ರೈತನ ಮಗನ ಆವಿಷ್ಕಾರ: 1 ಲೀಟರ್ ಇಂಧನ ದಹಿಸಿದರೆ 250 ಕಿ.ಮೀ ಓಡುತ್ತೆ AI ಹೈಡ್ರೋಜನ್ ಕಾರು, ಮೆಚ್ಚುಗೆ

ಮಹಾರಾಷ್ಟ್ರದ ರೈತನ ಮಗನೊಬ್ಬ ಕಳೆದ ವರ್ಷ ತನ್ನ ಮನೆಯಲ್ಲಿಯೇ ಸಂಪೂರ್ಣ ಹೈಡ್ರೋಜನ್ ಚಾಲಿತ (Hydrogen - Powered) ಕಾರನ್ನು ತಯಾರಿಸುವ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದರು. ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಆಕರ್ಷಕ ವಿನ್ಯಾಸದಿಂದ ಈ ಕಾರು ಎಲ್ಲರ ಗಮನ ಸೆಳೆದಿತ್ತು.

ಈಗ, ಸರಿ ಸುಮಾರು 1 ವರ್ಷದ ನಂತರ ಹೈಡ್ರೋಜನ್ ಕಾರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Deputy Chief Minister, Devendra Fadnavis) ಅವರನ್ನು ಆಕರ್ಷಿಸಿದೆ. ಇತ್ತೀಚೆಗೆ ಈ ಹೈಡ್ರೋಜನ್ ಕಾರನ್ನು ತಯಾರಿಸಿದ ಚಂದ್ರಾಪುರದ ಹರ್ಷಲ್ ನಕ್ಷಾನೆ ಅವರನ್ನು ಭೇಟಿ ಮಾಡಿದ್ದ ಫಡ್ನವಿಸ್, ಕಾರನ್ನು ಸಹ ಆಸಕ್ತಿಯಿಂದ ವೀಕ್ಷಿಸಿದ್ದರು.

ರೈತನ ಮಗನ ಆವಿಷ್ಕಾರ: 1 ಲೀಟರ್ ಇಂಧನ ದಹಿಸಿದರೆ 250 ಕಿ.ಮೀ ಓಡುತ್ತೆ AI ಹೈಡ್ರೋಜನ್ ಕಾರು, ಮೆಚ್ಚುಗೆ

ಈ ಬಗ್ಗೆ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರು, ಮನೆಯಲ್ಲಿಯೇ ಕೃತಕ ಬುದ್ದಿಮತ್ತೆ (AI) ಚಾಲಿತ ಹಸಿರು - ಬಣ್ಣದ ಹೈಡ್ರೋಜನ್ ಕಾರು ತಯಾರಿಸಿರುವ ಹರ್ಷಲ್ ನಕ್ಷಾನೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದ್ದರು. ಜೊತೆಗೆ ಹೈಡ್ರೋಜನ್ ಚಾಲಿತ ಕಾರನ್ನು ಪರಿಶೀಲಿಸುತ್ತಿರುವ ಹಲವು ಚಿತ್ರಗಳನ್ನು ಕೂಡ ಶೇರ್ ಮಾಡಿದ್ದರು.

ಹರ್ಷಲ್ ಅವರು ತಯಾರಿಸಿರುವ ಈ ಕಾರು, ಪ್ರಸ್ತುತ ಉತ್ಪಾದನಾ ಹಂತದಲಿದೆ. ಇದು ಹೈಡ್ರೋಜನ್‌ (Hydrogen) ಚಾಲಿತ ಮಾದರಿಯಾಗಿರುವುದರಿಂದ ಕೆಲವೇ 1 ಲೀಟರ್ ( ಹೈಡ್ರೋಜನ್‌) ಇಂಧನ ದಹಿಸಿದರೆ, 250 ಕಿಲೋಮೀಟರ್ ದೂರವನ್ನು ಕ್ರಮಿಸುವಂತೆ ಅಭಿವೃದ್ಧಿಪಡಿಸಲಾಗಿದ್ದು, 200 km/h ಟಾಪ್ ಸ್ವೀಡ್ ಹೊಂದಿದೆ. ಈ ಕಾರಿನ ತಯಾರಿಕೆಗೆ ಅವರು, 25 ಲಕ್ಷ ರೂಪಾಯಿ ವ್ಯಯಿಸಿದ್ದಾರೆ ಎಂದು ವರದಿಯಾಗಿದೆ.

ರೈತನ ಮಗನ ಆವಿಷ್ಕಾರ: 1 ಲೀಟರ್ ಇಂಧನ ದಹಿಸಿದರೆ 250 ಕಿ.ಮೀ ಓಡುತ್ತೆ AI ಹೈಡ್ರೋಜನ್ ಕಾರು, ಮೆಚ್ಚುಗೆ

ಕೃತಕ ಬುದ್ದಿಮತ್ತೆ (AI) ಮೂಲಕ ಈ ಹೈಡ್ರೋಜನ್ ಕಾರನ್ನು ನಿಯಂತ್ರಿಸಬಹುದಾಗಿದ್ದು, ಸ್ವಯಂ ಚಾಲನಾ (self - driving) ವೈಶಿಷ್ಟ್ಯವನ್ನು ಹೊಂದಿದೆ. ಇದರೊಟ್ಟಿಗೆ ಆಕರ್ಷಕ ಹಸಿರು (Green) ಬಣ್ಣದ ಆಯ್ಕೆಯನ್ನು ಪಡೆದಿದ್ದು, ಮನೆಯಲ್ಲಿ ತಯಾರಿಸಿದರೂ ಕತ್ತರಿ ಆಕಾರದ ಬಾಗಿಲು (scissor doors) ಹಾಗೂ ಸನ್‌ರೂಫ್ (sunroof) ಸೇರಿದಂತೆ ವಿವಿಧ ಫೀಚರ್ಸ್ ಒಳಗೊಂಡಿದೆ.

ಈ ಕಾರನ್ನು ದೊಡ್ಡಮಟ್ಟದಲ್ಲಿ ಉತ್ಪಾದನೆಗೆ ಮಾಡಲು ಹರ್ಷಲ್ ಅವರ ತಂಡ ಯೋಜಿಸಿದೆ. ಭಾರೀ ಸಂಖ್ಯೆಯಲ್ಲಿ ಈ ಹೈಡ್ರೋಜನ್ ಚಾಲಿತ ಕಾರುಗಳನ್ನು ತಯಾರಿಸಿದರೆ, ಅದರ ಬೆಲೆಯೂ ಕಡಿಮೆಯಾಗುತ್ತದೆ ಎಂದು ಹರ್ಷಲ್ ಹೇಳುತ್ತಾರೆ. ಸದ್ಯ, ಇದರ ದರ ಸಾಕಷ್ಟು ಹೆಚ್ಚಿಸಿದೆ. ಇದು ಅಭಿವೃದ್ಧಿಯ ಹಂತದಲ್ಲಿದ್ದು, ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಕುರಿತು ಯಾವುದೇ ವಿವರಗಳು ಲಭ್ಯವಿಲ್ಲ.

ರೈತನ ಮಗನ ಆವಿಷ್ಕಾರ: 1 ಲೀಟರ್ ಇಂಧನ ದಹಿಸಿದರೆ 250 ಕಿ.ಮೀ ಓಡುತ್ತೆ AI ಹೈಡ್ರೋಜನ್ ಕಾರು, ಮೆಚ್ಚುಗೆ

ಸರ್ಕಾರ ನಿಗದಿಪಡಿಸಿರುವ ಎಲ್ಲ ಮಾನದಂಡಗಳನ್ನು ಪೂರೈಸಿ, ಈ ಕಾರು, ರಸ್ತೆಗೆ ಬಂದರೆ, ಹಲವು ಹೊಸ ದಾಖಲೆಗಳಿಗೆ ಸಾಕ್ಷಿಯಾಗಲಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ದೂರ ಪ್ರಯಾಣಿಸುವುದರಿಂದ ಬಹುತೇಕರ ನೆಚ್ಚಿನ ಕಾರು ಇದಾಗಬಹುದು. ಜೊತೆಗೆ, ಇದು ಕೃತಕ ಬುದ್ದಿಮತ್ತೆ (AI) ಚಾಲಿತ ಕಾರಾಗಿದ್ದು, ಬಹುತೇಕರು ತಮ್ಮ ಆಯ್ಕೆಯ ವಾಹನವಾಗಿ ಪರಿಗಣಿಸಬಹುದು. ಎಲ್ಲದಕ್ಕೂ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, November 7, 2023, 13:15 [IST]
English summary
Farmers son invention ai powered hydrogen car runs 250 km on 1 liter fuel appreciate
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+