ಜನಪ್ರಿಯ ಕವಾಸಕಿ ನಿಂಜಾ ಸೂಪರ್‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ
ಚೀನಾ ಒರಿಜಿನಲ್ ವಸ್ತುಗಳನ್ನು ಕಾಪಿ ಮಾಡುವುದರಲ್ಲಿ ಎತ್ತಿದ ಕೈ. ಒರಿಜನಲ್ ಮಾದರಿಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಚೀನಾ ಡೂಪ್ಲಿಕೇಟ್ ಅನ್ನು ತಯಾರಿಸುತ್ತಾರೆ. ಅದೇ ರೀತಿ ಹಲವಾರು ಜನಪ್ರಿಯ ವಾಹನಗಳ ಡಿಸೈನ್ ಕದ್ದು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಜನಪ್ರಿಯವಾದ ಹಲವು ಕಾರು ಮತ್ತು ಬೈಕುಗಳ ಡಿಸೈನ್ ಕದ್ದು ಹಲವು ಬಾರಿ ಛೀಮಾರಿ ಹಾಕಿಸಿಕೊಂಡರು ಕೂಡ ಚೀನಾ ಮಾತ್ರ ಕಾಪಿ ಮಾಡುವ ಕುತಂತ್ರ ಬುದ್ದಿಯನ್ನು ಮಾತ್ರ ಇನ್ನು ಬಿಟ್ಟಿಲ್ಲ. ಚೀನಾ ಜನಪ್ರಿಯ ಮಾದರಿಗಳ ಡಿಸೈನ್ ಕದ್ದು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದನ್ನು ಒಂದು ಹವ್ಯಾಸ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು.

ಇದೇ ರೀತಿ ಇತ್ತೀಚೆಗೆ ಜನಪ್ರಿಯ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಲೀಟರ್-ಕ್ಲಾಸ್ ಸೂಪರ್‌ಬೈಕ್‌ನ ಡಿಸೈನ್ ಅನ್ನು ಚೀನಾ ಮೂಲದ ಕ್ಸಿನ್‌ಶಿಜಿ ಕಂಪನಿಯು ಕಾಪಿ ಮಾಡಿ ಫಿಂಜಾ 500 ಎಂಬ ಬೈಕನ್ನು ತಯಾರಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಸೂಪರ್‌ಬೈಕ್‌ನ ಅದೇ ರೀತಿಯ ವಿನ್ಯಾಸವನ್ನು ಈ ಕ್ಸಿನ್‌ಶಿಜಿ ಫಿಂಜಾ 500 ಬೈಕ್ ಹೊಂದಿದೆ. ಈ ಫಿಂಜಾ 500 ಬೈಕಿನಲ್ಲಿ ಕವಾಸಕಿ ಸೂಪರ್‌ಬೈಕ್‌ನಲ್ಲಿರುವಂತಹ ಬಣ್ಣ ಮತ್ತು ಡೆಕಲ್‌ಗಳನ್ನು ಹೊಂದಿವೆ. ಫಿಂಜಾ 500 ಟ್ವಿನ್-ಸ್ಪರ್ ಫ್ರೇಮ್ ನಲ್ಲಿ ನಿರ್ಮಿಸಲಾಗಿದೆ.

ಇನ್ನು ಈ ಬೈಕಿನಲ್ಲಿ ಮಸ್ಕಲರ್ ಫ್ಯೂಯಲ್ ಟ್ಯಾಂಕ್, ಎತ್ತರಿಸಿದ ಫ್ಯೂಯಲ್ ಟ್ಯಾಂಕ್, ವಿಂಡ್‌ಸ್ಕ್ರೀನ್, ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು, ಏರ್ ಇಂಟೆಕ್ ವೆಂಟ್‌ನಲ್ಲಿ ಇರಿಸಲಾಗಿರುವ ಎಲ್‌ಇಡಿ ಡಿಆರ್‌ಎಲ್, ಸ್ಟೆಪ್-ಅಪ್ ಸೀಟ್, ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಮತ್ತು ಮಿರರ್-ಮೌಂಟೆಡ್ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿವೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಫಿಂಜಾ 500 ಬೈಕ್ ವಿನ್ಯಾಸ ಮಾತ್ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಸೂಪರ್‌ಬೈಕ್‌ನಂತೆ ಇದೆ. ಉಳಿದ ಮ್ಯಾಕನಿಕಲ್ ಅಂಶಗಳಲ್ಲಿ ಬದಲಾವಣಗಳನ್ನು ಮಾಡಲಾಗಿದೆ. ಇದರಲ್ಲಿ 500 ಸಿಸಿ, ಪ್ಯಾರಲಲ್ ಟ್ಬಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 49.3 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದ ಫ್ರೀ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಇನ್ನು ಇದರಲ್ಲಿ ಮುಂಭಾಗ ಮತ್ತು ಹಿಂಭಾಗದ ಸಿಸ್ಕ್ ಬ್ರೇಕ್ ಅನ್ನು ಕೂಡ ನೀಡಲಾಗಿದೆ. ಫಿಂಜಾ 500 ಬೈಕ್ ಎಲ್ಇಡಿ ಹೆಡ್ ಲೈಟ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ನಯವಾದ ಟೈಲ್ ಟೈಲ್ಯಾಂಪ್ ಅನ್ನು ಹೊಂದಿದೆ.

ಈ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಲೀಟರ್-ಕ್ಲಾಸ್ ಬೈಕ್‌ಗಳಲ್ಲಿ ಒಂದಾಗಿದೆ. 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ 998 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 13,200 ಆರ್‌ಪಿಎಂನಲ್ಲಿ 200 ಬಿಹೆಚ್‌ಪಿ ಪವರ್ ಮತ್ತು 11,400 ಆರ್‌ಪಿಎಂನಲ್ಲಿ 114 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಇದನ್ನು ಕಾಪಿ ಮಾಡಿದ ಫಿಂಜಾ 500 ಬೈಕಿನ ಎಂಜಿನ್ ಕೇವಲ 49.3 ಬಿಹೆಚ್‌ಪಿ ಪವರ್ ಮಾತ್ರ ಉತ್ಪಾದಿಸುತ್ತದೆ. ಎಂಜಿನ್, ಫೀಚರ್ಸ್ ಮತ್ತು ತಂತ್ರಜ್ಙಾನಗಳ ವಿಷಯದಲ್ಲಿ ಫಿಂಜಾ 500 ಬೈಕ್ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕಿನ ಹತ್ತಿರವು ಕೂಡ ಸುಲಿಯುವುದಿಲ್ಲ, ಅಷ್ಟು ದೊಡ್ಡ ಅಂತರವಿರದೆ.


Click it and Unblock the Notifications