Flop cars: ಭಾರತೀಯರು ಮರೆತುಹೋದ ಫ್ಲಾಪ್ ಕಾರುಗಳಿವು, ಟಾಟಾದಿಂದ ಮಹೀಂದ್ರಾವರೆಗೆ.. ನೆನಪಿದೆಯೇ?

ವಿಶ್ವದಲ್ಲಿಯೇ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿರುವ ದೇಶಗಳಲ್ಲಿ ಭಾರತವು ಒಂದಾಗಿದೆ. ಪ್ರತಿ ತಿಂಗಳು ಒಂದಿಲ್ಲೊಂದು ಹೊಸ ಕಾರುಗಳು ಬಿಡುಗಡೆಯಾಗುತ್ತಿರುತ್ತವೆ. ಕೆಲವು ಮಾತ್ರ ಗ್ರಾಹಕರಿಗೆ ಇಷ್ಟವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಬಹುನಿರೀಕ್ಷೆಯಿಂದ ಬಂದು ಅಷ್ಟೇ ಬೇಗ ಕಣ್ಮರೆಯಾದ ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಜನಪ್ರಿಯ ಟಾಟಾ ಇಂಡಿಕಾ ವಿಸ್ಟಾ (Tata Indica Vista) ಹ್ಯಾಚ್‌ಬ್ಯಾಕ್‌ ಜಾಗಕ್ಕೆ (ಸಾಮಾನ್ಯ ಭಾಷೆಯಲ್ಲಿ ಹೇಳಬೇಕಾದರೆ ಉತ್ತರಾಧಿಕಾರಿ) 2015ರಲ್ಲಿ ಟಾಟಾ ಬೋಲ್ಟ್ (Tata Bolt) ಕಾರನ್ನು ಪರಿಚಯಿಸಲಾಗಿತ್ತು. ಇದು ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಕಾರಣ, ಅಂತಿಮವಾಗಿ 2019ರಲ್ಲಿ ಮಾರಾಟದಿಂದ ಸ್ಥಗಿತಗೊಳಿಸಲಾಯಿತು. ಅದೇ ಸಮಯದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದ ಟಾಟಾ ಜೆಸ್ಟ್ (Tata Zest) ಕಾಂಪ್ಯಾಕ್ಟ್ ಸೆಡಾನ್ ಸಹ ಅಂದುಕೊಂಡ ಮಟ್ಟಕ್ಕೆ ಯಶಸ್ಸು ಸಾಧಿಸಿಲ್ಲ.

Flop Cars In Indian Market: Tata Bolt, Zest, Mahindra Quanto, Chevrolet, Enjoy

ಟಾಟಾ ಬೋಲ್ಟ್, 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೊತೆಯಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳನ್ನು ಪಡೆದಿತ್ತು. ಅದೇ ರೀತಿಯಲ್ಲಿ ಜೆಸ್ಟ್ ಕಾರು ಹೆಚ್ಚು ಅತ್ಯಾಕರ್ಷಕವಾಗಿತ್ತು. ಆದರೂ ಮಾರಾಟ ಪ್ರಮಾಣ ಏರಿಕೆಯಾಗಲಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಐ10 ಕಾರುಗಳು ದೊಡ್ಡಮಟ್ಟದಲ್ಲಿ ಪ್ರಾಬಲ್ಯ ಸಾಧಿಸಿದ್ದವು. ಅದರಿಂದಲೂ ಹಿನ್ನೆಡೆ ಕಾಣಬೇಕಾಯಿತು. ಈಗ ಟಾಟಾ ಬೋಲ್ಟ್, ಜೆಸ್ಟ್ ಕಾರುಗಳ ಸ್ಥಾನಕ್ಕೆ ಟಿಯಾಗೊ, ಟಿಗೂರ್ ಕಾರುಗಳು ಬಂದಿವೆ.

ಭಾರತದಲ್ಲಿ ಮಧ್ಯಮ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅವರನ್ನು ಗುರಿಯಾಗಿಕೊಂಡು ನಿಸ್ಸಾನ್‌ (Nissan), 2014ರ ಆರಂಭದಲ್ಲಿ ದಟ್ಸನ್ ಗೋ (Datsun Go) ಕಾರನ್ನು ಬಿಡುಗಡೆ ಮಾಡಿತ್ತು. ಆದರೆ, ಗುಣಮಟ್ಟದ ಸಮಸ್ಯೆ, ಆಕರ್ಷಕ ವೈಶಿಷ್ಟ್ಯಗಳ ಕೊರತೆ ಮತ್ತು ಹಳೆಯ ಶೈಲಿನ ವಿನ್ಯಾಸದಿಂದ ದೇಶೀಯ ಖರೀದಿದಾರರನ್ನು ಸೆಳೆಯಲು ವಿಫಲವಾಯಿತು. ಕಡೆಯದಾಗಿ 2020ರಲ್ಲಿ ಮಾರಾಟದಿಂದ ಸ್ಥಗಿತಗೊಳಿಸಲಾಯಿತು.

Flop Cars In Indian Market: Tata Bolt, Zest, Mahindra Quanto, Chevrolet, Enjoy

ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಮಹೀಂದ್ರಾ (Mahindra) ಕಂಪನಿಯ ಕಾರು ಸಹ ವೈಫಲ್ಯತೆಯನ್ನು ಕಂಡಿದೆ. ಕಂಪನಿಯು 2012ರಲ್ಲಿ ಕ್ವಾಂಟೊ (Quanto) ಹೆಸರಿನ ಮಿನಿ ಎಸ್‌ಯುವಿಯನ್ನು ಪರಿಚಯಿಸಿತ್ತು. ಇದು ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿತ್ತು. ಕೆಲವೇ 5.82 ಲಕ್ಷ ದರವಿತ್ತು. 1.5-ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿದ್ದ ಈ ಎಸ್‌ಯುವಿ, 100 ಹೆಚ್​ಪಿ ಪವರ್ (ಶಕ್ತಿ), 240 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿತ್ತು.

ಆದರೆ, ಈ ಮಹೀಂದ್ರಾ ಕ್ವಾಂಟೊ ಎಸ್‌ಯುವಿಯ ಕಳಪೆ ವಿನ್ಯಾಸ ಗ್ರಾಹಕರಿಗೆ ಹಿಡಿಸಲಿಲ್ಲ. ಮುಖ್ಯವಾಗಿ ಸಮತಟ್ಟಾದ ಹಿಂಭಾಗ (Flat Rear), ಈ ಕಾರು ವಿಫಲತೆಯನ್ನು ಅನುಭವಿಸಲು ದೊಡ್ಡ ಕಾರಣವಾಗಿದೆ. 2016ರಲ್ಲಿ ನುವೋಸ್ಪೋರ್ಟ್ ಹೆಸರಿನಲ್ಲಿ ಈ ಎಸ್‌ಯುವಿಯನ್ನು ನವೀಕರಿಸಿ ಮಾರುಕಟ್ಟೆಗೆ ತಂದರೂ ನೀರಿಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಲಿಲ್ಲ. ಅಂತಿಮವಾಗಿ, ಕಠಿಣ ಬಿಎಸ್6 ಹೊರಸೂಸುವಿಕೆ ನಿಯಮಗಳಿಂದ 2020ರಲ್ಲಿ ಈ ಕಾರನ್ನು ಸ್ಥಗಿತಗೊಳಿಸಲಾಯಿತು.

Flop Cars In Indian Market: Tata Bolt, Zest, Mahindra Quanto, Chevrolet, Enjoy

ಷೆವರ್ಲೆ (Chevrolet) ಕಂಪನಿಯು 2013ರಲ್ಲಿ ಎಂಜಾಯ್ (Enjoy) ಎಂಪಿವಿಯನ್ನು ಪರಿಚಯಿಸಿತ್ತು. ಈ ಕಾರಿನಲ್ಲಿ 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದ ಎಂಜಾಯ್ ಎಂಪಿವಿಯ ವಿನ್ಯಾಸ ಅಷ್ಟಾಗಿ ಗ್ರಾಹಕರನ್ನು ಆಕರ್ಷಿಸಲಿಲ್ಲ. ಕಡೆಯದಾಗಿ 2016ರಲ್ಲಿ ನಿಲ್ಲಿಸಲಾಗಿತು. ಮಾರಾಟ ಪ್ರಮಾಣ ತೀವ್ರವಾಗಿ ಕುಸಿದ ಹಿನ್ನೆಲೆ, ಮರುವರ್ಷ ಕಂಪನಿಯು ಕೂಡ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, February 14, 2024, 18:19 [IST]
English summary
Flop cars in indian market tata bolt zest mahindra quanto chevrolet enjoy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+