ಇಟಲಿಯಿಂದ ಲಂಡನ್ ವರೆಗೂ ಕಾಲ್ನಡಿಗೆಯಲ್ಲಿ ಸಾಗಿದ ತಂದೆ - ಮಗ
ಕರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಮಾರ್ಚ್ ತಿಂಗಳಿನಲ್ಲಿ ವಿಶ್ವದ ಬಹುತೇಕ ಎಲ್ಲಾ ದೇಶಗಳಲ್ಲಿ ಲಾಕ್ ಡೌನ್ ಜಾರಿ ಗೊಳಿಸಲಾಗಿತ್ತು. ಈ ಅವಧಿಯಲ್ಲಿ ಆಟೋ, ಟ್ಯಾಕ್ಸಿ, ಬಸ್, ರೈಲು, ವಿಮಾನ ಸೇರಿದಂತೆ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆಯ ಮೇಲೆ ನಿಷೇಧ ಹೇರಲಾಗಿತ್ತು.

ಖಾಸಗಿ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಚಾರದ ಮೇಲೂ ನಿರ್ಬಂಧ ವಿಧಿಸಲಾಗಿತ್ತು. ಈ ನಿರ್ಬಂಧಗಳಿಂದಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸುವುದು ಕಷ್ಟವಾಗಿತ್ತು. ಲಾಕ್ ಡೌನ್ ನಡುವೆ ತಂದೆ, ಮಗ 4 ದೇಶಗಳ ಮೂಲಕ ಸುಮಾರು 2,800 ಕಿ.ಮಿಗಳಷ್ಟು ದೂರ ಕಾಲ್ನಡಿಗೆಯಲ್ಲಿ ಸಾಗಿದ್ದಾರೆ.

ಇಟಲಿಯ 10 ವರ್ಷದ ರೋಮಿಯೋ ಕಾಕ್ಸ್ ಹಾಗೂ ಆತನ ತಂದೆ ಬಿಲ್ ಇಬ್ಬರೂ ನಾಲ್ಕು ದೇಶಗಳ ಮೂಲಕ ಪ್ರಯಾಣಿಸಿದ್ದಾರೆ. ಅವರ ಪ್ರಯಾಣವು ಜೂನ್ 20 ರಂದು ಇಟಲಿಯ ಸಿಸಿಲಿಯ ಪಲೆರ್ಮೊದಿಂದ ಆರಂಭವಾಯಿತು.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ರೋಮಿಯೋ ಕಾಕ್ಸ್ ನ ಅಜ್ಜಿ ಲಂಡನ್ ನಲ್ಲಿ ವಾಸಿಸುತ್ತಿದ್ದು, ಅವರನ್ನು ಭೇಟಿ ಮಾಡುವ ಸಲುವಾಗಿ ರೋಮಿಯೋ ಕಾಕ್ಸ್ ಈ ಪ್ರಯಾಣ ಕೈಗೊಂಡಿದ್ದಾನೆ. ಆತ ತನ್ನ ಆಸೆಯನ್ನು ತನ್ನ ಪೋಷಕರಿಗೆ ಹೇಳಿದಾಗ ಅವರು ಸಾರಿಗೆ ಸೌಲಭ್ಯಗಳ ಕೊರತೆ ಹಾಗೂ ಕರೋನಾ ವೈರಸ್‌ನ ಭೀತಿಯಿಂದಾಗಿ ಆತನ ಆಸೆಗೆ ಸಮ್ಮತಿ ನೀಡಿರಲಿಲ್ಲ.

ಆದರೆ ಏನಾದರೂ ಆಗಲಿ ತನ್ನ ಅಜ್ಜಿಯನ್ನು ನೋಡಲೇ ಬೇಕೆಂದು ರೋಮಿಯೋ ಕಾಕ್ಸ್ ಹಟಕ್ಕೆ ಬಿದ್ದಿದ್ದಾನೆ. ಇದು ತನಗೆ ಹೊಸ ಅನುಭವವಾಗಲಿದೆ ಎಂಬುದು ಆತನ ಆಶಯವಾಗಿತ್ತು.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ರೋಮಿಯೋ ಕಾಕ್ಸ್ ನ ಆಶಯಕ್ಕೆ ಆತನ ಪೋಷಕರು ಅಸ್ತು ಎಂದಿದ್ದಾರೆ. ಕೊನೆಗೆ ರೋಮಿಯೋ ಕಾಕ್ಸ್ ಕಾಲ್ನಡಿಗೆಯ ಮೂಲಕ ತನ್ನ ತಂದೆ ಬಿಲ್ ಅವರೊಂದಿಗೆ ಪ್ರಯಾಣಿಸಲು ನಿರ್ಧರಿಸಿದ್ದಾನೆ.

ಜೂನ್ 20ರಂದು ಇವರಿಬ್ಬರು ತಮ್ಮ ಪ್ರಯಾಣವನ್ನು ಆರಂಭಿಸಿ, ಸೆಪ್ಟೆಂಬರ್ 21ರಂದು ಇಂಗ್ಲೆಂಡಿಗೆ ಬಂದಿದ್ದಾರೆ. ಸದ್ಯಕ್ಕೆ ಅವರಿಬ್ಬರೂ ಕ್ವಾರಂಟೈನ್ ನಲ್ಲಿದ್ದಾರೆ. ಕ್ವಾರಂಟೈನ್ ಅವಧಿ ಮುಗಿದ ನಂತರ ರೋಮಿಯೋ ಕಾಕ್ಸ್ ತನ್ನ ಅಜ್ಜಿಯನ್ನು ಭೇಟಿಯಾಗಲಿದ್ದಾನೆ ಎಂದು ಹೇಳಲಾಗಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ತಂದೆ, ಮಗ ಈ ಸುದೀರ್ಘ ಪ್ರಯಾಣದಲ್ಲಿ ಇಟಲಿ, ಸ್ವಿಟ್ಜರ್ಲೆಂಡ್, ಫ್ರಾನ್ಸ್ ಹಾಗೂ ಇಂಗ್ಲೆಂಡ್ ದೇಶಗಳಲ್ಲಿ ಸಂಚರಿಸಿದ್ದಾರೆ. ಪ್ರಯಾಣದುದ್ದಕ್ಕೂ ಕಾಡು ನಾಯಿ, ಕಾಡು ಕತ್ತೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸಿ ಯಶಸ್ವಿಯಾಗಿ ಇಂಗ್ಲೆಂಡ್ ತಲುಪಿದ್ದಾರೆ.

ಪ್ರವಾಸದ ಬಗ್ಗೆ ಮಾತನಾಡಿರುವ ರೋಮಿಯೋ ಕಾಕ್ಸ್, ನಾನು ನನ್ನ ತಂದೆ ಹಲವು ಬಾರಿ ದಾರಿ ತಪ್ಪಿದ್ದೆವು. ಈ ಪ್ರವಾಸದಲ್ಲಿ ಕಣಜದ ಗೂಡಿನ ಕೆಳಗೂ ಮಲಗಿದ್ದೆವು. ಏನೇ ಆದರೂ ನಮ್ಮ ಪ್ರಯಾಣದಿಂದ ಹಿಂದೆ ಸರಿಯದೇ ಇರಲು ನಿರ್ಧರಿಸಿದ್ದೆವು ಎಂದು ಹೇಳಿದ್ದಾನೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಲಂಡನ್‌ನಲ್ಲಿರುವ ನನ್ನ ಅಜ್ಜಿಯನ್ನು ಭೇಟಿ ಮಾಡುವ ಆಲೋಚನೆಯಲ್ಲಿದ್ದೇನೆ. ನಾನು ನನ್ನ ಅಜ್ಜಿಯನ್ನು ನೋಡಿ ಒಂದು ವರ್ಷವಾಗಿದೆ. ನನ್ನ ಅಜ್ಜಿ ಲಾಕ್ ಡೌನ್ ಅವಧಿಯಲ್ಲಿ ಒಂಟಿಯಾಗಿದ್ದರು. ಈ ಪ್ರಯಾಣದ ನಂತರ ತುಂಬಾ ದಣಿದಿದ್ದೇನೆ ಎಂದು ರೋಮಿಯೋ ಕಾಕ್ಸ್ ಹೇಳಿದ್ದಾನೆ.

ಜೂನ್ ತಿಂಗಳಿನಲ್ಲಿ ಇಂಗ್ಲೆಂಡ್‌ನಲ್ಲಿ ಯಾವುದೇ ವಿಮಾನಗಳಿಲ್ಲದ ಕಾರಣ, ರೋಮಿಯೋ ಕಾಕ್ಸ್ ನಡೆದು ಕೊಂಡು ಸಾಗಲು ನಿರ್ಧರಿಸಿದ್ದನು. ಈ ಕಾರಣಕ್ಕೆ ತನ್ನ ಪೋಷಕರ ಅನುಮತಿ ಕೋರಿದ. ಅವರು ಹಲವು ಬಾರಿ ನಿರಾಕರಿಸಿದರೂ ಕೊನೆಗೆ ಅನುಮತಿ ನೀಡಿದರು.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಈ ಪ್ರಯಾಣದ ಅವಧಿಯಲ್ಲಿ ರೋಮಿಯೋ ಕಾಕ್ಸ್ ಹಾಗೂ ಆತನ ತಂದೆ 80%ನಷ್ಟು ನಡೆದಿದ್ದರೆ, 20%ನಷ್ಟು ಪ್ರಯಾಣವನ್ನು ದೋಣಿ ಹಾಗೂ ದ್ವಿಚಕ್ರ ವಾಹನದ ಮೂಲಕ ಕೈಗೊಂಡಿದ್ದಾರೆ. ಈ ಕಾಲ್ನಡಿಗೆಯ ಪ್ರಯಾಣವು ಜನರ ಗಮನ ಸೆಳೆದಿದೆ.


Click it and Unblock the Notifications