ದುಬಾರಿ ಬೆಲೆಯ ಮರ್ಸಿಡಿಸ್ ಸೆಡಾನ್ ಖರೀದಿಸಿದ ಕುಶಾ ಕಪಿಲಾ: ಯಾರು ಶಿವ ಈಕೆ.. ಈ ಕಾರಿನ ವಿಶೇಷತೆಗಳೇನು?
ಸಾಮಾನ್ಯವಾಗಿ ಸೆಲೆಬ್ರಿಟಿಗಳು, ಉದ್ಯಮಿಗಳು ಹಾಗೂ ಜನಪ್ರಿಯ ಕ್ರೀಡಾ ತಾರೆಗಳು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಖರೀದಿಸುವುದನ್ನು ನೋಡಿದ್ದೇವೆ. ಸದ್ಯ, ಖ್ಯಾತ ಸೋಷಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ & ಯೂಟ್ಯೂಬರ್ ಆಗಿರುವ ಕುಶಾ ಕಪಿಲಾ (Kusha Kapila) ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ ಇ-ಕ್ಲಾಸ್ ಕಾರನ್ನು ಕೊಂಡುಕೊಂಡಿದ್ದಾರೆ.
ಆಟೋ ಹ್ಯಾಂಗರ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಕುಶಾ ಕಪಿಲಾ ನೂತನ ಕಾರಿಗೆ ಪೂಜೆ ಸಲ್ಲಿಸಿ, ಕುಟುಂಬದೊಂದಿಗೆ ವಿತರಣೆ ಪಡೆಯುತ್ತಿರುವುದನ್ನು ನೋಡಬಹುದು. ಹೊಸ ಕಾರು ಖರೀದಿಸಿರುವ ಕುಶಾಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ, ಅವರು ಮರ್ಸಿಡಿಸ್-ಬೆಂಜ್ ಇ-ಕ್ಲಾಸ್ ಸೆಡಾನ್ ನ ಯಾವ ರೂಪಾಂತರವನ್ನು ಖರೀದಿಸಿದ್ದಾರೆ ಎನ್ನುವುದರ ಕುರಿತು ಸ್ಪಷ್ಟ ಮಾಹಿತಿಯಿಲ್ಲ.

ದೇಶೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಜ್ ಇ-ಕ್ಲಾಸ್ (Mercedes Benz E-Class) ಕಾರನ್ನು 2 ರೂಪಾಂತರದ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ. ಅವುಗಳೆಂದರೆ, ಎಕ್ಸ್‌ಕ್ಲೂಸಿವ್ ಮತ್ತು ಎಲೈಟ್. ಡೀಸೆಲ್ ಎಂಜಿನ್ ಚಾಲಿತ ಈ ಮಾದರಿಗಳು ರೂ.72.80 ಲಕ್ಷದಿಂದ ರೂ.84.90 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ಎಕ್ಸ್‌ಕ್ಲೂಸಿವ್ ಆವೃತ್ತಿಯು ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದ್ದು, ರೂ. 74.80 ಲಕ್ಷ ದರವನ್ನು ಪಡೆದಿದೆ.
ನೂತನ ಮರ್ಸಿಡಿಸ್-ಬೆಂಜ್ ಇ-ಕ್ಲಾಸ್ ಸೆಡಾನ್ ನ 2.0-ಲೀಟರ್ ಡಿಸೇಲ್ ಎಂಜಿನ್ 192 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಹಾಗೂ 400 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಅದೇ ರೀತಿಯಲ್ಲಿ 3.0-ಲೀಟರ್ ಡಿಸೇಲ್ ಎಂಜಿನ್ 285 ಬಿಹೆಚ್‌ಪಿ ಪವರ್ ಮತ್ತು 600 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

2.0-ಲೀಟರ್ ಪೆಟ್ರೋಲ್ ಎಂಜಿನ್ 196 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಹಾಗೂ 320 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಎಲ್ಲ ಮಾದರಿಗಳು 9-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿವೆ. RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿರುವ ಈ ಕಾರು, ಗಂಟೆಗೆ 240 ಕಿಲೋಮೀಟರ್ ಗರಿಷ್ಠ ವೇಗವನ್ನು ಪಡೆಯಲಿದೆ.
ಈ ಮರ್ಸಿಡಿಸ್-ಬೆಂಜ್ ಇ-ಕ್ಲಾಸ್ ಸೆಡಾನ್ ನಲ್ಲಿ 4 ರಿಂದ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 3 ಜೋನ್ ಕ್ಲೇಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ಸ್, 360-ಡಿಗ್ರಿ ಕ್ಯಾಮೆರಾ, 590ಡಬ್ಲ್ಯೂ ಬರ್ಮೆಸ್ಟರ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೊಸ ಮರ್ಸಿಡಿಸ್ ಬೆಂಜ್ ಇ-ಕ್ಲಾಸ್ (Mercedes Benz E-Class) ಸೆಡಾನ್ ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತದೆ. 7 ಏರ್‌ಬ್ಯಾಗ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಆಕ್ಟಿವ್ ಬ್ರೇಕ್ ಅಸಿಸ್ಟ್ ಒಳಗೊಂಡಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಈ ಕಾರಿಗೆ ಬಿಎಂಡಬ್ಲ್ಯೂ 5 ಸೀರಿಯಸ್ & ವೋಲ್ವೋ ಎಸ್90 ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications