ಇದು ಸೂಪರ್‌ಕಾರ್ ಅಲ್ಲ, ಇದು ಬೈಕ್: ಈ ಬೈಕ್ ಬೆಲೆಯು ರೂ.1.5 ಕೋಟಿ, 2.0 ಲೀಟರ್ ಎಂಜಿನ್

ದ್ವಿಚಕ್ರ ವಾಹನಗಳಿಗೆ ಭಾರತ ವಿಶ್ವದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ದುಬಾರಿ ಮತ್ತು ಹೆಚ್ಚಿನ ಪರ್ಫಾಮೆನ್ಸ್ ಬೈಕ್ ಗಳು ಮತ್ತು ಸ್ಕೂಟರ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ನಾವು ರಸ್ತೆಗಳಲ್ಲಿ ಇವುಗಳನ್ನು ಹೆಚ್ಚು ನೋಡುತ್ತಿದ್ದೇವೆ. ಸಾಂಪ್ರದಾಯಿಕ ಮಾದರಿಗಳಂತೆ ಕಾಣದ ಮೋಟಾರ್‌ಸೈಕಲ್‌ಗಳನ್ನು ಉತ್ಪಾದಿಸುವ ಅನೇಕ ತಯಾರಕರು ಇದ್ದಾರೆ.

ATVಗಳನ್ನು ತಯಾರಿಸಲು ಹೆಸರುವಾಸಿಯಾದ ಅಮೇರಿಕನ್ ವಾಹನ ತಯಾರಕ ಪೋಲಾರಿಸ್, ಸ್ಲಿಂಗ್‌ಶಾಟ್ ಎಂಬ ಮೋಟಾರ್‌ಸೈಕಲ್ ಅನ್ನು ಸಹ ತಯಾರಿಸಿದೆ. ಭಾರತದಲ್ಲಿ ಒಬ್ಬರು ಈ ಬೈಕ್ ಅನ್ನು ಹೊಂದಿದ್ದಾರೆ. ಈ ಬೈಕ್ ರಸ್ತೆಯಲ್ಲಿ ಕಾಣಿಸಿಕೊಂಡಾಗ ಜನರು ಅದಕ್ಕೆ ಪ್ರತಿಕ್ರಿಯಿಸಿದ್ದು ಹೀಗೆ ವೀಡಿಯೋವನ್ನು BikeWithGirl ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ .ವೀಡಿಯೋದಲ್ಲಿ, ವ್ಲಾಗರ್ ಮುಂಬೈನ ರಸ್ತೆಗಳಲ್ಲಿ ಪೋಲಾರಿಸ್ ಸ್ಲಿಂಗ್‌ಶಾಟ್ ಸವಾರಿ ಮಾಡುತ್ತಿರುವುದನ್ನು ಕಾಣಬಹುದು.

ಇದು ಸೂಪರ್ ಕಾರ್ ಅಲ್ಲ, ಇದು ಬೈಕ್

ಇದು ಅತ್ಯಂತ ವಿಶಿಷ್ಟವಾಗಿ ಕಾಣುವ ಬೈಕ್ ಆಗಿದೆ. ಈ ಬೈಕ್ ಅನ್ನು ರಸ್ತೆಯಲ್ಲಿ ಕಾಣಿಸುವಾಗ ಜನರು ಅದನ್ನು ದುಬಾರಿ ಸೂಪರ್ ಕಾರ್ ಎಂದು ಭಾವಿಸಿದ್ದರು, ಸ್ಲಿಂಗ್‌ಶಾಟ್‌ನ ಮಾಲೀಕರು ಇದನ್ನು ಕಾರ್ನೆಟ್ ಮೂಲಕ ಭಾರತಕ್ಕೆ ಆಮದು ಮಾಡಿಕೊಂಡಿದ್ದಾರೆ ಮತ್ತು ನಾವು ದುಬೈ ನಂಬರ್ ಪ್ಲೇಟ್ ಅನ್ನು ಹಿಂಭಾಗದಲ್ಲಿ ನೋಡಬಹುದು. ಈ ಬೈಕ್ ಮುಂಭಾಗದಲ್ಲಿ ಅತ್ಯಂತ ಅಗಲವಾಗಿದೆ, ಪೋರ್ಷೆ 911 ನಷ್ಟು ಅಗಲವಿದೆ.

ಈ ಬೈಕಿನಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಕ್ಲಾಮ್‌ಶೆಲ್ ಬಾನೆಟ್ ಅನ್ನು ಪಡೆಯುತ್ತದೆ. ಇದು ಮುಂಭಾಗದಲ್ಲಿ ಎರಡು ಚಕ್ರಗಳು ಮತ್ತು ಹಿಂಭಾಗದಲ್ಲಿ ಒಂದು ಚಕ್ರ ಹೊಂದಿದೆ, ಇದರ ಹಿಂಭಾಗದ ಚಕ್ರಕ್ಕೆ ಪವರ್ ಅನ್ನು ಕಳುಹಿಸುತ್ತದೆ, ಮುಂಭಾಗ ಮತ್ತು ಹಿಂಭಾಗದ ವ್ಹೀಲ್ ಗಳು 18-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಯಾವುದೇ ಮೋಟಾರ್‌ಸೈಕಲ್‌ನಂತೆ, ಸ್ಲಿಂಗ್‌ಶಾಟ್‌ನಲ್ಲಿ ಇಬ್ಬರು ಜನರು ಕುಳಿತುಕೊಳ್ಳಬಹುದು.

ಇದು ಸೂಪರ್ ಕಾರ್ ಅಲ್ಲ, ಇದು ಬೈಕ್

ಆದರೆ ಸೀಟ್ ವಿನ್ಯಾಸವು ವಿಭಿನ್ನವಾಗಿದೆ. ಕಾರಿನಲ್ಲಿದ್ದಂತೆ ಇಬ್ಬರು ಅಕ್ಕಪಕ್ಕದಲ್ಲಿ ಕುಳಿತುಕೊಳ್ಳಬಹುದು. ಈ ಬೈಕಿನಲ್ಲಿ ಕಾರಿನ ರೀತಿ ಓಡಿಸಲು ಸ್ಟೀಯರಿಂಗ್ ವ್ಹೀಲ್ ಅನ್ನು ನೀಡಿದ್ದಾರೆ. ಈ ಕಾರಿನಲ್ಲಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಡಿಜಿಟಲ್ ಆಗಿದೆ ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ಒಳಗೊಂಡಿದೆ. ಇನ್ನು ಸ್ಪೀಕರ್ ಗಳನ್ನು ನೀಡಲಾಗಿದೆ.

ಇನ್ನು ಈ ಬೈಕಿನಲ್ಲಿ ಮತ್ತೊಂದು ಉಪಯುಕ್ತ ಫೀಚರ್ ಅಂದರೆ, ಬೈಕಿನ ಕೀಯನ್ನು ಮರೆತರೂ ಸಹ, ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಲ್ಲಿ ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ನೀವು ಬೈಕ್ ಅನ್ನು ಸ್ಟಾರ್ಟ್ ಮಾಡಬಹುದು. ಈ ಬೈಕಿನಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 204 Ps ಮತ್ತು 193 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಈ ದುಬಾರಿ ಬೈಕ್ 200 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಬೈಕ್ ಅನ್ನು ಓಡಿಸಿದ ವ್ಲಾಗರ್ ಪ್ರಕಾರ, ಈ ಬೈಕ್ ಅನ್ನು ಓಡಿಸಿದಾಗ ಕಾರ್ ಓಡಿಸಿದ ಫೀಲ್ ಆಗುತ್ತದೆ. ಈ ಬೈಕಿನಲ್ಲಿ ಕಾರಿನ ರೀತಿಯಲ್ಲಿ ಯಾವುದೇ ಡೋರುಗಳು ಮತ್ತು ರೂಫ್ ಹೊಂದಿಲ್ಲ. ಈ ಬೈಕಿನ ಆಕರ್ಷಕ ವಿನ್ಯಾಸವು ನೋಡುಗರ ಗಮನ ಸೆಳೆಯುತ್ತಿದೆ.

ಸ್ಲಿಂಗ್‌ಶಾಟ್‌ನೊಳಗೆ ಇದು ಮೋಟಾರ್‌ಸೈಕಲ್ ಮತ್ತು ಕಾರ್ ಅಲ್ಲ ಎಂದು ಘೋಷಿಸುವ ಸ್ಟಿಕರ್ ಕೂಡ ಇದೆ. ಈ ಬೈಕ್ ನಲ್ಲಿ ಸವಾರರು ಹೆಲ್ಮೆಟ್ ಧರಿಸಿರಬೇಕು. ಬೆಲೆಯ ವಿಷಯಕ್ಕೆ ಬಂದರೆ, ಇದು ದುಬಾರಿ ಮೋಟಾರ್ಸೈಕಲ್ ಆಗಿದೆ. ಈ ಬೈಕ್ ಬೆಲೆ ಸುಮಾರು 1.5 ಕೋಟಿ ರೂಪಾಯಿ ಆಗಿದೆ. ಪೋಲಾರಿಸ್ 2014 ರಲ್ಲಿ ಸ್ಲಿಂಗ್‌ಶಾಟ್ ಅನ್ನು ಬಿಡುಗಡೆ ಮಾಡಿತ್ತು ಇನ್ನು ಈ ಚಿತ್ರಗಳಲ್ಲಿರುವುದು 2022ರ ಮಾದರಿಯಾಗಿದೆ.

Article Published On: Monday, March 20, 2023, 11:33 [IST]
English summary
Everyone thinks this is a car but this is a 1 5 crore rupee motorcycle details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+