ಕಾರಿನಲ್ಲಿ ಸೈರನ್‌, ಸರ್ಕಾರಿ ಬೋರ್ಡ್ ಹಾಕಿಕೊಂಡು ಸುತ್ತಾಡುತ್ತಿದ್ದ ನಕಲಿ ಸರ್ಕಾರಿ ಅಧಿಕಾರಿ ಬಂಧನ

ಇತ್ತೀಚೆಗೆ ನಕಲಿ ವಸ್ತುಗಳ ಜೊತೆಗೆ ನಕಲಿ ಸರ್ಕಾರಿ ಅಧಿಕಾರಿಗಳ ಹಾವಳಿ ಕೂಡ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲೇ ಸರ್ಕಾರಿ ಅಧಿಕಾರಿ ಎಂದು ಜನರಿಗೆ ವಂಚಸಿದ ಹಲವು ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಕೋಲ್ಕತಾ ಪೊಲೀಸರು ಸರ್ಕಾರಿ ಅಧಿಕಾರಿ ಎಂದು ಪೋಸ್ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಕಾರಿನಲ್ಲಿ ಸೈರನ್‌, ಸರ್ಕಾರಿ ಬೋರ್ಡ್ ಹಾಕಿಕೊಂಡು ಸುತ್ತಾಡುತ್ತಿದ್ದ ನಕಲಿ ಸರ್ಕಾರಿ ಅಧಿಕಾರಿ ಬಂಧನ

ಇತ್ತೀಚೆಗೆ ಕೋಲ್ಕತಾದಲ್ಲಿ ರಾಷ್ಟ್ರೀಯ ಅಪರಾಧ ನಿಯಂತ್ರಣ ಬ್ಯೂರೋ ಅಧಿಕಾರಿ ಎಂದು ಓಡಾಡುತ್ತಿದ್ದ. ಈ ನಕಲಿ ಸರ್ಕಾರಿ ಅಧಿಕಾರಿಯ ಹೆಸರು ಗೊಲಮ್ ರಬ್ಬಾನಿ ಎಂದು ಗುರುತಿಸಲಾಗಿದೆ, ಈ ವ್ಯಕ್ತಿ ವಾಹನದಲ್ಲಿ ಸೈರನ್‌ ಮತ್ತು ಸರ್ಕಾರಿ ವಾಹನ ಎಂಬ ನಾಮಫಲಕವನ್ನು ಅಳವಡಿಸಿದ್ದಾನೆ. ಕೋಲ್ಕತ್ತಾದ ಪ್ರಗತಿ ಮೈದಾನ ಪೊಲೀಸ್ ಠಾಣೆಯ ಅಧಿಕಾರಿಗಳು ಈ ವ್ಯಕ್ತಿಯನ್ನು ಬಂಧಿಸಿ ಎಫ್ಐಆರ್ ದಾಖಲಿಸಿದೆ. 40 ವರ್ಷದ ಗೊಲಮ್ ರಬ್ಬಾನಿ ಮಹೀಂದ್ರಾ ಎಕ್ಸ್‌ಯುವಿ500 ಎಸ್‍ಯುವಿ ಮಾದರಿಯಲ್ಲಿ ತಿರುಗಾಡುತ್ತಿದ್ದ.

ಕಾರಿನಲ್ಲಿ ಸೈರನ್‌, ಸರ್ಕಾರಿ ಬೋರ್ಡ್ ಹಾಕಿಕೊಂಡು ಸುತ್ತಾಡುತ್ತಿದ್ದ ನಕಲಿ ಸರ್ಕಾರಿ ಅಧಿಕಾರಿ ಬಂಧನ

ಈ ಕಾರಿನಲ್ಲಿ ಎನ್‌ಸಿಸಿಬಿಯ ಉಪ ನಿರ್ದೇಶಕರ ಎಂಬ ನಾಮಫಲಕವನ್ನು ಹೊಂದಿತ್ತು. ಎನ್‌ಸಿಸಿಬಿ ಹೆಸರಿನ ಯಾವುದೇ ಸರ್ಕಾರಿ ಸಂಸ್ಥೆ ಇಲ್ಲದಿರುವುದರಿಂದ ಪೊಲೀಸರಿಗೆ ಅನುಮಾನ ಬಂದಿದೆ. ಕಾರಿನಲ್ಲಿರುವ ಈ ನಾಮಫಲಕದಲ್ಲಿ ಕೇಂದ್ರ ಸಂಸ್ಥೆಯ ರಾಷ್ಟ್ರೀಯ ಅಪರಾಧ ನಿಯಂತ್ರಣ ಬ್ಯೂರೋ ಎಂದು ಬರೆದಿದ್ದರು.

ಕಾರಿನಲ್ಲಿ ಸೈರನ್‌, ಸರ್ಕಾರಿ ಬೋರ್ಡ್ ಹಾಕಿಕೊಂಡು ಸುತ್ತಾಡುತ್ತಿದ್ದ ನಕಲಿ ಸರ್ಕಾರಿ ಅಧಿಕಾರಿ ಬಂಧನ

ಇನ್ನು ಈ ಕಾರಿನಲ್ಲಿ ಹೆಚ್ಚುವರಿ ಹೂಟರ್‌ಗಳು ಮತ್ತು ಸೈರನ್‌ಗಳನ್ನು ಅಳವಡಿಸಲಾಗಿದೆ. ಕಾರಿನ ಬಾನೆಟ್‌ನಲ್ಲಿ ಮತ್ತು ವಾಹನದ ಹಿಂಭಾಗದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಎಂದು ನೀಲಿ ಮತ್ತು ಕೆಂಪು ಬಣ್ಣದ ಸ್ಟೀಕರ್ ಹಾಕಿದ್ದಾನೆ.

ಕಾರಿನಲ್ಲಿ ಸೈರನ್‌, ಸರ್ಕಾರಿ ಬೋರ್ಡ್ ಹಾಕಿಕೊಂಡು ಸುತ್ತಾಡುತ್ತಿದ್ದ ನಕಲಿ ಸರ್ಕಾರಿ ಅಧಿಕಾರಿ ಬಂಧನ

ಪೋಲಿಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ, ಈ ವ್ಯಕ್ತಿ ಪಶ್ಚಿಮ ಬಂಗಾಳ ಸರ್ಕಾರವನ್ನು ವಂಚಿಸಲು ಇತರರೊಂದಿಗೆ ಸಂಚು ರೂಪಿಸಿದ್ದರು ಎಂದು ಬಾಯಿಬಿಟ್ಟಿದ್ದಾನೆ. ಇತ ಇತರ ಕಾನೂನು ಜಾರಿ ಸಂಸ್ಥೆಗಳನ್ನು ವಂಚಿಸಿಲು ಸ್ಕೇಜ್ ರೆಡಿ ಮಾಡಿದ್ದನು, ಇದಕ್ಕಾಗಿ ಖಾಸಗಿ ವಾಹನದಲ್ಲಿ ಸೈರನ್ ಅಳವಡಿಸಿ, ಪಶ್ಚಿಮ ಬಂಗಾಳ ಸರ್ಕಾರ ಸ್ಟಿಕರ್ ಮತ್ತು ಎನ್‌ಸಿಸಿಬಿ ಎಂದು ನಾಮಫಲಕವನ್ನು ಹಾಕಿದ್ದಾನೆ.

ಕಾರಿನಲ್ಲಿ ಸೈರನ್‌, ಸರ್ಕಾರಿ ಬೋರ್ಡ್ ಹಾಕಿಕೊಂಡು ಸುತ್ತಾಡುತ್ತಿದ್ದ ನಕಲಿ ಸರ್ಕಾರಿ ಅಧಿಕಾರಿ ಬಂಧನ

ಬಿಧಾನನಗರ ಪೊಲೀಸ್ ಕಮಿಷನರ್ ಎಂದು ಪೋಸ್ ನೀಡಿತ್ತಿದ್ದ ವ್ಯಕ್ತಿಯೊಬ್ಬ ನಗರ ಮೂಲದ ಗುತ್ತಿಗೆದಾರನ ಬಳಿ ರೂ,48 ಲಕ್ಷವನ್ನು ಪಡೆದು ವಂಚಿಸಿದ್ದಾನೆ. ಈ ವಂಚಕನನ್ನು ಕೂಡ ಇತ್ತೀಚೆಗೆ ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತ ಹೆಚ್ಚಿನ ಜನರಿಗೆ ವಂಚನೆ ನಡೆಸಿರುವ ಸಾಧ್ಯತೆಗಳಿದೆ. ಈ ಬಗ್ಗೆಯು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಕಾರಿನಲ್ಲಿ ಸೈರನ್‌, ಸರ್ಕಾರಿ ಬೋರ್ಡ್ ಹಾಕಿಕೊಂಡು ಸುತ್ತಾಡುತ್ತಿದ್ದ ನಕಲಿ ಸರ್ಕಾರಿ ಅಧಿಕಾರಿ ಬಂಧನ

ಕೆಲ ತಿಂಗಳುಗಳ ಹಿಂದೆ, ಕೋಲ್ಕತ್ತಾ ಪೊಲೀಸರು ಸರ್ಕಾರಿ ಅಧಿಕಾರಿಗಳ ವಾಹನಗಳ ಮೇಲೆ ಅಕ್ರಮವಾಗಿ ಅಳವಡಿಸಲಾಗಿರುವ 191 ಬೀಕನ್‌ಗಳನ್ನು ತೆಗೆದುಹಾಕಿದ್ದಾರೆ. ಇನ್ನು 2017 ರಿಂದ ಮಂತ್ರಿಗಳು, ರಾಜಕಾರಣಿಗಳು ಸೇರಿದಂತೆ ವಿಐಪಿಗಳು ಬೀಕನ್‌ಗಳ ಬಳಕೆಯನ್ನು ಸರ್ಕಾರ ನಿಷೇಧಿಸಿದೆ ಮತ್ತು ಅಧಿಕಾರಿಗಳನ್ನು ಬೀಕನ್‌ಗಳನ್ನು ಬಳಸಲಾಗುವುದಿಲ್ಲ. ಭಾರತದ ರಾಷ್ಟ್ರಪತಿ, ಪ್ರಧಾನಿ ಮತ್ತು ಮುಖ್ಯ ನ್ಯಾಯಾಧೀಶರು ಕೂಡ ಬೀಕನ್ ಮತ್ತು ಸೈರನ್‌ಗಳನ್ನು ಬಳಸುವಂತಿಲ್ಲ.

ಕಾರಿನಲ್ಲಿ ಸೈರನ್‌, ಸರ್ಕಾರಿ ಬೋರ್ಡ್ ಹಾಕಿಕೊಂಡು ಸುತ್ತಾಡುತ್ತಿದ್ದ ನಕಲಿ ಸರ್ಕಾರಿ ಅಧಿಕಾರಿ ಬಂಧನ

ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳು, ಪೊಲೀಸ್ ಮತ್ತು ಸೇನಾ ಸಿಬ್ಬಂದಿಗಳಂತಹ ತುರ್ತು ವಾಹನಗಳಿಗೆ ಮಾತ್ರ ತುರ್ತು ಸಮಯದಲ್ಲಿ ಬೀಕನ್‌ಗಳನ್ನು ಬಳಸಲು ಅನುಮತಿಸಲಾಗಿದೆ. ಪ್ರಸ್ತುತ ಭಾರತದಲ್ಲಿ ಕೆಂಪು, ನೀಲಿ, ಹಳದಿ ಸೇರಿದಂತೆ ಆರು ವರ್ಗದ ಬೀಕನ್‌ಗಳಿವೆ.

ಕಾರಿನಲ್ಲಿ ಸೈರನ್‌, ಸರ್ಕಾರಿ ಬೋರ್ಡ್ ಹಾಕಿಕೊಂಡು ಸುತ್ತಾಡುತ್ತಿದ್ದ ನಕಲಿ ಸರ್ಕಾರಿ ಅಧಿಕಾರಿ ಬಂಧನ

ನಕಲಿ ಸರ್ಕಾರಿ ಅಧಿಕಾರಿ ಮಹೀಂದ್ರಾ ಎಕ್ಸ್‌ಯುವಿ500 ಎಸ್‍ಯುವಿ ಮಾದರಿಯನ್ನು ಸರ್ಕಾರಿ ವಾಹನವಾಗಿ ಬಳಿಸಿದ್ದ. ಮಹೀಂದ್ರಾ ಎಕ್ಸ್‌ಯುವಿ500 ಎಸ್‍ಯುವಿ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯಲ್ಲಿ ಗ್ರಿಲ್ ಕ್ರೋಮ್, ಸ್ಪ್ಲಿಟ್ ಟೈಲ್ ಲೈಟ್ಸ್, ಎಲ್ಇಡಿ ಡಿಆರ್ಎಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಟ್ವಿನ್ ಎಕ್ಸಾಸ್ಟ್, ರಿಯರ್ ಸ್ಪಾಯ್ಲರ್ ಮತ್ತು ಸ್ಟೈಲಿಶ್ ಡೈಮಂಡ್-ಕಟ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

ಕಾರಿನಲ್ಲಿ ಸೈರನ್‌, ಸರ್ಕಾರಿ ಬೋರ್ಡ್ ಹಾಕಿಕೊಂಡು ಸುತ್ತಾಡುತ್ತಿದ್ದ ನಕಲಿ ಸರ್ಕಾರಿ ಅಧಿಕಾರಿ ಬಂಧನ

ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಯು ಪ್ಲಶ್ ಲೆದರ್, ಅಪ್ಹೋಲ್ಸ್ಟರಿ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ ದೊಡ್ಡ ಟಚ್ ಸ್ಕ್ರೀನ್ ಇನ್ಪೋಟೇನೆಮೆಂಟ್ ಸಿಸ್ಟಂ, ಕೀಲೆಸ್ ಎಂಟ್ರಿ, ಎಲೆಕ್ಟ್ರಿಕ್ ಸನ್‍ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದುದಾದ ಡ್ರೈವರ್ ಸೀಟ್, ಡ್ಯುಯಲ್ ಏರ್‌ಬ್ಯಾಗ್, ಬ್ರೇಕ್ ಅಸಿಸ್ಟ್, ಸೀಟ್‌ಬೆಲ್ಟ್ ರಿಮೈಂಡರ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ.

ಕಾರಿನಲ್ಲಿ ಸೈರನ್‌, ಸರ್ಕಾರಿ ಬೋರ್ಡ್ ಹಾಕಿಕೊಂಡು ಸುತ್ತಾಡುತ್ತಿದ್ದ ನಕಲಿ ಸರ್ಕಾರಿ ಅಧಿಕಾರಿ ಬಂಧನ

ಎಕ್ಸ್‌ಯುವಿ 500 ಎಸ್‍ಯುವಿಯಲ್ಲಿ 2.2-ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 155 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ,

ಕಾರಿನಲ್ಲಿ ಸೈರನ್‌, ಸರ್ಕಾರಿ ಬೋರ್ಡ್ ಹಾಕಿಕೊಂಡು ಸುತ್ತಾಡುತ್ತಿದ್ದ ನಕಲಿ ಸರ್ಕಾರಿ ಅಧಿಕಾರಿ ಬಂಧನ

ಮಹೀಂದ್ರಾ ಎಕ್ಸ್‌ಯುವಿ 500 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಎಸ್‍ಯುವಿಯು ಕಿಯಾ ಸೆಲ್ಟೋಸ್, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್, ಹ್ಯುಂಡೈ ಕ್ರೆಟಾ, ಜೀಪ್ ಕಂಪಾಸ್ ಮತ್ತು ಫೋಕ್ಸ್ ವ್ಯಾಗನ್ ಟಿ-ರಾಕ್ ಎಸ್‍ಯುವಿಯುಗಳಿಗೆ ಪೈಪೋಟಿ ನೀಡುತ್ತಿದೆ.

Most Read Articles

Kannada
English summary
Fake government officer arrested mahindra xuv500 suv seized details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X