ನಿಮ್ಮ ಕಾರಿನಲ್ಲಿ ಈ ಮಾರ್ಪಾಡುಗಳಿವೆಯೇ.. ದಂಡಕ್ಕೆ ಆಹ್ವಾನ, ಜಾಗ್ರತೆ ಇರಲಿ

ಭಾರತದಲ್ಲಿ ವಾಹನ ಮಾರ್ಪಾಡು (modification) ಸಂಬಂಧ ಅತ್ಯಂತ ಕಠಿಣ ನೀತಿ, ನಿಯಮಗಳು ಜಾರಿಯಲ್ಲಿವೆ. ನಿಮ್ಮ ಕಾರಿನಲ್ಲಿ ಈ ರೀತಿಯ ಕೆಲವು ಬದಲಾವಣೆ ಮಾಡಿರುವುದು ಕಂಡುಬಂದರೆ ಪೊಲೀಸರು ದಂಡ ವಿಧಿಸುವ ಸಂಭವವಿರುತ್ತದೆ. ಇಲ್ಲಿ ಅಂತಹ ಐದು ಕಾರಣಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡಲಾಗಿದೆ.

ಬುಲ್ ಬಾರ್‌: ಕೆಲವು ವರ್ಷಗಳ ಹಿಂದೆ, ಸಾಮಾನ್ಯವಾಗಿ ಕಾರುಗಳಲ್ಲಿ ಬುಲ್ ಬಾರ್‌ ಕಂಡುಬರುತ್ತಿತ್ತು. ಪೊಲೀಸರ ಸತತ ಪರಿಶ್ರಮದಿಂದ ದಿನದಿಂದ ದಿನಕ್ಕೆ ಇದನ್ನು ಅಳವಡಿಕೆ ಮಾಡುವುದು ಕಡಿಮೆಯಾಯಿತು. ಈಗಲೂ ಏನಾದರೂ ನಿಮ್ಮ ಕಾರು, ಇಂತಹ ಬುಲ್ ಬಾರ್‌ ಹೊಂದಿದ್ರೆ ಪೊಲೀಸರು ಖಂಡಿತ ದಂಡ ವಿಧಿಸುತ್ತಾರೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಬುಲ್ ಬಾರ್‌ ಅಪಾಯಕಾರಿ, ಒಂದೊಮ್ಮೆ ವಾಹನ ಅಪಘಾತಕ್ಕೆ ತುತ್ತಾದ್ರೆ ಏರ್‌ಬ್ಯಾಗ್ ಓಪನ್ ಆಗಲು ಅಡ್ಡಿಪಡಿಸುತ್ತದೆ.

ನಿಮ್ಮ ಕಾರಿನಲ್ಲಿ ಈ ಮಾರ್ಪಾಡುಗಳಿವೆಯೇ.. ದಂಡಕ್ಕೆ ಆಹ್ವಾನ, ಜಾಗ್ರತೆ ಇರಲಿ

ಆಡಿಷನಲ್ ಲೈಟ್ಸ್: ಕಾರುಗಳು ಮತ್ತಷ್ಟು ಆಕರ್ಷಣಿವಾಗಿ ಕಾಣಲು ಅದರ ಮಾಲೀಕರು ಆಡಿಷನಲ್ ಲೈಟ್ಸ್ ಅಳವಡಿಸುತ್ತಾರೆ. ಆದರೆ, ರಾತ್ರಿ ವೇಳೆ, ಚಾಲನೆ ಮಾಡುವಾಗ ಅಪಾಯವನ್ನುಂಟು ಮಾಡುತ್ತದೆ. ಅದರಲ್ಲೂ ಮುಂದಿನಿಂದ ಬರುವ ವಾಹನ ಚಾಲಕರ ದೃಷ್ಟಿಗೆ ನೇರ ಪರಿಣಾಮ ಉಂಟುಮಾಡಿ, ಅಪಘಾತಕ್ಕೂ ಕಾರಣವಾಗಬಹುದು. ಈ ಹಿನ್ನೆಲೆ, ನಿಮ್ಮ ಕಾರು, ಆಡಿಷನಲ್ ಲೈಟ್ಸ್ ಹೊಂದಿದ್ದರೆ ಪೊಲೀಸರು ಫೈನ್ ಹಾಕಬಹುದು. ಜೊತೆಗೆ ಅದನ್ನು ತೆಗೆಸುತ್ತಾರೆ.

ಏರ್ ಹಾರ್ನ್ಸ್: ಒಂದೊಮ್ಮೆ ನಿಮ್ಮ ಕಾರಿನ ಮೇಲೆ ಏರ್ ಹಾರ್ನ್ಸ್ ಅಳವಸಿರುವುದು ಪೋಲೀಸರ ಕಣ್ಣಿಗೆ ಬಿದ್ದರೆ, ಅವರು ನಿಮಗೆ ದಂಡ ವಿಧಿಸಬಹುದು. ಈ ರೀತಿಯ ಹಾರ್ನ್‌ಗಳು ತುಂಬಾ ಜೋರಾಗಿ ಶಬ್ದ ಮಾಡುವ ಮೂಲಕ ಕಿರಿ ಕಿರಿ ಉಂಟುಮಾಡುತ್ತವೆ. ಇದರಿಂದ ಇತರೆ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಜೊತೆಗೆ ಶಬ್ದ ಮಾಲಿನ್ಯಕ್ಕೂ ಕಾರಣವಾಗಬಹುದು.

ನಿಮ್ಮ ಕಾರಿನಲ್ಲಿ ಈ ಮಾರ್ಪಾಡುಗಳಿವೆಯೇ.. ದಂಡಕ್ಕೆ ಆಹ್ವಾನ, ಜಾಗ್ರತೆ ಇರಲಿ

ಮಿತಿ ಮೀರಿದ ಮಾರ್ಪಾಡು: ಕಾರುಗಳನ್ನು ಮಿತಿ ಮೀರಿದ ಮಾರ್ಪಾಡು (Extravagant Modification) ಮಾಡಿ, ರಸ್ತೆಯಲ್ಲಿ ಓಡಿಸುತ್ತಿರುವುದು ಕಂಡುಬಂದರೆ ಪೊಲೀಸ್ ಅಧಿಕಾರಿಗಳು ಫೈನ್ ಹಾಕಬಹುದು. ಆದರೆ, ದಂಡದ ಮೊತ್ತವನ್ನು ಕಾರಿನಲ್ಲಿ ಮಾಡಲಾಗಿರುವ ಅಕ್ರಮ (illegal) ಮಾಡಿಫೈ ಮೇಲೆ ನಿರ್ಧರಿಸಲಾಗುತ್ತದೆ. ಇನ್ಮುಂದೆ ನಿಮ್ಮ ಕಾರುಗಳಲ್ಲಿ ಕೆಲವು ಬದಲಾವಣೆ ಮಾಡುವಾಗ ಎಚ್ಚರವಹಿಸುವುದು ಉತ್ತಮ.

ದೊಡ್ಡಗ್ರಾತ್ರದ ಟೈಯರ್ಸ್ & ವೀಲ್ಸ್: ಸಾಮಾನ್ಯವಾಗಿ ಆಫ್ ರೋಡ್ ಚಾಲನೆಯನ್ನು ಇಷ್ಟಪಡುವವರೂ ತಮ್ಮ ಕಾರುಗಳಿಗೆ ಭಾರೀ ಗಾತ್ರದ ವೀಲ್ಸ್ ಹಾಗೂ ಟೈಯರ್ಸ್ ಅನ್ನು ಅಳವಡಿಸುವ ಮೂಲಕ ಮಾರ್ಪಾಡು ಮಾಡಿರುತ್ತಾರೆ. ಇದನ್ನು ಕಂಡರೆ ಪೊಲೀಸರು ದಂಡ ವಿಧಿಸಬಹುದು. ಕೇರಳದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, ಅಲ್ಲಿನ ಅಧಿಕಾರಿಗಳು ಭಾರೀ ಮೊತ್ತದಲ್ಲಿ ಫೈನ್ ಹಾಕಿದ್ದಾರೆ.

ನಿಮ್ಮ ಕಾರಿನಲ್ಲಿ ಈ ಮಾರ್ಪಾಡುಗಳಿವೆಯೇ.. ದಂಡಕ್ಕೆ ಆಹ್ವಾನ, ಜಾಗ್ರತೆ ಇರಲಿ

ಬಹುತೇಕರಿಗೆ ಹಾಗಾದ್ರೆ ಕಾರುಗಳಲ್ಲಿ ಮಾರ್ಪಾಡು ಮಾಡಲೇ ಬಾರದ ಎಂಬ ಪ್ರಶ್ನೆ ಕಾಡಬಹುದು. ಅದಕ್ಕೆ ಉತ್ತರವನ್ನು ನೀಡುವ ಪ್ರಯತ್ನವನ್ನು ಮಾಡಿದ್ದೇವೆ. ನೀವು ವಾಹನವನ್ನು ಮಾಡಿಫೈ ಮಾಡಿಸಬಹುದು. ಆದರೆ, ಮೂಲ ತಯಾರಕರು ಮಾಡಿರುವ ವಿನ್ಯಾಸಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಬರದಂತೆ, ಕೆಲವು ಬದಲಾವಣೆ ಮಾಡಬಹುದು. ಅದು ನಿಗದಿತ ಮಿತಿಗೆ ಒಳಪಟ್ಟಿರಬೇಕು. (ಕಲರ್ ಬದಲಾವಣೆ, ರೈನ್ ವೈಸರ್ಸ್ ಮತ್ತು ಬಂಪರ್ ಕಾರ್ನರ್ ಪ್ರೊಟೆಕ್ಟರ್‌ಗಳಂತಹ ಮಾರ್ಪಾಡು ಮಾಡಬಹುದು).

RTO ಅನುಮತಿ ಪಡೆದು ಎಂಜಿನ್ ನಲ್ಲೂ ಕೆಲವು ಬದಲಾವಣೆ ಮಾಡಬಹುದು. ಒಂದೊಮ್ಮೆ ಇವುಗಳನ್ನು ಬಿಟ್ಟು, ಬೇರೆ ಯಾವುದೇ ತರಹ ಮಾಡಿಫೈ ಮಾಡಿದರೆ, ಪ್ರತಿಯೊಂದು ಮಾರ್ಪಾಡಿಗೂ ದಂಡ ಪಾವತಿ ಅಥವಾ ಶಿಕ್ಷೆ ಅನುಭವಿಸಬೇಕಾಗಿ ಬರಬಹುದು. ಜೊತೆಗೆ ನಾವು ಮೇಲೆ ಹೇಳಿದಂತೆ ಬುಲ್ ಬಾರ್‌, ಆಡಿಷನಲ್ ಲೈಟ್ಸ್, ಏರ್ ಹಾರ್ನ್ಸ್ ಅನ್ನು ನಿಮ್ಮ ವಾಹನ ಹೊಂದಿದ್ರೆ ಈಗಲೇ ತೆಗೆಸಿರಿ.

Article Published On: Wednesday, May 31, 2023, 18:09 [IST]
English summary
Five illegal car modification attract cops challans details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+