ಕಾರ್ ರೇಸರ್'ಗಳನ್ನು ಮೀರಿಸುವಂತೆ ಕಾರು ಚಾಲನೆ ಮಾಡಿದ ಮಾಜಿ ಕ್ರಿಕೆಟಿಗ

ಬಹುತೇಕ ಕ್ರಿಕೆಟಿಗರು ಕ್ರಿಕೆಟ್ ಜೊತೆಗೆ ವಾಹನಗಳ ಬಗ್ಗೆಯೂ ಕ್ರೇಜ್ ಹೊಂದಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್'ರವರಿಂದ ಹಾಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿವರೆಗೆ ಬಹುತೇಕ ಎಲ್ಲಾ ಕ್ರಿಕೆಟಿಗರು ಕಾರು ಪ್ರಿಯರು ಎಂಬುದೇ ಇದಕ್ಕೆ ಸಾಕ್ಷಿ.

ಕಾರ್ ರೇಸರ್'ಗಳನ್ನು ಮೀರಿಸುವಂತೆ ಕಾರು ಚಾಲನೆ ಮಾಡಿದ ಮಾಜಿ ಕ್ರಿಕೆಟಿಗ

ಭಾರತದ ಕ್ರಿಕೆಟಿಗರ ರೀತಿಯಲ್ಲಿಯೇ ಇತರ ದೇಶಗಳ ಹಲವು ಕ್ರಿಕೆಟಿಗರು ಸಹ ವಾಹನಗಳ ಗೀಳನ್ನು ಹೊಂದಿದ್ದಾರೆ. ಟೊಯೊಟಾ ಕಂಪನಿಯು ಹೊಸ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದೆ. ಈ ವೀಡಿಯೊದಲ್ಲಿರುವ ಮಾಜಿ ಕ್ರಿಕೆಟಿಗ ಸಹ ಕಾರುಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ.

ಕಾರ್ ರೇಸರ್'ಗಳನ್ನು ಮೀರಿಸುವಂತೆ ಕಾರು ಚಾಲನೆ ಮಾಡಿದ ಮಾಜಿ ಕ್ರಿಕೆಟಿಗ

ಫಾರ್ಚೂನರ್ ಕಾರಿಗಾಗಿ ಟೊಯೊಟಾ ಕಂಪನಿಯು ಈ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಸ್ಟೀಯರಿಂಗ್ ವಿಥ್ ಸ್ಟಾರ್ಸ್ ಶೀರ್ಷಿಕೆಯ ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ಭಾಗಿಯಾಗಿದ್ದರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾರ್ ರೇಸರ್'ಗಳನ್ನು ಮೀರಿಸುವಂತೆ ಕಾರು ಚಾಲನೆ ಮಾಡಿದ ಮಾಜಿ ಕ್ರಿಕೆಟಿಗ

ಅವರು ಹೊಸ ಟೊಯೊಟಾ ಫಾರ್ಚೂನರ್ ಕಾರನ್ನು ಒರಟು ಪ್ರದೇಶದಲ್ಲಿ ಚಾಲನೆ ಮಾಡಿದ್ದಾರೆ. ಅವರು ಸದ್ಯಕ್ಕೆ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದಿದ್ದರೂ ಕಾಮೆಂಟೆಟರ್ ಆಗಿ ಹಾಗೂ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾರ್ ರೇಸರ್'ಗಳನ್ನು ಮೀರಿಸುವಂತೆ ಕಾರು ಚಾಲನೆ ಮಾಡಿದ ಮಾಜಿ ಕ್ರಿಕೆಟಿಗ

ಈ ಮೂಲಕ ಪಾಕಿಸ್ತಾನ ಕ್ರಿಕೆಟ್'ನ ಭಾಗವಾಗಿದ್ದಾರೆ. ಈಗ ಟೊಯೊಟಾ ಕಂಪನಿಯು ವಾಸಿಮ್ ಅಕ್ರಮ್ ಅವರೊಂದಿಗಿನ ವಿಶೇಷ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ವೀಡಿಯೊದಲ್ಲಿ ಅವರು ಕಾರಿನ ವಿಶೇಷತೆ ಬಗ್ಗೆ ಹಾಗೂ ತಮ್ಮ ಕ್ರಿಕೆಟ್ ಜೀವನದ ಬಗ್ಗೆ ಮಾತನಾಡಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾರ್ ರೇಸರ್'ಗಳನ್ನು ಮೀರಿಸುವಂತೆ ಕಾರು ಚಾಲನೆ ಮಾಡಿದ ಮಾಜಿ ಕ್ರಿಕೆಟಿಗ

ಈ ವೀಡಿಯೊದಲ್ಲಿ ಮಾಜಿ ಎಡಗೈ ವೇಗದ ಬೌಲರ್ ಫಾರ್ಚೂನರ್ ಎಸ್‌ಯುವಿಯನ್ನು ಸವಾಲಿನಿಂದ ಕೂಡಿರುವ ರಸ್ತೆಯಲ್ಲಿ ಚಾಲನೆ ಮಾಡಿದ್ದಾರೆ. ಇದರಿಂದ ಫಾರ್ಚೂನರ್ ಎಸ್‌ಯುವಿಯ ಸಾಮರ್ಥ್ಯ ಸಾಬೀತಾಗಿದೆ.

ಕಾರ್ ರೇಸರ್'ಗಳನ್ನು ಮೀರಿಸುವಂತೆ ಕಾರು ಚಾಲನೆ ಮಾಡಿದ ಮಾಜಿ ಕ್ರಿಕೆಟಿಗ

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಎಸ್‌ಯುವಿಯು ಹಿಂದೆಂದಿಗಿಂತಲೂ ಹೆಚ್ಚು ಆಫ್-ರೋಡ್ ಸಾಮರ್ಥ್ಯಗಳನ್ನು ಹೊಂದಿದೆ. ಇದನ್ನು ಪ್ರದರ್ಶಿಸಲು ಟೊಯೊಟಾ ಕಂಪನಿಯು ಈ ಹೊಸ ವೀಡಿಯೊವನ್ನು ಪಾಕಿಸ್ತಾನದಲ್ಲಿ ಬಿಡುಗಡೆಗೊಳಿಸಿದೆ.

MOST

READ: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರ್ ರೇಸರ್'ಗಳನ್ನು ಮೀರಿಸುವಂತೆ ಕಾರು ಚಾಲನೆ ಮಾಡಿದ ಮಾಜಿ ಕ್ರಿಕೆಟಿಗ

ಇದರಿಂದ ಹೊಸ ಫಾರ್ಚೂನರ್ ಎಸ್‌ಯುವಿಯ ಕಡೆಗೆ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನಿಯರು ಆಕರ್ಷಿತರಾಗುತ್ತಾರೆ ಎಂಬುದು ಕಂಪನಿಯ ಅಭಿಪ್ರಾಯ. ಈ ಎಸ್‌ಯುವಿಯು 4x4 ಸಾಮರ್ಥ್ಯವನ್ನು ಹೊಂದಿದೆ.

ಕಾರ್ ರೇಸರ್'ಗಳನ್ನು ಮೀರಿಸುವಂತೆ ಕಾರು ಚಾಲನೆ ಮಾಡಿದ ಮಾಜಿ ಕ್ರಿಕೆಟಿಗ

ಈ ಎಸ್‌ಯುವಿಯನ್ನು ಚಾಲನೆ ಮಾಡಿದ ವಾಸಿಮ್ ಅಕ್ರಮ್ ಹೊಸ ಫಾರ್ಚೂನರ್ ಎಸ್‌ಯುವಿಯನ್ನು ಚಾಲನೆ ಮಾಡಲು ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೊಸ ಫಾರ್ಚೂನರ್'ನಲ್ಲಿರುವ ಐಷಾರಾಮಿ ಸೌಲಭ್ಯ ಹಾಗೂ ಈ ಎಸ್‌ಯುವಿಯು ಆಫ್-ರೋಡ್ ಅನ್ನು ನಿರ್ವಹಿಸುವ ವಿಧಾನದಿಂದ ಆಕರ್ಷಿತರಾಗಿರುವುದಾಗಿ ಅವರು ಹೇಳಿದರು.

ಕಾರ್ ರೇಸರ್'ಗಳನ್ನು ಮೀರಿಸುವಂತೆ ಕಾರು ಚಾಲನೆ ಮಾಡಿದ ಮಾಜಿ ಕ್ರಿಕೆಟಿಗ

ಆಫ್-ರೋಡ್ ಸಾಮರ್ಥ್ಯವನ್ನು ಪ್ರದರ್ಶಿಸಲು ಸಿದ್ಧಪಡಿಸಲಾಗಿದ್ದ ವೇದಿಕೆಯಲ್ಲಿ ವಾಸಿಮ್ ಅಕ್ರಮ್ ಕಾರು ರೇಸರ್'ಗಳು ಸಹ ನಾಚುವ ರೀತಿಯಲ್ಲಿ ಸರಾಗವಾಗಿ ಸಾಗಿದ್ದಾರೆ.

ಚಿತ್ರಕೃಪೆ: ಟೊಯೊಟಾ ಪಾಕಿಸ್ತಾನ

Most Read Articles

Kannada
English summary
Ex Pakistani cricketer Wasim Akram drives Toyota Fortuner in off road conditions. Read in Kannada.
Story first published: Monday, April 5, 2021, 16:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X