ಯ್ಯೂಟ್ಯೂಬ್‌ ಹಣದಲ್ಲಿ ಕೋಟಿ ಬೆಲೆಯ ಕಾರು ಖರೀದಿಸಿದ ಪುಣ್ಯಾತ್ಮ: ಕಾಲ ಬದಲಾಗಿದೆ!

ಕೆಲವೊಂದಷ್ಟು ವರ್ಷ ಹಿಂದಿನ ಮಾತು. ಆಗಿನ ಕಾಲದಲ್ಲಿ ಒಬ್ಬ ಶ್ರೀಮಂತ ಅಥವಾ ಬ್ಯುಸಿನೆಸ್‌ಮನ್‌ಗಳು ಮಾತ್ರ ದುಬಾರಿ ಕಾರುಗಳನ್ನು ಕೊಳ್ಳುವ ಕನಸನ್ನು ಕಾಣಬಹುದಾಗಿತ್ತು. ಸಾಮಾನ್ಯ ವ್ಯಕ್ತಿಗಳಿಗಂತೂ ಕೋಟಿ ಬೆಲೆಯ ಕಾರೆಂದರೆ ಅದು ಕನಸಾಗಿಯೇ ಉಳಿಯುತ್ತಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಸಿಕ್ಕಾಪಟ್ಟೆ ಬೆಳೆದಿರುವದರಿಂದ ಅದರಲ್ಲಿಯೇ ಸಾಕಷ್ಟು ದುಡ್ಡನ್ನು ಸಂಪಾದಿಸುವ ಅವಕಾಶವಿದೆ. ಇದಕ್ಕೆ ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳು ಸಹ ಇದೆ. ಸಾಮಾಜಿಕ ಜಾಲತಾಣಗಳಿಂದಲೇ ತಮ್ಮ ಬದುಕನ್ನು ಕಟ್ಟಿಕೊಂಡವರಲ್ಲಿ ಪ್ರಖ್ಯಾತ ಯ್ಯೂಟ್ಯೂಬರ್‌ ಭುವನ್‌ ಸಹ ಒಬ್ಬರು.

"ಬಿಬಿಕಿ ವೈನ್ಸ್‌' ಎಂಬ ಯ್ಯೂಟ್ಯೂಬ್‌ ಚಾನಲ್‌ ಮೂಲಕ ವಿಡಿಯೋಗಳನ್ನು ಪೋಸ್ಟ್ ಮಾಡಿ ಭಾರತದಲ್ಲಿನ ನಂಬರ್‌ ವನ್‌ ಯ್ಯೂಟ್ಯೂಬರ್‌ ಎಂಬ ಪಟ್ಟವನ್ನೂ ಅಲಂಕರಿಸಿರುವ ಕಲಾವಿದ ಈತ. ಈತನ ಸಾ ಇದೀಗ ಭುವನ್‌ ಪ್ರಸಿದ್ದ ಲ್ಯಾಂಡ್‌ ರೋವರ್‌ ಡಿಫೆಂಡರ್‌ ಕಾರನ್ನು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ ಎಂಬುದು ಈಗಿನ ವಿಷಯ.

Famous Youtuber Bhuvan bam Brought Land Rover Defender SUV

ಲ್ಯಾಂಡ್ ರೋವರ್‌ನ ಪ್ರಸಿದ್ದ ಕಾರುಗಳಲ್ಲಿ ಪ್ರಮುಖವಾದ ಕಾರು ಈ ಡಿಫೆಂಡರ್. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಹೊಂದಿರುವ ಈ ಕಾರು ಆಫ್‌ರೋಡ್ ಮತ್ತು ದೂರ ಪ್ರಯಾಣಗಳಿಗೆ ಹೇಳಿ ಮಾಡಿಸಿದ್ದಾಗಿದೆ. ಭುವನ್ ಅವರು ಕಪ್ಪು ಬಣ್ಣದ ಲ್ಯಾಂಡ್‌ ರೋವರ್‌ ಡಿಫೆಂಡರ್‌ ಅನ್ನು ಖರೀದಿ ಮಾಡಿದ್ದು, ಅದನ್ನು ಓಡಿಸಿಕೊಂಡು ಬರುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಇದೇ ಕಾರನ್ನು (Land Rover Defender SUV) ಕೆಲ ದಿನಗಳ ಹಿಂದೆಯಷ್ಟೇ ಭಾರತ ಕ್ರಿಕೆಟ್‌ ತಂಡದ ಆಟಗಾರ ರಿಷಭ್‌ ಪಂತ್‌ ಸಹ ಖರೀದಿ ಮಾಡಡಿದ್ದರು. ಲ್ಯಾಂಡ್‌ ರೋವರ್‌ ಡಿಫೆಂಡರ್‌ ಭಾರತದ ನೆಚ್ಚಿನ ಸೆಲೆಬ್ರಿಟಿ ಕಾರೆಂದರೂ ಅದು ಅತಿಶಯೋಕ್ತಿಯಾಗಲಾರದು ಎಂಬುದು ನಮ್ಮ ಅಭಿಪ್ರಾಯ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿರುವ ಲ್ಯಾಂಡ್‌ ರೋವರ್‌ ಡಿಫೆಂಡರ್‌ ಬಗ್ಗೆ ನೋಡೋಣ.

Famous Youtuber Bhuvan bam Brought Land Rover Defender SUV

ತೀವ್ರವಾದ ಆಫ್-ರೋಡಿಂಗ್ ಅಡ್ವೆಂಚರ್ ಗಳಿಗಾಗಿ ತ್ವರಿತವಾಗಿ ಭಾರತೀಯ ಮತ್ತು ವಿದೇಶಿ ಚಾಲಕರಲ್ಲಿ ಅಚ್ಚುಮೆಚ್ಚಿನಾಗಿದೆ. ಈ ವರ್ಷದ ಆರಂಭದಲ್ಲಿ, ಬ್ರಿಟಿಷ್ ಐಷಾರಾಮಿ ಕಾರು ತಯಾರಕರು ಮಾದರಿಗೆ ಹೊಸ ಎಂಜಿನ್ ಆಯ್ಕೆಗಳನ್ನು ಸೇರಿಸಿದರು ಮತ್ತು ಲ್ಯಾಂಡ್ ರೋವರ್ ಡಿಫೆಂಡರ್ 110 ಈಗ ಐದು ಡೋರುಗಳು ಮತ್ತು 5+2 ಸೀಟ್ ಆಯ್ಕೆಯೊಂದಿಗೆ ಬರುತ್ತಿದೆ.

ಈ ಎಸ್‌ಯುವಿಯ ಮುಂಭಾಗದಲ್ಲಿ ಡಿಆರ್‌ಎಲ್‌ ಹೊಂದಿರುವ ಎಲ್‌ಇಡಿ ಹೆಡ್‌ಲೈಟ್ ಯುನಿಟ್ ಅಳವಡಿಸಲಾಗಿದೆ. ಟಾಪ್ ಎಂಡ್ ಮಾದರಿಯಲ್ಲಿ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ ಲೈಟ್ ಯುನಿಟ್ ನೀಡಲಾಗಿದೆ. ಬಂಪರ್ ಕೆಳಭಾಗದಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಫಾಗ್ ಲ್ಯಾಂಪ್'ಗಳನ್ನು ನೀಡಲಾಗಿದೆ. ಡಿಫೆಂಡರ್ ಎಸ್‌ಯುವಿಯಲ್ಲಿ ದೊಡ್ಡ ಬಂಪರ್ ನೀಡಲಾಗಿದೆ.ಬಾನೆಟ್‌ನಲ್ಲಿರುವ ರೇಖೆಗಳು ಹಾಗೂ ಕ್ರೀಸ್‌ಗಳು ಈ ಎಸ್‌ಯುವಿಗೆ ಹೆಚ್ಚು ಸ್ಟಾನ್ಸ್ ನೀಡುತ್ತವೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯಲ್ಲಿ 2.0 ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಪಿ 300 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಸುಮಾರು 300 ಬಿ‌ಹೆಚ್‌ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 3.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 4000 ಆರ್‌ಪಿಎಂನಲ್ಲಿ 298 ಬಿಹೆಚ್‌ಪಿ ಪವರ್ ಹಾಗೂ 1500 - 2500 ಆರ್‌ಪಿಎಂ ನಡುವೆ 650 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, May 31, 2024, 18:56 [IST]
English summary
Famous youtuber bhuvan bam brought land rover defender suv
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+