Actor Ajith: ವಿಡಿಯೋ ನೋಡಿ.. ಖ್ಯಾತ ನಟ ಅಜಿತ್ ಕಾರು ಭೀಕರ ಅಪಘಾತ, ದೇವರು ಕಾಪಾಡಿಬಿಟ್ಟ!
ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಅವರಿಗೆ ವಾಹನಗಳ ಬಗ್ಗೆ ವಿಶೇಷ ಪ್ರೀತಿಯಿದೆ. ಅವರ ಮನೆಯಲ್ಲಿ ಹಲವು ದುಬಾರಿ ಬೆಲೆಯ ಐಷಾರಾಮಿ ಕಾರು ಹಾಗೂ ಬೈಕ್‌ಗಳ ದೊಡ್ಡ ಸಂಗ್ರಹವೇ ಇದೆ. ಅಜಿತ್ ಅವರ ವಯಸ್ಸು 53 ಆದರೂ ಯುವಕರನ್ನು ನಾಚಿಸುವನಂತೆ ದೇಶ - ವಿದೇಶಗಳಲ್ಲಿ ನಡೆಯುವ ರೇಸಿಂಗ್ ಪಂದ್ಯಾವಳಿಗಳಲ್ಲಿಯೂ ಭಾಗವಹಿಸುತ್ತಾರೆ. ದುಬೈಯ ಗ್ಯಾಂಡ್ ಪ್ರಿಕ್ಸ್‌ನಲ್ಲಿ ಮಂಗಳವಾರ ರೇಸಿಂಗ್ ಪಂದ್ಯವೊಂದರ ಅಭ್ಯಾಸ ಸಂದರ್ಭದಲ್ಲಿ ಅವರಿದ್ದ ಕಾರು ಭೀಕರ ಅಪಘಾತಕ್ಕೆ ತುತ್ತಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಭೀಕರ ಅಪಘಾತದ ವಿಡಿಯೋವನ್ನು ನಟ ಅಜಿತ್ ಒಡೆತನದ 'ಅಜಿತ್‌ಕುಮಾರ್ ರೇಸಿಂಗ್' ತಂಡದ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಅಜಿತ್ ಓಡಿಸುತ್ತಿದ್ದ ಕಾರು, ವೇಗವಾಗಿ ಬಂದು ಡಿವೈಡರ್‌ಗೆ ಅಪ್ಪಳಿಸಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಆ ಬಳಿಕ ಯಾವುದೇ ಗಾಯಗಳಿಲ್ಲದೆ ಅವರು ಕಾರಿನಿಂದ ಹೊರಬರುತ್ತಿರುವುದನ್ನು ಕೂಡ ನೋಡಬಹುದು.

ಜನವರಿ 9 ರಿಂದ ಅದ್ದೂರಿಯಾಗಿ ಶುರುವಾಗುವ ದುಬೈ ಗ್ರ್ಯಾಂಡ್ ಪ್ರಿಕ್ಸ್‌ಗಾಗಿ ನಟ ಅಜಿತ್ ಕುಮಾರ್ ಮಾಲೀಕತ್ವದ ತಂಡವು ಭರ್ಜರಿಯಾಗಿ ತಯಾರಿ ಮಾಡಿಕೊಳ್ಳುತ್ತಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಅವರು, ಅಜಿತ್ ಕುಮಾರ್ ರೇಸಿಂಗ್ (Ajith Kumar Racing) ಎಂಬ ಹೆಸರಿನ ತಮ್ಮದೇ ಆದ ರೇಸಿಂಗ್ ತಂಡವನ್ನು ಸ್ಥಾಪನೆ ಮಾಡಿದ್ದರು.
ನಟ ಅಜಿತ್ ಕುಮಾರ್ ಅವರು ಹಲವು ವರ್ಷಗಳಿಂದ ರೇಸಿಂಗ್ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾರತದಲ್ಲಿನ ವಿವಿಧ ಚಾಂಪಿಯನ್‌ಶಿಪ್ ಸೇರಿದಂತೆ 2003ರ ಫಾರ್ಮುಲಾ ಬಿಎಂಡಬ್ಲ್ಯೂ ಏಷ್ಯಾ ಚಾಂಪಿಯನ್‌ಶಿಪ್ ಮತ್ತು 2010ರ ಎಫ್‌ಐಎ ಫಾರ್ಮುಲಾ ಚಾಂಪಿಯನ್‌ಶಿಪ್‌ನಲ್ಲಿಯೂ ಯಶಸ್ವಿಯಾಗಿ ಭಾಗವಹಿಸಿದ್ದಾರೆ. ಈ ಮೂಲಕ ತಾವೊಬ್ಬ ಉತ್ಸಾಹಿ ಕ್ರೀಡಾಪಟು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಮೊದಲೇ ಹೇಳಿದಂತೆ ನಟ ಅಜಿತ್ ಕುಮಾರ್ ಅವರಿಗೆ ಕಾರುಗಳ ಬಗ್ಗೆ ವಿಶೇಷ ಆಸಕ್ತಿಯಿದೆ. ಅವರು ಕೆಲ ತಿಂಗಳ ಹಿಂದೆ ಪೋರ್ಷೆ 911 ಜಿಟಿ3 ಆರ್‌ಎಸ್ (Porsche 911 GT3 RS) ಹೆಸರಿನ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದರು. ಇದು ರೂ.3.51 ಕೋಟಿ (ಎಕ್ಸ್ ಶೋರೂಂ) ದರವನ್ನು ಒಳಗೊಂಡಿದೆ.
ಈ ಕಾರು 2/ 4 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. 3996 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಮತ್ತು ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಟಚ್‌ಸ್ಕ್ರೀನ್ ಇನ್ಫೋಟೆನ್ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಪವರ್ ವಿಂಡೋಸ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications