ಗೇರ್ ಬದಲಿಸುವ ಸ್ಟೈಲ್ ಮೆಚ್ಚಿ ಡ್ರೈವರ್ನನ್ನು ಮದುವೆಯಾದ ಯುವತಿ
ಯಾರಿಗೆ ಯಾರ ಮೇಲೆ ಯಾವ ಕಾರಣಕ್ಕಾಗಿ ಲವ್ ಆಗುತ್ತೆ ಹೇಳಲು ಸಾಧ್ಯವಿಲ್ಲ. ಲವ್ ಅಲ್ಲಿ ಬಿದ್ದವರನ್ನ ಕೇಳಿದರೆ ಒಬ್ಬೊಬ್ಬರ ಬಳಿ ಒಂದೊಂದುಕಥೆ ಇರುತ್ತದೆ. ಕೆಲವರಿಗೆ ಸೌಂದರ್ಯ, ಶ್ರೀಮಂತಿಕೆ ಹಾಗೂ ಸುಂದರವಾದ ವ್ಯಕ್ತಿತ್ವದ ಕಾರಣಕ್ಕೆ ಮತ್ತೊಬ್ಬರಿಗೆ ಪ್ರೀತಿ ಮೂಡುತ್ತದೆ.

ಆದರೆ ಪಾಕಿಸ್ತಾನದ 17 ವರ್ಷದ ಯುವತಿ ತನಗೆ ಡ್ರೈವಿಂಗ್ ಹೇಳಿಕೊಡುವ 21 ವರ್ಷದ ಚಾಲಕನನ್ನು ಮದುವೆಯಾಗಿದ್ದಾಳೆ. ಅದಕ್ಕೆ ಆತನ ಆಸ್ತಿ, ಜನಪ್ರಿಯತೆ, Gear Changing Style, ಅಥವಾ ಆಕರ್ಷಕ ವ್ಯಕ್ತಿತ್ವ ಮುಂತಾದವು ಕಾರಣವಲ್ಲ. ಪಾಕಿಸ್ತಾನ ಈ ಯುವತಿ ವಿಚಿತ್ರ ಕಾರಣಕ್ಕೆ ತನ್ನ ಕಾರು ಚಾಲಕನ ಮೇಲೆ ಪ್ರೀತಿಯಾಗಿದ್ದಾಳೆ. ಕಾರು ಚಾಲಕ ಗೇರ್ ಬದಲಿಸುವ ಸ್ಟೈಲ್ ನೋಡಿ ಆತನ ಮೇಲೆ ನನಗೆ ಪ್ರೀತಿಯಾಯಿತು ಎಂದು 17ರ ಹರೆಯದ ಯುವತಿ ಹೇಳಿಕೊಂಡಿದ್ದಾಳೆ.

ಪಾಕಿಸ್ತಾನದ ಮಾಧ್ಯಮ ಡೈಲಿ ಪಾಕಿಸ್ತಾನ್ ಈ ಜೋಡಿಯ ಸಂದರ್ಶನ ಮಾಡಿದ್ದಾರೆ. ಸಂದರ್ಶನದಲ್ಲಿ ಯುವತಿ ಈ ವಿಚಿತ್ರ ಉತ್ತರ ನೀಡಿದ್ದಾಳೆ. 17ರ ಹರೆಯದ ಖತೀಜಾ ಅವರ ತಂದೆ, ಮಗಳಿಗೆ ಕಾರು ಚಲಾಯಿಸುವುದನ್ನು ಕಲಿಸಿಕೊಡುವಂತೆ ಯುವಕನೋರ್ವನನ್ನು ನೇಮಿಸಿದ್ದಾರೆ.

ಆದರೆ ಆಕೆ ಕಾರ್ ಡ್ರೈವಿಂಗ್ ಅನ್ನು ಸರಿಯಾಗಿ ಕಲಿಯಲೇ ಇಲ್ಲ. ಆದರೂ ಪ್ರತಿನಿತ್ಯ ಆಕೆ ಕಾರು ಡ್ರೈವಿಂಗ್ ತರಬೇತಿಗೆ ಮಾತ್ರ ತಪ್ಪದೇ ಹಾಜರಾಗುತ್ತಿದ್ದಳು. ಕಾರು ಓಡಿಸುವಾಗ ಆತ ಗೇರ್ ಬದಲಿಸುವ ಸ್ಟೈಲ್ ನೋಡಿ ಆಕೆ ಫಿದಾ ಆಗಿದ್ದಾಳೆ.

ಪ್ರತಿ ದಿನವೂ ಕಾರಿನ ಗೇರು ಬದಲಾಯಿಸುವ ಸ್ಟೈಲ್ ಗಮನಿಸುತ್ತಿದ್ದೆ. ಆ ಸ್ಟೈಲ್ಗೆ ಮಾರುಹೋಗಿ ಕೈ ಹಿಡಿಯಬೇಕು ಅನ್ನಿಸುತ್ತಿತ್ತು. ಹೀಗೆ ಶಾಶ್ವತವಾಗಿ ಕೈ ಹಿಡಿದುಬಿಟ್ಟೆ, ಆದರೆ ನಾನು ಡ್ರೈವಿಂಗ್ ಕಲಿಯಲೇ ಇಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ.

ಆಕೆಗೆ ಡ್ರೈವರ್ ಮೇಲೆ ಲವ್ ಆಗಿ ಪ್ರೇಮನಿವೇದನೆ ಮಾಡಿದಾಗ ಆತನಿಗೆ ಅಚ್ಚರಿಯಾಗುತ್ತದೆ. ಆತ ಆಕೆಗೆ ನಾನು ಸಾಮಾನ್ಯವಾದ ಡ್ರೈವರ್ ಆದರೆ ನೀನು ಶ್ರೀಮಂತರ ಒಬ್ಬಳೇ ಮಗಳು ಎಂದು ಉತ್ತರ ಕೊಡುತ್ತಾನೆ. ಆದರೂ ಆಕೆ ಬಿಡದೆ ತಂದೆಗೆ ತನ್ನ ಪ್ರೇಮದ ಬಗ್ಗೆ ಹೇಳಿಕೊಳ್ಳುತ್ತಾಳೆ.

ಅವರು ಒಪ್ಪದಾದಾಗ ಉಪವಾಸ ಇದ್ದು ಹಟ ಮಾಡುತ್ತಾಳೆ. ಕೊನೆಗೆ ತಂದೆ ಬೇರೆ ಆಯ್ಕೆ ಇಲ್ಲದೇ ಒಪ್ಪಿಕೊಳ್ಳುತ್ತಾರೆ. ಸಂದರ್ಶನದಲ್ಲಿ ಆಕೆ ಗಂಡನ ಬಗ್ಗೆ ಹೆಮ್ಮೆಯ ಮಾತನ್ನು ಆಡಿದ್ದಾಳೆ. ಈವತ್ತು ಡ್ರೈವರ್ ಇರಬಹುದು. ನಾಳೆ ಪ್ರಯತ್ನಪಟ್ಟರೆ ಬದುಕು ಬದಲಾಗುತ್ತದೆ, ಆ ವಿಶ್ವಾಸವಿದೆ. ಜೀವನದಲ್ಲಿ ಹಣ ಬರುತ್ತದೆ ಹೋಗುತ್ತದೆ. ಹಣ ಮುಖ್ಯವಲ್ಲ ಪ್ರೀತಿ ಮುಖ್ಯ ಎಂದು ಹೇಳಿದ್ದಾಳೆ.

ತಮಗಾಗಿ ನನ್ನ ತಂದೆ ದೊಡ್ಡ ಕಾರನ್ನೂ ಉಡುಗೊರೆಯಾಗಿ ನೀಡಿದ್ಧಾರೆ ಎನ್ನುತ್ತಾಳೆ. ಇನ್ನು ಈಗೆ ಗಂಡನಿಗಾಗಿ ಆಕೆ 1973ರ ಜನಪ್ರಿಯ ಹಿಂದಿ ಸಿನಿಮಾ 'ಬಾಬ್ಬಿ'ಯ 'ಹಮ್ ತುಮ್ ಏಕ್ ಕಮ್ರೆ ಮೆ ಬಂದ್ ಹೋ' ಹಾಡನ್ನು ಅರ್ಪಿಸಿದ್ದಾಳೆ.

ಇನ್ನು ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕೆಲವರಿಗೆ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಡ್ರೈವ್ ಮಾಡುವುವರಿಗೆ ತೀರಾ ಕಷ್ಟವೆನಿಸುತ್ತದೆ. ಈ ತೊಂದರೆಗಳನ್ನು ಮನಗಂಡು, ವಾಹನ ತಯಾರಕರು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೌಲಭ್ಯವನ್ನು ಒದಗಿಸಲು ಪ್ರಾರಂಭಿಸಿದ್ದಾರೆ.

ಬೆಲೆಯು ತುಂಬಾ ಹೆಚ್ಚಿಲ್ಲದ ಕಾರಣ ಹಲವರು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೌಲಭ್ಯದೊಂದಿಗೆ ಕಾರುಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ವಾಹನ ತಯಾರಕರು ಈ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (Automatic Transmissions)ನಲ್ಲಿ ವಿವಿಧ ಆಯ್ಕೆಗಳನ್ನು ನೀಡಿದ್ದಾರೆ. ಪ್ರಸ್ತುತ, ಭಾರತದಲ್ಲಿ ಐದು ರೀತಿಯ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳು ಲಭ್ಯವಿವೆ.

ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುವ ಟಾಪ್ 5 ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೆಂದರೆ ಡಿಸಿಟಿ (ಡ್ಯುವಲ್ ಕ್ಲಚ್ ಟ್ರಾನ್ಸ್‌ಮಿಷನ್), ಐಎಂಟಿ (ಇಂಟೆಲಿಜೆಂಟ್ ಮ್ಯಾನುಯಲ್ ಟ್ರಾನ್ಸ್‌ಮಿಷನ್), ಸ್ವಯಂಚಾಲಿತ ಮ್ಯಾನುಯಲ್ ಟ್ರಾನ್ಸ್‌ಮಿಷನ್ (ಎಎಂಟಿ), ಸಿವಿಟಿ (ಕಾಂಡಿನಸ್ಲಿ ವೇರಿಯಂಟ್ ಟ್ರಾನ್ಸ್‌ಮಿಷನ್) ಮತ್ತು ಡಾರ್ಕ್ ಕನ್ವರ್ಟಿಬಲ್‌ನಲ್ಲಿ ಲಭ್ಯವಿದೆ.


Click it and Unblock the Notifications