ವಾಹನಗಳ ಪಾಲಿನ ಅಸ್ಥಿಪಂಜರ ಚಾಸಿಸ್ ಬಗೆಗಿನ ಸಂಗತಿಗಳಿವು

ಇತ್ತೀಚಿನ ದಿನಗಳಲ್ಲಿ ವಾಹನಗಳು ಜನರಿಗೆ ಅವಶ್ಯಕ ವಸ್ತುಗಳಾಗಿವೆ. ಕೆಲವರಿಗೆ ವಾಹನಗಳು ಪ್ರತಿಷ್ಟೆಯ ಸಂಕೇತವಾಗಿವೆ. ಯಾವುದೇ ವಾಹನಗಳನ್ನು ಉತ್ಪಾದಿಸಲು ಅನೇಕ ಬಿಡಿಭಾಗಗಳು ಬೇಕಾಗುತ್ತವೆ.

ವಾಹನಗಳ ಪಾಲಿನ ಅಸ್ಥಿಪಂಜರ ಚಾಸಿಸ್ ಬಗೆಗಿನ ಸಂಗತಿಗಳಿವು

ಯಾವುದೇ ವಾಹನಗಳಿಗೆ ಆಗಲಿ ಆಕಾರವನ್ನು ನೀಡುವುದು ಬಹಳ ಮುಖ್ಯ. ಹೀಗೆ ವಾಹನಗಳಿಗೆ ಆಕಾರವನ್ನು ನೀಡುವ ವಸ್ತುವಿನ ಹೆಸರು ಚಾಸಿಸ್. ಇದನ್ನು ವಾಹನದ ಫ್ರೇಮ್ ಎಂದೂ ಸಹ ಕರೆಯುತ್ತಾರೆ. ವಾಹನವು ಚಲಿಸುತ್ತಿರಲಿ ಅಥವಾ ನಿಂತಿರಲಿ, ಈ ಎರಡೂ ಸಂದರ್ಭಗಳಲ್ಲಿ ಚಾಸಿಸ್ ವಾಹನದ ಮೇಲಿನ ಎಲ್ಲಾ ಒತ್ತಡಗಳನ್ನು ಸಹಿಸಿಕೊಳ್ಳುತ್ತದೆ.

ವಾಹನಗಳ ಪಾಲಿನ ಅಸ್ಥಿಪಂಜರ ಚಾಸಿಸ್ ಬಗೆಗಿನ ಸಂಗತಿಗಳಿವು

ಜೀವಿಗಳಿಗೆ ಅಸ್ಥಿಪಂಜರ ಇರುವ ರೀತಿಯಲ್ಲಿ ವಾಹನಗಳಿಗೆ ಚಾಸಿಸ್ ಇರುತ್ತದೆ. ಮಾಹಿತಿಗಳ ಪ್ರಕಾರ, ಚಾಸಿಸ್ ಪದವನ್ನು ಫ್ರೆಂಚ್ ಭಾಷೆಯಿಂದ ಪಡೆಯಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಾಹನಗಳ ಪಾಲಿನ ಅಸ್ಥಿಪಂಜರ ಚಾಸಿಸ್ ಬಗೆಗಿನ ಸಂಗತಿಗಳಿವು

ಚಾಸಿಸ್'ನ ಕಾರ್ಯ ಏನು ಎಂದು ನೋಡುವುದಾದರೆ, ಚಾಸಿಸ್ ಇಡೀ ವಾಹನದ ತೂಕವನ್ನು ಹೊಂದಿರುತ್ತದೆ. ಇದರ ಜೊತೆಗೆ ಚಾಸಿಸ್ ವಾಹನದ ವಿವಿಧ ಸಾಧನಗಳಿಗೆ ಸ್ಥಳಾವಕಾಶವನ್ನು ಒದಗಿಸುತ್ತದೆ.

ವಾಹನಗಳ ಪಾಲಿನ ಅಸ್ಥಿಪಂಜರ ಚಾಸಿಸ್ ಬಗೆಗಿನ ಸಂಗತಿಗಳಿವು

ಯಾವುದೇ ವಾಹನದಲ್ಲಿರುವ ಚಾಸಿಸ್, ಎಂಜಿನ್, ಗೇರ್ ಬಾಕ್ಸ್ ಮುಂತಾದವುಗಳ ತೂಕವನ್ನು ಹೊಂದಿರುತ್ತದೆ. ಇದರ ಜೊತೆಗೆ ಚಾಸಿಸ್ ಪ್ರಯಾಣಿಕರ ತೂಕ ಹಾಗೂ ಲಗೇಜ್'ಗಳನ್ನು ಸಹ ಕೊಂಡೊಯ್ಯುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಾಹನಗಳ ಪಾಲಿನ ಅಸ್ಥಿಪಂಜರ ಚಾಸಿಸ್ ಬಗೆಗಿನ ಸಂಗತಿಗಳಿವು

ಕೆಟ್ಟ ರಸ್ತೆಗಳಿಂದ ಉಂಟಾಗುವ ಒತ್ತಡಗಳನ್ನು ಸಹ ತಡೆಯುತ್ತದೆ. ಬ್ರೇಕಿಂಗ್ ಹಾಗೂ ಆಕ್ಸಲರೇಷನ್ ಸಮಯದಲ್ಲಿ ವಾಹನದ ಮೇಲೆ ಉಂಟಾಗುವ ಒತ್ತಡವನ್ನು ಚಾಸಿಸ್ ಕಡಿಮೆಗೊಳಿಸುತ್ತದೆ.

ವಾಹನಗಳ ಪಾಲಿನ ಅಸ್ಥಿಪಂಜರ ಚಾಸಿಸ್ ಬಗೆಗಿನ ಸಂಗತಿಗಳಿವು

ಚಾಸಿಸ್'ಗಳಲ್ಲಿರುವ ವಿಧಗಳ ಬಗ್ಗೆ ಹೇಳುವುದಾದರೆ, ಸಾಮಾನ್ಯವಾಗಿ ಚಾಸಿಸ್ ಲ್ಯಾಡರ್ ಫ್ರೇಮ್, ಟ್ಯೂಬ್ಯುಲರ್ ಫ್ರೇಮ್ ಹಾಗೂ ಮೊನೊಕ್ಲಾಕ್ ಎಂಬ ಮೂರು ವಿಧಗಳಿಂದ ಕೂಡಿರುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಾಹನಗಳ ಪಾಲಿನ ಅಸ್ಥಿಪಂಜರ ಚಾಸಿಸ್ ಬಗೆಗಿನ ಸಂಗತಿಗಳಿವು

ಲ್ಯಾಡರ್ ಫ್ರೇಮ್ ಚಾಸಿಸ್'ಗಳನ್ನು ಸಾಮಾನ್ಯವಾಗಿ ಭಾರೀ ಗಾತ್ರದ ಕಮರ್ಷಿಯಲ್ ವಾಹನಗಳಾದ ಟ್ರಕ್‌ ಹಾಗೂ ಬಸ್‌ಗಳಲ್ಲಿ ಬಳಸಲಾಗುತ್ತದೆ. ಲ್ಯಾಡರ್ ಫ್ರೇಮ್ ಚಾಸಿಸ್ ಮೆಟ್ಟಿಲುಗಳ ವಿನ್ಯಾಸವನ್ನು ಹೊಂದಿದೆ.

ವಾಹನಗಳ ಪಾಲಿನ ಅಸ್ಥಿಪಂಜರ ಚಾಸಿಸ್ ಬಗೆಗಿನ ಸಂಗತಿಗಳಿವು

ಪಿಕಪ್ ಟ್ರಕ್‌ಗಳಂತಹ ಕೆಲವು ಲಘು ಕಮರ್ಷಿಯಲ್ ವಾಹನಗಳಲ್ಲಿಯೂ ಲ್ಯಾಡರ್ ಫ್ರೇಮ್ ಚಾಸಿಸ್ ಅನ್ನು ಬಳಸಲಾಗುತ್ತದೆ. ಇನ್ನು ಟ್ಯೂಬ್ಯುಲರ್ ಫ್ರೇಮ್ ಚಾಸಿಸ್'ನಲ್ಲಿ ಗಟ್ಟಿಯಾದ ಪೈಪ್'ಗಳನ್ನು ಬಳಸಲಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಾಹನಗಳ ಪಾಲಿನ ಅಸ್ಥಿಪಂಜರ ಚಾಸಿಸ್ ಬಗೆಗಿನ ಸಂಗತಿಗಳಿವು

ಕೆಲವು ರೇಸಿಂಗ್ ವಾಹನಗಳಲ್ಲಿ ಹಾಗೂ ಆಲ್ ಟೆರೈನ್ ವಾಹನಗಳಲ್ಲಿ ಟ್ಯೂಬ್ಯುಲರ್ ಫ್ರೇಮ್ ಚಾಸಿಸ್ ಅನ್ನು ಬಳಸಲಾಗುತ್ತದೆ. ಮೊನೊಕೊಕ್ ಫ್ರೇಮ್ ಚಾಸಿಸ್ ಅನ್ನು ಬಹುತೇಕ ಎಲ್ಲಾ ಹೈ ಪರ್ಫಾಮೆನ್ಸ್ ಕಾರುಗಳಲ್ಲಿ ಬಳಸಲಾಗುತ್ತದೆ.

Most Read Articles

Kannada
English summary
Facts about chassis, its functions and types. Read in Kannada.
Story first published: Thursday, November 19, 2020, 9:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X