ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ ಎಕ್ಸೈಡ್

ಖ್ಯಾತ ಬ್ಯಾಟರಿ ತಯಾರಕ ಕಂಪನಿಯಾದ ಎಕ್ಸೈಡ್ (Exide) ಇಂಡಸ್ಟ್ರೀಸ್ ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ. ಕಂಪನಿಯು ಇತ್ತೀಚೆಗೆ ಲಿಥಿಯಂ ಐಯಾನ್ (ಲಿ-ಐಯಾನ್) ಸೆಲ್ ಉದ್ಯಮಕ್ಕೆ ಪ್ರವೇಶಿಸುವುದಾಗಿ ತಿಳಿಸಿತ್ತು. ಜೊತೆಗೆ ಭಾರತದಲ್ಲಿ ಗಿಗಾವ್ಯಾಟ್ ಸ್ಥಾವರವನ್ನು ಸ್ಥಾಪಿಸುವುದಾಗಿ ಹೇಳಿದೆ. ಎಕ್ಸೈಡ್ ಇಂಡಸ್ಟ್ರೀಸ್ ಲಿಥಿಯಂ ಐಯಾನ್ ಬ್ಯಾಟರಿಗಳ ಉತ್ಪಾದನೆಗೆ ಕೇಂದ್ರ ಸರ್ಕಾರದ ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ ಯೋಜನೆಗೆ ಸೇರುವ ಸಾಧ್ಯತೆಗಳಿವೆ.

ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ ಎಕ್ಸೈಡ್

ಎಕ್ಸೈಡ್ ಕಂಪನಿಯು ತನ್ನ ಅಂಗಸಂಸ್ಥೆಯಾದ Exide Leclanche Energy Pvt Ltd ಮೂಲಕ (NexCharge ಬ್ರ್ಯಾಂಡ್ ಅಡಿಯಲ್ಲಿ) ಸ್ವಿಟ್ಜರ್ಲೆಂಡ್‌ನ ಲೆಕ್ಲಾಂಚೆ ಎಸ್‌ಎ ಜತೆಗೂಡಿ ಲಿಥಿಯಂ ಐಯಾನ್ ಬ್ಯಾಟರಿ ಸಿಸ್ಟಂ ಹಾಗೂ ಎನರ್ಜಿ ಸೊಲ್ಯುಷನ್'ಗೂ ಸಹ ಕಾಲಿಟ್ಟಿದೆ. ತನ್ನ ಅತ್ಯಾಧುನಿಕ ಆರ್ ಅಂಡ್ ಡಿ ಕೇಂದ್ರದೊಂದಿಗೆ ಅಂಗಸಂಸ್ಥೆಯು ಲಿಥಿಯಂ ಐಯಾನ್ ಬ್ಯಾಟರಿಗಳನ್ನು ತಯಾರಿಸಲು ಹಾಗೂ ಎಲೆಕ್ಟ್ರಿಕ್ ವೆಹಿಕಲ್ ಮಾರುಕಟ್ಟೆ ಹಾಗೂ ಗ್ರಿಡ್ ಆಧಾರಿತ ಅಪ್ಲಿಕೇಶನ್‌ಗಳಿಗೆ ಶಕ್ತಿ ಸಂಗ್ರಹ ವ್ಯವಸ್ಥೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ ಎಕ್ಸೈಡ್

ಎಕ್ಸೈಡ್ ವಿಶ್ವದ ಅತಿದೊಡ್ಡ ಲೆಡ್ ಆಸಿಡ್ ಶೇಖರಣಾ ಬ್ಯಾಟರಿ ತಯಾರಕರಲ್ಲಿ ಒಂದಾಗಿದೆ. ಕಂಪನಿಯು ವ್ಯಾಪಕ ಸರಣಿಯ ಲೀಡ್ ಆಸಿಡ್ ಬ್ಯಾಟರಿಗಳನ್ನುವಿನ್ಯಾಸಗೊಳಿಸುತ್ತದೆ, ಉತ್ಪಾದಿಸುತ್ತದೆ, ಮಾರುಕಟ್ಟೆ ಮಾಡುತ್ತದೆ ಹಾಗೂ ಮಾರಾಟ ಮಾಡುತ್ತದೆ. ಕಂಪನಿಯು ಆಟೋಮೋಟಿವ್, ವಿದ್ಯುತ್, ದೂರಸಂಪರ್ಕ, ಮೂಲಸೌಕರ್ಯ ಯೋಜನೆಗಳು, ಕಂಪ್ಯೂಟರ್ ಉದ್ಯಮ, ರೈಲ್ವೆ, ಗಣಿಗಾರಿಕೆ ಹಾಗೂ ರಕ್ಷಣಾ ಕ್ಷೇತ್ರಗಳಿಗೆ ಬ್ಯಾಟರಿಗಳನ್ನು ತಯಾರಿಸುತ್ತದೆ.

ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ ಎಕ್ಸೈಡ್

ಕಂಪನಿಯ ಗ್ರಾಹಕ ಜಾಲವು ಭಾರತವೂ ಸೇರಿದಂತೆ ಆರು ಖಂಡಗಳಲ್ಲಿ 60 ದೇಶಗಳಲ್ಲಿ ಹರಡಿ ಕೊಂಡಿದೆ. ಈ ಕುರಿತು ಮಾತನಾಡಿರುವ ಎಕ್ಸೈಡ್ ಇಂಡಸ್ಟ್ರೀಸ್‌ನ ಎಂಡಿ ಹಾಗೂ ಸಿಇಒ ಸುಬೀರ್ ಚಕ್ರವರ್ತಿ, ನಾವು ಈಗ ಮಲ್ಟಿ ಜಿಡಬ್ಲ್ಯೂ ಲಿಥಿಯಂ ಐಯಾನ್ ಸೆಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಯೋಜಿಸಿದ್ದೇವೆ. ಕೇಂದ್ರ ಸರ್ಕಾರವು ಪ್ರಸ್ತಾಪಿಸಿರುವ ಸುಧಾರಿತ ರಾಸಾಯನಿಕ ಕೋಶಗಳ ಉತ್ಪಾದನೆಗೆ ಉತ್ಪಾದನಾ ಸಂಯೋಜಿತ ಪ್ರೋತ್ಸಾಹ ಯೋಜನೆಯಲ್ಲಿ ಭಾಗವಹಿಸಲು ಯೋಜಿಸಿದ್ದೇವೆ.

ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ ಎಕ್ಸೈಡ್

ಸೆಲ್ ತಯಾರಿಕೆಯು ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದನಾ ಸರಪಳಿಯ ಅವಿಭಾಜ್ಯ ಅಂಗವಾಗಿದ್ದು, ಈ ಸ್ಥಾವರದ ಸ್ಥಾಪನೆಯು ಹೆಚ್ಚು ವೆಚ್ಚ ಸ್ಪರ್ಧಾತ್ಮಕವಾಗಿರಲು ಹಾಗೂ ನಮ್ಮ ಗೌರವಾನ್ವಿತ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ನಮಗೆ ನೆರವಾಗುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ಹೇಳಿದರು.

ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ ಎಕ್ಸೈಡ್

ಪಿಎಲ್‌ಐ ಯೋಜನೆ ಬಗ್ಗೆ:

ದೇಶಿಯ ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಪಿಎಲ್‌ಐ ಯೋಜನೆಯನ್ನು ಆರಂಭಿಸಿದೆ. ದೇಶಿಯ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ ಎಕ್ಸೈಡ್

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ 2020 - 21ರ ಬಜೆಟ್‌ನಲ್ಲಿ 13 ಉದ್ಯಮ ವಲಯಗಳಿಗೆ ರೂ. 1.97 ಲಕ್ಷ ಕೋಟಿಗಳ ಪಿಎಲ್‌ಐ ಯೋಜನೆಯನ್ನು ಘೋಷಿಸಿತ್ತು. ಇದರಲ್ಲಿ ಆಟೋ ಮೊಬೈಲ್ ಉದ್ಯಮಕ್ಕೆ ಸುಮಾರು ರೂ. 57 ಸಾವಿರ ಕೋಟಿ ಘೋಷಿಸಲಾಗಿದೆ. ಈ ಯೋಜನೆಯಡಿಯಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅಸೆಂಬ್ಲಿಗಳು, ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ ಸಿಸ್ಟಂಗಳು, ಸೆನ್ಸಾರ್‌ಗಳು, ಸೂಪರ್‌ಕೆಪಾಸಿಟರ್‌ಗಳು, ಸನ್‌ರೂಫ್‌ಗಳು, ಅಡಾಪ್ಟಿವ್ ಫ್ರಂಟ್ ಲೈಟಿಂಗ್, ಆಟೋಮ್ಯಾಟಿಕ್ ಬ್ರೇಕಿಂಗ್, ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂಗಳನ್ನು ತಯಾರಿಸುವ ಕಂಪನಿಗಳಿಗೆ ಪ್ರಯೋಜನವಾಗಲಿದೆ.

ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ ಎಕ್ಸೈಡ್

ಚೀನೀ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಆಟೋ ಉದ್ಯಮವನ್ನು ಪ್ರೋತ್ಸಾಹಿಸಲಾಗುತ್ತಿದೆ, ವಿಶೇಷವಾಗಿ ಎಲೆಕ್ಟ್ರಾನಿಕ್ ಹಾಗೂ ಸೆಮಿಕಂಡಕ್ಟರ್ ಘಟಕಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಈಗ ಆಟೋಮೊಬೈಲ್ ಉದ್ಯಮವು ಸಂಪೂರ್ಣವಾಗಿ ದೇಶಿಯ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿಲ್ಲ. ಭಾರತದಲ್ಲಿ ತಯಾರಾಗುವ ವಾಹನಗಳಿಗೆ ಅನೇಕ ಬಿಡಿಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ ಎಕ್ಸೈಡ್

ಈ ಪರಿಸ್ಥಿತಿಯಲ್ಲಿ ಭಾರತವು ಎಲೆಕ್ಟ್ರಿಕ್ ವೆಹಿಕಲ್ (ಇವಿ) ವಲಯದಲ್ಲಿ ಜಾಗತಿಕ ನಾಯಕನಾಗಲು ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕಾಗುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ಬ್ಯಾಟರಿಗಳ ಬೆಲೆ ಕಡಿಮೆಯಾಗಲಿದ್ದು, ಇದರಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗಲಿದೆ ಎಂದು ಕೇಂದ್ರ ಸಲಹಾ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ.

ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ ಎಕ್ಸೈಡ್

ಇದಕ್ಕಾಗಿ ನಾವು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ದೇಶದಲ್ಲಿ ನಾವೀನ್ಯತೆ, ದಕ್ಷತೆ ಹಾಗೂ ಹೂಡಿಕೆಯನ್ನು ಉತ್ತೇಜಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವೆಂದು ಅವರು ಹೇಳಿದ್ದಾರೆ. ದೇಶದಲ್ಲಿ ಸೆಮಿಕಂಡಕ್ಟರ್ ಹಾಗೂ ಡಿಸ್ ಪ್ಲೇ ಬೋರ್ಡ್ ಉತ್ಪಾದನೆಗಾಗಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟವು ಇತ್ತೀಚಿಗಷ್ಟೇ ಅನುಮೋದನೆ ನೀಡಿದೆ.

ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ ಎಕ್ಸೈಡ್

ಪಿಎಲ್ಐ ಯೋಜನೆಯಡಿಯಲ್ಲಿ ಮುಂದಿನ 5ರಿಂದ 6 ವರ್ಷಗಳಲ್ಲಿ ದೇಶದಲ್ಲಿ ಸೆಮಿಕಂಡಕ್ಟರ್ ತಯಾರಿಕೆಗಾಗಿ ರೂ. 76,000 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತದೆ. ಪಿಎಲ್ಐ ಯೋಜನೆಯು ದೊಡ್ಡ ಪ್ರಮಾಣದ ಆಟೋಮೊಬೈಲ್ ಉತ್ಪಾದನೆ, ಆಟೋ ಘಟಕಗಳ ತಯಾರಿಕೆ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಉಪಕರಣ ತಯಾರಕರನ್ನು ಪ್ರೋತ್ಸಾಹಿಸುತ್ತದೆ.

ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ ಎಕ್ಸೈಡ್

ಈ ನಿರ್ಧಾರದ ಬಗ್ಗೆ ಮಾತನಾಡಿದ ಟೆಲಿಕಾಂ ಹಾಗೂ ಐಟಿ ಸಚಿವರಾದ ಅಶ್ವಿನಿ ವೈಷ್ಣವ್, ಮೈಕ್ರೋಚಿಪ್‌ಗಳನ್ನು ವಿನ್ಯಾಸಗೊಳಿಸಲು, ತಯಾರಿಸಲು, ಪ್ಯಾಕಿಂಗ್ ಮಾಡಲು ಹಾಗೂ ಪರೀಕ್ಷಿಸಲು ಮತ್ತು ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಈ ಯೋಜನೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ ಎಕ್ಸೈಡ್

ಭಾರತದಲ್ಲಿ ಚಿಪ್ ತಯಾರಿಕೆಗಾಗಿ ಈ ಪಿಎಲ್ಐ ಯೋಜನೆಯು ದೇಶದ ಆಟೋ ವಲಯಕ್ಕೆ ಸಾಕಷ್ಟು ಸಹಾಯ ಮಾಡುವ ನಿರೀಕ್ಷೆಗಳಿವೆ. ಜಾಗತಿಕ ವಾಹನ ಉದ್ಯಮದಂತೆಯೇ ಭಾರತೀಯ ಆಟೋ ಮೊಬೈಲ್ ಉದ್ಯಮವು ಸಹ ಚಿಪ್ ಕೊರತೆಯಿಂದ ಪ್ರಮುಖ ಸಮಸ್ಯೆಗಳನ್ನು ಎದುರಿಸಿತು. ಕೋವಿಡ್ 19 ಸಾಂಕ್ರಾಮಿಕದ ನಂತರ ವಿಶ್ವದಾದ್ಯಂತ ಸೆಮಿಕಂಡಕ್ಟರ್ ಚಿಪ್ ಗಳಿಗೆ ಕೊರತೆ ಎದುರಾಗಿದೆ.

ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ ಎಕ್ಸೈಡ್

ಕಳೆದ ವರ್ಷ ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲಿ ಲಾಕ್‌ಡೌನ್‌ ವಿಧಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಈ ಅವಧಿಯಲ್ಲಿ ಗ್ರಾಹಕ ತಂತ್ರಜ್ಞಾನ ಉತ್ಪನ್ನ ತಯಾರಕರಿಂದ ಚಿಪ್‌ಗಳಿಗೆ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಯಿತು. ಚಿಪ್ ತಯಾರಕ ಕಂಪನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಬೇಡಿಕೆಗೆ ತಕ್ಕಂತೆ ಬದಲಾಯಿಸಿದರು.

ಗಮನಿಸಿ: ಈ ಲೇಖನದಲ್ಲಿರುವ ಕೊನೆಯ ಏಳು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Exide to produce lithium ion batteries soon details
Story first published: Wednesday, December 22, 2021, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X