ಖ್ಯಾತ ಸೆಲೆಬ್ರಿಟಿಗಳ ಮೊದಲ ಕಾರುಗಳಿವು: ಹಲವರ ಬಳಿಯಿದ್ದವು ಮಾರುತಿ 800, ಪ್ರೀಮಿಯರ್ ಪದ್ಮಿನಿ

ಭಾರತೀಯರಿಗೆ ತಮ್ಮ ಜೀವನದಲ್ಲಿ ಮೊದಲು ಖರೀದಿಸದ ವಸ್ತುಗಳೆಂದರೆ ಅದೇನೋ ಭಾವನಾತ್ಮಕ ಅನುಬಂಧ ಇದ್ದೆ ಇರುತ್ತದೆ. ಅದು ವಾಚ್, ಫೋನ್, ಕಾರು ಹೀಗೆ ಯಾವುದೇ ಒಂದು ವಸ್ತುವನ್ನು ಮೊದಲ ಬಾರಿಗೆ ಖರೀದಿಸಿದ ವಸ್ತುಗಳ ಮೇಲೆ ಎಲ್ಲಿಲ್ಲದ ಪ್ರೀತಿ ಇರುತ್ತದೆ.

ಅದರಲ್ಲೂ ಸೆಲೆಬ್ರಿಟಿಗಳಿಗು ಸಹ ತಮ್ಮ ಮೊದಲ ಕಾರುಗಳನ್ನು ಹೊಂದುವುದು ಅವರಿಗೆ ಸ್ಮರಣೀಯ ಅನುಭವವಾಗಿದೆ.

ಖ್ಯಾತ ಸೆಲೆಬ್ರಿಟಿಗಳ ಮೊದಲ ಕಾರುಗಳಿವು: ಹಲವರ ಬಳಿಯಿದ್ದವು ಮಾರುತಿ 800, ಪ್ರೀಮಿಯರ್ ಪದ್ಮಿನಿ

ಇನ್ನು ಅಭಿಮಾನಿಗಳಿಗೆ ತಮ್ಮ ಫೇವರೆಟ್ ನಟ, ನಟಿಯರು, ಕ್ರಿಕೆಟ್ ಆಟಗಾರರ ಬಗ್ಗೆ ತಿಳಿದುಕೊಳ್ಳವ ಆಸಕ್ತಿ ಹೆಚ್ಚು. ಈ ನಿಟ್ಟಿನಲ್ಲಿ ಭಾರತದ ಖ್ಯಾತ ಸೆಲಬ್ರಿಟಿಗಳು ಮತ್ತು ಅವರು ತಮ್ಮ ಜೀವನದಲ್ಲಿ ಮೊದಲು ಖರೀದಿಸಿದ ಕಾರುಗಳ ವಿವರಗಳನ್ನು ಕೆಳಗೆ ನೀಡಲಾಗಿದೆ.

ಖ್ಯಾತ ಸೆಲೆಬ್ರಿಟಿಗಳ ಮೊದಲ ಕಾರುಗಳಿವು: ಹಲವರ ಬಳಿಯಿದ್ದವು ಮಾರುತಿ 800, ಪ್ರೀಮಿಯರ್ ಪದ್ಮಿನಿ

ರಜನಿಕಾಂತ್-ಪ್ರೀಮಿಯರ್ ಪದ್ಮಿನಿ

ಸೂಪರ್‌ಸ್ಟಾರ್ ರಜನಿಕಾಂತ್ ಅವರು ಕ್ಲಾಸಿ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ, ಅವರು ಸುದೀರ್ಘಕಾಲದವರೆಗೆ ಟೊಯೊಟಾ ಇನ್ನೋವಾವನ್ನು ಬಳಸಿದ್ದರು. ಅವರು ಈಗ BMW X5 ಸೇರಿದಂತೆ ಒಂದೆರಡು ಐಷಾರಾಮಿ SUV ಗಳನ್ನು ಹೊಂದಿದ್ದರೂ, ಅವರ ಮೊದಲ ಕಾರು ಪ್ರೀಮಿಯರ್ ಪದ್ಮಿನಿಯಲ್ಲಿ ಇಂದಿಗೂ ಆಗಾಗ ಓಡಾಡುತ್ತಾರೆ.

ಖ್ಯಾತ ಸೆಲೆಬ್ರಿಟಿಗಳ ಮೊದಲ ಕಾರುಗಳಿವು: ಹಲವರ ಬಳಿಯಿದ್ದವು ಮಾರುತಿ 800, ಪ್ರೀಮಿಯರ್ ಪದ್ಮಿನಿ

ಸಚಿನ್ ತೆಂಡೂಲ್ಕರ್-ಮಾರುತಿ 800

ಸಚಿನ್ ತಮ್ಮ ಕ್ರಿಕೆಟ್ ಕೌಶಲ್ಯದ ಜೊತೆಗೆ, ಕಾರುಗಳೆಂದರೆ ಬಹಳ ಇಷ್ಟಪಡುತ್ತಾರೆ. 'ಮಾಸ್ಟರ್ ಬ್ಲಾಸ್ಟರ್' ಕಾರುಗಳ ದೊಡ್ಡ ಸಂಗ್ರಹವನ್ನೇ ಹೊಂದಿದ್ದಾರೆ. ಈ ಕ್ರಿಕೆಟ್‌ ದಿಗ್ಗಜ ತಮ್ಮ ಜೀವನದಲ್ಲಿ ಮೊದಲಿಗೆ ಮಾರುತಿ 800 ಅನ್ನು ಖರೀದಿಸಿದ್ದರು. 80ರ ದಶಕದಲ್ಲಿ ಬಿಡುಗಡೆಯಾದ ನಂತರ ಅವರು SS80 ಅನ್ನು ಖರೀದಿಸಿದರು.

ಖ್ಯಾತ ಸೆಲೆಬ್ರಿಟಿಗಳ ಮೊದಲ ಕಾರುಗಳಿವು: ಹಲವರ ಬಳಿಯಿದ್ದವು ಮಾರುತಿ 800, ಪ್ರೀಮಿಯರ್ ಪದ್ಮಿನಿ

ದೀಪಿಕಾ ಪಡುಕೋಣೆ-ಆಡಿ Q7

ಅನೇಕ ಸೆಲೆಬ್ರಿಟಿಗಳು ತಮ್ಮ ಮೊದಲ ಕಾರನ್ನಾಗಿ ಆಡಿ Q7 ಹೊಂದಿದ್ದರೆ, ಇವರಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. 'ಓಂ ಶಾಂತಿ ಓಂ' ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ಪಾದಾರ್ಪಣೆ ಮಾಡಿದ ನಂತರ ಅವರು ಕಪ್ಪು ಬಣ್ಣದ Audi Q7 ಅನ್ನು ಖರೀದಿಸಿದರು.

ಖ್ಯಾತ ಸೆಲೆಬ್ರಿಟಿಗಳ ಮೊದಲ ಕಾರುಗಳಿವು: ಹಲವರ ಬಳಿಯಿದ್ದವು ಮಾರುತಿ 800, ಪ್ರೀಮಿಯರ್ ಪದ್ಮಿನಿ

ಕತ್ರಿನಾ ಕೈಫ್-ಆಡಿ Q7

ಒಂದು ಕಾಲದಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಡುವ ಹೊಸಬರಲ್ಲಿ ಆಡಿ ಕ್ಯೂ7 ಅತ್ಯಂತ ಜನಪ್ರಿಯ ಮತ್ತು ಆದ್ಯತೆಯ ಆಯ್ಕೆಯಾಗಿತ್ತು. ಹಾಗಾಗಿಯೇ ನಟಿ ಕತ್ರಿನಾ ಕೈಫ್ ತಮಗಾಗಿ Q7 ಅನ್ನು ಖರೀದಿಸಿದ್ದರು. ಇದೀಗ ಅವರು ಬಳಸುತ್ತಿರುವ ರೇಂಜ್ ರೋವರ್ ಖರೀದಿಗೂ ಮುನ್ನ ಸುಮಾರು ವರ್ಷ ಆಡಿ ಕ್ಯೂ7 ಅನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದರು.

ಖ್ಯಾತ ಸೆಲೆಬ್ರಿಟಿಗಳ ಮೊದಲ ಕಾರುಗಳಿವು: ಹಲವರ ಬಳಿಯಿದ್ದವು ಮಾರುತಿ 800, ಪ್ರೀಮಿಯರ್ ಪದ್ಮಿನಿ

ಶ್ರದ್ಧಾ ಕಪೂರ್-ಮರ್ಸಿಡಿಸ್-ಬೆನ್ಜ್ ML-ಕ್ಲಾಸ್

ಶ್ರದ್ಧಾ ಕಪೂರ್ ತಮ್ಮ ಖಾಸಗಿ ಜೀವನವನ್ನು ಮುಚ್ಚಿಡುವ ಮೂಲಕ ಅತ್ಯಂತ ಕಡಿಮೆ-ಪ್ರೊಫೈಲ್ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಒಬ್ಬರು. ಆದರೂ ಐಷಾರಾಮಿ ವಿಷಯಕ್ಕೆ ಬಂದರೆ, ಇತರ ತಾರೆಗಳಿಗಿಂತ ಮುಂದಿದ್ದಾರೆ. ತಮ್ಮ ಮೊದಲ ವಾಹನವಾಗಿ ಮರ್ಸಿಡಿಸ್-ಬೆನ್ಜ್ ML-ಕ್ಲಾಸ್‌ (GLE) ಮಾದರಿಯನ್ನು ಖರೀದಿಸಿದ್ದರು.

ಖ್ಯಾತ ಸೆಲೆಬ್ರಿಟಿಗಳ ಮೊದಲ ಕಾರುಗಳಿವು: ಹಲವರ ಬಳಿಯಿದ್ದವು ಮಾರುತಿ 800, ಪ್ರೀಮಿಯರ್ ಪದ್ಮಿನಿ

ಕಾಜೋಲ್-Maruti 1000

ಮಾರುತಿ 1000 ದೇಶದ ಮೊದಲ ಐಷಾರಾಮಿ ಸೆಡಾನ್‌ಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಅನೇಕ ಸೆಲೆಬ್ರಿಟಿಗಳು ಮಾರುತಿ 1000 ಅನ್ನು ಹೊಂದಿದ್ದರು. ಅದರಲ್ಲಿ ನಟಿ ಕಾಜೋಲ್ ಕೂಡ ಒಬ್ಬರು. ಅಲ್ಲದೇ ಈ ಬಾಲಿವುಡ್ ನಟಿಯ ಮೊದಲ ಕಾರು ಕೂಡು ಮಾರುತಿ 1000 ಆಗಿದ್ದು, ಇದು ಬೂದು ಬಣ್ಣದ ಆಕರ್ಷಣೀಯ ಮಾದರಿಯಾಗಿತ್ತು.

ಖ್ಯಾತ ಸೆಲೆಬ್ರಿಟಿಗಳ ಮೊದಲ ಕಾರುಗಳಿವು: ಹಲವರ ಬಳಿಯಿದ್ದವು ಮಾರುತಿ 800, ಪ್ರೀಮಿಯರ್ ಪದ್ಮಿನಿ

ಪ್ರಿಯಾಂಕಾ ಚೋಪ್ರಾ-Mercedes-Benz S-ಕ್ಲಾಸ್

ಎಷ್ಟೇ ಕಾರುಗಳು ಬಂದರೂ ಮರ್ಸಿಡಿಸ್-ಬೆನ್ಝ್ ಎಸ್-ಕ್ಲಾಸ್ ಯಾವಾಗಲೂ ಸೆಲಬ್ರಿಟಿಗಳಿಗೆ ಶ್ರೇಷ್ಠ ಆಯ್ಕೆಯಾಗಿ ಉಳಿಯುತ್ತದೆ. ಬಾಲಿವುಡ್ ಕೂಡ ಎಸ್-ಕ್ಲಾಸ್ ಅನ್ನು ಇಷ್ಟಪಡುತ್ತದೆ, ಅದಕ್ಕಾಗಿಯೇ ಇದು ಸೆಲೆಬ್ರಿಟಿಗಳ ಜನಪ್ರಿಯ ಆಯ್ಕೆಯಾಗಿದೆ. ಪ್ರಿಯಾಂಕಾ ಚೋಪ್ರಾ ಕೂಡ ತನ್ನ ಮೊದಲು ಮರ್ಸಿಡಿಸ್-ಮೇಬ್ಯಾಕ್ S560 ಕಾರನ್ನು ಖರೀದಿಸಿದ್ದರು.

ಖ್ಯಾತ ಸೆಲೆಬ್ರಿಟಿಗಳ ಮೊದಲ ಕಾರುಗಳಿವು: ಹಲವರ ಬಳಿಯಿದ್ದವು ಮಾರುತಿ 800, ಪ್ರೀಮಿಯರ್ ಪದ್ಮಿನಿ

ಕಂಗನಾ ರನೌತ್-BMW 7-ಸಿರೀಸ್

ಬಾಲಿವುಡ್‌ನ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಕಂಗನಾ ರನಾವತ್ ತಮ್ಮ ಮೊದಲ ಕಾರಾಗಿ ಬಿಳಿ-ಬಣ್ಣದ BMW 7-ಸಿರೀಸ್ ಖರೀದಿಸಿದ್ದರು. ಇವರ ಬಳಿಯು ಹಲವಾರು ಕಾರುಗಳ ಸಂಗ್ರಹವಿದ್ದು, ಸಿನಿರಂಗದಲ್ಲಿ ನೆಲೆಯೂರುವುದಕ್ಕೂ ಮುನ್ನ ಎಂಟ್ರಿ ಲೆವಲ್ ಕಾರುಗಳನ್ನು ಸಹ ಬಳಕೆ ಮಾಡಿದ್ದಾರೆ.

ಖ್ಯಾತ ಸೆಲೆಬ್ರಿಟಿಗಳ ಮೊದಲ ಕಾರುಗಳಿವು: ಹಲವರ ಬಳಿಯಿದ್ದವು ಮಾರುತಿ 800, ಪ್ರೀಮಿಯರ್ ಪದ್ಮಿನಿ

ಆಲಿಯಾ ಭಟ್-ಆಡಿ Q7

ಆಲಿಯಾ ಭಟ್ ಪ್ರಧಾನವಾಗಿ ರೇಂಜ್ ರೋವರ್ ಅನ್ನು ಬಳಸುತ್ತಿದ್ದಾರೆ. ಆಕೆಯ ಮೊದಲ ಕಾರು ಕೂಡ ಆಡಿ ಕ್ಯೂ 7 ಆಗಿತ್ತು, ಇದನ್ನು ಅವರು ಚಲನಚಿತ್ರೋದ್ಯಮದಲ್ಲಿ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡ ಬಳಿಕ ಖರೀದಿಸಿದರು. Audi Q7 ಇನ್ನೂ ಆಕೆಯ ಸಂಗ್ರಹಣೆಯಲ್ಲಿದೆ, ಇವರ ಬಳಿ Audi A6, Audi Q5 ಮತ್ತು ರೇಂಜ್ ರೋವರ್‌ನಂತಹ ಇತರ ಕಾರುಗಳು ಸಹ ಇವೆ.

ಖ್ಯಾತ ಸೆಲೆಬ್ರಿಟಿಗಳ ಮೊದಲ ಕಾರುಗಳಿವು: ಹಲವರ ಬಳಿಯಿದ್ದವು ಮಾರುತಿ 800, ಪ್ರೀಮಿಯರ್ ಪದ್ಮಿನಿ

ಇಮ್ತಿಯಾಜ್ ಅಲಿ-ಮಾರುತಿ 800

ತಮ್ಮ ಚಿತ್ರಗಳ ಮೂಲಕ ಕಥೆ-ಹೇಳಿಕೆಗೆ ಜನಪ್ರಿಯತೆ ಗಳಿಸಿದ್ದ ಖ್ಯಾತ ಬಾಲಿವುಡ್ ಚಲನಚಿತ್ರ ನಿರ್ದೇಶಕ ಇಮ್ತಿಯಾಜ್ ಅಲಿ ಅವರು ಪ್ರಸ್ತುತ ಒಂದೆರಡು ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ಆದರೆ ತಮ್ಮ ವೃತ್ತಿ ಜೀವನ ಆರಂಭದಲ್ಲಿ ಮಾರುತಿ ಸುಜುಕಿ 800 ಅನ್ನು ಖರೀದಿಸಿದ್ದರು. ಇತ್ತೀಚಿಗೆ, ಇಮ್ತಿಯಾಜ್ ಅಲಿ ಅವರು ತಮ್ಮ ಆರಂಭಿಕ ದಿನಗಳಲ್ಲಿ ಇದ್ದ 800 ಕಾರಿನ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಖ್ಯಾತ ಸೆಲೆಬ್ರಿಟಿಗಳ ಮೊದಲ ಕಾರುಗಳಿವು: ಹಲವರ ಬಳಿಯಿದ್ದವು ಮಾರುತಿ 800, ಪ್ರೀಮಿಯರ್ ಪದ್ಮಿನಿ

ಸಾರಾ ಅಲಿ ಖಾನ್-ಹೋಂಡಾ ಸಿಆರ್-ವಿ

ಬಾಲಿವುಡ್‌ನ ಹೊಸ ನಟಿಯರಲ್ಲಿ ಒಬ್ಬರಾದ ಸಾರಾ ಅಲಿ ಖಾನ್ ಕೂಡ ಪಟೌಡಿಯ ರಾಜಮನೆತನಕ್ಕೆ ಸೇರಿದವರು. ಇವರು ಅತ್ಯುತ್ತಮ ಐಷಾರಾಮಿ ಕಾರುಗಳನ್ನು ಹೊಂದಬಹುದು. ಆದರೂ ಅವರು ಮೊದಲ ಬಾರಿಗೆ ಹೋಂಡಾ CR-V ಮಾದರಿಯ್ನು ಹೊಂದುವ ಮೂಲಕ ಸರಳತೆಯನ್ನು ತೋರಿದ್ದರು. CR-V ಕಾರಿನಲ್ಲಿ ಸಾರಾ ಅವರು ಇಂದಿಗೂ ಓಡಾಡುತ್ತಾರೆ.

Article Published On: Tuesday, July 19, 2022, 19:48 [IST]
English summary
First Cars of Famous Celebrities Sachin Maruti 800 Rajinikanth Premier Padmini
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+