ತಂದೆ - ತಾಯಿಯೊಂದಿಗೆ ಹೊಸ ಮರ್ಸಿಡಿಸ್ ಕಾರನ್ನು ವಿತರಣೆ ಪಡೆದ ಖ್ಯಾತ ಗಾಯಕ: ಬೆಲೆ ಎಷ್ಟು ಗೊತ್ತಾ?

ವಿಶಾಲ್ ಮಿಶ್ರಾ (Vishal Mishra) ಜನಪ್ರಿಯ ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿದ್ದು, ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮಿಳಿನ 'ದೇವಿ' ಸಿನಿಮಾಕ್ಕೆ ಸಂಗೀತವನ್ನು ಸಂಯೋಜಿಸುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಅವರು, ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಿಗೂ ಮ್ಯೂಸಿಕ್ ನೀಡಿದ್ದಾರೆ.

ಕಳೆದ ವರ್ಷ ಬಿಡುಗಡೆಗೊಂಡ ಅನಿಮಲ್ (Animal) ಚಿತ್ರಕ್ಕೆ ವಿಶಾಲ್ ಮಿಶ್ರಾ ಅವರು ಸಂಗೀತವನ್ನು ಸಂಯೋಜಿಸಿದ್ದು, ಆ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಸದ್ಯ ವಿಶಾಲ್ ದುಬಾರಿ ಬೆಲೆಯ ಹೊಚ್ಚ ಹೊಸ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 (Mercedes Maybach GLS 600) ಕಾರನ್ನು ಖರೀದಿಸಿದ್ದು, ತಂದೆ-ತಾಯಿಯೊಂದಿಗೆ ನೂತನ ಎಸ್‌ಯುವಿಯೊಂದಿಗೆ ವಿತರಣೆ ಪಡೆಯುತ್ತಿರುವ ಫೋಟೋ ಹಾಗೂ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Famous Singer Vishal Mishra Buy Mercedes Maybach GLS 600 Car

'ಹೊಸ ಕಾರನ್ನು ಮನೆಗೆ ಸ್ವಾಗತಿಸುತ್ತಿದ್ದಾನೆ. ಇದೆಲ್ಲವೂ ನಿಮ್ಮ ಪ್ರೀತಿಯಿಂದ ಸಾಧ್ಯವಾಯಿತು' ಎಂದು ವಿಶಾಲ್ ಮಿಶ್ರಾ ಅವರು ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. 13 ಗಂಟೆ ಕಳೆಯುವ ಮೊದಲೇ ಈ ಪೋಸ್ಟ್, 4 ಲಕ್ಷಕ್ಕೂ ಅಧಿಕ ಲೈಕ್ ಪಡೆದುಕೊಂಡಿದ್ದು, ನೆಟ್ಟಿಗರು ಕೂಡ ಗಾಯಕ ವಿಶಾಲ್ ಅವರಿಗೆ ಶುಭ ಕೋರುತ್ತಿದ್ದಾರೆ. ವಿಡಿಯೋದಲ್ಲಿ ಪೋಷಕರು ಹೊಸ ಕಾರಿಗೆ ಪೂಜೆ ಸಲ್ಲಿಸುವುದನ್ನು ಕಾಣಬಹುದು.

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಕಾರು, ರೂ.2.92 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು 4-ಲೀಟರ್ ಟ್ವಿನ್ ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಪಡೆದಿದ್ದು, 550 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 730 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.

Famous Singer Vishal Mishra Buy Mercedes Maybach GLS 600 Car

ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಕಾರು, AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, ಗಂಟೆಗೆ 250 ಕಿಲೋಮಿಟರ್ ಗರಿಷ್ಠ ವೇಗವನ್ನು ಪಡೆಯಲಿದೆ. 4 ಆಸನದೊಂದಿಗೆ ಲಭ್ಯವಿದೆ. 90 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಅನ್ನು ಒಳಗೊಂಡಿದೆ. ಮುಂಭಾಗ (ಫ್ರಂಟ್) ಮತ್ತು ಹಿಂಭಾಗ (ರೇರ್) ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

ಈ ಕಾರು ಬೆಲೆಗೆ ತಕ್ಕಂತೆ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯವನ್ನು ಪಡೆದಿದೆ. ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್‌, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್, ಅಲಾಯ್ ವೀಲ್ಸ್‌, ಫಾಗ್ ಲೈಟ್ಸ್, ಫ್ರಂಟ್‌ ಪವರ್ ವಿಂಡೋಸ್ & ರೇರ್ ಪವರ್ ವಿಂಡೋಸ್, ಏರ್ ಬ್ಯಾಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಮರ್ಸಿಡಿಸ್ ಕಂಪನಿಯ ಕಾರುಗಳನ್ನು ಹಲವು ಸೆಲೆಬ್ರಿಟಿಗಳು ಇಷ್ಟಪಟ್ಟು ಖರೀದಿಸುತ್ತಾರೆ. ಈಚೆಗೆ ತಮಿಳಿನ ಖ್ಯಾತ ನಿರೂಪಕಿ ಅರ್ಚನಾ ಚಂದೋಕ್, ಮರ್ಸಿಡಿಸ್ - ಬೆಂಜ್ ಜಿಎಲ್‌ಸಿ 220ಡಿ ಕಾರನ್ನು ಕೊಂಡುಕೊಂಡಿದ್ದಾರೆ. ಇದು ರೂ.75.20 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1993 ಸಿಸಿ ಸಾಮರ್ಥ್ಯದ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 19.4 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, April 10, 2024, 13:04 [IST]
English summary
Famous singer vishal mishra buy mercedes maybach gls 600 car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+