ಅಚ್ಚರಿಯಾದರೂ ಸತ್ಯ, ಸೂಪರ್ ಕಾರುಗಳಿಗಿಂತ ದುಬಾರಿ ಈ ಹೆಲ್ಮೆಟ್ ಬೆಲೆ..!
ಎಫ್ -35 ಯುದ್ಧ ವಿಮಾನಗಳಲ್ಲಿ ಬಳಸಲಾಗುವ ಹೆಲ್ಮೆಟ್ ಬುಲೆಟ್ ಪ್ರೂಫ್ ಆಗಿರುತ್ತದೆ. ಈ ಹೆಲ್ಮೆಟ್‌ನ ಮೇಲೆ ಹಿಮ ಬಿದ್ದರೂ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಕಾರಣಕ್ಕೆ ಈ ಹೆಲ್ಮೆಟ್‌ಗಳ ಬೆಲೆ ದುಬಾರಿ ಬೆಲೆಯ ಸೂಪರ್ ಕಾರುಗಳಿಗಿಂತ ಹೆಚ್ಚಾಗಿರುತ್ತದೆ.

ದ್ವಿಚಕ್ರ ವಾಹನ ಚಾಲಕರ ಪ್ರಾಣ ಉಳಿಸುವಲ್ಲಿಯೂ ಹೆಲ್ಮೆಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರಣಕ್ಕೆ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಧರಿಸಿ ಚಾಲನೆ ಮಾಡುವಂತೆ ಒತ್ತಾಯಿಸಲಾಗುತ್ತದೆ. ಭಾರತೀಯ ಮೋಟಾರು ವಾಹನ ಕಾಯ್ದೆಯಲ್ಲಿಯೂ ಇದನ್ನು ಹೇಳಲಾಗಿದೆ.

ಈ ಹೆಲ್ಮೆಟ್‌ಗಳನ್ನು ದ್ವಿಚಕ್ರ ವಾಹನ ಚಾಲನೆ ವೇಳೆಯಲ್ಲಿ ಮಾತ್ರವಲ್ಲದೆ ನಿರ್ಮಾಣ ಕಾಮಗಾರಿಗಳಲ್ಲಿಯೂ ಸಹ ಬಳಸಲಾಗುತ್ತದೆ. ಇದರ ಜೊತೆಗೆ ಜೆಟ್ ಫೈಟರ್‌ನಂತಹ ಫೈಟರ್ ಜೆಟ್‌ಗಳನ್ನು ಚಾಲನೆ ಮಾಡುವ ಪೈಲಟ್‌ಗಳ ಸುರಕ್ಷತೆಗಾಗಿಯೂ ಸಹ ಹೆಲ್ಮೆಟ್‌ಗಳನ್ನು ಬಳಸಲಾಗುತ್ತದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಆದರೆ ಈ ಹೆಲ್ಮೆಟ್‌ಗಳು ಸಾಂಪ್ರದಾಯಿಕ ಹೆಲ್ಮೆಟ್‌ಗಳಿಗಿಂತ ಭಿನ್ನವಾಗಿರುತ್ತವೆ. ಎಂತಹುದೇ ಪರಿಸ್ಥಿತಿ ಎದುರಾದರೂ ಪೈಲಟ್ ಪ್ರಾಣವನ್ನು ರಕ್ಷಿಸುವಂತೆ ಅವುಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಯುದ್ಧದ ಸಂದರ್ಭದಲ್ಲಿ ಇವು ಹೆಚ್ಚು ಉಪಯೋಗಕ್ಕೆ ಬರುತ್ತವೆ.

ಲಾಕ್ಹೀಡ್ ಮಾರ್ಟಿನ್ ಎಫ್ -35 ಫೈಟರ್ ಜೆಟ್‌ಗಳಲ್ಲಿ ಬಳಸುವ ಹೆಲ್ಮೆಟ್‌ಗಳು ವಿಶಿಷ್ಟ ರೀತಿಯ ತಂತ್ರಜ್ಞಾನವನ್ನು ಹೊಂದಿರುತ್ತವೆ. ಈ ಹೆಲ್ಮೆಟ್‌ಗಳು ಬುಲೆಟ್ ಪ್ರೂಫ್ ಆಗಿದ್ದು, ರಾತ್ರಿ ವೇಳೆ ಹಾಗೂ ಕತ್ತಲಿನಲ್ಲಿಯೂ ಸ್ಪಷ್ಟವಾಗಿ ಕಾಣುವಂತೆ ವಿನ್ಯಾಸಗೊಳಿಸಲಾಗಿರುತ್ತದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಎಫ್ -35 ಫೈಟರ್ ಜೆಟ್‌ಗಳಲ್ಲಿ ಬಳಸುವ ಹೆಲ್ಮೆಟ್‌ಗಳ ಬೆಲೆ ಒಂದು ಕೋಟಿ ರೂಪಾಯಿ ಮೌಲ್ಯದ ಸೂಪರ್‌ಕಾರ್‌ಗಳ ಬೆಲೆಗೆ ಸಮನಾಗಿರುತ್ತದೆ. ಈ ಹೆಲ್ಮೆಟ್‌ನಲ್ಲಿ ಯಾವ ರೀತಿಯ ಸೌಲಭ್ಯಗಳಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವಿಷುಯಲ್ ಫೀಡ್
ಎಫ್ -35 ಫೈಟರ್‌ನ ಹೆಲ್ಮೆಟ್‌ನ ಪ್ರಮುಖ ಅಂಶವೆಂದರೆ ಡಿಸ್‌ಪ್ಲೇ. ಈ ಕಾರಣಕ್ಕೆ ಹೆಲ್ಮೆಟ್‌ನ ಒಳಭಾಗದಲ್ಲಿ ಸ್ಕ್ರೀನ್ ನೀಡಲಾಗಿರುತ್ತದೆ. ಈ ಸ್ಕ್ರೀನ್ ಹೊರಗಿನ ಆರು ಕ್ಯಾಮೆರಾಗಳ ಮೂಲಕ ಮಾನವನ ಕಣ್ಣುಗಳಿಗಿಂತ ಹೆಚ್ಚು ಸ್ಪಷ್ಟವಾದ, ತೀಕ್ಷ್ಣವಾದ ಶಾಟ್‌ಗಳನ್ನು ನೀಡುತ್ತದೆ. ಇದರ ಜೊತೆಗೆ ಎಕ್ಸ್‌ರೇ ಡಿಸ್‌ಪ್ಲೇಯನ್ನು ಸಹ ನೀಡಲಾಗಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಹೆಲ್ಮೆಟ್‌ಗಳ ಮೂಲಕ ಪೈಲಟ್ ಸೂಕ್ಷ್ಮ ವಸ್ತುಗಳನ್ನು ಸಹ ಕಾಣಬಹುದು. ಪೈಲಟ್ ಈ ಹೆಲ್ಮೆಟ್ ಮೂಲಕ ತನ್ನ ಮುಂದೆ ಇರುವುದನ್ನು ಮಾತ್ರವಲ್ಲದೆ ಹಿಂಭಾಗದಲ್ಲಿರುವುದನ್ನು ಸಹ ನೋಡಬಹುದು.

ವಿಮಾನದಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳ ಮೂಲಕ ಕೆಲವು ಪುಟೇಜ್‌ಗಳನ್ನು ಹೆಲ್ಮೆಟ್‌ನಲ್ಲಿ ನೋಡಬಹುದು. ಇದರಿಂದ ವಿಮಾನದ ನಾಲ್ಕು ಬದಿಯ ನೋಟವನ್ನು ಮೇಲೆ, ಕೆಳಗೆ ನೋಡಲು ಸಾಧ್ಯವಾಗಲಿದೆ.
ಸೂಚನೆ: ಕೆಲವು ಫೋಟೋಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.


Click it and Unblock the Notifications