ಭಾರತೀಯ ಉದ್ಯಮಿಗಾಗಿ ವಿಶೇಷ ಕಾರನ್ನು ಸಿದ್ದಪಡಿಸಿದ ಫೆರಾರಿ

ಫೆರಾರಿ ವಿಶ್ವದ ಜನಪ್ರಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದು. ಕಂಪನಿಯ ಕಾರುಗಳು ಹೆಚ್ಚು ಸಾಮರ್ಥ್ಯವನ್ನು ಹೊಂದಿದ್ದು, ನೋಡಲು ಆಕರ್ಷಕವಾಗಿರುತ್ತವೆ. ಶತಕೋಟ್ಯಾಧಿಪತಿಗಳ ನೆಚ್ಚಿನ ಕಾರುಗಳಲ್ಲಿ ಫೆರಾರಿ ಸಹ ಒಂದು ಎಂದರೆ ತಪ್ಪಾಗಲಾರದು.

ಭಾರತೀಯ ಉದ್ಯಮಿಗಾಗಿ ವಿಶೇಷ ಕಾರನ್ನು ಸಿದ್ದಪಡಿಸಿದ ಫೆರಾರಿ

ಫೆರಾರಿ ಕಂಪನಿಯು ಸೂಪರ್ ಕಾರುಗಳನ್ನು ಉತ್ಪಾದಿಸುತ್ತದೆ. ಕಂಪನಿಯು ಭಾರತೀಯ ಉದ್ಯಮಿಯೊಬ್ಬರಿಗಾಗಿ ವಿಶೇಷ ಕಾರೊಂದನ್ನು ಸಿದ್ಧಪಡಿಸಿದ್ದು, ಆ ಕಾರನ್ನು ವಿಮಾನದ ಮೂಲಕ ಭಾರತಕ್ಕೆ ಕಳುಹಿಸುತ್ತಿದೆ ಎಂದು ವರದಿಯಾಗಿದೆ. ಭಾರತದ ಅಗ್ರಗಣ್ಯ ಉದ್ಯಮಿಗಳಲ್ಲಿ ಯೋಹಾನ್ ಪೂನವಾಲಾ ಸಹ ಒಬ್ಬರು. ಫೆರಾರಿ ಕಂಪನಿಯು ಯೋಹಾನ್ ಪೂನವಾಲಾರವರಿಗಾಗಿ ಫೆರಾರಿ 488 ಪಿಸ್ತಾ ಸ್ಪೈಡರ್ ಕಾರನ್ನು ವಿಶೇಷವಾಗಿ ಕಸ್ಟಮೈಸ್ ಮಾಡಿದೆ.

ಭಾರತೀಯ ಉದ್ಯಮಿಗಾಗಿ ವಿಶೇಷ ಕಾರನ್ನು ಸಿದ್ದಪಡಿಸಿದ ಫೆರಾರಿ

ಯೋಹಾನ್ ಪೂನವಾಲಾ ಫೆರಾರಿಯ 458 ಸ್ಪೆಷಿಯಲ್ ಅಪರ್ಟಾ ಕಾರನ್ನು ಸಹ ಹೊಂದಿದ್ದಾರೆ. ಅಂದ ಹಾಗೆ ಯೋಹಾನ್ ಪೂನವಾಲಾ ಭಾರತದಲ್ಲಿ ಈ ಕಾರನ್ನು ಬಳಸಿದ ಏಕೈಕ ವ್ಯಕ್ತಿ. ಈಗ ತಮ್ಮಿಷ್ಟದ ವಿಶೇಷ ಪರಿಕರ ಹಾಗೂ ಐಷಾರಾಮಿ ಸೌಕರ್ಯಗಳನ್ನು ಹೊಂದಿರುವ ಹೊಸ ಫೆರಾರಿ 488 ಪಿಸ್ತಾ ಸ್ಪೈಡರ್ ಕಾರನ್ನು ಖರೀದಿಸಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಭಾರತೀಯ ಉದ್ಯಮಿಗಾಗಿ ವಿಶೇಷ ಕಾರನ್ನು ಸಿದ್ದಪಡಿಸಿದ ಫೆರಾರಿ

ಈ ಕಾರಿನ ಫೋಟೋವನ್ನು ಇನ್‌ಸ್ಟಾಗ್ರಾಮ್ ಬಳಕೆದಾರರಾದ ಥ್ರೊಟ್ 97 ಶೇರ್ ಮಾಡಿದ್ದಾರೆ. ಅವರು ಮಾಡಲಾದ ಪೋಸ್ಟ್ ಅನ್ನು ಗಮನಿಸಿದರೆ ಈ ಕಾರು ಭಾರತಕ್ಕೆ ಬಂದಿಳಿದಿರುವುದು ಕಂಡು ಬರುತ್ತದೆ.

ಭಾರತೀಯ ಉದ್ಯಮಿಗಾಗಿ ವಿಶೇಷ ಕಾರನ್ನು ಸಿದ್ದಪಡಿಸಿದ ಫೆರಾರಿ

ಕೆಂಪು ಬಣ್ಣದಲ್ಲಿರುವ ಈ ಕಾರು ಹಾರ್ಡ್‌ಟಾಪ್ ಕನ್ವರ್ಟಿಬಲ್ ಮಾದರಿಯಾಗಿದೆ. ಈ ಕಾರಿನಲ್ಲಿ ಯಾವ ವಿಶೇಷ ಫೀಚರ್ ಗಳನ್ನು ಅಳವಡಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ ಕಾರಿನ ಬ್ಯಾಡ್ಜ್‌ಗಳ ಆಧಾರದ ಮೇಲೆ ಕಾರು ವಿವಿಧ ಫೀಚರ್ ಗಳನ್ನು ಹೊಂದಿದೆ ಎಂಬುದನ್ನು ಖಚಿತವಾಗಿ ಹೇಳಬಹುದು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಭಾರತೀಯ ಉದ್ಯಮಿಗಾಗಿ ವಿಶೇಷ ಕಾರನ್ನು ಸಿದ್ದಪಡಿಸಿದ ಫೆರಾರಿ

ಕಾರುಗಳ ಬಲಭಾಗ ಹಾಗೂ ಎಡಭಾಗದಲ್ಲಿ 'ಪಿ' ಅಕ್ಷರದ ಸ್ಟಿಕ್ಕರ್‌ಗಳಿವೆ. ಪಿ ಎಂದರೆ ಪೂನಾವಾಲಾ ಎಂದಾಗುತ್ತದೆ. ಇದು ಮಾತ್ರವಲ್ಲದೇ ಕಾರಿನ ಮೇಲೆ ಯೋಹಾನ್ ಪೂನವಾಲಾಗಾಗಿ ವಿಶೇಷವಾಗಿ ತಯಾರಿಸಿದ ಕಾರು ಎಂದು ಬರೆಯಲಾಗಿದೆ.

ಭಾರತೀಯ ಉದ್ಯಮಿಗಾಗಿ ವಿಶೇಷ ಕಾರನ್ನು ಸಿದ್ದಪಡಿಸಿದ ಫೆರಾರಿ

ಇದು ಯೋಹಾನ್ ಪೂನವಾಲಾರವರ ಗ್ಯಾರೇಜ್‌ನಲ್ಲಿರುವ ಎರಡನೇ ಫೆರಾರಿ ಕಾರು. ಯೋಹಾನ್ ಪೂನವಾಲಾ ಫೆರಾರಿ ಕಾರುಗಳನ್ನು ಮಾತ್ರವಲ್ಲದೆ ವಿವಿಧ ರೀತಿಯ ಸೂಪರ್ ಕಾರುಗಳನ್ನು ಸಹ ಹೊಂದಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಭಾರತೀಯ ಉದ್ಯಮಿಗಾಗಿ ವಿಶೇಷ ಕಾರನ್ನು ಸಿದ್ದಪಡಿಸಿದ ಫೆರಾರಿ

ಅವುಗಳಲ್ಲಿ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ ಆರ್ ರೋಡ್ ಸ್ಟರ್, ರೋಲ್ಸ್ ರಾಯ್ಸ್ ಫ್ಯಾಂಟಮ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್ ಹೆಡ್ ಕೂಪೆ, ಲ್ಯಾಂಬೊರ್ಗಿನಿ ಗಲ್ಲಾರ್ಡೊ, ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎಸ್ ಎಎಂಜಿ, ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರುಗಳು ಸೇರಿವೆ.

ಭಾರತೀಯ ಉದ್ಯಮಿಗಾಗಿ ವಿಶೇಷ ಕಾರನ್ನು ಸಿದ್ದಪಡಿಸಿದ ಫೆರಾರಿ

ಫೆರಾರಿ 488 ಪಿಸ್ತಾ ಸ್ಪೈಡರ್ ಕಾರಿನಲ್ಲಿ 3.9 ಲೀಟರಿನ ವಿ 8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 720 ಬಿಹೆಚ್‌ಪಿ ಪವರ್ ಹಾಗೂ 770 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಕೇವಲ 2.85 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಭಾರತೀಯ ಉದ್ಯಮಿಗಾಗಿ ವಿಶೇಷ ಕಾರನ್ನು ಸಿದ್ದಪಡಿಸಿದ ಫೆರಾರಿ

ಈ ಎಂಜಿನ್, ವರ್ಷದ ಎಂಜಿನ್ ಎಂಬ ಹಿರಿಮೆಯನ್ನು ಹೊಂದಿದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ ಗರಿಷ್ಠ 340 ಕಿ.ಮೀಗಳಾಗಿದೆ. ಈ ವೇಗಕ್ಕೆ ಅನುಸಾರವಾಗಿ ಈ ಕಾರಿನಲ್ಲಿ ಕಾರ್ಬನ್ ಫೈಬರ್ ರೇಸ್ ವ್ಹೀಲ್ ಗಳನ್ನು ಬಳಸಲಾಗುತ್ತದೆ. ಈ ವ್ಹೀಲ್ ಗಳು ಅಲ್ಯೂಮಿನಿಯಂ ವ್ಹೀಲ್ ಗಳಿಗಿಂತ ಹೆಚ್ಚು ಹಗುರವಾಗಿರುತ್ತವೆ.

ಭಾರತೀಯ ಉದ್ಯಮಿಗಾಗಿ ವಿಶೇಷ ಕಾರನ್ನು ಸಿದ್ದಪಡಿಸಿದ ಫೆರಾರಿ

ಈ ಕಾರಿನ ಆರಂಭಿಕ ಮಾದರಿಯ ಬೆಲೆ ಸುಮಾರು ರೂ.3 ಕೋಟಿಗಳಾಗಿದೆ. ಯೋಹಾನ್ ಪೂನಾವಾಲಾ ಖರೀದಿಸುತ್ತಿರುವ ಈ ಕಾರಿನಲ್ಲಿ ಹೆಚ್ಚುವರಿ ಆಕ್ಸೆಸರಿಸ್ ಗಳನ್ನು ಅಳವಡಿಸಿರುವುದರಿಂದ ಈ ಕಾರಿನ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಭಾರತೀಯ ಉದ್ಯಮಿಗಾಗಿ ವಿಶೇಷ ಕಾರನ್ನು ಸಿದ್ದಪಡಿಸಿದ ಫೆರಾರಿ

ಫೆರಾರಿ ಕಂಪನಿಯು ಫೆರಾರಿ 488 ಪಿಸ್ತಾ ಸ್ಪೈಡರ್ ಕಾರನ್ನು ಸೀಮಿತ ಆವೃತ್ತಿಯಲ್ಲಿ ಮಾತ್ರ ಮಾರಾಟ ಮಾಡಲು ಬಯಸಿದೆ. ಇದಕ್ಕಾಗಿ ಕಂಪನಿಯು ಈ ಕಾರಿನ 3,500 ಯುನಿಟ್ ಗಳನ್ನು ಮಾತ್ರ ತಯಾರಿಸುತ್ತಿದೆ.

Most Read Articles

Kannada
English summary
Ferrari manufactures special car for Indian billionaire. Read in Kannada.
Story first published: Tuesday, September 29, 2020, 17:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X