ವಿದೇಶದಲ್ಲೂ ಮಹೀಂದ್ರಾಗೆ ಭಾರೀ ಜನಪ್ರಿಯತೆ: XUV700 ವಿತರಣೆ ಪಡೆದ ಖ್ಯಾತ ಕ್ರಿಕೆಟಿಗನ ಪುತ್ರಿ

ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಯುಎಸ್ಎ ಮಾರುಕಟ್ಟೆಯಲ್ಲಿಯೂ ಮಹೀಂದ್ರಾ (Mahindra) ಕಂಪನಿ ಎಸ್‌ಯುವಿಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿವೆ. ಆಸ್ಟ್ರೇಲಿಯಾದ ಖ್ಯಾತ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ (Matthew Hayden) ಅವರ ಪುತ್ರಿ ಕೂಡ ಮಹೀಂದ್ರಾ ಕಾರಿಗೆ ಮನಸೋತಿದ್ದಾರೆ.

ಮ್ಯಾಥ್ಯೂ ಹೇಡನ್ ಅವರು, ಮಹೀಂದ್ರಾದೊಂದಿಗೆ ಸುಧೀರ್ಘ ಬಾಂಧವ್ಯವನ್ನು ಹೊಂದಿದ್ದು, ಆಸ್ಟ್ರೇಲಿಯಾದಲ್ಲಿ ಕಂಪನಿಯ ರಾಯಭಾರಿ (ಬ್ರ್ಯಾಂಡ್ ಅಂಬಾಸಿಡರ್) ಆಗಿದ್ದಾರೆ. ಮ್ಯಾಥ್ಯೂ ಹೇಡನ್ ಪುತ್ರಿ ಗ್ರೇಸ್ ಹೇಡನ್ (Grace Hayden) ಅವರಿಗೆ ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಎಸ್‌ಯುವಿ ವಿತರಿಸುತ್ತಿರುವ ವಿಡಿಯೋವನ್ನು 'ಮಹೀಂದ್ರಾ ಆಸ್ಟ್ರೇಲಿಯಾ' ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ.

ವಿದೇಶದಲ್ಲೂ ಮಹೀಂದ್ರಾಗೆ ಭಾರೀ ಜನಪ್ರಿಯತೆ: XUV700 ವಿತರಣೆ ಪಡೆದ ಖ್ಯಾತ ಕ್ರಿಕೆಟಿಗನ ಪುತ್ರಿ

ಬ್ರಿಸ್ಬೇನ್ ಸಿಟಿಯಲ್ಲಿರುವ ಮಹೀಂದ್ರಾ ಡೀಲರ್‌ಶಿಪ್‌ನ ಮುಂದೆ ಗ್ರೇಸ್ ಹೇಡನ್ ನಿಂತುಕೊಂಡು ಮಾತನಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹೇಡನ್ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ಖ್ಯಾತಿಗಳಿಸಿದ್ದು, ಸ್ಟಾರ್ ಸ್ಪೋರ್ಟ್ ಇಂಡಿಯಾದ ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ. ಗ್ರೇಸ್ ಹೇಡನ್, ಭಾರತಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಈ ವೇಳೆ ಮಹೀಂದ್ರಾ ಉತ್ಪಾದನಾ ಘಟಕಕ್ಕೆ ಹೋಗಿದ್ದ ಅವರು, ಎಕ್ಸ್‌ಯುವಿ700 ತಯಾರಿಕೆಯನ್ನು ವೀಕ್ಷಿಸಿದ್ದರು.

ಆ ಬಳಿಕ, ಎಕ್ಸ್‌ಯುವಿ700 ಎಸ್‌ಯುವಿಯನ್ನು ಓಡಿಸುವ ಅವಕಾಶ ಪಡೆದಿದ್ದರು. ಆಸ್ಟ್ರೇಲಿಯಾಗೆ ಹಿಂದಿರುಗಿದ ಮೇಲೆ ಈ ಕಾರನ್ನು ಖರೀದಿಸಲು ನಿರ್ಧರಿಸಿದ್ದ ಗ್ರೇಸ್ ಹೇಡನ್ ಅವರು, ಈಗ ವಿತರಣೆ ಪಡೆದಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ ರೂ.14.03 ಲಕ್ಷದಿಂದ ರೂ.26.57 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ವಿದೇಶದಲ್ಲೂ ಮಹೀಂದ್ರಾಗೆ ಭಾರೀ ಜನಪ್ರಿಯತೆ: XUV700 ವಿತರಣೆ ಪಡೆದ ಖ್ಯಾತ ಕ್ರಿಕೆಟಿಗನ ಪುತ್ರಿ

5 - 7 ಆಸನ ಆಯ್ಕೆಯಲ್ಲಿ ದೊರೆಯುವ ಈ ಕಾರು, ಎಂಎಕ್ಸ್, ಎಕ್ಸ್ ಸೇರಿದಂತೆ ವಿವಿಧ ರೂಪಾಂತರ ಹಾಗೂ ಬ್ಲ್ಯಾಕ್, ರೆಡ್ ರೇಜ್ ಒಳಗೊಂಡಂತೆ 5 ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಜೊತೆಗೆ 2WD (ಟೂ ವೀಲ್ ಡ್ರೈವ್ ಹಾಗೂ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

ಮಹೀಂದ್ರಾ ಎಕ್ಸ್‌ಯುವಿ700 ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. 2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 200 PS ಪವರ್, 380 Nm ಪೀಕ್ ಟಾರ್ಕ್, 2.2 - ಲೀಟರ್ ಡಿಸೇಲ್ ಎಂಜಿನ್ 185 PS ಪವರ್, 450 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 6 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ವಿದೇಶದಲ್ಲೂ ಮಹೀಂದ್ರಾಗೆ ಭಾರೀ ಜನಪ್ರಿಯತೆ: XUV700 ವಿತರಣೆ ಪಡೆದ ಖ್ಯಾತ ಕ್ರಿಕೆಟಿಗನ ಪುತ್ರಿ

ಈ ಎಕ್ಸ್‌ಯುವಿ 700 ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 6 - ವೇ ಪವರ್ಡ್ ಡ್ರೈವರ್ ಸೀಟ್, 12 ಸ್ಪೀಕರ್‌, ಪನೋರಮಿಕ್ ಸನ್‌ರೂಫ್, ಡ್ಯುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್ ಹಾಗೂ ಅಲೆಕ್ಸಾ ಕನೆಕ್ಟಿವಿಟಿಯನ್ನು ಪಡೆದಿದೆ.

ಮಹೀಂದ್ರಾ ಎಕ್ಸ್‌ಯುವಿ700 ಕಾರು, 7 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಹತ್ತಾರು ಸೇಫ್ಟಿ ಫೀಚರ್ಸ್ ಒಳಗೊಂಡಿದೆ.

ಈ ಕಾರಿಗೆ ಹ್ಯುಂಡೈ ಅಲ್ಕಾಜರ್, ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ, ಟಾಟಾ ಹ್ಯಾರಿಯರ್ ಮತ್ತು ಹ್ಯುಂಡೈ ಕ್ರೆಟಾಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಮಹೀಂದ್ರಾ ಎಕ್ಸ್‌ಯುವಿ700 ಭಾರತದ ಮಾತ್ರವಲ್ಲದೆ ವಿದೇಶಿ ಗ್ರಾಹಕರನ್ನು ಆಕರ್ಷಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂಬರುವ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿಯೂ ಈ ಕಾರನ್ನು ಹೆಚ್ಚಿನ ಜನರು ಇಷ್ಟಪಟ್ಟು ಖರೀದಿಸಿದರೂ ಅಚ್ಚರಿಯಿಲ್ಲ.

Article Published On: Friday, December 8, 2023, 13:04 [IST]
English summary
Famous cricketer matthew hayden daughter grace takes delivery of mahindra xuv700
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+