ಅಪ್ಪನ ಪ್ರೀತಿ: ಮಗಳಿಗಾಗಿ ಮಿನಿ ಬೈಕ್ ನಿರ್ಮಿಸಿ ಪೊಲೀಸರನ್ನು ಅಚ್ಚರಿಗೊಳಿಸಿದ ಅಪ್ಪ

ಭಾರತದಲ್ಲಿ, ಹಲವಾರು ಜನಪ್ರಿಯ ಕಸ್ಟಮೈಸೇಶನ್ ವರ್ಕ್‌ಶಾಪ್ ಗಳಿವೆ. ಕಾರು ಮಾಲೀಕರ ಇಷ್ಟದಂತೆ ವಾಹನಗಳನ್ನು ಕಸ್ಟಮೈಸೇಶನ್ ಮಾಡುತ್ತಾರೆ. ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ವರ್ಕ್‌ಶಾಪ್ ನಲ್ಲಿ ಕಾರುಗಳನ್ನು ನಿರ್ಮಿಸುತ್ತಿರುವ ವೀಡಿಯೊಗಳನ್ನು ನಾವು ಹಲವು ಬಾರಿ ಸೋಶಿಯಲ್ ಮೀಡಿಯಾಗಳಲ್ಲಿ ನೋಡಿದ್ದೇವೆ. ಮಕ್ಕಳಿಗಾಗಿ ಪುಟ್ಟ ಕಾರುಗಳು ಅಥವಾ ಬೈಕುಗಳನ್ನು ತಯಾರಿಸುವುದನ್ನು ನಾವು ನೋಡುತ್ತೇವೆ.

ಇತ್ತೀಚೆಗೆ, ಒಬ್ಬ ವ್ಯಕ್ತಿ ತನ್ನ ಮಗಳಿಗಾಗಿ ಮಿನಿ ಬುಲೆಟ್ ಬೈಕ್ ಅನ್ನು ನಿರ್ಮಿಸಿ ಅದನ್ನು ರಸ್ತೆಯಲ್ಲಿ ಸವಾರಿ ಮಾಡಲು ತೆಗೆದುಕೊಂಡು, ಪೊಲೀಸರ ಪ್ರತಿಕ್ರಿಯೆಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾನೆ. ಈ ವಿಡಿಯೋವನ್ನು ರಮ್ಮಿ ರೈಡರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ನಿರ್ದಿಷ್ಟ ವೀಡಿಯೊದಲ್ಲಿ, ವ್ಲಾಗರ್ ತನ್ನ ಮಗಳಿಗಾಗಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಹೋಲುವ ಮಿನಿ ಬೈಕ್ (Mini Bike) ಅನ್ನು ತಯಾರಿಸಿದ್ದಾರೆ.

 Mini Bike For His Daughter

ವೀಡಿಯೊ ಪ್ರಕಾರ, ಅವರು ಈ ಬೈಕನ್ನು ತಮ್ಮದೇ ಗ್ಯಾರೇಜ್‌ನಲ್ಲಿ ನಿರ್ಮಿಸಿದ್ದಾರೆ. ಇದು ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ನ ಸ್ಕೇಲ್ಡ್-ಡೌನ್ ಆವೃತ್ತಿಯಾಗಿದ್ದು, ಹೋಂಡಾ ಆಕ್ಟಿವಾದಿಂದ ಎಂಜಿನ್ ಅನ್ನು ಅಳವಡಿಸಿದ್ದಾರೆ. ವೀಡಿಯೊದಲ್ಲಿ, ವ್ಲಾಗರ್ ಜನರ ಪ್ರತಿಕ್ರಿಯೆಗಳನ್ನು ತಿಳಿಯಲು ಬೈಕಿನಲ್ಲಿ ಸಾರ್ವಜನಿಕ ರಸ್ತೆಗೆ ತೆಗೆದುಕೊಂಡು ಹೋಗುತ್ತಾರೆ. ಸಾರ್ವಜನಿಕ ರಸ್ತೆಯಲ್ಲಿ ಈ ಬೈಕ್ ಅನ್ನು ಓಡಿಸುವುದು ಕಾನೂನುಬಾಹಿರವಾಗಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

ಈ ಕಸ್ಟಮ್-ನಿರ್ಮಿತ ಬೈಕು ನೋಂದಣಿ ಸಂಖ್ಯೆಯನ್ನು ಹೊಂದಿಲ್ಲ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಸವಾರಿ ಮಾಡುವುದು ಕಾನೂನುಬಾಹಿರವಾಗಿದೆ. ವ್ಲಾಗರ್ ತನ್ನ ಮನೆಯ ಸುತ್ತಲಿನ ಕಿರಿದಾದ ರಸ್ತೆಗಳಲ್ಲಿ ಬೈಕು ಓಡಿಸುತ್ತಾನೆ ಮತ್ತು ನಂತರ ಮುಖ್ಯ ರಸ್ತೆಗೆ ಹೋಗುತ್ತಾನೆ. ಮತ್ತೊಂದು ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ನಲ್ಲಿ ಅವರ ಸ್ನೇಹಿತನೊಂದಿಗೆ ಅವರು ದೆಹಲಿಯ ರಸ್ತೆಗಳಲ್ಲಿ ಸವಾರಿ ಮಾಡುತ್ತಾರೆ.

 Mini Bike For His Daughter

ಬೈಕ್ ತನ್ನ ಗಾತ್ರದ ಕಾರಣದಿಂದ ಗಮನ ಸೆಳೆಯುತ್ತದೆ, ಅದರ ಬಗ್ಗೆ ಕೇಳಲು ಅನೇಕ ಜನರು ಸವಾರರ ಬಳಿಗೆ ಬರುತ್ತಾರೆ. ಕೆಲವರು ಸಂಭಾಷಣೆಯಲ್ಲಿ ತೊಡಗಿದರೆ ಇನ್ನು ಕೆಲವರು ಬೈಕನ್ನು ನೋಡಿ ಉತ್ಸುಕರಾಗಿರುತ್ತಾರೆ. ದಟ್ಟನೆಯ ರಸ್ತೆಯನ್ನು ದಾಟಿ ಬರುವಾಗ ಒಂದೆರಡು ಪೊಲೀಸರು ಅಲ್ಲಿ ನಿತ್ತಿರುತ್ತಾರೆ. ವ್ಲಾಗರ್ ಈ ಮಿನಿ ಬೈಕ್ ಬಗ್ಗೆ ಅವರ ಅಭಿಪ್ರಾಯವನ್ನು ಕೇಳುತ್ತಾರೆ. ಆಶ್ಚರ್ಯಕರವಾಗಿ, ಪೊಲೀಸರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ.

ಈ ಮಿನಿ ಬೈಕ್ ತಯಾರಿಕೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ತನ್ನ 10 ವರ್ಷದ ಮಗಳಿಗಾಗಿ ತನ್ನ ಗ್ಯಾರೇಜ್‌ನಲ್ಲಿ ತಾನೇ ಮಿನಿ ಬೈಕ್ ಅನ್ನು ತಯಾರಿಸಿರುವುದಾಗಿ ಪೊಲೀಸರಿಗೆ ವಿವರಿಸುತ್ತಾ, ಸವಾರನು ರಸ್ತೆಯಲ್ಲಿ ನೋಡುಗರ ಗಮನಸೆಳೆದಿದ್ದಾನೆ. ಸ್ಪಷ್ಟ ಕಾನೂನು ಕಾರಣಗಳಿಗಾಗಿ ತನ್ನ ಮಗಳು ಅದನ್ನು ವಸತಿ ಪ್ರದೇಶದೊಳಗೆ ಮಾತ್ರ ಬಳಸುತ್ತಾಳೆ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಬಳಸುವುದಿಲ್ಲ ಎಂದು ಅವರು ಭರವಸೆ ನೀಡುತ್ತಾರೆ.

 Mini Bike For His Daughter

ಪೊಲೀಸರು ಬೈಕ್ ಅನ್ನು ಪರಿಶೀಲಿಸುತ್ತಾರೆ ಮತ್ತು ಸರಿಯಾದ ನೋಂದಣಿ ಇಲ್ಲದೆ ರಸ್ತೆಯಲ್ಲಿ ಸವಾರಿ ಮಾಡದಂತೆ ಸವಾರರಿಗೆ ಎಚ್ಚರಿಕೆ ನೀಡುತ್ತಾರೆ. ಅವರು ಸ್ಕೂಟರ್ ಅನ್ನು ಪರೀಕ್ಷಿಸುವ ಬಗ್ಗೆ ಅವರ ವಿವರಣೆಯನ್ನು ಅಂಗೀಕರಿಸುತ್ತಾರೆ ಮತ್ತು ಅದಕ್ಕೆ ತಕ್ಕಂತೆ ಸಲಹೆ ನೀಡುತ್ತಾರೆ. ಅದರ ವಿಶೇಷತೆಗಳ ಬಗ್ಗೆ ವಿಚಾರಿಸಿದಾಗ, ವ್ಲಾಗರ್ ಬೈಕು ಆಕ್ಟಿವಾದಿಂದ 110-ಸಿಸಿ ಎಂಜಿನ್ ಅನ್ನು ಅಳವಡಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಮಿನಿ ಬೈಕಿನಲ್ಲಿ ಏವಿಯೇಟರ್‌ನಿಂದ ಡಿಸ್ಕ್ ಬ್ರೇಕ್ ಮತ್ತು ಇನ್ನೊಂದು ಬೈಕಿನಿಂದ ಸಸ್ಪೆನ್ಶನ್ ಅನ್ನು ಅಳವಡಿಸಿದ್ದಾರೆ. ಹೆಚ್ಚುವರಿಯಾಗಿ, ತನ್ನ ಮಗಳು ಬೈಕ್‌ಗೆ ಪಿಂಕ್ ಪೇಂಟ್ ಅನ್ನು ನೀಡಿರುವ ಕಾರಣ "ಪಿಂಕಿ" ಎಂದು ಹೆಸರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಮಿನಿ ಬೈಕ್ 20 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವQರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, November 22, 2023, 16:55 [IST]
English summary
Father build mini bike for his daughter details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+