ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ಮತ್ತೈದು ರಫೇಲ್ ಯುದ್ದ ವಿಮಾನಗಳು

ನಿನ್ನೆ ಐದು ಮಲ್ಟಿ-ಫೈಟರ್ ರಫೇಲ್ ಯುದ್ದ ವಿಮಾನಗಳನ್ನು ಭಾರತೀಯ ವಾಯುಪಡೆಯ 17ನೇ ಸ್ಕ್ವಾಡ್ರನ್‌ಗೆ ಸೇರ್ಪಡೆಗೊಳಿಸಲಾಗಿದೆ. ಈ ಎಲ್ಲಾ ವಿಮಾನಗಳನ್ನು ವಾಯುಪಡೆಯ ಅಂಬಾಲಾ ವಾಯುನೆಲೆಯಲ್ಲಿ ನಿಯೋಜಿಸಲಾಗಿದೆ. ರಫೇಲ್ ಫೈಟರ್ ಜೆಟ್‌ಗಳನ್ನು ಸೇನೆಗೆ ಸೇರ್ಪಡೆಗೊಳಿಸುವ ಸಂದರ್ಭದಲ್ಲಿ ಸಮಾರಂಭವನ್ನು ಆಯೋಜಿಸಲಾಗಿತ್ತು.

ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ಮತ್ತೈದು ರಫೇಲ್ ಯುದ್ದ ವಿಮಾನಗಳು

ಈ ಸಂದರ್ಭದಲ್ಲಿ ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಹಾಗೂ ಫ್ರಾನ್ಸ್ ರಕ್ಷಣಾ ಸಚಿವರಾದ ಫ್ಲಾರೆನ್ಸ್ ಪರ್ಲಿ ಉಪಸ್ಥಿತರಿದ್ದರು. ರಕ್ಷಣಾ ಒಪ್ಪಂದದಡಿಯಲ್ಲಿ 36 ರಫೇಲ್ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿಸಲಾಗಿದೆ. ಜುಲೈ 29ರಂದು 5 ವಿಮಾನಗಳನ್ನು ಪಡೆಯಲಾಗಿತ್ತು. ರಫೇಲ್ ಯುದ್ಧ ವಿಮಾನವು ಅನೇಕ ಯುದ್ಧಗಳಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ. ದಸ್ಸೌ ನಿರ್ಮಿಸಿರುವ ರಫೇಲ್ ಕಳೆದ 14 ವರ್ಷಗಳಿಂದ ಫ್ರಾನ್ಸ್ ವಾಯುಪಡೆ ಹಾಗೂ ನೌಕಾಪಡೆಯಲ್ಲಿ ನೆಲೆಸಿದ್ದು, ಅಫ್ಘಾನಿಸ್ತಾನ, ಇರಾಕ್, ಸಿರಿಯಾ ಹಾಗೂ ಲಿಬಿಯಾದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ.

ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ಮತ್ತೈದು ರಫೇಲ್ ಯುದ್ದ ವಿಮಾನಗಳು

ರಫೇಲ್ ಜೆಟ್‌ನ ಫೀಚರ್ ಗಳ ಬಗ್ಗೆ ಹೇಳುವುದಾದರೆ, ರಫೇಲ್ ಬೇಸ್‌ನಿಂದ 3,700 ಕಿ.ಮೀಗಳವರೆಗೆ ಹಾರಬಲ್ಲದು. ಇದರ ಕಾಂಬಟ್ ರೇಡಿಯಸ್ 3,700 ಕಿ.ಮೀಗಳಾಗಿದ್ದು ಚೀನಾದ ಜೆ -20 ಹಾಗೂ ಪಾಕಿಸ್ತಾನದ ಜೆಎಫ್ -17ಗಳಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ಮತ್ತೈದು ರಫೇಲ್ ಯುದ್ದ ವಿಮಾನಗಳು

ರಫೇಲ್ ವಿಮಾನವು ಒಂದೇ ಬಾರಿಗೆ 9,500 ಕೆಜಿ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನವು ವೇಗದಲ್ಲಿ ಇತರ ಯಾವುದೇ ಯುದ್ಧ ವಿಮಾನಗಳಿಗಿಂತ ಕಡಿಮೆಯಿಲ್ಲ. ಈ ವಿಮಾನದ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 2,223 ಕಿ.ಮೀಗಳಾಗಿದೆ.

ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ಮತ್ತೈದು ರಫೇಲ್ ಯುದ್ದ ವಿಮಾನಗಳು

ಭಾರತಕ್ಕೆ ನೀಡಿರುವ ರಫೇಲ್ ಯುದ್ಧ ವಿಮಾನವು ಇತ್ತೀಚಿನ 4.5ನೇ ತಲೆಮಾರಿನದಾಗಿದೆ. ಈ ವಿಮಾನದಲ್ಲಿ ಹಲವಾರು ಆಧುನಿಕ ಕ್ಷಿಪಣಿ ಹಾಗೂ ಸಾಧನಗಳನ್ನು ನಿಯೋಜಿಸಬಹುದು. ಕ್ಷಿಪಣಿಗಳನ್ನು ಗಾಳಿಯಿಂದ ಗಾಳಿಗೆ ಹಾಗೂ ಗಾಳಿಯಿಂದ ನೆಲಕ್ಕೆ ಉಡಾಯಿಸುವ ಸಾಮರ್ಥ್ಯವನ್ನು ರಫೇಲ್ ವಿಮಾನಗಳು ಹೊಂದಿವೆ.ಇದರ ಜೊತೆಗೆ ಈ ವಿಮಾನದಿಂದ ಪರಮಾಣು ದಾಳಿಯನ್ನು ಕೂಡ ನಡೆಸಬಹುದು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ಮತ್ತೈದು ರಫೇಲ್ ಯುದ್ದ ವಿಮಾನಗಳು

ರಫೇಲ್ ಎಲೆಕ್ಟ್ರಾನಿಕ್ ಸ್ಕ್ಯಾನಿಂಗ್ ರೇಡಾರ್ ಅನ್ನು ಹೊಂದಿದ್ದು ನೈಜ ಸಮಯದಲ್ಲಿ ಗುರಿಯನ್ನು ಪತ್ತೆ ಮಾಡಿ, 3ಡಿ ಚಿತ್ರಗಳನ್ನು ರಚಿಸುತ್ತದೆ. ಈ ವಿಮಾನವು ನಿಖರವಾದ ಗುರಿಯನ್ನು ಸಾಧಿಸುತ್ತದೆ. ಈ ವಿಮಾನವು ಒಂದೇ ಬಾರಿಗೆ ಹಲವು ಗುರಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ರಫೇಲ್ ಯುದ್ದ ವಿಮಾನವು 150 ಕಿ.ಮೀ ಹಾಗೂ 300 ಕಿ.ಮೀಗಳವರೆಗೆ ಕ್ಷಿಪಣಿಗಳನ್ನು ಸಾಗಿಸಬಲ್ಲದು.

ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ಮತ್ತೈದು ರಫೇಲ್ ಯುದ್ದ ವಿಮಾನಗಳು

ಈ ಯುದ್ದ ವಿಮಾನವು 1312 ಅಡಿ ರನ್ ವೇಯಿಂದ ಹಾರಬಲ್ಲದು. ಹಾರಾಟ ನಡೆಸುವಾಗಲೇ ಇಂಧನವನ್ನು ತುಂಬಿಸಿ ಕೊಳ್ಳಬಲ್ಲದು. ಈ ವಿಮಾನವು ಆಮ್ಲಜನಕ ಜನರೇಷನ್ ಸಿಸ್ಟಂ ಹೊಂದಿರುವುದರಿಂದ, ಈ ವಿಮಾನಕ್ಕೆ ಲಿಕ್ವಿಡ್ ಆಮ್ಲಜನಕವನ್ನು ತುಂಬುವ ಅಗತ್ಯವಿಲ್ಲ.

Most Read Articles

Kannada
English summary
Five more Rafale jets inducted to Indian Air force at Ambala air base. Read in Kannada.
Story first published: Friday, September 11, 2020, 14:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X