ಈ ನಗರಗಳ ನಡುವೆ ಮೊದಲ ವಂದೇ ಭಾರತ್ ಸ್ಲೀಪರ್ ಸಂಚಾರ: 8 ಗಂಟೆ ಪ್ರಯಾಣ.. ವಿಮಾನದಂತಹ ಸೌಲಭ್ಯ!

ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Vande Bharat Express) ಪ್ರೀಮಿಯಂ ಸೆಮಿ-ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಸಂಚಾರವನ್ನು ನಡೆಸುತ್ತಿದ್ದು, ದೂರದ ಹಲವು ನಗರಗಳಿಗೆ ಸಂಪರ್ಕ ಕೊಂಡಿಯಾಗಿದೆ. ಆದಾಗ್ಯೂ ಈ ರೈಲುಗಳಲ್ಲಿ ರಾತ್ರಿ ಪ್ರಯಾಣ ಅಸಾಧ್ಯವಾಗಿದ್ದು, ರೈಲ್ವೆ ಇಲಾಖೆಯು ವಂದೇ ಭಾರತ್ ಸ್ಲೀಪರ್‌ನ್ನು (Vande Bharat Sleeper) ಅಭಿವೃದ್ಧಿಪಡಿಸುತ್ತಿದೆ. ಈ ರೈಲು ಶೀಘ್ರ ಹಳಿಗೆ ಬರುವ ನಿರೀಕ್ಷೆಯಿದ್ದು, ಭೋಪಾಲ್ ಮತ್ತು ಮುಂಬೈ ನಡುವೆ ಕಾರ್ಯಾಚರಣೆ ಆರಂಭಿಸಲಿದೆ. ಇದೇ ಮೊದಲ ವಂದೇ ಭಾರತ್ ಸ್ಲೀಪರ್ ರೈಲಾಗಿರಲಿದೆ ಎಂದು ತಿಳಿದುಬಂದಿದೆ.

ವಿವಿಧ ಮಾಧ್ಯಮಗಳ ವರದಿ ಪ್ರಕಾರ, ಭೋಪಾಲ್ ಹಾಗೂ ಮುಂಬೈ ಮಧ್ಯೆ ವಂದೇ ಭಾರತ್ ಸ್ಲೀಪರ್‌ನ ಪ್ರಾಯೋಗಿಕ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಸದ್ಯ ಇವೆರೆಡು ನಗರಗಳ ನಡುವೆ ಸರಿ ಸುಮಾರು 800 ಕಿಲೋಮೀಟರ್‌ ಅಂತರವಿದ್ದು, ಸಾಮಾನ್ಯ ರೈಲುಗಳಲ್ಲಿ ಸುಮಾರು 15 ಗಂಟೆ ಪ್ರಯಾಣಿಸಲಿದೆ. ಆದಾಗ್ಯೂ ವಂದೇ ಭಾರತ್ ಸ್ಲೀಪರ್ ಕೇವಲ 8-9 ಗಂಟೆಗಳಲ್ಲಿ ಈ ದೂರವನ್ನು ಕ್ರಮಿಸಲಿದೆ ಎನ್ನಲಾಗಿದೆ.

First Vande Bharat Sleeper Starts Soon Bhopal To Mumbai This Train Have Features Like Flight

ಹೊಸ ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣಿಕರಿಗೆ ವಿಮಾನದಂತಹ ಅತ್ಯುತ್ತಮ ವಿಶ್ವದರ್ಜೆಯ ಸೌಲಭ್ಯವನ್ನು ಒದಗಿಸಲಿದ್ದು, ರಾಜಧಾನಿ ಎಕ್ಸ್‌ಪ್ರೆಸ್ (Rajdhani Express) ರೈಲುಗಳಿಗೆ ಪರ್ಯಾಯವಾಗಲಿದೆ ಎಂದು ಹೇಳಲಾಗಿದೆ. ಈ ರೈಲನ್ನು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ತಯಾರಿಕಾ ಘಟಕದಲ್ಲಿ ಸಿದ್ಧಪಡಿಸಲಾಗುತ್ತಿದೆ.

ನೂತನ ವಂದೇ ಭಾರತ್ ಸ್ಲೀಪರ್ ರೈಲು, ಒಟ್ಟು 16 ಕೋಚ್‌ಗಳನ್ನು ಹೊಂದಿರಲಿದೆ. ಅದರಲ್ಲಿ 11 ಎಸಿ 3-ಟೈರ್ ಕೋಚ್‌, 4 ಎಸಿ 2-ಟೈರ್ ಕೋಚ್‌ ಮತ್ತು 1 ಎಸಿ ಮೊದಲ ದರ್ಜೆ ಕೋಚ್ ಇರಲಿದ್ದು, ಎಲ್ಲವು ಸೇರಿ 823 ಬರ್ತ್‌ಗಳನ್ನು ಪಡೆದಿರುವ ಸಾಧ್ಯತೆಯಿದೆ. ಈ ರೈಲು ಗಂಟೆಗೆ 160 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸಬಹುದು ಎಂದು ಹೇಳಲಾಗಿದೆ.

First Vande Bharat Sleeper Starts Soon Bhopal To Mumbai This Train Have Features Like Flight

ಈ ರೈಲಿನಲ್ಲಿ ವಾಸನೆ ಮುಕ್ತ ಶೌಚಾಲಯ, ಹೊರಭಾಗದಲ್ಲಿ ಸ್ವಯಂ ಚಾಲಿತ ಬಾಗಿಲು ಇರಲಿದೆ. ಜೊತೆಗೆ ಮೊದಲ ದರ್ಜೆಯ ಎಸಿ ಕೋಚ್‌ನಲ್ಲಿ ಬಿಸಿನೀರಿನ ಸ್ಥಾನದ ವ್ಯವಸ್ಥೆಯನ್ನು ಹೊಂದಿರಲಿದ್ದು, ಶಬ್ದ ನಿರೋಧಕವು ಆಗಿರಲಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು ಕವಾಚ್ (KAVACH) ವ್ಯವಸ್ಥೆಯನ್ನು ಪಡೆದಿರಲಿದೆ ಎಂದು ತಿಳಿದುಬಂದಿದೆ.

ರೈಲ್ವೆ ಇಲಾಖೆಯು ಹತ್ತಿರದ ನಗರ ಮತ್ತು ಪಟ್ಟಣಗಳನ್ನು ಬೆಸೆಯಲು ವಂದೇ ಮೆಟ್ರೋ ರೈಲನ್ನು ಸಹ ಅಭಿವೃದ್ಧಿಪಡಿಸುತ್ತದೆ. ಪಂಜಾಬ್‌ನ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ (ಆರ್‌ಸಿಎಫ್) ಈ ರೈಲಿನ ಕೋಚ್‌ಗಳನ್ನು ತಯಾರಿಸಲಾಗುತ್ತಿದ್ದು, ಪ್ರಯಾಣಿಕರು 250 ಕಿಲೋಮೀಟರ್ ದೂರವನ್ನು ಆರಾಮದಾಯಕವಾಗಿ ಕ್ರಮಿಸಲು ಸಾಧ್ಯವಾಗುವಂತೆ ಸಿದ್ದಪಡಿಸಲಾಗುತ್ತಿದೆ.

First Vande Bharat Sleeper Starts Soon Bhopal To Mumbai This Train Have Features Like Flight

ಸಂಪೂರ್ಣ ಹವಾನಿಯಂತ್ರಿತವಾಗಿರುವ ವಂದೇ ಮೆಟ್ರೋ, ಗಂಟೆಗೆ 130 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಓಡುವಂತೆ ತಯಾರಿಸಲಾಗುತ್ತಿದೆ. , ಪ್ರತಿ ಕೋಚ್‌ನಲ್ಲಿ 280 ಮಂದಿ ಸಂಚರಿಸಬಹುದು. ಒಟ್ಟು 4,364 ಜನರು ಏಕಕಾಲದಲ್ಲಿ ವಂದೇ ಮೆಟ್ರೋದಲ್ಲಿ ಪ್ರಯಾಣಿಸಲು ಸಾಧ್ಯವಾಗಲಿದೆ ಎನ್ನಲಾಗಿದೆ. ಪ್ರಯಾಣಿಕರಿಗೆ ರಕ್ಷಣೆ ಒದಗಿಸಲು ಈ ರೈಲಿನಲ್ಲಿ ಅಗ್ನಿ ಪತ್ತೆ ವ್ಯವಸ್ಥೆ ಹಾಗೂ ಕವಚ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, August 24, 2024, 10:30 [IST]
English summary
First vande bharat sleeper starts soon bhopal to mumbai this train have features like flight
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+