Fake Toll Plaza: ಹೆದ್ದಾರಿಯಲ್ಲಿ ನಕಲಿ ಟೋಲ್ ಪ್ಲಾಜಾ: 1.5 ವರ್ಷಗಳ ಕಾಲ ಸರ್ಕಾರಕ್ಕೆ ವಂಚನೆ
ಪ್ರಭಾವಿ ವ್ಯಕ್ತಿಗಳು ಸರ್ಕಾರಕ್ಕೆ ತಿಳಿಯದೇ ಏನು ಬೇಕಾದರೂ ಮಾಡಬಲ್ಲರು ಎಂಬುದಕ್ಕೆ ಈ ಘಟನೆಯೇ ಉತ್ತಮ ಉದಾಹರಣೆಯಾಗಿದೆ. ಗುಜರಾತ್‌ನ ಬಮನ್‌ಬೋರ್-ಕಚ್ ರಾಷ್ಟ್ರೀಯ ಹೆದ್ದಾರಿ ಬಳಿ ಸಿಗುವ ಖಾಸಗಿ ಜಮೀನಿನಲ್ಲಿ ಹೆದ್ದಾರಿಯನ್ನು ಬೈಪಾಸ್ ಮಾಡುವ ಮೂಲಕ ನಕಲಿ ಟೋಲ್ ಪ್ಲಾಜಾ (fake toll plaza) ವನ್ನು ಸ್ಥಾಪಿಸಿ ಒಂದು ವರ್ಷದಿಂದ ಸರ್ಕಾರಿ ಅಧಿಕಾರಿಗಳನ್ನು ವಂಚಿಸಿದ್ದಾರೆ.
ಇಲ್ಲಿ ಸರ್ಕಾರಿ ಅಧಿಕಾರಿಗಳನ್ನು ಸಹ ವಂಚಿಸಿರುವುದೇ ಅಚ್ಚರಿಗೆ ಗುರಿ ಮಾಡಿದೆ. ಗುಜರಾತ್‌ನ ಮೋರ್ಬಿಯ ಖಾಸಗಿ ಭೂಮಿಯಲ್ಲಿ ಈ ಟೋಲ್ ಪ್ಲಾಜಾವನ್ನು (fake toll plaza) ಸ್ಥಾಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಬೈಪಾಸ್ ಮಾಡುವ ಮೂಲಕ "ಟೋಲ್ ಬೂತ್" ನಲ್ಲಿ ಅರ್ಧದಷ್ಟು ಬೆಲೆಯನ್ನು ವಿಧಿಸಿ ಒಂದೂವರೆ ವರ್ಷಗಳ ಕಾಲ ಜನರು, ಪೊಲೀಸರು ಮತ್ತು ಜಿಲ್ಲೆಯ ಉನ್ನತ ಅಧಿಕಾರಿಗಳನ್ನು ವಂಚಿಸಿದ್ದಾರೆ.

ಈ ಪ್ರದೇಶದಲ್ಲಿನ ಪ್ರಬಲರು ನಿಜವಾದ ಟೋಲ್ ಪ್ಲಾಜಾದ ಮಾರ್ಗವನ್ನು ಬದಲಿಸಿ ನಖಲಿ ಟೋಲ್ ಕಡೆಗೆ ವಾಹನಗಳನ್ನು ಮರಳಿಸುತ್ತಿದ್ದರು. ಹೆಚ್ಚಾಗಿ ಟ್ರಕ್ ಚಾಲಕರಿಂದ ಹಣವನ್ನು ಸುಲಿಗೆ ಮಾಡಿ ಟೋಲ್ ಪ್ಲಾಜಾಗೆ ಪಾವತಿಸುವಂತೆ ಒತ್ತಾಯಿಸಿದ್ದರು. ಈ ಸುಲಿಗೆಯು ಬರೋಬ್ಬರಿ ಒಂದೂವರೆ ವರ್ಷಗಳಿಂದ ನಡೆದಿದೆ. ಈವೆರೆಗೆ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ವಿಪರ್ಯಾಸ.
ಇನ್ನೂ ವಿಚಿತ್ರವೆಂದರೆ ನಿಜವಾದ ಟೋಲ್ ಪ್ಲಾಜಾಗಿಂತ ಇಲ್ಲಿ ಅರ್ಧದಷ್ಟು ಟೋಲ್ ಸಂಗ್ರಹಣೆ ಮಾತ್ರ ಮಾಡುತ್ತಿದ್ದ ಕಾರಣ ಟ್ರಕ್ ಚಾಲಕರು ಹಣ ಉಳಿಸಲು ನಖಲಿ ಟೋಲ್ ದಾರಿ ಹಿಡಿದಿದ್ದರು. ಅಲ್ಲದೇ ಯಾರೂ ಬಾಯಿಬಿಡದ ಕಾರಣ ಅಕ್ರಮ ತೆರಿಗೆ ಸಂಗ್ರಹವು ಒಂದು ವರ್ಷದಿಂದ ಗಮನಕ್ಕೆ ಬಂದಿಲ್ಲ. ಕೆಲವು ಅನುಮಾನವಿದ್ದ ವಾಹನಗಳನ್ನು ಮಾತ್ರ ವರ್ಗಾಸಿಯಾ ಟೋಲ್ ಪ್ಲಾಜಾದ ನಿಜವಾದ ಮಾರ್ಗಕ್ಕೆ ಬಿಡಲಾಗುತ್ತಿತ್ತು. ಕೊನೆಗೂ ಅಕ್ರಮದ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಅಧಿಕೃತ ಟೋಲ್ ವರ್ಗಾಸಿಯಾ ಟೋಲ್ ಪ್ಲಾಜಾದ ವ್ಯವಸ್ಥಾಪಕರು ಮಾತನಾಡಿ, ಖಾಸಗಿ ಭೂಮಾಲೀಕರು ಒಂದೂವರೆ ವರ್ಷಗಳಿಂದ ಪ್ರತಿದಿನ ಸಾವಿರಾರು ರೂ.ಗಳನ್ನು ಬಹಿರಂಗವಾಗಿ ಸುಲಿಗೆ ಮಾಡುತ್ತಿದ್ದರು. ಆರೋಪಿಗಳು ವೈಟ್ ಹೌಸ್ ಸೆರಾಮಿಕ್ ಕಂಪನಿಯ ಒಡೆತನದ ಜಮೀನು, ಮುಚ್ಚಿದ ಕಾರ್ಖಾನೆ ಮತ್ತು ವರ್ಗಾಸಿಯಾ ಗ್ರಾಮದ ಮೂಲಕ ನಿಜವಾದ ಮಾರ್ಗವನ್ನು ತಪ್ಪಿಸಿ ತಮ್ಮೆಡೆ ತಿರುಗಿಸಿದ್ದರು ಎಂದಿದ್ದಾರೆ.
ಇಲ್ಲಿ ಮಾರ್ಗ ಬದಲಿಸಿ ಹೆಚ್ಚಾಗಿ ಟ್ರಕ್ ಚಾಲಕರನ್ನು ತಮ್ಮೆಡೆ ಸೆಳೆದಿರುವ ಕಾರಣ ಕಾರುಗಳು ಹಾಗೂ ಸಣ್ಣ ವಾಹನಗಳು ಇವರ ಟೋಲ್‌ಗೆ ಬರುತ್ತಿರಲಿಲ್ಲ. ಹಾಗೆಯೇ ಆಗಾಗ್ಗೆ ಟ್ರಕ್‌ಗಳನ್ನು ಕೂಡ ನಿಜವಾದ ಮಾರ್ಗಕ್ಕೆ ಬಿಟ್ಟು ಅನುಮಾನ ಬಾರದಂತೆ ಮಾಡುತ್ತಿದ್ದರು. ಇದರಿಂದ ನಿಜವಾದ ಟೋಲ್ ಪ್ಲಾಜಾಗೆ ಈ ಕುರಿತು ಯಾವುದೇ ಮಾಹಿತಿ ಸಿಕ್ಕಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದೀಗ ಪೊಲೀಸರು ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಮೊರ್ಬಿ ಜಿಲ್ಲಾಧಿಕಾರಿ ಜಿಟಿ ಪಾಂಡ್ಯ ತಿಳಿಸಿದ್ದಾರೆ. ವೈಟ್ ಹೌಸ್ ಸೆರಾಮಿಕ್ ಕಂಪನಿಯ ಮಾಲೀಕ ಅಮರ್ಷಿ ಪಟೇಲ್, ವನರಾಜ್ ಸಿಂಗ್ ಝಾಲಾ, ಹರ್ವಿಜಯ್ ಸಿಂಗ್ ಝಾಲಾ, ಧರ್ಮೇಂದ್ರ ಸಿಂಗ್ ಝಾಲಾ, ಯುವರಾಜ್ ಸಿಂಗ್ ಝಾಲಾ ಮತ್ತು ಅಪರಿಚಿತರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications