ಸಾಮಾನ್ಯ ಜನರ 'ಅಮೃತ್ ಭಾರತ್' ರೈಲು ಬೆಂಗಳೂರಿಗೆ ಬಂತು: ಕಡಿಮೆ ಖರ್ಚು, ಅತ್ಯಾಧುನಿಕ ಸೌಕರ್ಯ

ಕರ್ನಾಟಕವು ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರೀಮಿಯಂ ಸೆಮಿ ಹೈಸ್ವೀಡ್ ರೈಲಾಗಿ ಕಾರ್ಯಾಚರಣೆ ನಡೆಸುತ್ತಿದೆ. ಇವುಗಳ ಟಿಕೆಟ್ ದರ ಕೊಂಚ ಹೆಚ್ಚಿದ್ದು, ರಾತ್ರಿ ಪ್ರಯಾಣ ಅಸಾಧ್ಯ. ಹಾಗಾಗಿ, ಸಾಮಾನ್ಯ ವರ್ಗದವರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ 'ಅಮೃತ್ ಭಾರತ್' ರೈಲುಗಳನ್ನು ಪರಿಚಯಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು, ಡಿ.30ರಂದು (ಶನಿವಾರ) ಅಯೋಧ್ಯೆಯ ರೈಲು ನಿಲ್ದಾಣದಲ್ಲಿ ಮಾಲ್ಡಾ-ಬೆಂಗಳೂರು ಮತ್ತು ದೆಹಲಿ-ಅಯೋಧ್ಯೆ-ದರ್ಬಂಗಾ ಮಧ್ಯೆ ಸಂಚರಿಸುವ 2 ಅಮೃತ್ ಭಾರತ್ (Amrit Bharat) ರೈಲುಗಳಿಗೆ ಹಸಿರು ನಿಶಾನೆ ತೋರಿಸಿದ್ದರು. ಇದರೊಂದಿಗೆ ಕೊಯಮತ್ತೂರು-ಬೆಂಗಳೂರು, ಮಂಗಳೂರು-ಮಡ್‌ಗಾಂವ್‌, ಅಯೋಧ್ಯೆ-ಆನಂದವಿಹಾರ್, ನವದೆಹಲಿ-ವೈಷ್ಣೋದೇವಿ, ಅಮೃತಸರ-ನವದೆಹಲಿ, ಹಾಗೂ ಜಲ್ನಾ-ಮುಂಬೈ ನಡುವೆ ಕಾರ್ಯಾಚರಣೆ ನಡೆಸುವ 6 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೂ ಚಾಲನೆ ನೀಡಿದ್ದರು.

ಸಾಮಾನ್ಯ ಜನರ ಅಮೃತ್ ಭಾರತ್ ರೈಲು ಬೆಂಗಳೂರಿಗೆ ಬಂತು: ಕಡಿಮೆ ಖರ್ಚು, ಅತ್ಯಾಧುನಿಕ ಸೌಕರ್ಯ

ಪಶ್ಚಿಮ ಬಂಗಾಳದ ಮಾಲ್ಡಾ (Malda)ದಿಂದ ಶನಿವಾರ ಹೊರಟಿದ್ದ ಮೊದಲ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸೋಮವಾರ ಸಂಜೆ 7.40ರ ಸುಮಾರಿಗೆ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (Sir M.Visvesvaraya Terminal) ಅನ್ನು ತಲುಪಿತು. ಸಾಮಾಜಿಕ ಜಾಲತಾಣದಲ್ಲಿ ಈ ರೈಲಿನಲ್ಲಿ ಪ್ರಯಾಣಿಸಿದವರೂ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಹಿಂದೆ, ಅಮೃತ್ ಭಾರತ್‌ ಎಕ್ಸ್‌ಪ್ರೆಸ್ ರೈಲು ವಂದೇ ಸಾಧಾರಣ್ (Vande Sadharan) ಎಂಬ ಹೆಸರನ್ನು ಹೊಂದಿತ್ತು. ಅಮೃತ್ ಭಾರತ್‌ ರೈಲುವೊಂದನ್ನು ತಯಾರಿಸಲು ರೈಲ್ವೆ ಇಲಾಖೆಯೂ 65 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಹೇಳಲಾಗಿದೆ. ಈ ರೈಲಿನಲ್ಲಿ ಸುಮಾರು 1,834 ಜನರು ಆರಾಮದಾಯವಾಗಿ ಪ್ರಯಾಣಿಸಬಹುದು.

ಸಾಮಾನ್ಯ ಜನರ ಅಮೃತ್ ಭಾರತ್ ರೈಲು ಬೆಂಗಳೂರಿಗೆ ಬಂತು: ಕಡಿಮೆ ಖರ್ಚು, ಅತ್ಯಾಧುನಿಕ ಸೌಕರ್ಯ

ಅಮೃತ್ ಭಾರತ್‌ ಗಂಟೆಗೆ 130 ಕಿಮೀ ಗರಿಷ್ಠ ವೇಗದಲ್ಲಿ ಸಂಚರಿಸಲಿದೆ. ಮುಂಭಾಗ - ಹಿಂಭಾಗ ಎಂಜಿನ್ ಒಳಗೊಂಡಿದ್ದು, ದ್ವಿತೀಯ ದರ್ಜೆಯ ಸ್ಲೀಪರ್ ಕೋಚ್‌ ಹಾಗೂ ಕಾಯ್ದಿರಿಸದ ಕೋಚ್‌ಗಳನ್ನು ಹೊಂದಿದೆ. ಇದರಲ್ಲಿ ಹವಾನಿಯಂತ್ರಿತ (ಎಸಿ) ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳು ಇರುವುದಿಲ್ಲ. ಮೊಬೈಲ್ ಚಾರ್ಜಿಂಗ್ ಪಾಯಿಂಟ್‌, ಎಲ್‌ಇಡಿ ಲೈಟ್ ಸೇರಿದಂತೆ ಅತ್ಯಾಧುನಿಕ ಸೌಕರ್ಯಗಳು ಇವೆ.

ಫುಡ್ ಟೇಬಲ್‌, ಮೊಬೈಲ್ & ಬಾಟಲ್ ಹೋಲ್ಡರ್, ಸುರಕ್ಷತೆಯ ಸಲುವಾಗಿ ಸಿಸಿಟಿವಿಯನ್ನು ಸಹ ಒಳಗೊಂಡಿದೆ. ಅಮೃತ್ ಭಾರತ್‌ ರೈಲುಗಳನ್ನು ಹಗಲು - ರಾತ್ರಿ ವೇಳೆಯ ಸಂಚಾರಕ್ಕೆ ಉಪಯೋಗಿಸಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗಿದೆ. ಒಟ್ಟು 22 ಕೋಚ್‌ಗಳನ್ನು ಹೊಂದಿರುವ ಈ ರೈಲು, 800 ಕಿಲೋಮೀಟರ್‌ ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಬಲ್ಲದು.

ಇನ್ನು, ಅಮೃತ್ ಭಾರತ್‌ ರೈಲು ಅ.29 ರಂದು ಮುಂಬೈನ ವಾಡಿ ಬಂದರ್ ಯಾರ್ಡ್‌ಗೆ ಆಗಮಿಸಿತ್ತು. ನವೆಂಬರ್ 8 ರಂದು ಅಹಮದಾಬಾದ್ - ಮುಂಬೈ ನಡುವೆ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ಸುಮಾರು 400 ಅಮೃತ್ ಭಾರತ್‌ ರೈಲುಗಳನ್ನು ಚೆನ್ನೈ ಕೋಚ್ ಇಂಟಿಗ್ರೇಟೆಡ್ ಫ್ಯಾಕ್ಟರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ವರದಿಯಾಗಿದೆ. ಶೀಘ್ರದಲ್ಲೇ ದೇಶದ ನಾನಾ ಭಾಗಗಳಲ್ಲಿ ಈ ರೈಲುಗಳು ಸಂಚಾರ ನಡೆಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, January 2, 2024, 13:39 [IST]
English summary
First amrit bharat express reach bengaluru from malda low cost details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+