ಅಪ್ಪನ ಕನಸು: ಹೊಸ ಕಾರ್ ಪಡೆಯಲು ನೀಲಿ ಬಣ್ಣದ ಡ್ರೆಸ್ ಧರಿಸಲು ಕುಟುಂಬಸ್ಥರಿಗೆ ಹೇಳಿದ ತಂದೆ
ಹೊಸ ಕಾರು ಖರೀದಿಸಬೇಕೆಂಬುವುದು ಕನಸಾಗಿರುತ್ತದೆ. ಜನರು ತಮ್ಮ ಕನಸಿನ ಕಾರನ್ನು ಖರೀದಿಸಲು ವರ್ಷಗಟ್ಟಲೆ ಕಾಯುತ್ತಾರೆ. ವರ್ಷಾನುಗಟ್ಟಲೆ ಶ್ರಮಪಟ್ಟು ತಮ ಕನಸಿನ ಕಾರನ್ನು ಖರೀಸಿದಾಗ ಹಲವರು ವಿಭಿನ್ನವಾಗಿ ಸಂಭ್ರಮಿಸುತ್ತಾರೆ. ಕೆಲವರು ಕಾರು ಡೆಲಿವರಿ ತೆಗೆದುಕೊಂಡ ನಂತರ ಪಾರ್ಟಿ ಮಾಡಿದರೆ, ಇನ್ನು ಕೆಲವರು ತಮ್ಮ ಹೊಸ ಕಾರನ್ನು ಲಾಂಗ್ ಡ್ರೈವ್‌ಗೆ ತೆಗೆದುಕೊಂಡು ಹೋಗುತ್ತಾರೆ.
ಇತ್ತೀಚೆಗೆ ಕೇರಳದಲ್ಲಿ ವ್ಯಕ್ತಿಯೊಬ್ಬರು ತಮ್ಮ ಹೊಸ ನೀಲಿ ಬಣ್ಣದ ಫೋಕ್ಸ್‌ವ್ಯಾಗನ್ ವರ್ಟಸ್ ಕಾರನ್ನು ವಿತರಣೆ ಪಡೆದುಕೊಳ್ಳಲು ಕುಟುಂಬದ ಪ್ರತಿಯೊಬ್ಬರನ್ನು ನೀಲಿ ಬಣ್ಣವನ್ನು ಧರಿಸಿ ಬಂದಿರುವ ವೀಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಶ್ರೀಲಕ್ಷ್ಮಿ ಎಂಬುವರು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.

ಈ ವೀಡಿಯೊದಲ್ಲಿ ತಮ್ಮ ತಂದೆಯು ಎಲ್ಲಾ ಬಳಿ ಕಾರಿನ ಬಣ್ಣದಂತೆ ನೀಲಿ ಬಣ್ಣದ ಡ್ರೇಸ್ ಗಳನ್ನು ಧರಿಸುವಂತೆ ಹೇಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಯುವತಿ ಮತ್ತು ಅವರ ತಾಯಿ ಎರಡು ವಿಭಿನ್ನ ನೀಲಿ ಬಣ್ಣದ ಸೀರೆಗಳನ್ನು ಧರಿಸಿರುವುದನ್ನು ನಾವು ನೋಡಬಹುದು. ಆಕೆಯ ತಂದೆ ಸೇರಿದಂತೆ ಕುಟುಂಬದ ಎಲ್ಲಾರೂ ನೀಲಿ ಬಣ್ಣದ ಅಂಗಿ ಧರಿಸಿದ್ದಾರೆ. ನೀಲಿ ಬಣ್ಣವು ಅವರ ನೆಚ್ಚಿನ ಬಣ್ಣವಾಗಿದೆ ಎಂದು ತೋರುತ್ತದೆ ಏಕೆಂದರೆ ಮನೆಯ ಗೋಡೆಯು ನೀಲಿ ಬಣ್ಣದಲ್ಲಿದೆ.
ವೀಡಿಯೊದಲ್ಲಿ ಕುಟುಂಬದ ಎಲ್ಲಾ ಸದಸ್ಯರು ನೀಲಿ ಬಣ್ಣದ ಡ್ರೇಸ್ ಅನ್ನು ಧರಿಸಿ ಫೋರ್ಡ್ ಫಿಗೋ ಆಸ್ಪೈರ್‌ನಲ್ಲಿ ಫೋಕ್ಸ್‌ವ್ಯಾಗನ್ ಡೀಲರ್‌ಶಿಪ್‌ಗೆ ತೆರಳುತ್ತಾರೆ. ಡೀಲರ್‌ಶಿಪ್ ಬಂದು ಕಾರು ಡೆಲಿವರಿ ಪಡೆಯುವ ಮುನ್ನ ಕೇಕ್ ಕಟ್ ಮಾಡುತ್ತಾರೆ. ನಂತರ್ ಕಾರನ್ನು ರಿವೀಲ್ ಮಾಡುತ್ತಾರೆ. ಈ ಕುಟುಂಬ ಖರೀದಿಸಿದ ಫೋಕ್ಸ್‌ವ್ಯಾಗನ್ ವರ್ಟಸ್ (Volkswagen Virtus) ಕಾರು ಲಾವಾ ಬ್ಲೂ ಶೇಡ್‌ನಲ್ಲಿ ಬಣ್ಣದಲ್ಲಿದೆ. ಈ ಬಣ್ಣದ ಅತ್ಯಂತ ಆಕರ್ಷಕವಾಗಿದೆ.

ಫೋಕ್ಸ್‌ವ್ಯಾಗನ್ ವರ್ಟಸ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಜನಪ್ರಿಯ ಸೆಡಾನ್‌ಗಳಲ್ಲಿ ಒಂದಾಗಿದೆ. ಈ ಫೋಕ್ಸ್‌ವ್ಯಾಗನ್ ವರ್ಟಸ್ ಪೆಟ್ರೋಲ್-ಮಾತ್ರ ಸೆಡಾನ್ ಆಗಿದ್ದು, ಈ ಕಾರಿನಲ್ಲಿ 1.0-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಎಂಜಿನ್‌ಗಳನ್ನು ಹೊಂದಿವೆ. ಇದರಲ್ಲಿ 1.0 ಲೀಟರ್ TSI ಪೆಟ್ರೋಲ್ ಎಂಜಿನ್ 114 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ ಆಯ್ಕೆಯ 6-ಸ್ಪೀಡ್ ಟಾರ್ಕ್ ಕರ್ನ್ವಾಟರ್ ಅನ್ನು ಪಡೆಯುತ್ತದೆ.
ಇದರೊಂದಿಗೆ 1.5 ಲೀಟರ್ TSI ಪೆಟ್ರೋಲ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ, ಫೋಕ್ಸ್‌ವ್ಯಾಗನ್ ವರ್ಟಸ್ ಕಾರನ್ನು ವೆಂಟೊಗೆ ಬದಲಿಯಾಗಿ ಕಾಂಪ್ಯಾಕ್ಟ್ ಸೆಡಾನ್ ಅನ್ನು ವಿಶೇಷವಾಗಿ ಭಾರತೀಯ ಮಾರುಕಟ್ಟೆಗಾಗಿ ವಿನ್ಯಾಸಗೊಳಿಸಲಾಗಿದೆ.
ಈ ವರ್ಟಸ್ ಕಾರಿನ ಉತ್ಪಾದನೆಯು ಪುಣೆಯಲ್ಲಿರುವ ಕಂಪನಿಯ ಚಕನ್ ಸ್ಥಾವರದಲ್ಲಿ ನಡೆಯುತ್ತಿದೆ. ಫೋಕ್ಸ್‌ವ್ಯಾಗನ್ ವರ್ಟಸ್ ಕಳೆದ ವರ್ಷ ಬಿಡುಗಡೆಯಾ ಫೋಕ್ಸ್‌ವ್ಯಾಗನ್ ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿ ನಂತರ ಭಾರತ 2.0 ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಫೋಕ್ಸ್‌ವ್ಯಾಗನ್‌ನ ಎರಡನೇ ಮಾದರಿಯಾಗಿದೆ. ಈ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಮುಂಭಾಗ ಮಸ್ಕಲರ್ ಲುಕ್ ಅನ್ನು ಹೂಂದಿದೆ.
ಈ ಸೆಡಾನ್ ಸ್ಲ್ಯಾಟ್ ಗ್ರಿಲ್, ಸುತ್ತಲೂ ಕ್ರೋಮ್ ಗಾರ್ನಿಶ್ ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಎಲ್-ಆಕಾರದ ಎಲ್ಇಡಿ ಡಿಆರ್ಎಲ್ ಗಳು ಸ್ಪೋರ್ಟಿಯಾಗಿ ಕಾಣುತ್ತವೆ. ಚೂಪಾದ ಲೈನ್ ಗಳು ಮತ್ತು ಹರಿತವಾದ ವಿನ್ಯಾಸವು ಫೋಕ್ಸ್‌ವ್ಯಾಗನ್ ಕಾರುಗಳ ಸಾಮಾನ್ಯ ಲಕ್ಷಣವಾಗಿದೆ. ಈ ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಜಿಟಿ ಬ್ಯಾಡ್ಜ್ ಹೊಂದಿರುವ ಪರ್ಫಾಮೆನ್ಸ್ ವೆರಿಯೆಂಟ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಅಲಾಯ್ ವ್ಹೀಲ್ ಗಳು ಕಾರಿನ ಒಟ್ಟಾರೆ ನಿಲುವಿಗೆ ಪೂರಕವಾಗಿವೆ.
ಈ ಕಾರಿನ ಡೋರ್ ಹ್ಯಾಂಡಲ್‌ಗಳು, ಕಾಂಟ್ರಾಸ್ಟ್ ಕಪ್ಪು ORVM ಗಳು ಮತ್ತು ರೂಪ್ ಗಾಗಿ ಕ್ರೋಮ್ ಅನ್ನು ಹೊಂದಿದೆ. ಇದರೊಂದಿಗೆ ಈ ವರ್ಟಸ್ ಕಾರಿನ ಪ್ರೊಫೈಲ್ ಅನ್ನು ಪೂರ್ಣಗೊಳಿಸಿದಾಗ ಎಲ್ಇಡಿ ಟೈಲ್‌ಲೈಟ್‌ಗಳು, ಬೂಟ್ ಲಿಡ್‌ನಲ್ಲಿ ವಿರ್ಟಸ್ ಬ್ಯಾಡ್ಜ್ ಮತ್ತು ಬೂಟ್-ಮೌಂಟೆಡ್ ನಂಬರ್ ಪ್ಲೇಟ್ ರಿಸೆಸ್ ಕಾರಿನ ಹಿಂಭಾಗವನ್ನು ಆವರಿಸುತ್ತದೆ. ಇನ್ನು ಫೋಕ್ಸ್‌ವ್ಯಾಗನ್ ವಿರ್ಟಸ್ ಸ್ಟ್ಯಾಂಡರ್ಡ್ ವೆರಿಯೆಂಟ್ ಮತ್ತು ಜಿಟಿ ವೇರಿಯಂಟ್ ನಡುವೆ ವಿಭಿನ್ನ ಸ್ಟೈಲಿಂಗ್ ಬಿಟ್‌ಗಳನ್ನು ಕೂಡ ಸೇರಿಸಿದೆ.


Click it and Unblock the Notifications