ದುಬಾರಿ ಬೆಲೆಯ ಕಾರುಗಳಿದ್ದರೂ 'ಯಮಹಾ ರಾಜ್‌ದೂತ್' ಬೈಕ್ ಅಂದ್ರೆ ಈ ಖ್ಯಾತ ನಟನಿಗೆ ಇಷ್ಟವಂತೆ..!
ಬಾಲಿವುಡ್ ನಟ ಜಾಕಿ ಶ್ರಾಫ್ (Jackie Shroff) ಅವರು ತಮ್ಮ ಅದ್ಭುತ ನಟನೆಗೆ ಹೆಸರುವಾಸಿಯಾಗಿದ್ದು, ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಅವರಿಗೆ ಕಾರುಗಳು ಹಾಗೂ ಮೋಟಾರ್‌ಸೈಕಲ್‌ಗಳ ಬಗ್ಗೆ ವಿಶೇಷ ಆಸಕ್ತಿಯಿದ್ದು, ಅವರ ಮನೆಯ ಗ್ಯಾರೇಜ್ ನಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವೇ ಇದೆ.
ಆದಾಗ್ಯೂ ನಟ ಜಾಕಿ ಶ್ರಾಫ್ ಹೃದಯದಲ್ಲಿ ಮಾತ್ರ ಯಮಹಾ ರಾಜ್‌ದೂತ್ (Yamaha rajdoot - Yamaha RD350) ಬೈಕ್‌ಗೆ ಪ್ರತ್ಯೇಕ ಸ್ಥಾನವಿದೆ. ಇತ್ತೀಚೆಗೆ ರಾಜ್‌ದೂತ್ ಮೋಟಾರ್‌ಸೈಕಲ್‌ನ್ನು ಜಾಕಿ ಶ್ರಾಫ್ ಸವಾರಿ ಮಾಡುತ್ತಿರುವ ಹಲವು ಹಳೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಈ ಚಿತ್ರಗಳು ನಟ ಜಾಕಿ ಶ್ರಾಫ್ ಅವರು, ಯಮಹಾ ರಾಜ್‌ದೂತ್ ಬೈಕ್ ಮೇಲೆ ಹೊಂದಿರುವ ಪ್ರೀತಿಯನ್ನು ತೋರಿಸುತ್ತವೆ.

1973ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾದ ಯಮಹಾ ಆರ್‌ಡಿ350 (RD350), ಆ ಕಾಲಘಟ್ಟದಲ್ಲಿ ಹೆಚ್ಚಿನ ಸಂಖ್ಯೆಯ ಯುವ ಗ್ರಾಹಕರನ್ನು ಸೆಳೆದಿತ್ತು. ಇದೆಕ್ಕೆ ಸಾಮಾನ್ಯರಿಂದ ಹಿಡಿದು ದೊಡ್ಡ ಸ್ಟಾರ್ ನಟರು ಹೊರತಾಗಿರಲಿಲ್ಲ. 2 ಸ್ಟ್ರೋಕ್ 347 ಸಿಸಿ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತಿದ್ದ ಈ ಬೈಕ್, 35 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿತ್ತು.
ಈಗ ನೇರವಾಗಿ ಬಾಲಿವುಡ್ ನಟ ಜಾಕಿ ಶ್ರಾಫ್ ಬಳಿಯಿರುವ ಕಾರುಗಳ ಬಗ್ಗೆ ಮಾತನಾಡೋಣ. ಅವರು ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಬಿಎಂಡಬ್ಲ್ಯೂ (BMW M5) ಕಾರಿನಲ್ಲಿ ಜಾಕಿ ಶ್ರಾಫ್ ಹಲವಾರು ಬಾರಿ ಕಾಣಿಸಿಕೊಂಡಿದ್ದು, ಇದು ರೂ.1.74 ಕೋಟಿ ಬೆಲೆಯನ್ನು ಹೊಂದಿದೆ. ಸದ್ಯ, ಈ ಮಾದರಿಯ ಮಾರಾಟವನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ. ಇದು 4.4-ಲೀಟರ್ ವಿ8 ಎಂಜಿನ್ ಪಡೆದಿದೆ.

ನಟ ಜಾಕಿ ಶ್ರಾಫ್ ಜೀಪ್ ಕಂಪಾಸ್ (Jeep Compass) ಕಾರಿನ ಮಾಲೀಕರು ಸಹ ಆಗಿದ್ದಾರೆ. ಇದೊಂದು ಪ್ರೀಮಿಯಂ ಮಿಡ್ ಸೈಜ್ ಎಸ್‌ಯುವಿಯಾಗಿದ್ದು, ರೂ.21.44 ಲಕ್ಷದಿಂದ ರೂ.31.29 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.0-ಲೀಟರ್ ಟರ್ಬೊ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.
ನಟ ಜಾಕಿ ಶ್ರಾಫ್ ಹಳೆಯ ಫಿಯೆಟ್ ಮಿನಿ 1000 (Fiat Mini 1000) ಕಾರನ್ನು ಕೂಡ ಹೊಂದಿದ್ದಾರೆ. ಈ ಕಾರನ್ನು ಅವರು ರೂ.10 ಲಕ್ಷ ನೀಡಿ ಖರೀದಿಸಿದ್ದಾರೆ ಎನ್ನಲಾಗಿದೆ. ಇದು 1.1-ಲೀಟರ್ ಎಂಜಿನ್ ಒಳಗೊಂಡಿದ್ದು, 116 ಕೆಎಂ/ಹೆಚ್ ಟಾಪ್ ಸ್ವೀಡ್ ಹೊಂದಿದೆ. ಕೇವಲ 32.9 ಸೆಕೆಂಡುಗಳಲ್ಲಿ 0 - 100 ಕೆಎಂ/ಹೆಚ್ ವೇಗವನ್ನು ಪಡೆಯಲಿದೆ.
ಜಾಕಿ ಶ್ರಾಫ್ ಜಾಗ್ವಾರ್ ಎಕ್ಸ್ (Jaguar XK) ಕಾರಿನ ಒಡೆಯರು ಆಗಿದ್ದಾರೆ. ಇದು ರೂ.1.88 ಕೋಟಿ ಬೆಲೆಯನ್ನು ಹೊಂದಿದ್ದು, ಮಾರಾಟದಿಂದ ನಿಲ್ಲಿಸಲಾಗಿದೆ. 5.0-ಲೀಟರ್ ಸೂಪರ್ಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್, 6-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. ಜೊತೆಗೆ ರೂ.27 ಲಕ್ಷ ಮೌಲ್ಯದ ಇಸುಜು ವಿ-ಕ್ರಾಸ್ ಕಾರು ಸಹ ಅವರ ಗ್ಯಾರೇಜ್ ನಲ್ಲಿದ್ದು, ವಿವಿಧ ಮೋಟಾರ್‌ಸೈಕಲ್‌ಗೂ ಮಾಲೀಕರಾಗಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications