ಮೊದಲ ಬಾರಿ ಕಾರು ಡ್ರೈವ್ ಮಾಡಿದ ಮಗಳಿಗೆ ತಂದೆ ಸಾಥ್ ನೀಡಿದ್ದು ಹೀಗೆ

ಶಾಲೆಗೆ ಹೋಗುವ ಮೊದಲ ದಿನವಾಗಲಿ, ಕಾಲೇಜಿಗೆ ಹೋಗುವ ಮೊದಲ ದಿನವಾಗಲಿ ಅಥವಾ ಕೆಲಸಕ್ಕೆ ಹೋಗುವ ಮೊದಲ ದಿನವಾಗಲಿ ಆ ನೆನಪುಗಳು ಸದಾ ನಮ್ಮನ್ನು ಕಾಡುತ್ತವೆ. ನಾವು ಮೊದಲ ಬಾರಿ ಮಾಡುವ ಕೆಲಸಗಳು ನಮ್ಮ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತವೆ.

ಮೊದಲ ಬಾರಿ ಕಾರು ಡ್ರೈವ್ ಮಾಡಿದ ಮಗಳಿಗೆ ತಂದೆ ಸಾಥ್ ನೀಡಿದ್ದು ಹೀಗೆ

ಮೊದಲ ಬಾರಿಗೆ ಕಾರು ಚಾಲನೆ ಮಾಡುವುದು ಸಹ ನೆನಪಿನಲ್ಲಿ ಉಳಿಯುತ್ತದೆ. ಮೊದಲ ಬಾರಿಗೆ ಹುಡುಗಿಯೊಬ್ಬಳು ಕಾರು ಚಾಲನೆ ಮಾಡಿದಾಗ ಆಕೆಯ ತಂದೆ ಕ್ರ್ಯಾಶ್ ಟೆಸ್ಟ್'ನಲ್ಲಿ ಬಳಸಲಾಗುವ ಡಮ್ಮೀಯಂತೆ ಡ್ರೆಸ್ ಧರಿಸಿ ಆಕೆಗೆ ಸಾಥ್ ನೀಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೊದಲ ಬಾರಿ ಕಾರು ಡ್ರೈವ್ ಮಾಡಿದ ಮಗಳಿಗೆ ತಂದೆ ಸಾಥ್ ನೀಡಿದ್ದು ಹೀಗೆ

ಆ ಹುಡುಗಿ ಚಾಲಕನ ಸೀಟಿನಲ್ಲಿ ಕುಳಿತಿದ್ದರೆ ಆಕೆಯ ತಂದೆ ಸಹ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದರು. ಕಾರುಗಳನ್ನು ಸುರಕ್ಷತೆಯ ದೃಷ್ಟಿಯಿಂದ ವಿವಿಧ ರೀತಿಯ ಕ್ರ್ಯಾಶ್ ಟೆಸ್ಟ್'ಗಳಿಗೆ ಒಳಪಡಿಸಲಾಗುತ್ತದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಮೊದಲ ಬಾರಿ ಕಾರು ಡ್ರೈವ್ ಮಾಡಿದ ಮಗಳಿಗೆ ತಂದೆ ಸಾಥ್ ನೀಡಿದ್ದು ಹೀಗೆ

ಈ ಟೆಸ್ಟ್'ಗಳಲ್ಲಿ ಆ ಕಾರು ಎಷ್ಟು ಸುರಕ್ಷಿತ ಎಂಬುದು ತಿಳಿಯುತ್ತದೆ. ಈ ಟೆಸ್ಟ್'ಗಳಲ್ಲಿ ಕಾರುಗಳನ್ನು ಗುದ್ದಿಸಿ ಅವುಗಳ ಸುರಕ್ಷತಾ ಮಾನದಂಡಗಳನ್ನು ಕಂಡುಹಿಡಿಯಲಾಗುತ್ತದೆ. ನಂತರ ಮನುಷ್ಯರಂತಹ ಡಮ್ಮಿಗಳನ್ನು ಕಾರುಗಳ ಒಳಗೆ ಇಟ್ಟು ಪರೀಕ್ಷಿಸಲಾಗುತ್ತದೆ.

ಮೊದಲ ಬಾರಿ ಕಾರು ಡ್ರೈವ್ ಮಾಡಿದ ಮಗಳಿಗೆ ತಂದೆ ಸಾಥ್ ನೀಡಿದ್ದು ಹೀಗೆ

ಇದರಲ್ಲಿ ಡಮ್ಮೀಗಳಿಗೆ ಎಲ್ಲಿ ಪೆಟ್ಟು ಬೀಳುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಅದರ ಆಧಾರದ ಮೇಲೆ ಕಾರಿನ ಸುರಕ್ಷತಾ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಈ ಕ್ರಾಶ್ ಟೆಸ್ಟ್'ಗಳಲ್ಲಿ ಬಳಸಲಾಗುವ ಡಮ್ಮೀಗಳಂತೆ ಆ ಹುಡುಗಿಯ ತಂದೆ ಡ್ರೆಸ್ ಧರಿಸಿದ್ದರು.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಮೊದಲ ಬಾರಿ ಕಾರು ಡ್ರೈವ್ ಮಾಡಿದ ಮಗಳಿಗೆ ತಂದೆ ಸಾಥ್ ನೀಡಿದ್ದು ಹೀಗೆ

ಈ ವೀಡಿಯೊ ಸಾಕಷ್ಟು ಜನರ ಗಮನ ಸೆಳೆದಿದೆ. ಕೆಲವರು ಈ ವೀಡಿಯೊ ತಮಾಷೆಯಾಗಿದೆ ಎಂದು ಅನೇಕ ಜನರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಈ ವೀಡಿಯೊಗೆ ಆಕ್ಷೇಪ ವ್ಯಕ್ತಪಡಿಸಿ, ಈ ರೀತಿ ವರ್ತಿಸಿದ್ದಕ್ಕಾಗಿ ಮಗಳ ಬಳಿ ಕ್ಷಮೆಯಾಚಿಸುವಂತೆ ತಂದೆಯನ್ನು ಒತ್ತಾಯಿಸಿದ್ದಾರೆ.

ಮೊದಲ ಬಾರಿ ಕಾರು ಡ್ರೈವ್ ಮಾಡಿದ ಮಗಳಿಗೆ ತಂದೆ ಸಾಥ್ ನೀಡಿದ್ದು ಹೀಗೆ

ತಂದೆಯ ಈ ಕಾರ್ಯವು ಮಗಳ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಎಂದು ಕೆಲವರು ಹೇಳಿದ್ದಾರೆ. ಮಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ತಂದೆ ಪ್ರಯತ್ನಿಸಬೇಕು ಎಂದು ಕೆಲವರು ಹೇಳಿದ್ದಾರೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಈ ವೀಡಿಯೊ ಕುರಿತು ನೋಡುಗರಲ್ಲಿ ನಾನಾ ಅಭಿಪ್ರಾಯಗಳು ಮೂಡಿವೆ. ಕೆಲವರು ಈ ವೀಡಿಯೊವನ್ನು ಕೇವಲ ತಮಾಷೆಯಾಗಿ ನೋಡುತ್ತಾರೆ. ಇನ್ನೂ ಕೆಲವರು ಈ ವೀಡಿಯೊ ಹುಡುಗಿಯ ಆತ್ಮವಿಶ್ವಾಸವನ್ನೇ ಹಾಳು ಮಾಡುತ್ತದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಮೊದಲ ಬಾರಿ ಕಾರು ಡ್ರೈವ್ ಮಾಡಿದ ಮಗಳಿಗೆ ತಂದೆ ಸಾಥ್ ನೀಡಿದ್ದು ಹೀಗೆ

ಗ್ಲೋಬಲ್ ಎನ್‌ಸಿಎಪಿಯಿಂದ ಸುರಕ್ಷತಾ ರೇಟಿಂಗ್ ಪಡೆಯಲು ಕಾರುಗಳಿಗೆ ಕ್ರ್ಯಾಶ್ ಟೆಸ್ಟ್ ಪ್ರಮುಖವಾಗಿದೆ. ಮೂರು ಮೇಡ್ ಇನ್ ಇಂಡಿಯಾ ಕಾರುಗಳಾದ ಟಾಟಾ ನೆಕ್ಸಾನ್, ಟಾಟಾ ಆಲ್ಟ್ರೋಜ್ ಹಾಗೂ ಮಹೀಂದ್ರಾ ಎಕ್ಸ್‌ಯುವಿ 300, ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿವೆ.

Most Read Articles

Kannada
English summary
Father dresses like crash test dummy for daughter's first time car drive. Read in Kannada.
Story first published: Thursday, June 3, 2021, 14:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X