ವಿಶ್ವದ ಅತಿ ವೇಗದ ಯುದ್ಧ ವಿಮಾನ 'ಬ್ಲ್ಯಾಕ್ ಬರ್ಡ್'
ಜೀವನದಲ್ಲಿ ಎಂದಾದರೂ ಒಂದು ದಿನ ವಿಮಾನಯಾನ ಕೈಗೊಳ್ಳುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಅಷ್ಟಕ್ಕೂ ಜಗತ್ತಿನ ಅತಿ ವೇಗದ ಯುದ್ಧ ವಿಮಾನದಲ್ಲಿ ಸಂಚರಿಸಲು ನಿಮಗಿಷ್ಟವೇ? ಬಿಟ್ಟುಬಿಡಿ ನಿಮ್ಮ ಆಸೆಯನ್ನು ಈಡೇರಿಸುವುದಕ್ಕೆ ಸದ್ಯಕ್ಕಂತೂ ಸಾಧ್ಯವೇ ಇಲ್ಲ.
ಯಾಕೆಂದರೆ ಜಗತ್ತಿನ ಅತಿ ವೇಗದ ಯುದ್ಧ ವಿಮಾನ 'ಬ್ಲ್ಯಾಕ್ ಬರ್ಡ್' ಉತ್ಪಾದನೆ ಸದ್ಯ ನಿಲುಗಡೆಗೊಂಡಿದೆ. ಆದರೆ 1976ನೇ ಇಸವಿಯಲ್ಲಿ ಜಗತ್ತಿನ ಅತಿ ವೇಗದೂತ ವಿಮಾನ ಪಟ್ಟ ಕಟ್ಟಿಕೊಂಡಿದ್ದ ಈ ಲಾಕ್‌ಹೀಡ್ ಎಸ್‌ಆರ್-71 ಬ್ಲ್ಯಾಕ್ ಬರ್ಡ್ ಪ್ರತಿ ಗಂಟೆಗೆ 3,529.6 ಕೀ.ಮೀ. ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
ಅಂದರೆ ಪ್ರತಿ ನಿಮಿಷಕ್ಕೆ 58.83 ಕೀ.ಮೀ. ವೇಗದಲ್ಲಿ ಚಲಿಸಲಿದೆ. 1964ನೇ ಇಸವಿಯಿಂದ 1998ರ ಇಸವಿಯ ವರೆಗೆ ಅಮೆರಿಕ ವಾಯುಪಡೆ ಸೇವೆ ಸಲ್ಲಿಸಿದ್ದ ಈ ಯುದ್ಧ ವಿಮಾನದ ಕುರಿತು ಹೆಚ್ಚು ತಿಳಿದುಕೊಳ್ಳಲು ಫೋಟೊ ಫೀಚರ್ ಕ್ಲಿಕ್ಕಿಸಿರಿ...

ಇದುವರೆಗೆ 30ರಷ್ಟು ಎಸ್‌ಆರ್-71 ಬ್ಲ್ಯಾಕ್ ಬರ್ಡ್ ವಿಮಾನಗಳನ್ನಷ್ಟೇ ನಿರ್ಮಿಸಲಾಗಿದೆ. ಈ ಪೈಕಿ 12 ವಿಮಾನಗಳು ಅಪಘಾತದಲ್ಲಿ ನಾಮವೇಷಗೊಂಡಿದ್ದವು. ಇದೇ ಸುರಕ್ಷತಾ ಕಾರಣಗಳಿಗೋಸ್ಕರ ಬಳಿಕ ಈ ವಿಮಾನವನ್ನು ನಿಲುಗಡೆಗೊಳಿಸಲು ನಿರ್ಧರಿಸಲಾಯಿತು.

ನಿಮ್ಮ ಮಾಹಿತಿಗಾಗಿ, 1976ನೇ ಇಸವಿಯಿಂದ ಈ ವರೆಗೆ ಜಗತ್ತಿನ ಅತಿ ವೇಗದ ವಿಮಾನ ಎಂಬ ಹೆಗ್ಗಳಿಕೆಗೆ ಬ್ಲ್ಯಾಕ್ ಬರ್ಡ್ ಪಾತ್ರವಾಗಿದೆ.

ಅನೇಕ ಸಂಶೋಧನಾ ಪರಿಕಲ್ಪನೆಗಳನ್ನು ರಚಿಸಿದ್ದ ಡಿಸೈನರ್ ಜಾನ್ಸನ್, ಬ್ಲ್ಯಾಕ್ ಬರ್ಡ್ ವಿನ್ಯಾಸದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.

ರಾತ್ರಿ ವೇಳೆಗಳಲ್ಲಿ ಆಗೋಚರವಾಗಿ ಸಾಗುವ ನಿಟ್ಟಿನಲ್ಲಿ ಕಪ್ಪು ತರಹನೇ ಇರುವ ಕಡು ನೀಲಿ ಬಣ್ಣವನ್ನು ಬಳಿಯಲಾಗಿತ್ತು. ಇದೇ ಕಾರಣಕ್ಕಾಗಿ ಬ್ಲ್ಯಾಕ್ ಬರ್ಡ್ ಹೆಸರು ಇಡಲಾಗಿತ್ತು.

ಸಾಮಾನ್ಯವಾಗಿ ವಿಮಾನ ನಿರ್ಮಾಣ ವೇಳೆ ಟೈಟಾನಿಯಂ ಪದಾರ್ಥವನ್ನು ನಿಯಮಿತವಾಗಿ ಬಳಸಲಾಗುತ್ತದೆ. ಆದರೆ ಇದಕ್ಕಿಂತ ವಿಭಿನ್ನವಾಗಿ ಬ್ಲ್ಯಾಕ್ ಬರ್ಡ್ ನಿರ್ಮಾಣದಲ್ಲಿ ಶೇಕಡಾ 85ರಷ್ಟು ಟೈಟಾನಿಯಂ ಬಳಸಲಾಗಿದ್ದು, ಉಳಿದ ಭಾಗಗಳನ್ನು ಸಮ್ಮಿಶ್ರ ವಸ್ತುಗಳಿಂದ ತಯಾರಿಸಲಾಗಿದೆ.

80,000 ಫೀಟ್ ಎತ್ತರದಲ್ಲಿ ಹಾರಾಟ ನಡೆಸುವುದರಿಂದಲೇ ಸಹಜವಾಗಿಯೇ ವಿಮಾನ ಸಿಬ್ಬಂದಿಗಳು ಸಾಧಾರಣ ಮಾಸ್ಕ್ ಬಳಸುವಂತಿಲ್ಲ. ಅವರಿಗೆ ಗಗನ ಯಾತ್ರಿಗಳಿಗಿರುವಂತೆಯೇ ಪ್ರತ್ಯೇಕವಾಗಿ ಸಜ್ಜೀಕರಿಸಲಾದ ಆಮ್ಲಜನಕ ಕವಚಗಳನ್ನು ರಚಿಸಲಾಗಿತ್ತು.

ಇದರಲ್ಲಿ ಪ್ರಾಂಟ್ ಆಂಡ್ ವೈಟ್ನಿ ಜೆ58-ಪಿ4 ಎಂಜಿನ್ ಆಳವಡಿಸಲಾಗಿದೆ. ಇದು ವಿಮಾನಕ್ಕೆ ಗರಿಷ್ಠ ವೇಗ ಒದಗಿಸುವಲ್ಲಿ ಯಶಸ್ವಿ ಕಂಡಿದೆ.

1964ನೇ ಇಸವಿಯ ಡಿಸೆಂಬರ್ 22ರಂದು ಕ್ಯಾಲಿಫೋರ್ನಿಯಾದಲ್ಲಿ ಬ್ಲ್ಯಾಕ್ ಬರ್ಡ್ ಮೊದಲ ಹಾರಾಟ ಯಶಸ್ವಿಯಾಗಿ ನಡೆಸಿತ್ತು.

ಇದು ನ್ಯೂಯಾರ್ಕ್ ಹಾಗೂ ಲಂಡನ್ ನಡುವಣ 5,646 ಕೀ.ಮೀ ದೂರವನ್ನು ಕೇವಲ 1 ಗಂಟೆ 54 ನಿಮಿಷ ಹಾಗೂ 56.4 ಸೆಕೆಂಡುಗಳಲ್ಲಿ ಕ್ರಮಿಸಿರುವ ದಾಖಲೆಯನ್ನು ಹೊಂದಿದೆ. 1974 ಸೆಪ್ಟೆಂಬರ್ 1ರಂದು ಈ ದಾಖಲೆ ರಚಿಸಲಾಗಿತ್ತು.

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ


Click it and Unblock the Notifications








