ವಿಶ್ವದರ್ಜೆಗೆ ಸೇರಿದ ಬೆಂಗಳೂರು ವಿಮಾನ ನಿಲ್ದಾಣ: ದೇಶದ 3 ನಿಲ್ದಾಣಗಳಲ್ಲಿ ಫೇಸಿಯಲ್‌ ರೆಕಗ್ನೇಷನ್‌ ಸಿಸ್ಟಂ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಮೂರು ವಿಮಾನ ನಿಲ್ದಾಣಗಳಲ್ಲಿ ಸರ್ಕಾರವು ಡಿಜಿಯಾತ್ರಾ ತಂತ್ರಜ್ಞಾನಕ್ಕೆ ಚಾಲನೆ ನೀಡುವುದರೊಂದಿಗೆ ಪ್ರಯಾಣಿಕರಿಗೆ ಫೇಸಿಯಲ್‌‌ ರೆಕಗ್ನೇಷನ್ ಟೆಕ್ನಾಲಜಿಯೊಂದಿಗೆ ಪರಿಚಯಿಸಿದೆ. ‌ ಬೆಂಗಳೂರು ಸೇರಿದಂತೆ, ದೆಹಲಿ ಮತ್ತು ವಾರಣಾಸಿ ವಿಮಾನ ನಿಲ್ದಾಣಗಳಿಗೆ ಈ ತಂತ್ರಜ್ಞಾನವನ್ನು ಗುರುವಾರ ಪೇಸಿಯಲ್‌‌ ರೆಕಗ್ನೇಷನ್ ಟೆಕ್ನಾಲಜಿಯನ್ನು ಪರಿಚಯಿಸಲಾಗಿದೆ.

ನಾಗರೀಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಡಿಜಿ ಯಾತ್ರಾ ತಂತ್ರಜ್ಞಾನಕ್ಕೆ ಚಾಲನೆ ನೀಡಿದ್ದಾರೆ. ಇನ್ನು ಮುಂದೆ ವಿಮಾನ ಯಾತ್ರಿಗಳು ಈ ಪೇಶಿಯಲ್‌‌ ರೆಕಗ್ನೇಷನ್ ಟೆಕ್ನಾಲಜಿಯನ್ನು ಬಳಸಿಕೊಂಡು ದೆಹಲಿ, ಬೆಂಗಳೂರು ಮತ್ತು ವಾರಣಾಸಿ ವಿಮಾನ ನಿಲ್ದಾಣಗಳಲ್ಲಿ ಕಾಗದ ರಹಿತವಾಗಿ ಪ್ರವೇಶಿಸಬಹುದಾಗಿದೆ. ಈ ಡಿಜಿಯಾತ್ರಾ ತಂತ್ರಜ್ಞಾನವನ್ನು ವಿಮಾಣ ನಿಲ್ದಾಣದ ವಿವಿಧ ಚೆಕ್‌ ಪಾಯಿಂಟ್‌ಗಳಲ್ಲಿ ಪ್ರಯಾಣಿಕರ ಮಾಹಿತಿಯನ್ನು ಡಾಟಾ ಫೇಸಿಯಲ್‌ ರೆಕಗ್ನಿಷನ್‌ ಮೂಲಕ ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ.

ಈ ಡಿಜಿಯಾತ್ರಾ ತಂತ್ರಜ್ಞಾನವನ್ನು ಹೈದರಾಬಾದ್‌, ಕೊಲ್ಕತ್ತಾ, ಪುಣೆ ಮತ್ತು ವಿಜಯವಾಡ ವಿಮಾನ ನಿಲ್ದಾಣಗಳಲ್ಲೂ 2023 ರ ಮಾರ್ಚ್‌ ಅಂತ್ಯದಂತೆ ಪರಿಚಯಿಸಲಿದ್ದಾರೆ. ನಂತರದಲ್ಲಿ ಭಾರತದಾದ್ಯಂತ ಇತರ ವಿಮಾನ ನಿಲ್ದಾಣಗಳಲ್ಲೂ ಈ ಪೇಶಿಯಲ್‌‌ ರೆಕಗ್ನೇಷನ್ ಟೆಕ್ನಾಲಜಿಯನ್ನು ಪರಿಚಯಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಇನ್ನು ಈ ಸೇವೆಯನ್ನು ಪ್ರಸ್ತುತವಾಗಿ ಡೊಮೆಸ್ಟಿಕ್‌ ವಿಮಾಣ ಪ್ರಯಾಣಿಕರಿಗೆ ಕಲ್ಪಿಸಲಾಗುತ್ತಿದ್ದು ಡಿಜಿ ಯಾತ್ರಾ ಆ್ಯಪ್‌ ಐಒಎಸ್‌ ಮತ್ತು ಆ್ಯಂಡ್ರಾಯ್ಡ್‌ ಈ ಎರಡೂ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂನಲ್ಲಿ ಲಭ್ಯವಿದೆ.

ಇನ್ನು ಈ ಡಿಜಿ ಯಾತ್ರಾ ತಂತ್ರಜ್ಞಾನದಿಂದಾಗಿ ವಿಮಾನ ಯಾತ್ರಿಗಳ ಪ್ರಯಾಣವು ತುಂಬಾ ಸರಳವಾಗಲಿದ್ದು, ಪ್ರಯಾಣಿಕರು ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಆ್ಯಪ್‌ನ ಪ್ರೈವಸಿ ಫೀಚರ್‌ ಬಗ್ಗೆ ಮಾತನಾಡಿದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ಆ್ಯಪ್‌ ಬಳಸುವ ಬಳಕೆದಾರರ ವೈಯಕ್ತಿಕವಾದ ಯಾವುದೇ ಮಾಹಿತಿಗಳನ್ನು ಕಲೆ ಹಾಕಲಾಗುವುದಿಲ್ಲ, ಪ್ರಯಾಣಿಕರ ಐಡಿ ಮತ್ತು ಪ್ರಯಾಣದ ಕುರಿತಾದ ಮಾಹಿತಿಗಳನ್ನು ಕಲೆಹಾಕಿ ಅದನ್ನು ಗೌಪ್ಯವಾಗಿ ಅವರ ಮೊಬೈಲ್‌ ಫೋನ್‌ನಲ್ಲಿಯೇ ಸಂಗ್ರಹಿಸಿ ಇಡಲಾಗುತ್ತದೆ ಎಂದಿದ್ದಾರೆ.

ಡಿಜಿ ಯಾತ್ರಾ ಆ್ಯಪ್‌ನಲ್ಲಿ ತಮ್ಮ ಪ್ರಯಾಣದ ಮಾಹಿತಿಗಳನ್ನು ಆಧಾರ್‌ ಸಂಖ್ಯೆಯೊಂದಿಗೆ ಸೆಲ್ಫೀ ಫೋಟೋದೊಂದೆಗೆ ನೊಂದಣಿ ಮಾಡಿಟ್ಟುಕೊಳ್ಳಬೇಕು. ನೊಂದಣಿ ಕಾರ್ಯ ಕೇವಲ ಒಂದು ಬಾರಿ ಮಾಡಿದರೆ ಸಾಕು. ನಂತರ ತಮ್ಮ ಬೋರ್ಡಿಂಗ್‌ ಪಾಸನ್ನು ಸ್ಕ್ಯಾನ್‌ ಮಾಡಿಟ್ಟುಕೊಂಡು, ಆ ದಾಖಲೆಗಳನ್ನು ಅಧಿಕಾರಿಗಳ ಜೊತೆ ಹಂಚಿಕೊಳ್ಳಬೇಕು. ಇದಾದ ನಂತರ ಪ್ರಯಾಣಿಕರು ವಿಮಾನ ನಿಲ್ದಾನದಲ್ಲಿ ತಮ್ಮ ಬಾರ್‌ ಕೋಡೆಡ್‌ ಬೋರ್ಡಿಂಗ್‌ ಪಾಸನ್ನು ಸ್ಕ್ಯಾನ್‌ಮಾಡಿಕೊಂಡು ಇ-ಗೇಟ್‌ನಲ್ಲಿ ಫೇಸಿಯಲ್‌ ರೆಕಗ್ನೇಷನ್ ‌ಮೂಲಕ ಪ್ರಯಾಣಿಕರ ಗುರುತು ಮತ್ತು ಪ್ರಯಾಣದ ಮಾಹಿತಿಗಳನ್ನು ಕಲೆಹಾಕಲಾಗುತ್ತದೆ. ನಂತರದಲ್ಲಿ ಪ್ರಯಾಣಿಕರು ಇ-ಗೇಟ್‌ ಮೂಲಕ ಪ್ರವೇಶಿಸಬಹುದು.

ಈ ಡಿಜಿ ಯಾತ್ರಾ ಆ್ಯಪನ್ನು ಪರಿಚಯಿಸಿರುವುದರಿಂದ ಭಾರತದ ವಿಮಾನ ನಿಲ್ದಾಣಗಳು ಈಗ ವಿಶ್ವದರ್ಜೆಯ ಏರ್‌ಪೋರ್ಟ್‌ಗಳ ಸಾಲಿನಲ್ಲಿ ನಿಲ್ಲುತ್ತದೆ. ಇದೇ ರೀತಿಯ ತಂತ್ರಜ್ಞಾನವು ಇದಕ್ಕೂ ಮೊದಲು, ಲಂಡನ್‌ನ ಹೀತ್ರೋ, ಅಮೇರಿಕಾದ ಅಟ್ಲಾಂಟಾ ವಿಮಾನ ನಿಲ್ದಾಣಗಳಲ್ಲಿ ಪರಿಚಯಿಸಲಾಗಿತ್ತು. ದುಬೈ ವಿಮಾನ ನಿಲ್ದಾಣಗಳಲ್ಲಿ ಈ ಫೇಸಿಯಲ್‌ ರೆಕಗ್ನೇಷನ್‌ ತಂತ್ರಜ್ಞಾನದಿಂದಾಗಿ ಪ್ರಯಾಣಿಕರು ಸುಮಾರು 40% ನಷ್ಟು ತಮ್ಮ ಸಮಯವನ್ನು ಉಳಿಸುತ್ತಾರೆ. ಇದೇ ತಂತ್ರಜ್ಞಾನ ಅಟ್ಲಾಂಟ ವಿಮಾನ ನಿಲ್ದಾಣದಲ್ಲಿ ಪ್ರತಿ ವಿಮಾನದ ಸುಮಾರು 9 ನಿಮಿಷಗಳನ್ನು ಉಳಿಸುತ್ತಿದೆ ಎಂದು ಸಿಂಧಿಯಾ ತಿಳಿಸಿದ್ದಾರೆ.

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ:
ಹೊಸ ಹೊಸ ತಂತ್ರಜ್ಞಾನವನ್ನು ಪರಿಚಯಿಸುವುದರಿಂದ ಪ್ರಯಾಣದ ಅನುಭವ ಹಿತಕರವಾಗಿರುತ್ತದೆ. ಈ ಫೇಸಿಯಲ್‌ ರೆಕಗ್ನೇಷನ್‌ ರೀತಿಯ ವ್ಯವಸ್ಥೆಗಳಂದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಉದ್ದವಾದ ಸರತಿ ಸಾಲುಗಳಲ್ಲಿ ನಿಲ್ಲುವುದು ತಪ್ಪುತ್ತದೆ. ಮಾತ್ರವಲ್ಲದೇ ವಿಶ್ವದರ್ಜೆಯ ವಿಮಾನ ನಿಲ್ದಾಣಗಳ ಸಾಲಿನಲ್ಲಿ ನಿಲ್ಲುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಈ ತಂತ್ರಜ್ಞಾನವನ್ನು ಪರಿಚಯಿಸಿದರೆ ಖಂಡಿತವಾಗಿಯೂ ಅದೊಂದು ದೊಡ್ಡ ಸಾಧನೆ ಆಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

Most Read Articles

Kannada
English summary
Facial recognation introduced at bangalore delhi and varanasi airports
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X