ತಂದೆಗೆ ನೆಚ್ಚಿನ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ ಮಗ

ತಮ್ಮ ಮಕ್ಕಳಿಂದ ಏನಾದರೂ ಉಡುಗೊರೆ ಪಡೆಯುವ ಪೋಷಕರಿಗೆ ಆಗುವ ಸಂತೋಷವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅದರಲ್ಲೂ ತಮ್ಮ ನೆಚ್ಚಿನ ವಾಹನವನ್ನು ಉಡುಗೊರೆ ಪಡೆದರಂತೂ ಆಗುವ ಸಂತೋಷ ವರ್ಣಿಸಲಾಸಾಧ್ಯ.

ತಂದೆಗೆ ನೆಚ್ಚಿನ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ ಮಗ

ಈಗ ಸುಮಿತ್ ಕೂಲ್ ವ್ಲಾಗ್ಸ್ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಮಗನೊಬ್ಬ ತನ್ನ ತಂದೆಗೆ ಅವರ ನೆಚ್ಚಿನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾನೆ.

ತಂದೆಗೆ ನೆಚ್ಚಿನ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ ಮಗ

ಈ ವೀಡಿಯೊ ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ ಖರೀದಿಸುವುದರ ಮೂಲಕ ಆರಂಭವಾಗುತ್ತದೆ. ವೀಡಿಯೊದ ಆರಂಭದಲ್ಲಿ ಮಗ ತನ್ನ ತಂದೆಗೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ ಉಡುಗೊರೆ ನೀಡುವ ತನ್ನ ಯೋಜನೆಯನ್ನು ಬಹಿರಂಗಪಡಿಸುತ್ತಾನೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ತಂದೆಗೆ ನೆಚ್ಚಿನ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ ಮಗ

ಆದರೆ ಆ ಬೈಕ್ ಪಡೆಯಲು 2 ತಿಂಗಳು ಕಾಯಬೇಕಾಗುತ್ತದೆ ಎಂದು ಶೋರೂಂನವರು ಹೇಳುತ್ತಾರೆ. ಆದರೆ ಆತ ಆದಷ್ಟು ಬೇಗ ಬೈಕ್‌ ಪಡೆಯಲು ಪ್ರಯತ್ನಿಸುತ್ತಾನೆ. ನಂತರ ಶೋರೂಂನಲ್ಲಿ ನಡೆಯುವ ಮಾತುಕತೆಯನ್ನು ಈ ವೀಡಿಯೊದಲ್ಲಿ ಕಾಣಬಹುದು.

ತಂದೆಗೆ ನೆಚ್ಚಿನ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ ಮಗ

ಕಾಯುವ ಅವಧಿಯನ್ನು ಹೇಗೆ ಕಡಿಮೆ ಮಾಡಲಾಯಿತು ಎಂಬುದಕ್ಕೆ ಈ ವೀಡಿಯೊದಲ್ಲಿ ಉತ್ತರವಿಲ್ಲ. ನಂತರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಅನ್ನು ವಿತರಿಸಲಾಗುತ್ತದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ತಂದೆಗೆ ನೆಚ್ಚಿನ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ ಮಗ

ಮಗ ಹೊಸ ಬೈಕಿನ ಕೀಯನ್ನು ತನ್ನ ತಂದೆಗೆ ನೀಡುತ್ತಾನೆ. ಆಗ ತಂದೆ ಸಂತೋಷದಿಂದ ಮಗನನ್ನು ಅಪ್ಪಿಕೊಳ್ಳುತ್ತಾರೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಬೈಕ್‌ಗಳಲ್ಲಿ ಒಂದಾಗಿದೆ.

ತಂದೆಗೆ ನೆಚ್ಚಿನ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ ಮಗ

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ 350 ಸಿಸಿ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕ್‌ಗಳಲ್ಲಿ ಒಂದಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ಬೈಕಿನ ಹೊಸ ತಲೆಮಾರಿನ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ತಂದೆಗೆ ನೆಚ್ಚಿನ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ ಮಗ

ಹೊಸ ಮಾದರಿಯನ್ನು ಭಾರತದ ರಸ್ತೆಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಈ ಹೊಸ ಮಾದರಿಯು ಹಲವಾರು ಬಾರಿ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಹೊಸ ತಲೆಮಾರಿನಕ್ಲಾಸಿಕ್ 350 ಬೈಕಿನಲ್ಲಿ ಹಲವು ಹೊಸ ಫೀಚರ್'ಗಳನ್ನು ಸೇರಿಸುವ ನಿರೀಕ್ಷೆಗಳಿವೆ.

ತಂದೆಗೆ ನೆಚ್ಚಿನ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ ಮಗ

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಹೈನೆಸ್ ಸಿಬಿ 350 ಹಾಗೂ ಜಾವಾ ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ. ಜಾವಾ ಬೈಕುಗಳು ಕ್ಲಾಸಿಕ್ 350 ಬೈಕಿಗೆ ತೀವ್ರ ಪೈಪೋಟಿ ನೀಡುತ್ತವೆ ಎಂದು ನಿರೀಕ್ಷಿಸಲಾಗಿತ್ತು.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಆದರೆ ಜಾವಾ ಬೈಕುಗಳ ವಿತರಣೆಯಲ್ಲಿನ ವಿಳಂಬವು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಹೋಂಡಾ ಹೈನೆಸ್ ಸಿಬಿ 350 ಬೈಕ್ ಕೆಲವು ತಿಂಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಗೆ ಕಾಲಿಟ್ಟಿದೆ.

ತಂದೆಗೆ ನೆಚ್ಚಿನ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ ಮಗ

ಈ ಬೈಕ್ ಅನ್ನು ಹೋಂಡಾ ಬಿಗ್ ವಿಂಗ್ ಶೋರೂಂಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮಾರಾಟದದೃಷ್ಟಿಯಿಂದ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿದೆ.

ಚಿತ್ರ ಕೃಪೆ: ಸುಮಿತ್ ಕೂಲ್ ವ್ಲಾಗ್ಸ್

Most Read Articles

Kannada
English summary
Father gets Royal Enfield Classic 350 bike from son as a gift. Read in Kannada.
Story first published: Friday, June 4, 2021, 12:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X