ವಿಮಾನದಲ್ಲಿ ಮಗಳನ್ನು ಮುಟ್ಟಬಾರದೆಡೆ ಮುಟ್ಟಿ ತಂದೆಯ ಆಕ್ರೋಶಕ್ಕೆ ಕಕ್ಕಾಬಿಕ್ಕಿಯಾದ ಯುವಕ!

ಒಂದು ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದ ವಿಮಾನಗಳು ಈಗ ಎಲ್ಲರಿಗೂ ಹತ್ತಿರವಾಗಿವೆ. ಯಾರು ಬೇಕಾದರೂ ವಿಮಾನದಲ್ಲಿ ಪ್ರಯಾಣಿಸಬಹುದಾದ ದರವನ್ನು ವಿಮಾನಯಾನ ಸಂಸ್ಥೆಗಳು ಪರಿಚಯಿಸಿವೆ. ಹಾಗೆಂದು ವಿಮಾನಗಳು ಬಸ್‌ ಅಥವಾ ರೈಲುಗಳಂತಲ್ಲ, ಬದಲಾಗಿ ತುಂಬಾ ಕಟ್ಟುನಿಟ್ಟಾದ ನಿಯಮಗಳನ್ನು ಒಳಗೊಂಡಿರುವುದರಿಂದ ಪ್ರಯಾಣಿಕರು ಪಾಲಿಸುವುದು ಕಡ್ಡಾಯವಾಗಿರುತ್ತದೆ.

ಈಗಾಗಲೇ ವಿಮಾನಗಳಲ್ಲಿ ಪ್ರಯಾಣಿಸಿದವರಿಗೆ ಏರ್‌ಪೋರ್ಟ್‌ನಲ್ಲಿನ ಭದ್ರತೆ ಹಾಗೂ ಪ್ರಯಾಣಿಕರನ್ನು ಹೇಗೆಲ್ಲಾ ಪರಿಶೀಲಿಸಲಾಗುತ್ತದೆ ಎಂಬುದರ ಬಗ್ಗೆ ತಿಳಿದೇ ಇರುತ್ತದೆ. ಹಾಗೆಯೇ ವಿಮಾನದ ಒಳಗೆ ಯಾವೆಲ್ಲಾ ಸೌಲಭ್ಯಗಳು ಇರುತ್ತವೆ ಹಾಗೂ ನಾವು ಹೇಗೆ ವರ್ತಿಸಬೇಕು ಎಂಬುದರ ಬಗ್ಗೆಯೂ ಐಡಿಯಾ ಇರುತ್ತದೆ. ಆದ್ರೆ ಎಲ್ಲಾ ತಿಳಿದವರು ಕೂಡ ವಿಮಾನಗಳಲ್ಲಿ ಅನುಚಿತವಾಗಿ ವರ್ತಿಸಿ ಸುದ್ದಿಯಾಗುತ್ತಿದ್ದಾರೆ.

flight-riots-father-fights-young-man-touches-daughter

ಇತ್ತೀಚೆಗೆ ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರಿಗೆ ಸುರಕ್ಷತೆ ನೀಡುವಲ್ಲಿ ವಿಫಲಾವಾದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗಿತ್ತು. ಪ್ರಯಾಣಿಕನೊಬ್ಬ ದಕ್ಷಿಣ ಕೊರಿಯಾದ ಏಷಿಯಾನಾ ಏರ್‌ಲೈನ್ಸ್ ವಿಮಾನವೊಂದು ಹೇಳಿದ ಸಮಯಕ್ಕೆ ಲ್ಯಾಂಡ್ ಆಗಲಿಲ್ಲವೆಂದು ಹಾರಾಟದಲ್ಲಿದ್ದಾಗಲೇ ಬಾಗಿಲು ತೆರೆದಿದ್ದ. ಪರಿಣಾಮ ಹಲವರಿಗೆ ಉಸಿರಾಟ ತೊಂದರೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಇದೀಗ ಮತ್ತೊಮ್ಮೆ ಎರಡು ವಿಮಾನಯಾನ ಸಂಸ್ಥೆಗಳಲ್ಲಿ ವಿಚಿತ್ರ ಘಟನೆಗಳು ನಡೆದಿವೆ. ಭಾರತದ ವಿಸ್ತಾರಾ ಮತ್ತು ಅಂತರಾಷ್ಟ್ರೀಯ ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನಗಳಲ್ಲಿ ನಡೆದ ಜಗಳ ಸಖತ್ ವೈರಲ್ ಆಗಿದೆ. ವಿಸ್ತಾರಾ ವಿಮಾನದಲ್ಲಿ ಮಗಳನ್ನು ಮುಟ್ಟಿದ್ದಾನೆ ಎಂದು ಆರೋಪಿಸಿ ತಂದೆಯೊಬ್ಬರು ಆಗ್ರಹಿಸಿ ಆತನನ್ನು ಹೊಡೆಯಲೆಂದು ಮುನ್ನುಗ್ಗಲು ಯತ್ನಿಸಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

flight-riots-father-fights-young-man-touches-daughter

ವಿಮಾನದ ಬಲ ಭಾಗದಲ್ಲಿ ತಂದೆ ಮತ್ತ ತಾಯಿ ಕುಳಿತಿದ್ದರೇ ಮಗಳು ಎಡ ಭಾಗದ ಸೀಟಿನಲ್ಲಿ ಕುಳಿತಿದ್ದರು. ಆಕೆಯ ಪಕ್ಕದಲ್ಲೇ ಮತ್ತೊಬ್ಬ ಯುವಕ ಕುಳಿತ್ತಿದ್ದ ಎಂದು ವಿಡಿಯೋವನ್ನು ನೋಡಿದ್ರೆ ತಿಳಿಯುತ್ತದೆ. ಅಲ್ಲಿ ನಿಖರವಾಗಿ ಏನಾಗಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದ್ರೆ ಆತ ಯುವತಿಯನ್ನು ಮುಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಯುವಕ ಮುಟ್ಟಬಾರದೆಡೆ ಮುಟ್ಟಿದ್ದಾನೆ, ಇಲ್ಲದಿದ್ದರೇ ಆಕೆಯ ತಂದೆಗೆ ಏಕೆ ಆ ಮಟ್ಟದ ಕೋಪ ಬರುತ್ತದೆ ಎಂದೆಲ್ಲಾ ನೆಟ್ಟಿಗರು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವೊಮ್ಮೆ ಅಚಾನಕ್ಕಾಗಿ ಕೈ ತಗುಲಿರಬಹುದು, ಏನೇ ಆಗಲಿ ಓರ್ವ ತಂದೆಯ ಆಕ್ರೋಶಕ್ಕೆ ಕಾರಣವಿದೆ. ಆದ್ರೆ ಸತ್ಯಾಂಶ ತಿಳಿದು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ರೆ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ನಮ್ಮ ಅಭಿಪ್ರಾಯ.

ಇವು ಕೇವಲ ಭಾರತ ಮಾತ್ರವಲ್ಲ ವಿದೇಶಿ ವಿಮಾನಗಳಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಎರಡನೇ ಘಟನೆಯು ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನದಲ್ಲಿ ನಡೆದಿದ್ದು, ಮಗುವಿನಿಂದ ವ್ಯಕ್ತಿಯೊಬ್ಬ ತನ್ನ ಶಾಂತತೆಯನ್ನು ಕಳೆದುಕೊಂಡು ಆತ ವರ್ತಸಿದ ರೀತಿಯನ್ನು ಕಂಡು ಹಲವರು ಗಾಬರಿಗೊಂಡಿದ್ದಾರೆ. ಈ ಕುರಿತ ವಿಡಿಯೋ ಟಿಕ್‌ಟಾಕ್‌ನಲ್ಲಿ ಸಖತ್ ವೈರಲ್ ಆಗಿದೆ.

ಮಗುವೊಂದು ವಿಮಾನದಲ್ಲಿ ಅಳುತ್ತಿರುವದನ್ನು ಕಂಡು ಆತ ಕೋಪಗೊಂಡಿದ್ದಾನೆ. ಇದು ವಿಮಾನ ಸಿಬ್ಬಂದಿಯೊಂದಿಗೆ ಘರ್ಷಣೆಗೆ ಕಾರಣವಾಗಿದ್ದು, ಆತನ ವರ್ತನೆಗೆ ಇತರ ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಈ ಘಟನೆಗಳು ಪ್ರಯಾಣಿಕರ ನಡವಳಿಕೆ ಮತ್ತು ವಿಮಾನಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯತೆಯ ಬಗ್ಗೆ ಕಳವಳವನ್ನು ಹೆಚ್ಚಿಸಿರುವುದಂತು ನಿಜ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

Article Published On: Monday, July 3, 2023, 12:21 [IST]
English summary
Flight riots father fights young man touches daughter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+