ಸಾಧಕಿ ಡಾಕ್ಟರ್ ಅಕ್ಕನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಖ್ಯಾತ ನಟ ಶಿವಕಾರ್ತಿಕೇಯನ್!

ಜನಪ್ರಿಯ ಕಾಲಿವುಡ್ ನಟ ಶಿವಕಾರ್ತಿಕೇಯನ್ (SivaKarthikeyan), ಭಾರೀ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದೀಪಾವಳಿ ದಿನದಂದು ಬಿಡುಗಡೆಯಾದ ನೈಜ ಕಥೆಯಾದರಿತ ಅಮರನ್ (Amaran) ಸಿನಿಮಾ, ಶಿವಕಾರ್ತಿಕೇಯನ್ ಅವರಿಗೆ ದೊಡ್ಡಮಟ್ಟದ ಹೆಸರನ್ನು ತಂದುಕೊಂಡಿತ್ತು. ಈ ಚಿತ್ರಕ್ಕೆ ರಾಜ್‌ಕುಮಾರ್ ಪೆರಿಯಸ್ವಾಮಿ ಆಕ್ಷನ್ ಕಟ್ ಹೇಳಿದ್ದು, ನಟ ಕಮಲ್ ಹಾಸನ್ ನಿರ್ಮಾಣ ಮಾಡಿದ್ದಾರೆ. ಶಿವಕಾರ್ತಿಕೇಯನ್ ಜೋಡಿಯಾಗಿ ಸಾಯಿ ಪಲ್ಲವಿ ಅಭಿನಯಿಸಿದ್ದರು. ಬಾಕ್ಸ್ ಅಫೀಸ್‌ನಲ್ಲೂ ಅಮರನ್ ಧೂಳೆಬ್ಬಿಸಿತ್ತು. ಒಂದು ಅಂದಾಜಿನ ಪ್ರಕಾರ, ರೂ.350 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಸದ್ಯ, ನಟ ಶಿವಕಾರ್ತಿಕೇಯನ್ ಮೂರು ಹೊಸ ಪ್ರಾಜೆಕ್ಟ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಅವರ ಮುಂಬರುವ ಸಿನಿಮಾಗಾಗಿ ಅಭಿಮಾನಿಗಳು ಕೂಡ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ. ಬುಧವಾರ ತಮ್ಮ ಅಕ್ಕನ ಬರ್ತ್ ಡೇಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಪ್ರೀತಿಯ ಸಹೋದರಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿಯೂ ಪೋಸ್ಟ್ ಮಾಡಿದ್ದು, ಅಕ್ಕನ ಸಾಧನೆಯನ್ನು ಗುಣಗಾನ ಮಾಡಿದ್ದಾರೆ.

Famous Actor SivaKarthikeyan Gifted Mini Cooper Car For His Sister Birthday Details

'ನನ್ನ ಸ್ಫೂರ್ತಿಯ ಚಿಲುಮೆಯಾಗಿರುವ ಪ್ರೀತಿಯ ಅಕ್ಕನಿಗೆ ಹುಟ್ಟುಹಬ್ಬದ ಶುಭಾಯಶಗಳು. ಒಂದು ಮಗುವಾದ ಬಳಿಕ, ಕಷ್ಟಪಟ್ಟು ಓದಿ ಎಂಬಿಬಿಎಸ್ ಪದವಿ ಪೂರೈಸಿದಳು, 38ನೇ ವಯಸ್ಸಿಗೆ ಚಿನ್ನದ ಪದಕದೊಂದಿಗೆ ಎಂಡಿ ಪದವಿ ಪಡೆದಳು.. ಈಗ 42ನೇ ವಯಸ್ಸಿಗೆ ಎಫ್‌ಆರ್‌ಸಿಪಿಗೆ (ಲಂಡನ್‌ನ ರಾಯಲ್ ಕಾಲೇಜ್ ಆಫ್ ಫಿಜಿಷಿಯನ್ಸ್‌ನ ಫೆಲೋಶಿಪ್‌) ಭಾಜನಳಾಗಿದ್ದಾಳೆ' ಎಂದು ಹೇಳಿದ್ದಾರೆ.

ನಟ ಶಿವಕಾರ್ತಿಕೇಯನ್ ತಮ್ಮ ಅಕ್ಕನಿಗೆ ಹುಟ್ಟುಹಬ್ಬದ ಹಿನ್ನೆಲೆ, ದುಬಾರಿ ಬೆಲೆಯ ಹೊಚ್ಚ ಹೊಸ 'ಮಿನಿ ಕೂಪರ್' ಕಾರನ್ನು ಉಡುಗೊರೆಯಾಗಿಯೂ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಶಿವಕಾರ್ತಿಕೇಯನ್ ಹಂಚಿಕೊಂಡಿರುವ ಫೋಟೋದಲ್ಲಿ ಅವರ ಕುಟುಂಬ ಸದಸ್ಯರು, ಹೊಚ್ಚ ಹೊಸ ಮಿನಿ ಕೂಪರ್ ಕಾರಿನ ಎದುರಿಗೆ ನಿಂತಿರುವುದನ್ನು ಕಾಣಬಹುದು. ಆದರೆ, ಅದು ಯಾವ ಮಾಡೆಲ್ ಎಂಬುದರ ಕುರಿತಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Famous Actor SivaKarthikeyan Gifted Mini Cooper Car For His Sister Birthday Details

ದೇಶೀಯ ಮಾರುಕಟ್ಟೆಯಲ್ಲಿ 'ಮಿನಿ ಕೂಪರ್' ಕಾರಿನ ವಿವಿಧ ಮಾಡೆಲ್‌ಗಳು ಗ್ರಾಹಕರ ಖರೀದಿಗೆ ಸಿಗುತ್ತವೆ. ಮಿನಿ ಕೂಪರ್ ಕಂಟ್ರಿಮ್ಯಾನ್ (Mini Cooper Countryman), ರೂ.48.10 ಲಕ್ಷದಿಂದ ರೂ.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 2-ಲೀಟರ್ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 7-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಪಡೆದಿದೆ. ಇದರಲ್ಲಿ 5 ಮಂದಿ ಓಡಾಟ ನಡೆಸಬಹುದು.

ಮಿನಿ ಕೂಪರ್ 3-ಡೋರ್ (Mini Cooper 3-Door) ಬಗ್ಗೆ ಹೇಳುವುದಾದರೆ, ಇದು ರೂ.42.70 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 1998 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 17.33 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಈ ಕಾರಿನಲ್ಲಿ 4 ಜನರು ಆರಾಮದಾಯಕವಾಗಿ ದೂರದ ಊರುಗಳಿಗೆ ಪ್ರಯಾಣ ಮಾಡಬಹುದು.

ಮಿನಿ ಕೂಪರ್ ಎಸ್ (Mini Cooper S) ಕುರಿತಂತೆ ಮಾತನಾಡುವುದಾದರೆ, ಈ ಕಾರು ರೂ.44.90 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. 2-ಲೀಟರ್ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಪಡೆದಿದ್ದು, 15 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿಯೂ 5 ಮಂದಿ ತೆರಳಬಹುದು. 9.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, December 5, 2024, 23:32 [IST]
English summary
Famous actor sivakarthikeyan gifted mini cooper car for his sister birthday details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+