IAS ಅಧಿಕಾರಿಗೇ ಈ ಪರಿಸ್ಥಿತಿ ನೋಡಿ... ಕೇವಲ 20 ರೂ. ಮರುಪಾವತಿ... ಪ್ರಯಾಣಿಕರೆ ಖಂಡಿತ ತಿಳಿದಿರಲಿ
ಐಎಎಸ್ ಅಧಿಕಾರಿಯೊಬ್ಬರು ರೂ. 13,820 ಕೊಟ್ಟು ಬುಕ್ ಮಾಡಿದ್ದ ವಿಮಾನ ಟಿಕೆಟ್ ಅನ್ನು ರದ್ದುಗೊಳಿಸಿದಾಗ ಕೇವಲ 20 ರೂ. ಮರುಪಾವತಿಯನ್ನು ಕಂಡು ದಂಗಾಗಿದ್ದಾರೆ. ಇದನ್ನು ವ್ಯಂಗ್ಯವಾಗಿ ಪರಿಗಣಿಸಿದ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಹೆಚ್ಚು ಹಣ ಪಡೆಯಲು ಏನು ಮಾಡಬೇಕು? ಈ ಮೊತ್ತವನ್ನು ಎಲ್ಲಿ ಹೂಡಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.
ವಿಮಾನಯಾನ ಸಂಸ್ಥೆಗಳು ಟಿಕೆಟ್ ಬುಕ್ ಮಾಡಿದ ಮೇಲೆ ರದ್ದುಗೊಳಿಸಿದ್ರೆ ಸಂಪೂರ್ಣ ಮೊತ್ತದಲ್ಲಿ ಎಷ್ಟು ಮರುಪಾವತಿ ಮಾಡುತ್ತವೆ ಗೊತ್ತಾ? ಸಾವಿರಾರು ರೂ. ಟಿಕೆಟ್ ಬೆಲೆ ಇದ್ದರೆ ಕನಿಷ್ಟ 50 ರೂ. ಕೂಡ ಹಿಂದಿರುಗಿಸುವುದಿಲ್ಲ. ಕೆಲವೊಮ್ಮೆ ಅದು ಕೂಡ ಸಿಗೋದಿಲ್ಲ. ಹೌದು ಇದು ನಿಜ, ಕೇವಲ IAS ಅಧಿಕಾರಿಗೆ ಮಾತ್ರವಲ್ಲ ಪ್ರತಿ ಪ್ರಯಾಣಿಕರಿಗೂ ಇದೆ ವರ್ತಿಸುತ್ತದೆ.

ವಿಮಾನಯಾನ ಸಂಸ್ಥೆಗಳು ಹಾಗೆ ಮಾಡಲು ಕಾರಣವಿದೆ, ಆ ಬಗ್ಗೆ ಕೊನೆಯಲ್ಲಿ ತಿಳಿಯೋಣ. ಮೊದಲಿಗೆ ಈ ಐಎಎಸ್ ಅಧಿಕಾರಿಗಾದ ಅನುಭವವನ್ನು ಇಲ್ಲಿ ನೋಡೋಣ. ಇತ್ತೀಚೆಗಷ್ಟೇ ಐಎಎಸ್ ಅಧಿಕಾರಿ ರಾಹುಲ್ ಕುಮಾರ್ ಅವರು ವಿಮಾನದಲ್ಲಿ ಪ್ರಯಾಣಿಸಲು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ರೂ. 13,820 ಶುಲ್ಕ ಪಾವತಿಸಿದ್ದರು. ಅನಿವಾರ್ಯ ಕಾರಣಗಳಿಂದ ಪ್ರಯಾಣಿಸಲು ಸಾಧ್ಯವಾಗಲಿಲ್ಲ.
ಮುಂಗಡವಾಗಿ ಟಿಕೆಟ್ ರದ್ದು ಮಾಡಲು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ ಅವರಿಗೆ ಮರುಪಾವತಿಯಾದ ಮೊತ್ತವನ್ನು ನೋಡಿ ದಂಗಾಗಿದ್ದಾರೆ. 13,820 ರೂ. ಟಿಕೆಟ್ ರದ್ದತಿ ಶುಲ್ಕವಾಗಿ 20 ರೂ. ಮರುಪಾವತಿಯಾಗಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿರುವ ಅವರು, ಮರುಪಾವತಿ ಮೊತ್ತವನ್ನು ಎಲ್ಲಿ ಹೂಡಿಕೆ ಮಾಡಲಿ ಎಂದು ವ್ಯಂಗ್ಯ ಮಾಡಿದ್ದಾರೆ.

ಅವರು ಹಂಚಿಕೊಂಡಿರುವ ಟಿಕೆಟ್ ರದ್ದತಿಯಲ್ಲಿನ ವಿವರಗಳ ಪ್ರಕಾರ, ಏರ್‌ಲೈನ್ ರದ್ದತಿ ಶುಲ್ಕ ರೂ. 11,800, GI ರದ್ದತಿ ಶುಲ್ಕ ರೂ.1200, GI ಅನುಕೂಲಕರ ಶುಲ್ಕ ರೂ.800 ಹೀಗೆ ಒಟ್ಟು ರೂ.13,800 ಕಡಿತಗೊಳಿಸಿ ಕೇವಲ ರೂ.20 ಮರುಪಾವತಿ ಮಾಡಲಾಗಿದೆ. ಈ ಹಣವನ್ನು ಉತ್ತಮ ಸ್ಥಳದಲ್ಲಿ ಹೂಡಿಕೆ ಮಾಡಲು ಐಡಿಯಾ ನೀಡಿ ಎಂದು ವ್ಯಂಗ್ಯವಾಗಿ ಕೇಳಿದ್ದಾರೆ.
ಜುಲೈ 11 ರಂದು ಹಂಚಿಕೊಂಡಿರುವ ಈ ಪೋಸ್ಟ್ ಇದೀಗ ವೈರಲ್ ಆಗಿ 5,200 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಈ ಪೋಸ್ಟ್ ಇಂಟರ್ನೆಟ್ ಬಳಕೆದಾರರಿಂದ ವ್ಯಾಪಕವಾದ ಪ್ರತಿಕ್ರಿಯೆಗಳನ್ನು ಸಹ ಪಡೆದುಕೊಂಡಿದೆ. ಆದರೆ ವಿಮಾನಯಾನ ಸಂಸ್ಥೆಗಳು ಏಕೆ ಹೀಗೆ ಮಾಡುತ್ತವೆಂದರೆ ಯಾವುದೇ ಕಾರಣಕ್ಕೂ ಜನರು ವಿಮಾನ ಪ್ರಯಾಣವನ್ನು ತಪ್ಪಿಸಬಾರದು ಎಂದು ಹೀಗೆ ಮಾಡುತ್ತಿವೆ ಎನ್ನಲಾಗಿದೆ.
ನಷ್ಟವನ್ನು ನಿಭಾಯಿಸಲು ಪ್ರಯಾಣಿಕರ ಟಿಕೆಟ್ ರದ್ದತಿಯಲ್ಲಿ ಯಾವುದೇ ಹಣ ಹಿಂದಿರುಗಿಸುವುದಿಲ್ಲ. ವಿಮಾನ ಹೊರಡುವ ಎರಡ್ಮೂರು ದಿನದ ಮೊದಲು ಒಬ್ಬರು ಟಿಕೆಟ್ ಕ್ಯಾನ್ಸಲ್ ಮಾಡಿದರೂ ಮತ್ತೊಬ್ಬರು ಆ ಟಿಕೆಟ್ ಗಳನ್ನು ಖರೀದಿಸಲು ಬರುತ್ತಾರಾ ಎಂಬ ಅನುಮಾನ ಅವರಿಗೆ ಕಾಡುತ್ತದೆ. ಪರಿಣಾಮವಾಗಿ, ನಷ್ಟವನ್ನು ತಪ್ಪಿಸಲು ಟಿಕೆಟ್ ರದ್ದುಗೊಳಿಸಿದಾಗ ಪ್ರಯಾಣಿಕರಿಗೆ ಹೆಚ್ಚಿನ ಶುಲ್ಕವನ್ನು ವಿಧಿಸುತ್ತವೆ.
ಇದನ್ನು ತಪ್ಪಿಸಲು ಕೆಲ ಮಾರ್ಗಗಳಿವೆ. ಕೆಲವು ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರು ಪ್ರಯಾಣಿಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಸಂದೇಹವಿದ್ದಲ್ಲಿ ಪ್ರಯಾಣಕ್ಕಾಗಿ ಟಿಕೆಟ್‌ಗಳನ್ನು ಕಾಯ್ದಿರಿಸುವ ಆಯ್ಕೆಯನ್ನು ಹೊಂದಿದ್ದು, ರದ್ದತಿಯ ಸಂದರ್ಭದಲ್ಲಿ ಅವರು ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ. ಆ ಆಯ್ಕೆಯನ್ನು ಆರಿಸುವ ಮೂಲಕ ನೀವು ಟಿಕೆಟ್ ದರದೊಂದಿಗೆ ಕಡಿಮೆ ಮತ್ತು ಹೆಚ್ಚು ಹಣವನ್ನು ಪಾವತಿಸುವಿರಿ.
ಅಂದರೆ ನೀವು ಟಿಕೆಟ್ ಶುಲ್ಕದ ಜೊತೆಗೆ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಕೆಲವು ವಿಮಾನಯಾನ ಸಂಸ್ಥೆಗಳು ತಮ್ಮ ಟಿಕೆಟ್ ಪಡೆದ ಪ್ರಯಾಣಿಕರಿಗೆ ಪ್ರಯಾಣದ ದಿನಾಂಕವನ್ನು ಬದಲಾಯಿಸುವ ಆಯ್ಕೆಯನ್ನು ನೀಡುತ್ತವೆ. ಅದರಂತೆ, ನೀವು ನಿಗದಿತ ದಿನಕ್ಕಿಂತ ಬೇರೆ ದಿನದಲ್ಲಿ ಪ್ರಯಾಣಿಸಲು ಬಯಸಿದರೆ, ಕಡಿಮೆ ಪಾವತಿಸುವ ಮೂಲಕ ನಿಮ್ಮ ಟಿಕೆಟ್ ಅನ್ನು ಮತ್ತೊಂದು ದಿನಾಂಕಕ್ಕೆ ಬದಲಾಯಿಸಬಹುದು. ಆದರೆ ಎಲ್ಲಾ ರೀತಿಯ ವಿಮಾನಗಳಲ್ಲಿ ಇದು ಸಾಧ್ಯವಿಲ್ಲ.


Click it and Unblock the Notifications