Apple iPhone 14 ಮೊಬೈಲ್ ಬೆಲೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಬೈಕ್‌ಗಳು...
ಮೊಬೈಲ್ ಮಾರುಕಟ್ಟೆಯಲ್ಲಿ ಕಾತುರದಿಂದ ಗ್ರಾಹಕರು ಎದುರುನೋಡುತ್ತಿದ್ದ 'ಐಫೋನ್ 14' (iPhone 14) ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಐಫೋನ್ 14' ಫೋನ್ ಎಂಟ್ರಿ ಕೊಡುತ್ತಿದ್ದಂತ್ತೆ ಐಫೋನ್ ಮಾರುಕಟ್ಟೆಯಲ್ಲಿ ಹಿಂದಿನ ಸರಣಿ ಫೋನ್ ಗಳ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ.

ಆ್ಯಪಲ್ ಪ್ರಕಾರ ಐಫೋನ್ 14 ಸಿರೀಸ್ ಅತ್ಯುತ್ತಮ ಸ್ಮಾರ್ಟ್‌ಫೋನ್. ಮ್ಯಾಕ್ಸ್ ವೇರಿಯೆಂಟ್ ಫೋನ್‌ನಲ್ಲಿ ಅತೀ ದೊಡ್ಡ ಡಿಸ್‌ಪ್ಲೆ ಹಾಗೂ ಬ್ಯಾಟರಿ ಲೈಫ್ ನೀಡಲಾಗಿದೆ. ಈ ಐಫೋನ್ 14 (ಟಾಪ್-ಸ್ಪೆಕ್) ಬೆಲೆಯು ರೂ, 1.90 ಲಕ್ಷವಾಗಿದೆ. ಆದರೆ ನೀವು ಬೈಕ್ ಉತ್ಸಾಹಿಗಳಾಗಿದ್ದರೆ ನಿಮಗೆ ಈ ಬೆಲೆಯಲ್ಲಿ ಹಲವಾರು ಬೈಕ್‌ಗಳು ಲಭ್ಯವಿದೆ. ಈ ಐಫೋನ್ 14 ಮೊಬೈಲ್ ಬೆಲೆಗೆ ನೀವು ಖರೀದಿಸಬಹುದಾದ ಕೆಲವು ಅತ್ಯುತ್ತಮ ಮೋಟಾರ್‌ಸೈಕಲ್‌ಗಳು ಇಲ್ಲಿವೆ.

ರಾಯಲ್ ಎನ್‌ಫೀಲ್ಡ್ ಹಂಟರ್ 350
ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಕಂಪನಿಯ ಜೆ-ಪ್ಲಾಟ್‌ಫಾರ್ಮ್‌ನಿಂದ ಆಧರಿಸಿದೆ. ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1,49,900 ಆಗಿದೆ. ಇದು ದೇಶದಲ್ಲಿ ಮಾರಾಟವಾಗುವ ಅತ್ಯಂತ ಕೈಗೆಟುಕುವ ಬೆಲೆಯ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಆಗಿದೆ.

ರಾಯಲ್ ಎನ್‌ಫೀಲ್ಡ್ ಹಂಟರ್ 350 ಮಾದರಿಯು ಮಿಟಿಯೊರ್ 350 ಮತ್ತು ಕ್ಲಾಸಿಕ್ 350 ಮಾದರಿಯಲ್ಲಿರುವಂತೆಯೇ 349 ಸಿಸಿ ಸಿಂಗಲ್ ಸಿಲಿಂಡರ್, ಟು ವಾಲ್ವ್, ಎಸ್‌ಓಹೆಚ್‌ಸಿ ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಹೊಂದಿದ್ದು, ಈ ಹೊಸ ಬೈಕ್ 5-ಸ್ಪೀಡ್ ಗೇರ್‌ಬಾಕ್ಸ್ ಮೂಲಕ 20.2 ಬಿಹೆಚ್‌ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಬೈಕ್ ಮಾದರಿಯು ಕ್ಲಾಸಿಕ್ ಮತ್ತು ಮಿಟಿಯೊರ್ ರೀತಿಯಲ್ಲಿಯೇ ಡಬಲ್ ಕ್ರೇಡಲ್ ಫ್ರೇಮ್ ಆಧರಿಸಿ ನಿರ್ಮಾಣವಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಸಿಂಗಲ್ ಚಾನೆಲ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಆಯ್ಕೆಗಳನ್ನು ಹೊಂದಿದೆ. ಜೊತೆಗೆ ಹೊಸ ಬೈಕಿನಲ್ಲಿ ಡ್ವಯಲ್ ಟೋನ್ ಹೊಂದಿರುವ ಟಿಯರ್-ಡ್ರಾಪ್ ವಿನ್ಯಾಸದ ಇಂಧನ ಟ್ಯಾಂಕ್, ಉದ್ದವಾದ ಸಿಂಗಲ್-ಪೀಸ್ ಸೀಟ್, ವೃತ್ತಾಕಾರವಾದ ಹಾಲೋಜೆನ್ ಹೆಡ್‌ಲ್ಯಾಂಪ್‌ಗಳು, ಟರ್ನ್ ಇಂಡಿಕೇಟರ್‌ಗಳು, ರಿಯರ್-ವ್ಯೂ ಮಿರರ್‌ಗಳು ಮತ್ತು ಸ್ವಲ್ಪ ಎತ್ತರದ ವಿನ್ಯಾಸದೊಂದಿಗೆ ಸ್ಕ್ರ್ಯಾಂಬ್ಲರ್ ಮಾದರಿಯಾಗಿರುವುದು ಸ್ಪಷ್ಟವಾಗುತ್ತದೆ.

ಇದರೊಂದಿಗೆ ಹೊಸ ಬೈಕಿನಲ್ಲಿ ಬೆಲೆ ಕಡಿತವಾಗಿ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗಿದ್ದು, ಹೊಸ ಬೈಕಿನಲ್ಲಿ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಟ್ರಿಪ್ಲರ್ ನ್ಯಾವಿಗೇಷನ್ ಅನ್ನು ಹೈ ಎಂಡ್ ಮಾದರಿಯಲ್ಲಿ ಮಾತ್ರ ನೀಡಲಾಗಿದೆ. ಆರಂಭಿಕ ಮಾದರಿಯಲ್ಲಿ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮಾತ್ರ ನೀಡಲಾಗಿದ್ದು, ಟ್ರಿಪ್ಲರ್ ನ್ಯಾವಿಗೇಷನ್ ಅನ್ನು ಆಕ್ಸೆಸರಿಸ್‌ನಲ್ಲಿ ಖರೀದಿ ಮಾಡಬಹುದು.

ಕೆಟಿಎಂ 200 ಡ್ಯೂಕ್
ಹಂಟರ್ 350 ನಂತೆ, 200 ಡ್ಯೂಕ್ ಹೊಸ ಮಾದರಿಯಲ್ಲ. ವಾಸ್ತವವಾಗಿ, ವಾರ್ಷಿಕ ಬೆಲೆ ಏರಿಕೆಯೊಂದಿಗೆ, ಇತ್ತೀಚೆಗೆ ಬೆಲೆ ಏರಿಕೆಯನ್ನು ಪಡೆದುಕೊಂಡಿತು. ಈ ಕೆಟಿಎಂ 200 ಡ್ಯೂಕ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1,91,693 ಆಗಿದೆ.

200 ಡ್ಯೂಕ್ ಒಂದು ದಶಕದ ಹಿಂದೆ ಭಾರತೀಯ ಬೈಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದ ಮಾದರಿಯಾಗಿದೆ. ಭಾರತೀಯ ಬೈಕರ್ ಅನ್ನು ಕೈಗೆಟುಕುವ ಕಾರ್ಯಕ್ಷಮತೆಗೆ ಈ ಬೈಕ್ ಅನ್ನು ತಂದಿದೆ. ಸಂಕ್ಷಿಪ್ತವಾಗಿ, ಇದು ಐಫೋನ್ ಬದಲಿಗೆ ಖರೀದಿಸಲು ಉತ್ತಮ ಮೋಟಾರ್ಸೈಕಲ್ ಆಗಿದೆ.

ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್
ಹೀರೋ ಕಂಪನಿಯು ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಮಾದರಿಯ ಖರೀದಿಗಾಗಿ ಎರಡನೇ ಹಂತದ ಬುಕ್ಕಿಂಗ್ ಅನ್ನು ಇತ್ತೀಚೆಗೆ ಪ್ರಾರಂಭಿಸಿತು. ಇದೀಗ ಎರಡನೇ ಬ್ಯಾಚ್‌ನಲ್ಲಿ ಮಾರಾಟಕ್ಕೆ ಲಭ್ಯವಿರುವ ಎಲ್ಲಾ ಯುನಿಟ್ ಗಳು ಮಾರಾಟವಾಗಿವೆ. ಇದರಿಂದ ಕಂಪನಿಯು ಈ ಅಡ್ವೆಂಚರ್ ಬೈಕಿನ ಎರಡನೇ ಬ್ಯಾಚ್‌ನ ಬುಕಿಂಗ್‌ಗಳನ್ನು ಸ್ಥಗಿತಗೊಳಿಸಿದೆ.

ಎರಡನೇ ಬ್ಯಾಚ್‌ನ ಅಡಿಯಲ್ಲಿ ಲಭ್ಯವಿರುವ ಒಟ್ಟು ಯುನಿಟ್ ಗಳ ಸಂಖ್ಯೆಯನ್ನು ಕಂಪನಿಯು ಘೋಷಿಸದಿದ್ದರೂ, ಮೊದಲ ಬ್ಯಾಚ್ ಮೋಟಾರ್‌ಸೈಕಲ್‌ಗಳಿಗೆ, ಅಂದರೆ 100 ಯೂನಿಟ್‌ಗಳಿಗೆ ಸಮಾನವಾಗಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಶಿಘ್ರದಲ್ಲೇ ಬುಕ್ಕಿಂಗ್ ಮೌಪ್ರಾರಂಭಿಸಾಹುದು. ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.52 ಲಕ್ಷವಾಗಿದೆ.

ಈ ಹೀರೋ ಎಕ್ಸ್‌ಪಲ್ಸ್ 200 4ವಿಯ ಫ್ಯಾಕ್ಟರಿ ಕಸ್ಟಮ್ ರೂಪಾಂತರವನ್ನು ಹೆಚ್ಚು ಆಫ್-ರೋಡ್ ಸಿದ್ಧ ವೈಶಿಷ್ಟ್ಯಗಳು ಮತ್ತು ವಿಶೇಷಣಗಳೊಂದಿಗೆ ಪಡೆಯಬಹುದು. ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಮಾದರಿಯು ಫ್ಯಾಕ್ಟರಿ ಫಿಟಡ್ ರ್‍ಯಾಲಿ ಕಿಟ್ ಅನ್ನು ಪಡೆಯುತ್ತಾರೆ.

ಈ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಬೈಕಿನಲ್ಲಿ 200 ಸಿಸಿ ನಾಲ್ಕು-ವಾಲ್ವ್, ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 18.9 ಬಿಹೆಚ್‍ಪಿ ಪವರ್ ಮತ್ತು 13.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಅದೇ 7-ಫಿನ್ ಆಯಿಲ್ ಕೂಲರ್ ಅನ್ನು ಹೊಂದಿದೆ, ಇನ್ನು ಈ ಬೈಕಿನ250 ಎಂಎಂ ಟ್ರ್ಯಾವೆಲ್ ನೊಂದಿಗೆ ಎತ್ತರದ ಮತ್ತು ಸಂಪೂರ್ಣ-ಹೊಂದಾಣಿಕೆಯ ಮುಂಭಾಗದ ಸಸ್ಪೆಕ್ಷನ್ ಮತ್ತು 220 ಎಂಎಂ ಟ್ರ್ಯಾವೆಲ್ ನೊಂದಿಗೆ ಸಂಪೂರ್ಣ-ಹೊಂದಾಣಿಕೆ ಮಾಡಬಹುದಾದ 10-ಹಂತದ ಹಿಂಭಾಗದ ಸಸ್ಪೆಕ್ಷನ್ ಅನ್ನು ಇದು ಹೊಂದಿದೆ.

ಯಮಹಾ ಆರ್15 ವಿ4.0
ಈ ಯಮಹಾ ಆರ್15 ವಿ4.0 ಹೆಚ್ಚು ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ. ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1,78,900 ಆಗಿದೆ. ಈ ಬೈಕಿನಲ್ಲಿ , ರಿಫೈನ್ಡ್ 155 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್, ಅನ್ನು ಹೊಂದಿದೆ, , ಸ್ಲಿಪ್ಪರ್ ಕ್ಲಚ್ ಮತ್ತು ವಿಶ್ವಾಸಾರ್ಹ ಜಪಾನೀಸ್ ಟೆಕ್ ಅನ್ನು ಒಳಗೊಂಡಿದೆ.


Click it and Unblock the Notifications