ಎಂದಿಗೂ ಮುಗಿಯದ ರಾಯಲ್ ಎನ್‌ಫೀಲ್ಡ್ ಕ್ರೇಝ್ : ಹೊಸ ಬೈಕ್ ಖರೀದಿಸಿದ ಪ್ರಸಿದ್ದ ಮಹಿಳಾ ಸೆಲೆಬ್ರಿಟಿ
ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವಿಶ್ವದ ಮೊದಲ ಬೈಕ್ ಕಂಪನಿಯಾದ ರಾಯಲ್ ಎನ್‌ಫೀಲ್ಡ್ 1901 ರಿಂದ ಇಲ್ಲಿಯವರೆಗೆ ವಿಶ್ವದೆಲ್ಲೆಡೆ ಬಹುತೇಕ ಜನರ ಮೆಚ್ಚುಗೆಯ ಬೈಕಾಗಿ ಹೊರಹೊಮ್ಮಿದೆ. ಇದರಲ್ಲಿ ಸಾಮಾನ್ಯ ಜನರಿಂದ ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಸಹ ಇದ್ದಾರೆ ಎಂಬುದು ಗಮನಾರ್ಹ.
ಇದೀಗ ಮತ್ತೊಂದು ಹೆಸರಾಂತ ಸೆಲೆಬ್ರಿಟಿ ದಿವ್ಯಾಂಕ ತ್ರಿಪಾಠಿ ರಾಯಲ್ ಎನ್‌ಫೀಲ್ಡ್ ಬೈಕ್ ಹತ್ತಿ ಫೋಸ್ ಕೊಟ್ಟಿದ್ದಾರೆ. ಹಿಂದಿ ಸೀರಿಯಲ್‌ಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಈಗಾಗಲೇ ತಮ್ಮ ಪ್ರತಿಭೆಯನ್ನು ತೋರಿಸಿರುವ ದಿವ್ಯಾಂಕ ತ್ರಿಪಾಠಿ ರಾಯಲ್ ಎನ್‌ಫೀಲ್ಡ್ ಮೀಟಿಯರ್ 350 (Royal Enfield Meteor 350) ಮೋಟೋರ್ ಸೈಕಲ್ ಹತ್ತಿ ಪೋಸ್ ನೀಡಿದ್ದಾರೆ.

ದಿವ್ಯಾಂಕ ತ್ರಿಪಾಠಿ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಮುಂಬೈನ ಪಾಪರಾಝಿ ಔಟ್‌ಸೈಡ್‌ನಲ್ಲಿರುವ ಶೋ ರೂಮ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಶೋ ರೂಮ್‌ಗೆ ರಾಯಲ್ ಎನ್‌ಫೀಲ್ಡ್ ಮೀಟಿಯರ್ 350 ಬೈಕ್‌ನಲ್ಲಿ ಬರುತ್ತಿರುವ ಹೊತ್ತಿಗೆ ದಿವ್ಯಾಂಕ ತ್ರಿಪಾಠಿ ಅಲ್ಲಿ ನೆರೆದಿದ್ದ ಜನರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.
ದಿವ್ಯಾಂಕ ತ್ರಿಪಾಠಿ ತಾವು ಬರುತ್ತಿರುವ ಸಮಯದಲ್ಲಿ ವಿಡಿಯೋ ಮಾಡುತ್ತಿದ್ದ ಅಭಿಮಾನಿಗಳ ಬಳಿ ಮಾತನಾಡಿಸಲು ಬೈಕ್ ನಿಲ್ಲಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂಧರ್ಭದಲ್ಲಿ ಅಭಿಮಾನಿಗಳ ಜೊತೆ ದಿವ್ಯಾಂಕ ತ್ರಿಪಾಠಿ ತಮ್ಮ ಹೊಸ ಬೈಕ್‌ನೊಂದಿಗೆ ಪೋಸ್ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಇನ್ನು ದಿವ್ಯಾಂಕ ತ್ರಿಪಾಠಿ ಅವರು ತಮ್ಮ ರಾಯಲ್ ಎನ್‌ಫೀಲ್ಡ್ ಮೀಟಿಯರ್ 350 ಜೊತೆ ಇರುವ ವಿಡಿಯೋವನ್ನು ವೈರಲ್ ಬಾಲಿವುಡ್ ಎಂಬ ಯ್ಯೂಟ್ಯೂಬ್ ಚಾನಲ್ ಪೋಸ್ಟ್ ಮಾಡಿದ್ದು ಈ ವಿಡಿಯೋ ಕೆಳಗೆ ದಿವ್ಯಾಂಕ ತ್ರಿಪಾಠಿ ಅಭಿಮಾನಿಗಳು ತಮ್ಮ ನೆಚ್ಚಿನ ಸೆಲೆಬ್ರಿಟಿಯ ಕುರಿತಾಗಿ ಸಕಾರಾತ್ಮಕ ಕಾಮೆಂಟ್‌ಗಳನ್ನು ಮಾಡಿರುವುದನ್ನು ನೋಡಬಹುದಾಗಿದೆ.
ಇನ್ನು ಬಿಲ್ಡಿಂಗ್‌ನ ಮೈನ್ ಗೇಟ್ ಮೂಲಕ ತಮ್ಮ ರಾಯಲ್ ಎನ್‌ಫೀಲ್ಡ್ ಮೀಟಿಯರ್ ೩೫೦ ಬೈಕ್ ಮೂಲಕ ಆಗಮಿಸಿದ ದಿವ್ಯಾಂಕ ತ್ರಿಪಾಠಿಯ ಬೈಕ್ ಬಣ್ಣ, ಮ್ಯಾಟ್ ಬ್ಲ್ಯಾಕ್. ಇನ್ನು ಬೈಕ್ ನಿಲ್ಲಿಸಿದ ಮೇಲೆ ಅಲ್ಲಿ ನೆರೆದಿದ್ದ ಮೀಡಿಯಾ ಮತ್ತು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿ, ಕೆಲ ಕಾಲ ಅವರ ಜೊತೆ ತಮ್ಮ ಸಮಯವನ್ನು ವ್ಯಯ ಮಾಡಿದ್ದಾರೆ.
ದಿವ್ಯಾಂಕ ತ್ರಿಪಾಠಿ ಹಿಂದಿಯಲ್ಲಿ ಖ್ಯಾತರಾಗಿರುವ ನಟಿಯಾಗಿದ್ದು ಅವರು ಯೇ ಹೆ ಮೊಹಬಾತೇನ್ ಎಂಬ ಸಿರಿಯಲ್ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು. ಈ ಒಂದು ಸೀರಿಯಲ್‌ನಲ್ಲೇ ದಿವ್ಯಾಂಕ ತ್ರಿಪಾಠಿಯವರ ಆಗಾಧವಾದ ಅಭಿನಯ ಕಲೆ, ಮತ್ತು ಪ್ರತಿಭೆಯನ್ನು ಹೊರಹಾಕಿದ್ದರು. ತಮಗೆ ಸಿಕ್ಕ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications