ಹೀಗೊಂದು ಕಾರು ಅಪಘಾತ; ಫೆರಾರಿ ಸೂಪರ್ ಕಾರು ನೂಚ್ಚುನೂರು!
ಅಪಘಾತಗಳು ಘಟಿಸುವುದು ಸಾಮಾನ್ಯ. ಬಹುತೇಕ ಅಪಘಾತಗಳು ಸವಾರರ ಅಜಾಗರೂತಕತೆಯಿಂದಲೇ ನಡೆದು ಹೋಗುತ್ತದೆ. ಇಲ್ಲಿ ನಾವು ಹೇಳಲಿರುವ ಅಪಘಾತ ಕಥೆ
ಸಹ ಬಹುಶ: ಇದೇ ವಿಭಾಗವನ್ನು ಸೇರಬಹುದು.
ಚೀನಾದ ಫೋಶನ್ ನಗರದ ನನ್ಹೈ ಪ್ರಾಂತ್ಯದಿಂದ ಈ ವರದಿ ಬಂದಿದ್ದು, ಫೆರಾರಿ ಸೂಪರ್ ಕಾರೊಂದು ಅಪಘಾತಕ್ಕೀಡಾಗಿರುವುದರಿಂದ ಸಹಜವಾಗಿಯೇ ಭಾರಿ ಸುದ್ದಿ ಗಿಟ್ಟಿಸಿಕೊಂಡಿದೆ.

ಇಲ್ಲಿ ಕಳಪೆ ಹವಾಮಾನ ವೈಪರೀತ್ಯದ ನಡುವೆಯೂ ಚಾಲಕ ರೇಸ್ ತರಹ ಗಾಡಿ ಚಲಾಯಿಸಲು ಪ್ರಯತ್ನಿಸಿದ್ದಾನೆ. ಪರಿಣಾಮವೆಂಬಂತೆ ಮರವೊಂದಕ್ಕೆ ಢಿಕ್ಕಿಯಾಗಿರುವ ಫೆರಾರಿ 458 ಇಟಲಿಯಾ ಲಿಮಿಟೆಡ್ ಎಡಿಷನ್ ಸೂಪರ್ ಕಾರು ನೂಚ್ಚುನೂರಾಗಿದೆ (ಚಿತ್ರದಲ್ಲಿ ನೋಡಬಹುದು).
ಆದರೆ ಅದೃಷ್ಟವೆಂಬಂತೆ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನಂತೆ!. ಅಷ್ಟೇ ಯಾಕೆ ಸದ್ಯ ಬೆಡ್ ರೆಸ್ಟ್‌ನಲ್ಲಿರುವ ಈತ ಮಗದೊಂದು ಫೆರಾರಿ ಕಾರನ್ನು ಕೊಳ್ಳುವ ಯೋಚನೆಯಲ್ಲಿದ್ದಾನೆ. ನೀವೇನಂತೀರಾ?


Click it and Unblock the Notifications








