ಹೆಣ್ಣು ಮಗು ಜನಿಸಿದ ಖುಷಿಯಲ್ಲಿ 1.5 ಕೋಟಿ ಕಾರನ್ನು ಆಟಿಕೆಯಂತೆ ಸಿಂಗರಿಸಿದ ಅಪ್ಪ
Range Rover: ಇತ್ತೀಚೆಗೆ ಭಾರತದಲ್ಲಿ ಕೆಲವೆಡೆ ಹೆಣ್ಣುಮಗು ಜನಿಸಿದೆಯೆಂದು ಬಿಸಾಡಿ ಹೋಗುವ ಹಲವು ಪ್ರಕರಣಗಳನ್ನು ನಾವು ನೋಡಿದ್ದೇವೆ. ಹಾಗೆಯೇ ಇದೇ ಭಾರತದಲ್ಲಿ ವಿಶ್ವದ ಇನ್ನೆಲ್ಲೂ ಕಾಣದ ರೀತಿ, ಹೆಣ್ಣು ಮಗು ಜನಿಸಿದರೆ ಮನೆಯ ಮಹಾಲಕ್ಷ್ಮಿಯಂತೆ ಸ್ವೀಕರಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ಇತ್ತೀಚಿನ ವಿಡಿಯೋವೊಂದು ಸಖತ್ ವೈರಲ್ ಆಗಿದೆ.
ವಿಶ್ವದ ದುಬಾರಿ ಐಷಾರಾಮಿ ಕಾರುಗಳೆಂದಾಕ್ಷಣ ಮೊದಲಿಗೆ ನೆನಪಾಗುವ ಕೆಲವು ಕಾರುಗಳಲ್ಲಿ ರೇಂಜ್ ರೋವರ್ (Range Rover) ಕೂಡ ಒಂದು. ಉದ್ಯಮಿಗಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರಲ್ಲೂ ಈ ಕಾರ್‌ಗೆ ತುಂಬಾ ಕ್ರೇಜ್ ಇದೆ. ಅದರ ಡಿಸೈನ್, ಸ್ಪೋರ್ಟಿ ಎಸ್‌ಯುವಿ ಪರ್ಫಾಮೆನ್ಸ್ ಹಾಗೂ ಇಂಟೀರಿಯರ್‌ಗೆ ಫಿದಾ ಆಗಲೇಬೆಕು. ಇಂತಹ ದುಬಾರಿ ಕಾರನ್ನು ಮಗಳು ಜನಿಸಿದ ಖುಷಿಯಲ್ಲಿ ತಂದೆಯೊಬ್ಬರು ಮಾಡಿಫೈಗೊಳಿಸಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದಾರೆ.

ಗುಲಾಬಿ ಬಣ್ಣದಲ್ಲಿ ಮಾಡಿಫೈಗೊಳಿಸಿ, ಎಸ್‌ಯುವಿ ಸುತ್ತಮುತ್ತ ಗೊಂಬೆಗಳೊಂದಿಗೆ ಗ್ರಾಫಿಕ್ ಡಿಸೈನ್ ಮಾಡಿಸಿಕೊಂಡು ಗುಜರಾತ್ ರಾಜ್ಯದ ಸೂರತ್ ನಗರದ ಬೀದಿಗಳಲ್ಲಿ ಓಡಾಡುವ ಕಾರಿನ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಗುಜರಾತಿ ಭಾಷೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಮಗಳ ಜನನವನ್ನು ವಿಶಿಷ್ಟವಾಗಿ ಆಚರಿಸಿದ ತಂದೆಯ ಖುಷಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಕಾರನ್ನು ಗುಲಾಬಿ ಬಣ್ಣದಲ್ಲಿಯೇ ಪೇಂಟ್ ಮಾಡಿಸುವ ಹಿಂದಿನ ಕಾರಣವೆಂದರೆ, ಗುಲಾಭಿ ಬಣ್ಣವನ್ನು ಹೆಚ್ಚಾಗಿ ಹೆಣ್ಣಿನ ಬಣ್ಣವೆಂದು ಪರಿಗಣಿಸಲಾಗುತ್ತದೆ. ಇದನ್ನು ಹೆಣ್ಣುಮಕ್ಕಳಿಗೆ ಸೂಕ್ತವಾಗಿ ಬಳಸಲಾಗುತ್ತದೆ. ಹಾಗಾಗಿಯೇ ಕಾರನ್ನು ಸಂಪೂರ್ಣ ಗುಲಾಬಿ ಬಣ್ಣಕ್ಕೆ ಬದಲಿಸಿದ್ದಾರೆ. ಕಾರಿನ ಮೇಲೆ ಹೂಗಳು, ಮಕ್ಕಳ ಹೆಜ್ಜೆ ಗುರುತುಗಳು, ಹೆಣ್ಣು ಮಗುವಿನ ಚಿತ್ರ ಸೇರಿದಂತೆ ಒಟ್ಟಾರೆ ಆಟಿಕೆ ಕಾರನ್ನು ನೋಡುವಂತಾಗುತ್ತದೆ.

ವಾಹನಕ್ಕೆ ಮಾಡುವ ಮಾರ್ಪಾಡುಗಳನ್ನು ನಿಯಮಗಳ ಪ್ರಕಾರ ಭಾರತದಲ್ಲಿ ಕಾನೂನುಬಾಹಿರವಾಗಿದೆ. ಕೆಲವು ರಾಜ್ಯಗಳು ಮಾತ್ರ ವಾಹನದ ಬಣ್ಣವನ್ನು ಬದಲಾಯಿಸಲು ಮತ್ತು ಅದನ್ನು ಆರ್‌ಸಿಯಲ್ಲಿ ಅನುಮೋದಿಸಲು ಅನುಮತಿಸುತ್ತವೆ. ಇನ್ನೂ ಕೆಲವು ರಾಜ್ಯಗಳು ಅದನ್ನು ಅನುಮತಿಸುವುದಿಲ್ಲ. ಇಲ್ಲಿ ಕಾಣಿಸಿಕೊಂಡಿರುವ ರೇಂಜ್ ರೋವರ್ ಅನ್ನು ಖಂಡಿತವಾಗಿಯೂ ಪೊಲೀಸರು ತಡೆಯುವ ಸಾಧ್ಯತೆಯಿದೆ.
ಸೆಲೆಬ್ರಿಟಿಗಳ ಫೆವರೆಟ್ ಎಸ್‌ಯುವಿ: ಬಾಲಿವುಡ್‌ನಿಂದ ಹಿಡಿದು ಸ್ಯಾಂಡಲ್ ವುಡ್, ಟಾಲಿವುಡ್ ಸೇರಿದಂತೆ ಹಲವು ಸಿನಿಮಾ ರಂಗಗಳಲ್ಲಿ ಈ ರೇಂಜ್ ರೋವರ್ ಕಾರಿಗೆ ಎಲ್ಲಿಲ್ಲದ ಬೇಡಿಕೆ ಇದೆ. ನಟ ದರ್ಶನ್, ಸುದೀಪ್, ಯಶ್, ಶಿವರಾಜ್ ಕುಮಾರ್ ಹೀಗೆ ಹಲವರು ಸೆಲೆಬ್ರಿಟಿಗಳು ಈ ಕಾರನ್ನು ಬಳಸುತ್ತಿದ್ದಾರೆ. ಈ ಕಾರು ಸ್ಪೋರ್ಟಿ ಪ್ರೀಮಿಯಂ ಇಂಟೀರಿಯರ್ ಹಾಗೂ ಅತ್ಯಾಧುನಿಕ ವೈಶಿಷ್ಟ್ಯಗಳಿಗೆ ಜಪ್ರಿಯವಾಗಿದೆ.

ರೇಂಜ್ ರೋವರ್ ಸ್ಪೋರ್ಟ್ ಬೆಲೆಯು ರೂ. 1.64 ಕೋಟಿಯಿಂದ ಆರಂಭವಾಗಿ ರೂ. 1.84 ಕೋಟಿವರೆಗೆ (ಎಕ್ಸ್ ಶೋರೂಂ)ಬೆಲೆಯಿದೆ. 3.0 - ಲೀಟರ್ ವಿ6 ಟರ್ಬೊ ಡೀಸೆಲ್, 4.4 - ಲೀಟರ್ ವಿ8 ಟರ್ಬೊ ಡೀಸೆಲ್ ಮತ್ತು 5.0 - ಲೀಟರ್ ಸೂಪರ್ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿದೆ. ಎಲ್ಲಾ ಎಂಜಿನ್ ಆಯ್ಕೆಗಳನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್‌ಗೆ ಜೋಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಿರಿ.


Click it and Unblock the Notifications








