ಮತ್ತೊಬ್ಬರ ದಂಡವನ್ನು ಪಾವತಿಸಿದ ಕಾರು ಮಾಡಿಫೈ ಕಂಪನಿ

ಇಸುಝು ವಿ-ಕ್ರಾಸ್ ಭಾರತದಲ್ಲಿ ಮಾರಾಟವಾಗುವ ಅತ್ಯಂತ ಜನಪ್ರಿಯ ಪಿಕಪ್ ಟ್ರಕ್‌ಗಳಲ್ಲಿ ಒಂದಾಗಿದೆ. ಇಸುಝು ವಿ-ಕ್ರಾಸ್ ದೇಶಿಯ ಮಾರುಕಟ್ಟೆಯಲ್ಲಿ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ.

ಮತ್ತೊಬ್ಬರ ದಂಡವನ್ನು ಪಾವತಿಸಿದ ಕಾರು ಮಾಡಿಫೈ ಕಂಪನಿ

ಅನೇಕ ಆಫ್-ರೋಡ್ ಪ್ರಿಯರು ಇಸುಝು ವಿ-ಕ್ರಾಸ್ ಪಿಕಪ್-ಟ್ರಕ್ ಅನ್ನು ಹೊಂದಿದ್ದಾರೆ. ಇಸುಝು ವಿ-ಕ್ರಾಸ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಫೈ ಮಾಡಲಾಗುತ್ತದೆ. ಕೇರಳದ ಅಬಿನ್ ಬಾಬ್ಸ್ ಅಬ್ರಹಾಂ ಭಾರೀ ಪ್ರಮಾಣದಲ್ಲಿ ಮಾಡಿಫೈಗೊಂಡ ಇಸುಝು ವಿ-ಕ್ರಾಸ್ ಪಿಕಪ್-ಟ್ರಕ್ ಅನ್ನು ಹೊಂದಿದ್ದಾರೆ.

ಮತ್ತೊಬ್ಬರ ದಂಡವನ್ನು ಪಾವತಿಸಿದ ಕಾರು ಮಾಡಿಫೈ ಕಂಪನಿ

ಅಬಿನ್ ಬಾಬ್ಸ್ ಅಬ್ರಹಾಂ ಅವರ ಇಸುಝು ವಿ-ಕ್ರಾಸ್ ಪಿಕಪ್-ಟ್ರಕ್ ಇತ್ತೀಚೆಗೆ ಸುದ್ದಿಯಾಗಿತ್ತು. ಭಾರೀ ಪ್ರಮಾಣದಲ್ಲಿ ಮಾಡಿಫೈಗೊಂಡ ಈ ಪಿಕಪ್ ಟ್ರಕ್ ಗೆ ಕೇರಳದ ಸಾರಿಗೆ ಇಲಾಖೆ ಅಧಿಕಾರಿಗಳು ರೂ.48,000ಗಳ ದಂಡ ವಿಧಿಸಿದ್ದರು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮತ್ತೊಬ್ಬರ ದಂಡವನ್ನು ಪಾವತಿಸಿದ ಕಾರು ಮಾಡಿಫೈ ಕಂಪನಿ

ಅಬಿನ್ ಬಾಬ್ಸ್ ಅಬ್ರಹಾಂ ಅವರ ಇಸುಝು ವಿ-ಕ್ರಾಸ್ ಪಿಕಪ್-ಟ್ರಕ್ ಕೇರಳದಲ್ಲಿ ಮಾತ್ರವಲ್ಲದೇ ಭಾರತದಾದ್ಯಂತ ಜನಪ್ರಿಯವಾಗಿದೆ. ವಾಹನಗಳ ಮಾಡಿಫೈನಲ್ಲಿ ಆಸಕ್ತಿ ಹೊಂದಿರುವ ಜನರು ಇದನ್ನು ಇಷ್ಟಪಡುತ್ತಾರೆ.

ಮತ್ತೊಬ್ಬರ ದಂಡವನ್ನು ಪಾವತಿಸಿದ ಕಾರು ಮಾಡಿಫೈ ಕಂಪನಿ

ಸಾರಿಗೆ ಇಲಾಖೆ ಅಧಿಕಾರಿಗಳು ವಾಹನದ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಂತೆ, ಅನೇಕ ವಾಹನ ಉತ್ಸಾಹಿಗಳು ವಾಹನ ಮಾಲೀಕರಾದ ಅಬಿನ್ ಬಾಬ್ಸ್ ಅಬ್ರಹಾಂ ಅವರನ್ನು ಸಂಪರ್ಕಿಸಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮತ್ತೊಬ್ಬರ ದಂಡವನ್ನು ಪಾವತಿಸಿದ ಕಾರು ಮಾಡಿಫೈ ಕಂಪನಿ

ಅವರಲ್ಲಿ ಒಬ್ಬರು ಅಬಿನ್ ಬಾಬ್ಸ್ ರವರಿಗೆ ವಿಧಿಸಿದ್ದ ದೊಡ್ಡ ಮೊತ್ತದ ದಂಡವನ್ನು ತಾವೇ ಪಾವತಿಸಿದ್ದಾರೆ. ಹೀಗೆ ಇನ್ನೊಬ್ಬರಿಗೆ ವಿಧಿಸಿದ ದಂಡವನ್ನು ಪಾವತಿಸಿದವರ ಹೆಸರು ಎಸ್‌ವಿ ಪರ್ಫಾಮೆನ್ಸ್ ಸೆಂಟರ್. ಎಸ್‌ವಿ ಪರ್ಫಾಮೆನ್ಸ್ ಸೆಂಟರ್ ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಜನಪ್ರಿಯ ವಾಹನ ಮಾರ್ಪಾಡು ಕಂಪನಿಯಾಗಿದೆ.

ಮತ್ತೊಬ್ಬರ ದಂಡವನ್ನು ಪಾವತಿಸಿದ ಕಾರು ಮಾಡಿಫೈ ಕಂಪನಿ

ಎಸ್‌ವಿ ಪರ್ಫಾಮೆನ್ಸ್ ಸೆಂಟರ್, ಅಬಿನ್ ಬಾಬ್ಸ್ ಅಬ್ರಹಾಂಗೆ ವಿಧಿಸಿಲಾದ ರೂ.48,000ಗಳ ದಂಡದಲ್ಲಿ ರೂ.40,000ಗಳನ್ನು ಪಾವತಿಸಿದೆ. ಈ ಮಾಹಿತಿಯನ್ನು ಸ್ವತಃ ಅಬಿನ್ ಬಾಬ್ಸ್ ಅಬ್ರಹಾಂ ತಮ್ಮ ಮಾಹಿತಿಯನ್ನು ತಮ್ಮ ಫೇಸ್‌ಬುಕ್ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮತ್ತೊಬ್ಬರ ದಂಡವನ್ನು ಪಾವತಿಸಿದ ಕಾರು ಮಾಡಿಫೈ ಕಂಪನಿ

ಮತ್ತೊಬ್ಬರಿಗೆ ದಂಡ ವಿಧಿಸಿದರೆ ಖುಷಿ ಪಡುವ ಜನರ ಮಧ್ಯೆ ಮತ್ತೊಬ್ಬರ ದಂಡವನ್ನು ಪಾವತಿಸಿರುವ ಎಸ್‌ವಿ ಪರ್ಫಾಮೆನ್ಸ್ ಸೆಂಟರ್ ನ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ರೀತಿಯ ಘಟನೆಯ ಬಗ್ಗೆ ಹಿಂದೆಂದೂ ವರದಿಯಾಗಿರಲಿಲ್ಲ.

ಮತ್ತೊಬ್ಬರ ದಂಡವನ್ನು ಪಾವತಿಸಿದ ಕಾರು ಮಾಡಿಫೈ ಕಂಪನಿ

ಸಾರಿಗೆ ಇಲಾಖೆ ಅಧಿಕಾರಿಗಳು ದಂಡ ವಿಧಿಸಿರುವ ಇಸುಝು ವಿ-ಕ್ರಾಸ್ ಪಿಕಪ್ ಟ್ರಕ್‌ನಲ್ಲಿ ದೊಡ್ಡ ಗಾತ್ರದ ಆಫ್ಟರ್ ಮಾರ್ಕೆಟ್ ಟಯರ್‌ಗಳನ್ನು ಅಳವಡಿಸಲಾಗಿದೆ. ಈ ವಾಹನದಲ್ಲಿ ಮಾಡಿಲಾಗಿರುವ ಎಲ್ಲಾ ಮಾರ್ಪಾಡುಗಳು ಈ ವಾಹನಕ್ಕೆ ದೈತ್ಯ ಲುಕ್ ನೀಡುತ್ತವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮತ್ತೊಬ್ಬರ ದಂಡವನ್ನು ಪಾವತಿಸಿದ ಕಾರು ಮಾಡಿಫೈ ಕಂಪನಿ

ಭಾರತದಲ್ಲಿ ವಾಹನಗಳ ಮಾರ್ಪಾಡು ಕಾನೂನುಬಾಹಿರ. ಆದರೂ ಸಹ ಅನೇಕ ಕಾರು ಉತ್ಸಾಹಿಗಳು ತಮ್ಮ ವಾಹನಗಳನ್ನು ವಿಭಿನ್ನ ರೀತಿಯಲ್ಲಿ ಮಾರ್ಪಡಿಸುವುದನ್ನು ಮುಂದುವರಿಸಿದ್ದಾರೆ.

Most Read Articles

Kannada
English summary
Fan of Isuzu V Cross Pickup Truck pays fine amount. Read in Kannada.
Story first published: Friday, September 25, 2020, 15:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X