಾಗುತ್ತದೆ. ಅವರಿಂದ ತಪ್ಪಾಗಿದ್ದರೆ ಕ್ರಿಮಿನಲ್ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಅಲ್ಲಿಯವರೆಗೆ ಹಡಗು ನಿರ್ವಹಿಸಲು ಅವರಿಗೆ ಅವಕಾಶ ನೀಡುವುದಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕೊನೆಗೂ ಸೂಯೆಜ್ ಕಾಲುವೆಯಿಂದ ಹೊರಬಂದ ಎವರ್ ಗ್ರೀನ್ ಹಡಗು

ತನಿಖೆ ಮುಗಿಯುವವರೆಗೂ ಅವರನ್ನು ಗೃಹಬಂಧನದಲ್ಲಿರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಸೂಯೆಜ್ ಕಾಲುವೆಯ ವಿರುದ್ಧ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಹಡಗು ಸಿಬ್ಬಂದಿ ಸಂಸ್ಥೆ ನಿಗಾ ವಹಿಸುತ್ತಿದೆ.

ಕೊನೆಗೂ ಸೂಯೆಜ್ ಕಾಲುವೆಯಿಂದ ಹೊರಬಂದ ಎವರ್ ಗ್ರೀನ್ ಹಡಗು

ಇದೇ ವೇಳೆ ಹಡಗಿನ ಸಿಬ್ಬಂದಿ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹಡಗು ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಎವರ್ ಗ್ರೀನ್ ಹಡಗು ಸಿಲುಕಿಕೊಳ್ಳುತ್ತಿದ್ದಂತೆ 400ಕ್ಕೂ ಹೆಚ್ಚು ಹಡಗುಗಳು ಸೂಯೆಜ್ ಕಾಲುವೆಯ ಎರಡೂ ಬದಿಯಲ್ಲಿ ಸಿಕ್ಕಿ ಹಾಕಿಕೊಂಡಿವೆ ಎಂದು ವರದಿಯಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕೊನೆಗೂ ಸೂಯೆಜ್ ಕಾಲುವೆಯಿಂದ ಹೊರಬಂದ ಎವರ್ ಗ್ರೀನ್ ಹಡಗು

ಸಿಲುಕಿ ಕೊಂಡಿದ್ದ ಎವರ್ ಗ್ರೀನ್ ಹಡಗು ಹೊರ ಬಂದಿರುವುದರಿಂದ ಸೂಯೆಜ್ ಕಾಲುವೆಯ ಸಂಚಾರ ಪುನರಾರಂಭಗೊಂಡಿದೆ. ಎರಡೂ ಬದಿಗಳಲ್ಲಿರುವ ಹಡಗುಗಳು ಕಾಲುವೆ ದಾಟಿ ಸಂಚಾರವು ಸಹಜ ಸ್ಥಿತಿಗೆ ಬರಲು ಇನ್ನು ಹಲವಾರು ದಿನಗಳು ಬೇಕಾಗುತ್ತವೆ ಎಂದು ವರದಿಗಳು ತಿಳಿಸಿವೆ.

Most Read Articles

Kannada
English summary
Ever Green cargo ship rescued from Suez canal. Read in Kannada.
Story first published: Tuesday, March 30, 2021, 13:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X