ಅಪ್ಪಾ.. ನಾವು ಸಾಧಿಸಿದ್ದೇವೆ, 24 ವರ್ಷಗಳ ಕನಸು, ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಸ್ಟಾರ್ ಆ್ಯಂಕರ್ ಅರ್ಚನಾ

ತಮಿಳುನಾಡಿನಾದ್ಯಂತ ಅರ್ಚನಾ ಚಂದೋಕ್ (Archana Chandhoke), ಟಿವಿ ನಿರೂಪಕಿ, ನಟಿ ಹಾಗೂ ರೇಡಿಯೋ ಜಾಕಿಯಾಗಿ ಖ್ಯಾತಿ ಗಳಿಸಿದ್ದಾರೆ. 1999ರಲ್ಲಿ ಜಯ ಇಂಗ್ಲಿಷ್ ವಾಹಿನಿಯಲ್ಲಿ ಸುದ್ದಿವಾಚಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಅರ್ಚನಾ, ಸನ್ ಟಿವಿ, ಸ್ಟಾರ್ ವಿಜಯ್, ಜೀ ತಮಿಳು ವಾಹಿನಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಸ್ಟಾರ್ ಆ್ಯಂಕರ್ ಎನಿಸಿಕೊಂಡಿದ್ದಾರೆ.

2020ರಲ್ಲಿ ಅರ್ಚನಾ, ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದರು. ಸದ್ಯ ಅವರು ದುಬಾರಿ ಬೆಲೆಯ ಹೊಚ್ಚ ಹೊಸ ಮರ್ಸಿಡಿಸ್ - ಬೆಂಜ್ ಜಿಎಲ್‌ಸಿ 220ಡಿ (Mercedes - Benz GLC 220d) ಕಾರನ್ನು ಕೊಂಡುಕೊಂಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, 1.5 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

Famous Anchor Archana Chandhoke Buy Mercedes - Benz GLC 220d Car Full Fill Father Dream

ಈ ಬಗ್ಗೆ ಸ್ವತಃ ಅರ್ಚನಾ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ನೂತನ ಕಾರನ್ನು ಕುಟುಂಬದೊಂದಿಗೆ ವಿತರಣೆ ಪಡೆಯುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 'ನಮ್ಮ ಜೀವನದಲ್ಲಿ ಪ್ರತಿದಿನವೂ ಕನಸಿನ ಬೆನ್ನಟ್ಟಿದ್ದೇವೆ. ನಾನು ಮತ್ತು ಸಹೋದರಿ ಅಂಕಿತಾ ಕಾರನ್ನು ಓಡಿಸುವುದನ್ನು ಕಲಿಯುವ ಸಂದರ್ಭದಲ್ಲಿ ನಮ್ಮ ತಂದೆ ಮರ್ಸಿಡಿಸ್ ಬೆಂಜ್ ಕಾರನ್ನು ನಮ್ಮೊಂದಿಗೆ ಚಾಲನೆ ಮಾಡುವ ಕನಸು ಕಾಣುತ್ತಿದ್ದರು' ಎಂದಿದ್ದಾರೆ.

ಮುಂದುವರಿದು, ಈ 25 ವರ್ಷಗಳ ಮಾಧ್ಯಮ ಬದುಕಿನಲ್ಲಿ 24 ವರ್ಷಗಳ ಕಾಲ ಅಪ್ಪ ನಮಗಾಗಿ ಕಂಡ ಕನಸಿನ ಹಿಂದೆ ಬಿದ್ದು, ಅದನ್ನು ಸಾಕಾರಗೊಳಿಸಲು ಕಷ್ಟಪಟ್ಟಿದ್ದೇವೆ. ನಾವು ಆಕಾಶದತ್ತ ನೋಡುತ್ತೇವೆ ಮತ್ತು ಜೋರಾಗಿ ಕಿರುಚುತ್ತೇವೆ.. 'ಅಪ್ಪಾ, ನಾವು ಅದನ್ನು ಮಾಡಿದ್ದೇವೆ!' ಎಂದು ಶೀರ್ಷಿಕೆ ಬರೆದಿದ್ದಾರೆ. ಜೊತೆಗೆ ಈ ಮಟ್ಟಕ್ಕೆ ಏರಲು ಸಹಕರಿಸಿದ ಕುಟುಂಬದ ಸದಸ್ಯರಿಗೂ ಧನ್ಯವಾದವನ್ನು ಅರ್ಪಿಸಿದ್ದಾರೆ.

Famous Anchor Archana Chandhoke Buy Mercedes - Benz GLC 220d Car Full Fill Father Dream

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮರ್ಸಿಡಿಸ್ - ಬೆಂಜ್ ಜಿಎಲ್‌ಸಿ 220ಡಿ ಕಾರು, ರೂ.75.20 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಐಷಾರಾಮಿ ವಿನ್ಯಾಸವನ್ನು ಹೊಂದಿರುವ ಈ ಕಾರು, ನಾಟಿಕ್ ಬ್ಲೂ, ಅಬ್ಸಿಡಿಯನ್ ಬ್ಲ್ಯಾಕ್, ಪೋಲಾರ್ ವೈಟ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೂ ಸಿಗಲಿದ್ದು, 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

ಈ ಮರ್ಸಿಡಿಸ್ - ಬೆಂಜ್ ಜಿಎಲ್‌ಸಿ 220ಡಿ, 1993 ಸಿಸಿ ಸಾಮರ್ಥ್ಯದ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 194.44 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 440 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿಯೂ ಲಭ್ಯವಿದ್ದು, 19.4 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿರುವ ಈ ಕಾರು, ಆಕರ್ಷಕ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟಬಲ್ ಎಕ್ಸ್‌ಟೀರಿಯರ್ ರೇರ್ ವ್ಯೂ ಮಿರರ್, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್, ಅಲಾಯ್ ವೀಲ್ಸ್, ಫ್ರಂಟ್ (ಮುಂಭಾಗ) ಫಾಗ್ ಲೈಟ್ಸ್, ಹಾಗೂ ರೇರ್ (ಹಿಂಭಾಗ) ಪವರ್ ವಿಂಡೋಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, April 2, 2024, 12:54 [IST]
English summary
Famous anchor archana chandhoke buy mercedes benz glc220d car full fill father dream
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+