ವಿಮಾನಗಳ ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ಎದುರಾಗುವ ಫ್ಯೂಯಲ್ ಡಂಪಿಂಗ್ ಬಗೆಗಿನ ವಿವರಗಳಿವು
ಕನ್ನಡ ಡ್ರೈವ್‌ಸ್ಪಾರ್ಕ್ ಈ ಹಿಂದೆ ಸಾಕಷ್ಟು ಬಾರಿ ಓದುಗರಿಗೆ ವಿಮಾನಗಳ ಬಗ್ಗೆ ಹಾಗೂ ಪೈಲಟ್‌ಗಳ ಬಗ್ಗೆ ವಿವಿಧ ಆಸಕ್ತಿಕರ ಮಾಹಿತಿಯನ್ನು ಪ್ರಕಟಿಸಿದೆ. ಈ ಮೂಲಕ ಓದುಗರಲ್ಲಿದ್ದ ಹಲವು ಅನುಮಾನಗಳನ್ನು ಪರಿಹರಿಸುವ ಪ್ರಯತ್ನವನ್ನು ಮಾಡಲಾಗಿದೆ.

ಈ ಲೇಖನದಲ್ಲಿ ವಿಮಾನಗಳಲ್ಲಿನ ಫ್ಯೂಯಲ್ ಡಂಪಿಂಗ್ ಅಂದರೆ ಇಂಧನ ಡಂಪಿಂಗ್ ಕುರಿತ ವಿವರಗಳನ್ನು ನೋಡೋಣ. ಇಂಧನ ಡಂಪಿಂಗ್ ಎಂದರೆ ತುರ್ತು ಸನ್ನಿವೇಶದಲ್ಲಿ ವಿಮಾನದ ತೂಕವನ್ನು ಕಡಿಮೆ ಮಾಡಲು ಬಳಸುವ ಪ್ರಕ್ರಿಯೆ. ಅಂದರೆ ಇಂಧನವನ್ನು ವಿಮಾನದಿಂದ ಹೊರಹಾಕಲಾಗುತ್ತದೆ. ವಿಮಾನ ನಿಲ್ದಾಣದಿಂದ ನಿರ್ಗಮಿಸಿದ ಸ್ವಲ್ಪ ಸಮಯದ ನಂತರ ವಿಮಾನವು ಮತ್ತೆ ಅದೇ ವಿಮಾನ ನಿಲ್ದಾಣಕ್ಕೆ ಮರಳುವ ಅಗತ್ಯವಿದ್ದರೆ ಇಂಧನವನ್ನು ಹೊರಹಾಕಲಾಗುತ್ತದೆ.

ನಿರ್ದಿಷ್ಟವಾದ ವಿಮಾನ ನಿಲ್ದಾಣಕ್ಕೆ ಹೋಗುವಾಗ ಮತ್ತೊಂದು ವಿಮಾನ ನಿಲ್ದಾಣದಲ್ಲಿ ಅಥವಾ ಬೇರೆಡೆ ತುರ್ತು ಲ್ಯಾಂಡಿಂಗ್ ಸಂಭವಿಸಿದಾಗ ಪೈಲಟ್‌ಗಳು ಇಂಧನವನ್ನು ಹೊರಹಾಕುತ್ತಾರೆ. ವಿಮಾನದ ತೂಕವನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿಮಾನಗಳಿಗಾಗಿ ಗರಿಷ್ಠ ಪ್ರಮಾಣದ ಲ್ಯಾಂಡಿಂಗ್ ತೂಕವನ್ನು ನಿಗದಿಪಡಿಸಲಾಗಿರುತ್ತದೆ. ಆದರೆ ಬಹುತೇಕ ವಿಮಾನಗಳು ವಿಮಾನ ನಿಲ್ದಾಣದಿಂದ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ತೂಕವನ್ನು ಹೊಂದಿರುತ್ತವೆ.

ಹಾರಾಟದ ವೇಳೆ ನಿರ್ದಿಷ್ಟ ಪ್ರಮಾಣದ ಇಂಧನವನ್ನು ಖಾಲಿ ಮಾಡುವುದರಿಂದ, ವಿಮಾನವು ಇಳಿಯುವಾಗ ಅದರ ತೂಕ ಕಡಿಮೆಯಾಗುತ್ತದೆ. ಅಂದರೆ ವಿಮಾನದ ಒಟ್ಟಾರೆ ತೂಕವು ಗರಿಷ್ಠ ಲ್ಯಾಂಡಿಂಗ್ ತೂಕದೊಳಗೆ ಬರುತ್ತದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಯಾವುದೇ ತೊಂದರೆಗಳಿಲ್ಲದೆ ವಿಮಾನವು ಹಾರಾಟ ನಡೆಸುವಾಗ ಈ ರೀತಿ ಸಂಭವಿಸುತ್ತದೆ. ಆದರೆ ಬಹುತೇಕ ಎಲ್ಲಾ ಸಂದರ್ಭಗಳಲ್ಲಿ ವಿಮಾನಗಳು ಯಾವುದೇ ತೊಂದರೆಗಳಿಲ್ಲದೆ ಹಾರಾಟ ನಡೆಸುತ್ತವೆ ಎಂದು ಹೇಳಬಹುದು.

ಕೆಲವೊಮ್ಮೆ ವಿಮಾನಗಳಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಳ್ಳಬಹುದು. ಅಥವಾ ಯಾರಾದರೂ ಪ್ರಯಾಣಿಕರಿಗೆ ತುರ್ತು ವೈದ್ಯಕೀಯ ಸಹಾಯ ಬೇಕಾಗಬಹುದು. ಅಂತಹ ಸಂದರ್ಭಗಳಲ್ಲಿ ಪೈಲಟ್‌ಗಳು ತಕ್ಷಣ ವಿಮಾನವನ್ನು ಲ್ಯಾಂಡಿಂಗ್ ಮಾಡಬೇಕಾಗುತ್ತದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆಗ ವಿಮಾನದಲ್ಲಿರುವ ಇಂಧನವು ಗರಿಷ್ಠ ಲ್ಯಾಂಡಿಂಗ್ ತೂಕಕ್ಕೆ ಹೊಂದಿಕೊಳ್ಳುವುದಿಲ್ಲ. ಆಗ ವಿಮಾನದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಲು ವಿಮಾನದಲ್ಲಿರುವ ಇಂಧನವನ್ನು ಡಂಪ್ ಮಾಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಇಂಧನವನ್ನು ಡಂಪ್ ಮಾಡುವುದು ಎಂದರೆ ಇಂಧನವನ್ನು ಚೆಲ್ಲುವುದು ಎಂದರ್ಥವಲ್ಲ.

ವಿಮಾನವು ತುರ್ತು ಲ್ಯಾಂಡಿಂಗ್ ಮಾಡಬೇಕಾದರೆ, ಪೈಲಟ್‌ಗಳಿಗೆ ಒಟ್ಟು ಮೂರು ಆಯ್ಕೆಗಳಿರುತ್ತವೆ. ಗರಿಷ್ಠ ಲ್ಯಾಂಡಿಂಗ್ ತೂಕವನ್ನು ತಲುಪಲು ಇಂಧನವನ್ನು ಖಾಲಿ ಮಾಡಲು ಆಕಾಶದಲ್ಲಿಯೇ ಹಾರಾಟ ನಡೆಸುವುದು. ಇಲ್ಲದಿದ್ದರೆ ಅಧಿಕ ತೂಕವಿದ್ದರೂ ಲ್ಯಾಂಡಿಂಗ್ ಮಾಡುವುದು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪೈಲಟ್‌ಗಳು ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಒಂದು ವೇಳೆ ವಿಮಾನದಲ್ಲಿ ಬೆಂಕಿ ಆಕಸ್ಮಿಕ ಎದುರಾದರೆ ಅಧಿಕ ತೂಕವಿದ್ದರೂ ತಕ್ಷಣ ವಿಮಾನವನ್ನು ಕೆಳಕ್ಕೆ ಇಳಿಸಲಾಗುತ್ತದೆ. ಈ ಸಂದಭದಲ್ಲಿ ವಿಮಾನವನ್ನು ಹಲ ಸಮಯದವರೆಗೆ ಆಕಾಶದಲ್ಲಿ ಹಾರಾಟ ನಡೆಸಲು ಅಥವಾ ಇಂಧನವನ್ನು ಖಾಲಿ ಮಾಡಲು ಸಮಯವಿರುವುದಿಲ್ಲ.

ಇನ್ನು ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾದರೆ ವಿಮಾನವನ್ನು ತಕ್ಷಣವೇ ಕೆಳಕ್ಕೆ ಇಳಿಸುವ ಅಗತ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ಪೈಲಟ್‌ಗಳು ವಿಮಾನ ಹಾರಾಟವನ್ನು ಮುಂದುವರೆಸಿ ಇಂಧನವನ್ನು ಖಾಲಿ ಮಾಡಬಹುದು. ಪರಿಸ್ಥಿತಿಗೆ ಅನುಗುಣವಾಗಿ ಪೈಲಟ್‌ಗಳು ನಿರ್ಧಾರ ಕೈಗೊಳ್ಳುತ್ತಾರೆ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications