ನಕಲಿ ರೈಲ್ವೆ ಟಿಕೆಟ್ ಮಾರಾಟ... ಎಂಥಾ ವಿಪರ್ಯಾಸ! ಟಿಕೆಟ್ ಬಗ್ಗೆಯು ಅರಿವಿಲ್ಲವೆ ಪ್ರಯಾಣಿಕರೇ?
ರೈಲ್ವೇ ಪೊಲೀಸ್ ಪಡೆ (ಆರ್‌ಪಿಎಫ್) ಜುಲೈ 18 ರಂದು ಚೆನ್ನೈ ಸೆಂಟ್ರಲ್ ಸಬರ್ಬನ್ ರಿಸರ್ವೇಶನ್ ಸೆಂಟರ್ ಎದುರು ಟ್ರಾವೆಲ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ನಂತೆ ವೇಷ ಧರಿಸಿ ಪ್ರಯಾಣಿಕರಿಗೆ ನಕಲಿ ರೈಲ್ವೆ ಟಿಕೆಟ್ ನೀಡಿ ಹಣ ವಸೂಲಿ ಮಾಡುತ್ತಿದ್ದವನನ್ನು ಬಂಧಿಸಿದ್ದಾರೆ. ನೋಟ್‌ಪ್ಯಾಡ್ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜುಲೈ 18ರಂದು ಮಧ್ಯಾಹ್ನ 12 ಗಂಟೆಗೆ ನಕಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ಜಿತೇಂದ್ರ ಶಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರಾಜಸ್ಥಾನ ಮೂಲದವನು ಎಂದು ಗುರುತಿಸಲಾಗಿದ್ದು, ಪ್ರಸ್ತುತ ಚೆನ್ನೈನ ಕೊಡುಂಗೈಯೂರಿನಲ್ಲಿ ನೆಲೆಸಿದ್ದಾನೆ. ಆರ್‌ಪಿಎಫ್ ಪ್ರಕಾರ, ಜಿತೇಂದ್ರ ತನ್ನ ತಂದೆಯ ಆಭರಣ ಅಂಗಡಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ.

ತಂದೆಯ ಮರಣದ ನಂತರ, ಜಿತೇಂದ್ರ ಸುಲಭವಾಗಿ ಹಣ ಗಳಿಸಲು ಇಂತಹ ಕೃತ್ಯಗಳನ್ನು ಮಾಡುತ್ತಿರುವುದು ತಿಳಿದುಬಂದಿದೆ. ಈತ ನಿರರ್ಗಳವಾಗಿ ಹಿಂದಿ ಮಾತನಾಡುವುದರಿಂದ, ಚೆನ್ನೈ ಸೆಂಟ್ರಲ್, ಎಗ್ಮೋರ್, ತಾಂಬರಂ, ಪೆರಂಬೂರ್ ಮತ್ತು ವೆಲಚೇರಿ ರೈಲು ನಿಲ್ದಾಣಗಳಲ್ಲಿ ರೈಲ್ವೆ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಉತ್ತರ ಭಾರತೀಯರನ್ನು ಮರುಳು ಮಾಡುತ್ತಿದ್ದ ಎಂದು ರೈಲ್ವೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈತ ನಕಲಿ ಟಿಕೆಟ್‌ಗಳನ್ನು ಹೇಗೆ ಮಾರಾಟ ಮಾಡುತ್ತಿದ್ದ ಎಂಬುದೇ ತುಂಬಾ ಕುತೂಹಲಕಾರಿಯಾಗಿದೆ. ಕೆಲವು ನಿಲ್ದಾಣಗಳಲ್ಲಿ ರಬ್ಬರ್ ಸ್ಟ್ಯಾಂಪ್‌ನಂತಹ ವಸ್ತುಗಳನ್ನು ತೆಗೆದುಕೊಂಡು ಜನಸಂದಣಿಯನ್ನು ನೋಡಿ ಅವರಲ್ಲಿ ಟಿಕೆಟ್ ಪಡೆಯಲು ಯಾರು ಪರದಾಡುತ್ತಿರುವರೋ ಅವರನ್ನು ಆಯ್ಕೆ ಮಾಡಿಕೊಂಡು ಟಿಕೆಟ್ ಹೇಗೆ ಪಡೆಯಬೇಕು ಎಂದು ಸಲಹೆ ನೀಡುತ್ತಿದ್ದ.

ಬಳಿಕ ರೈಲ್ವೇಯಲ್ಲಿ ಕೆಲಸ ಮಾಡುತ್ತಿರುವ ಡಿಟಿಆರ್ ಗಳೆಲ್ಲ ನನಗೆ ಗೊತ್ತು ಎಂದು ಹೇಳಿ ನಂಬಿಸುತ್ತಿದ್ದ. ತನ್ನನ್ನು ತಾನು ಹಿರಿಯ ರೈಲ್ವೇ ಅಧಿಕಾರಿ ಎಂದು ಪರಿಚಯಿಸಿಕೊಂಡು ಮಾತನಾಡುತ್ತಿದ್ದ. ಪ್ರಯಾಣ ದರದ ವಿವರಗಳನ್ನು ಕಾಗದದ ಮೇಲೆ ಬರೆದು ತನ್ನ ಬಳಿಯಿರುವ ನಕಲಿ ರಬ್ಬರ್ ಸ್ಟ್ಯಾಂಪ್ ನಿಂದ ಸೀಲ್ ಮಾಡಿ ಅವರಿಂದ ಹಣ ಪಡೆಯುತ್ತಿದ್ದ.
ಈ ರೀತಿಯಾಗಿ, ನಕಲಿ ಟಿಕೆಟ್‌ಗಳನ್ನು ಪಡೆದ ಜನರು ರೈಲು ಹತ್ತಿ ಡಿಟಿಆರ್‌ಗೆ ತೋರುತ್ತಿದ್ದರು. ಆಗಷ್ಟೆ ಅವರು ಮೋಸ ಹೋಗಿರುವುದು ಗೊತ್ತಾಗಿ ಮುಂದಿನ ಸ್ಟೇಷನ್‌ನಲ್ಲಿ ಇಳಿಯುತ್ತಿದ್ದರು. ಈ ಬಗ್ಗೆ ದೂರುಗಳು ಹೆಚ್ಚಾದ ಕೂಡಲೇ ರೈಲ್ವೇ ಪೊಲೀಸರು ಸಿಸಿ ಕ್ಯಾಮೆರಾ ಮೂಲಕ ಇದನ್ನು ಯಾರು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ ನಿರ್ದಿಷ್ಟ ವ್ಯಕ್ತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ರೈಲ್ವೆ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮತ್ತು ನೇರವಾಗಿ ಕೌಂಟರ್‌ನಿಂದ ಮಾತ್ರ ಖರೀದಿಸಬಹುದು. ಈ ರೀತಿಯಾಗಿ, ನೀವು ಬುಕ್ ಮಾಡಿದ ಟಿಕೆಟ್ ಅನ್ನು ತೆಗೆದುಕೊಳ್ಳುವಾಗ, ಅದರ ಮೇಲೆ PNR ಸಂಖ್ಯೆ ಇರಬೇಕು, ಆ ಸಂಖ್ಯೆ ಇಲ್ಲದ ಟಿಕೆಟ್ ರೈಲ್ವೇಯಲ್ಲಿ ಮಾನ್ಯವಾಗಿರುವುದಿಲ್ಲ ಎಂಬುದು ಎಲ್ಲಾ ರೈಲು ಪ್ರಯಾಣಿಕರು ತಿಳಿದಿರಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications